ಮೂಕನಾಗಿರಬೇಕು ಜಗದೊಳು ಜ್ವಾಕ್ಯೆಯಾಗಿರಬೇಕು......

ಮಡಿವಾಳೇಶ್ವರರು ರಚಿಸಿದ ತತ್ವಪದಗಳು ಎಲ್ಲಾರ ಮನಸೂರೆಗೊಳಿಸಿದೆ..

ProfileImg
19 May '24
1 min read


image

ಈ ಸಾಲುಗಳನ್ನು ಶ್ರೀ ಕಡಕೋಳ ಮಡಿವಾಳೇಶ್ವರರು ಮೌನ ಮತ್ತು ಅಂತರಂಗ ಶುದ್ದಿಯ ಕುರಿತು ಅತ್ಯದ್ಭುತವಾಗಿ ಹಾಗೂ ಅರ್ಥಪೂರ್ಣವಾಗಿ ರಚಿಸಿದ್ದಾರೆ.

ಮನುಷ್ಯನಿಗೆ ಮಾತು ಬಹುದೊಡ್ಡ ವರದಾನ. ಮನಸ್ಸಿನಲ್ಲಿ ಉಂಟಾದ ಭಾವನೆಗಳನ್ನು, ವಿಚಾರಗಳನ್ನು ಹೊರಹಾಕಲು ಮಾತು ಒಂದು ಸಾಧನ.

ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಎಂಬ ಗಾದೆಮಾತೆ ಇದೆ. ಒಮ್ಮೆ ತಪ್ಪಿ ಆಡಿದ ಮಾತು ಹಿಂದುರುಗಿ ಪಡೆಯಲು ಸಾಧ್ಯವಿಲ್ಲ. ಆದರೆ ಮಾತನಾಡುವಾಗ ಎಚ್ಚರವಿರಬೇಕು....

ಹಾಗಾಗಿ ಕೆಲವು ಸಂದರ್ಭದಲ್ಲಿ ಮಾತನಾಡಲು ಬಂದರೂ ಯಾವುದೋ ಒಂದು ಒಳಿತಿಗೋಸ್ಕರ ಮಾತನಾಡದೆ  ಮೂಕನಾಗಿರಬೇಕು…
 

ಮೌನಂ ಸರ್ವರ್ಥ ಸಾಧನಂ
ಮೌನದಿಂದ ಅಂತರಂಗ ಶುದ್ದಿ, ಶಾಂತಿ ,ನೆಮ್ಮದಿ ಹಾಗೂ ಜ್ಞಾನರ್ಜನೆ ಆಗುತ್ತದೆ.

ಮೌನವೂ ಆತ್ಮಲೋಕವನಕ್ಕೆ ಒಂದು ಜಾಗವನ್ನು ಒದಗಿಸುತ್ತದೆ, ಸ್ಪಷ್ಟತೆಯನ್ನು ಬೆಳೆಸುತ್ತದೆ ಹಾಗೂ ನಿರ್ಧಾರ ತೆಗೆದುಕೊಳ್ಳುವುದನ್ನು ಹೆಚ್ಚಿಸುತ್ತದೆ.

ಒಂದು ಮೌನ ಎಷ್ಟೋ ಕಲಹಗಳನ್ನು ತಪ್ಪಿಸುತ್ತದೆ, ಎಷ್ಟೋ ಸಂಬಂಧಗಳನ್ನು ಬೆಸೆಯುತ್ತದೆ,ಹಾಗೇ ಎಷ್ಟೋ ಪ್ರಶ್ನೆಗಳಿಗೆ ಉತ್ತರಿಸುತ್ತದೆ....

ಖಡ್ಗದ ಗಾಯಕ್ಕಿಂತಲೂ ಮಾತಿನ ಗಾಯ ಹೆಚ್ಚು ನೋವನ್ನುಂಟು ಮಾಡುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೆಲವು ಸಂದರ್ಭಗಳಲ್ಲಿ ಯೋಚಿಸಿ , ನಿರ್ಧರಿಸಿ,ಆವಶ್ಯಕತೆ ಇದ್ದಷ್ಟೂ ಕಡಿಮೆ ಮಾತನಾಡಿ ಹಲವಾರು ಸಮಸ್ಯೆಗಳಿಂದ ಮುಕ್ತರಾಗಬಹುದು.

ವ್ಯರ್ಥ ಮಾತನಾಡಿ  ಶಕ್ತಿ ಹಾಗೂ ಸಮಯ ಕಳೆದುಹೋಗುತ್ತದೆ.. ಆದರೆ ಅದನ್ನು ಮೌನದಿಂದ ಮತ್ತೆ ಪಡೆದುಕೊಳ್ಳಬಹುದು.

ಹೀಗೆ ಹಿಂದೆ  ಎಷ್ಟೋ ಹಿರಿಯರು,ಅಧ್ಯಾತ್ಮ ಸಾಧಕರು, ತಪಸ್ವಿಗಳು,  ಜ್ಞಾನಿಗಳು , ಮೌನದಿಂದಲೇ ಜ್ಞಾನವರಿತು ಸದ್ಗತಿ ಹೊಂದಿದರು......

ಸ್ವಾಮಿ ವಿವೇಕಾನಂದರು,
ರಾಮಕೃಷ್ಣ ಪರಮಹಂಸರು,
ವಿಶ್ವೇಶ್ವರಯ್ಯನವರು, ಸಿ ವಿ ರಾಮನ್ ನವರು ಹೀಗೇ ಮಹಾನ್ ಸಾಧಕರೆಲ್ಲಾ ಮೌನಿಯಾಗಿದ್ದು ಸಾಧನೆ ಮಾಡಿ ಒಳ್ಳೇ ವ್ಯಕ್ತಿತ್ವ,ಕೀರ್ತಿ,
ಗೌರವ ತಂದು ಕೊಟ್ಟರು..

ಜ್ಞಾನ ಹೆಚ್ಚಾದಂತೆ ಮೌನ ಹೆಚ್ಚಾಗುತ್ತದೆ...ಎಂಬ ಅತ್ಯದ್ಭುತ ನುಡಿಯ ಮೂಲಕ ಜಗತ್ತನ್ನೇ ಗೆದ್ದ ನಮ್ಮ ಬುದ್ದ...
....✍️SPK

Category:Spirituality



ProfileImg

Written by Kavitha A.R Surahonne

Writer..✍️

0 Followers

0 Following