ಈ ಚಂದಿರ ಆಹಾ! ತಿಳಿಮೊಗದ ಸುಂದರ
ತೋರುತ ಮಚ್ಚೆಯ ಕದಪು ಕೆನ್ನೆ
ಪಕ್ಷಕೊಮ್ಮೆ ಎಲ್ಲೋ ಮಾಯವಾಗೋ ಪೋರ
ಆದರೂ.. ಈ ಚಂದಿರ ನಮ್ಮವನೇ
ಪ್ರೇಮಿಗಳಿಗೀವ ಕಟ್ಟಿಕೊಡುವ ಚಂದದರಮನೆ
ಮಗುವಿಗೆ ಇವನೆಂದೂ ಮುದ್ದಿನ ಚಂದಮಾಮನೇ
ಕವಿಗಳಿಗೆರೆಯುವ ಸ್ಪೂರ್ತಿಯ ಸೋನೆ..
ಆದರೂ.. ಈ ಚಂದಿರ ನಮ್ಮವನೇ
ದೂರದಿ ಮಿನುಗುವ ಆದರೆ ಕೈಗೆ ಸಿಗಲಾರ
ಕನಸುಗಳು ಹಾಗೆಯೇ ಅಲ್ಲವೇ, ಕೆಲವು ಬಹು ದೂರ
ಕರೆಯುವವು ತಮ್ಮೆಡೆಗೆ ಕೈಬೀಸಿ ನಮ್ಮೆಲ್ಲರ
ತೋರುತ ಭರವಸೆಯ ಬೆಳ್ಳಿ ಬೆಳಕ ಆಗರ
ಬಹುದೂರ ಎಂದರೂ ನಿಲ್ಲೆವು ಬೆನ್ನಟ್ಟುತ ಅವುಗಳನೇ
ಕಾಯುತ ಚಂದಿರನ ತಬ್ಬುವ ಕನಸನು ಅಪ್ಪುವ ಘಳಿಗೆಯನೇ
ಎಷ್ಟೇ ಆದರೂ ಈ ಚಂದಿರ..ನಮ್ಮವನೇ
0 Followers
0 Following