ಘಾನಾದ ಈ ಮಗು ವಿಶ್ವದ ಅತ್ಯಂತ ಕಿರಿಯ ಕಲಾವಿದ..!

ಜಾಗತಿಕ‌ ಮನ್ನಣೆ ಪಡೆದ ಈ ಮಗುವಿನ ಕಥೆಯೇ ರೋಚಕ

ProfileImg
23 May '24
1 min read


image

ಈತ ಘಾನಾದ ಪುಟ್ಟ ಮಗು. ಹೆಸರು ಏಸ್-ಲಿಯಾಮ್ ನಾನಾ ಸ್ಯಾಮ್ ಅಂಕ್ರಾ. ಈ ಮಗು ನಿಮ್ಮನ್ನು ಅಚ್ಚರಿಗೊಳಿಸೋ ಸಾಧನೆ ಮಾಡಿದ್ದಾನೆ. ಹೌದು. 1 ವರ್ಷ 152 ದಿನಗಳ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಕಲಾವಿದನೆಂಬ ಪಟ್ಟ ಗಿಟ್ಟಿಸಿಕೊಂಡಿದ್ದಾನೆ.
ಕಲಾವಿದೆಯಾಗಿರುವ ಈ ಮಗುವಿನ ಅಮ್ಮ ಚಾಂಟೆಲ್, ತನ್ನ ಮಗು ಏಸ್-ಲಿಯಾಮ್ ನ ಚಿತ್ರಕಲೆಯ ಉತ್ಸಾಹವನ್ನು ಕೇವಲ 6 ತಿಂಗಳ ಮಗುವಾಗಿದ್ದಾಗ ಕಂಡುಹಿಡಿದಿದ್ದರು. "ನಾನು ಕಲಿಯುವಾಗ, ನಾನು ಪೇಂಟಿಂಗ್‌ನಲ್ಲಿ ಕೆಲಸ ಮಾಡುವಾಗ ಅವನನ್ನು ಕಾರ್ಯನಿರತವಾಗಿಡುವ ಮಾರ್ಗವಾಗಿ ನೆಲದ ಮೇಲೆ ಕ್ಯಾನ್ವಾಸ್ ನ ತುಂಡನ್ನು ಹರಡಿದೆ ಮತ್ತು ಅದರ ಮೇಲೆ ಸ್ವಲ್ಪ ಬಣ್ಣವನ್ನು ಹಾಕಿದೆ" ಎಂದು ಅವರು ಆರಂಭದ ದಿನಗಳನ್ನು ನೆನಪು ಮಾಡಿಕೊಂಡರು.
ಈತ ಇದನ್ನು ನೋಡಿ ಕ್ಯಾನ್ವಾಸ್ ನಾದ್ಯಂತ ಬಣ್ಣವನ್ನು ಹರಡತೊಡಗಿದ. ಈ ಪ್ರಕ್ರಿಯೆ ಮಾಡುತ್ತಾ ಮಾಡುತ್ತಾ 'ದಿ ಕ್ರಾಲ್' ಎಂಬ ಶೀರ್ಷಿಕೆಯ ತನ್ನ ಮೊದಲ ಮೇರುಕೃತಿಯನ್ನು ರಚಿಸಿದ್ದಾನೆ.
ಅಂದಿನಿಂದ ಏಸ್-ಲಿಯಾಮ್ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಿಂದ ಹಾಗೂ ಘಾನಾ ಗಣರಾಜ್ಯದ ಪ್ರಥಮ ಮಹಿಳೆಯಿಂದ ಗೌರವಿಸಲ್ಪಟ್ಟಿದ್ದಾನೆ.
'ಈ ಮಗು ಸಂಚಲನವನ್ನು ಸೃಷ್ಟಿಸಿದೆ. ಈತನ ಕಲೆಗೆ ಮೆಚ್ಚುಗೆ ಹೇಳಿದರಷ್ಟೇ ಸಾಲದು. ಮಗುವಿನ ಪೋಷಕರು ಮಕ್ಕಳಲ್ಲಿನ ಪ್ರತಿಭೆಗಳನ್ನು ಕಂಡುಹಿಡಿದು ಪೋಷಿಸಿದ್ದಾರೆ" ಎಂದು ಚಾಂಟೆಲ್ ಪ್ರತಿಕ್ರಿಯಿಸಿದ್ದಾರೆ.
ಈ ಮಗು ತಾನು ರಚಿಸಿದ 20 ಕ್ಕೂ ಹೆಚ್ಚು ವರ್ಣಚಿತ್ರಗಳು ಘಾನಾದ ವಿಜ್ಞಾನ ಮತ್ತು ತಂತ್ರಜ್ಞಾನದ ವಸ್ತುಸಂಗ್ರಹಾಲಯದಲ್ಲಿ ತಮ್ಮ ಮೊದಲ ಗುಂಪು ಪ್ರದರ್ಶನವಾದ ದಿ ಸೌಂಡ್ಔಟ್ ಪ್ರೀಮಿಯಂ ಪ್ರದರ್ಶನಗೊಂಡಿವೆ. ಇಲ್ಲಿ ಒಟ್ಟು 10 ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು ಮತ್ತು ಮಾರಾಟಕ್ಕೆ ಇಡಲಾಗಿತ್ತು.  10 ರಲ್ಲಿ ಒಂಬತ್ತು ಪ್ರದರ್ಶನದ ಸಮಯದಲ್ಲಿ ಮಾರಾಟವಾಗಿದೆ.
ಇದೀಗ ಏಸ್-ಲಿಯಾಮ್ ವಿಶ್ವದ ಅತ್ಯಂತ ಕಿರಿಯ ಕಲಾವಿದ ಎಂಬ ಗಿನ್ನೆಸ್ ವಲ್ಡ್ ರೆಕಾರ್ಡ್ ಮಾಡಿದ್ದಾನೆ.
ProfileImg

Written by Shamsheer Budoli

Verified

Author, Journalist, Poet, Anchor, PhD Scholar