ನೊಂದು ಬೆಂದು ಹೆಸರಿಗಷ್ಟೇ ಬದುಕಿನ ಕಣ್ಣೆನಿಸಿಕೊಂಡ ಹೆಣ್ಣು........ ಹೆಣ್ಣವಳು ಪಾಪಿ.
ಎರಡು ಮನೆಗೂ ಅತಿಥಿ ಇವಳು ಯಾರೊಬ್ಬರಿಗೂ ಸಲ್ಲದವಳು,
ಎಲ್ಲ ನೋವನು ಒಬ್ಬಳೇ ನುಂಗುವಳು ಎಲ್ಲರ ಮಮತೆಗೆ ಹಂಬಲಿಸುವಳು,
ಯಾರಿಂದೇನು ದೊರೆಯದಂದರಿತರು ಮತ್ತೆ ಮತ್ತೆ ಪೂಜಿಸುವ ದೈವವ ನಂಬುವಳು,
ನಿರೀಕ್ಷಣೆಯ ಹಾದಿಯಲ್ಲಿ ಹೆಣ್ಣವಳು ಪಾಪಿ.
ಮನೆಯಲ್ಲರಿಗೂ ಕನ್ನಡಿ ಇವಳು ಕಿನ್ನರಿಯಾದರು ತಾನೊಬ್ಬ ಗೃಹಿಣಿ ಎಂದು ಮನಗೈದವಳು,
ಮನೆಯವರೆಲ್ಲರ ಕಷ್ಟಕ್ಕೂ ಸ್ಪಂದಿಸುವಳು
ತನಗ್ಯಾರು ಇಲ್ಲವೆಂದು ಕೆಲವೊಂದುಸಲ ಮರುಗುವಳು,
ಒಡಲ ಕುಡಿಯ ಕಂಡು ಎಲ್ಲವನ್ನು ಮರೆಯುವಳು ಹೆಣ್ಣವಳು
ನಿರೀಕ್ಷಣೆಯ ಹಾದಿಯಲ್ಲಿ ಹೆಣ್ಣವಳು ಪಾಪಿ.
King's Queen
0 Followers
0 Following