ಇವತ್ತು ನಾವು ಅಂತರಾಷ್ಟ್ರೀಯ ಪುಟ್ಭಾಲ್ ಆಟಗಾರರ ಬಗೆಗೆ ಮಾತನಾಡುವಾಗˌಇವರುಗಳ ಹೆಸರನ್ನ ತಪ್ಪದೆ ಹೇಳುತ್ತೇವೆˌ ರೋನಾಲ್ಡೊˌಮೆಸ್ಸಿˌಎನ್ ಗೂಲೊ ಕಾಂಟೆˌಕೈಲಿಯಾನ್ ಎಂಬಾಪ್ಪೆˌˌರೊಮೇಲು ಲುಕಾಕ್ˌಕೆವೀನ್ ಡಿ ಬ್ರೂಯ್ನಿˌರೂಬೆನ್ ಡಯಾಸ್ˌಡೇವಿಡ್ ಬೆಕ್ ಹ್ಯಾಂˌಗ್ಯಾರಿ ನೇವಿಲ್ˌಜೇಡನ್ ಸ್ಯಾಂಚೊˌಥಾಮಸ್ ಮುಲ್ಲರ್ˌಮರಡೋನ ˌಪೀಲೆˌಈ ರೀತಿ ಪುಟ್ಬಲ್ ನೋಡದವರು ಕೂಡ ಒಂದಷ್ಟು ಹೆಸರುಗಳನ್ನ ಹೇಳಿಯೆ ಹೇಳುತ್ತಾರೆˌಅಂತಹವರ ಸಾಲಲ್ಲಿ ಸಂಶಯವಿಲ್ಲದೆ ಸೇರಿಸಬಹುದಾದˌಭಾರತೀಯ ಪುಟ್ಬಲ್ ತಂಡಕ್ಕೆ ಒಂದು ಗತ್ತು ತಂದುಕೊಟ್ಟ ಚೆಟ್ರಿಯದ್ದುˌ ಭಾರತದಲ್ಲಿ ಒಬ್ಬ ಫುಟ್ಬಾಲ್ ಆಟಗಾರ ಇಷ್ಟು ವರ್ಷಗಳಿಂದ ದೇಶಕ್ಕಾಗಿ ಆಡುತ್ತಿದ್ದ ಅಂದರೆ ನಂಬಲು ಕಷ್ಟ ಆಗಬಹುದು. ಫುಟ್ಬಾಲಿಗೆ ಕೆಲವು ಶ್ರೀಮಂತ ಕ್ಲಬ್ ಬಿಟ್ಟರೆ ಬೇರೆ ಯಾವ ಸಪೋರ್ಟ್ ಕೂಡ ಇಲ್ಲದ ಸನ್ನಿವೇಶದಲ್ಲಿ ಕೂಡ ಈ ಹುಡುಗ ಪುಟ್ಬಲ್ ನಲ್ಲಿ ಸಾಧನೆಗಳ ಮೇಲೆ ಸಾಧನೆಗಳನ್ನ ಮಾಡುತ್ತ ಹೋಗುತ್ತಾನೆ ಎಂದರೆ ಅವನೆಂಥ ದಂತಕಥೆಯಿರಬಹುದುˌಸ್ವಲ್ಪ ಯೋಚಿಸಿ ಅದರಲ್ಲಿಯೂ
ಭಾರತದ ಟೀಮ್ ಫುಟ್ಬಾಲ್ ಕ್ಯಾಪ್ಟನ್ ಆಗಿ ಭಾರತದಲ್ಲಿ ಫುಟ್ಬಾಲ್ ಕ್ರೇಜನ್ನು ಜೀವಂತವಾಗಿ ಉಳಿಸಿದವನು ಅಂದರೆ ಖಂಡಿತವಾಗಿಯೂ ಅದು ಸುನೀಲ್ ನೆ. ಆತ ಗ್ರೌಂಡಿನಲ್ಲಿ ಇದ್ದಾನೆ ಅಂದರೆ ಬೇರೆ ಯಾವ ಆಟಗಾರನೂ ಕಾಣುವುದಿಲ್ಲ ಅನ್ನೋದು ನೂರಕ್ಕೆ ನೂರು ನಿಜ. ಇಡೀ ಗ್ರೌಂಡ್ ಆವರಿಸಿಕೊಂಡು ಆಡುವ ಆಟ ಆತನದ್ದು. ಬಾಲನ್ನು ಎರಡೂ ಕಾಲುಗಳಿಂದ ಡ್ರಿಬಲ್ ಮಾಡಿಕೊಂಡು ಗ್ರೌಂಡಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಯವರೆಗೆ ತೆಗೆದುಕೊಂಡು ಹೋಗುವ ಸ್ಕಿಲ್ ಅದು ಅದ್ಭುತ. ಆತನ ಶಕ್ತಿಶಾಲಿ ಆದ ಕಾಲುಗಳಿಗೆ ಬಾಲ್ ದೊರೆಯಿತು ಅಂದರೆ ಅದು ಗೋಲ್ ಆಗದೆ ವಿರಮಿಸುವುದಿಲ್ಲ!
ಸುನೀಲ್ ಚೆಟ್ರಿ ಗ್ರೌಂಡಿನಲ್ಲಿ ಇರುವಷ್ಟು ಹೊತ್ತು ಅವನ ತಂಡವನ್ನು ಸೋಲಲು ಬಿಡುವುದಿಲ್ಲ ಎನ್ನುವ ಸಂಗತಿಯು ನೂರಾರು ಬಾರಿ ಸಾಬೀತಾಗಿದೆ. . ತನ್ನ ಹದಿನೆಂಟನೆಯ ವರ್ಷದಲ್ಲಿ ವೃತ್ತಿಪರ ಫುಟ್ಬಾಲ್ ಆಟಗಾರನಾಗಿ ಆಡಲು ಆರಂಭ ಮಾಡಿದ್ದ ಸುನೀಲ್ ಹೆಚ್ಚು ಕಡಿಮೆ ಭಾರತದ ಎಲ್ಲ ಕ್ಲಬ್ಬುಗಳ ಪರವಾಗಿ , , ಫುಟ್ಬಾಲ್ ತಂಡಗಳ ಆಟಗಾರನಾಗಿ ಮಿಂಚು ಹರಿಸಿದ್ದಾನೆ. ಭಾರತದಲ್ಲಿ ಅತೀ ಹೆಚ್ಚು ಸಂಭಾವನೆಯನ್ನು ಪಡೆಯುವ ಫುಟ್ಬಾಲ್ ಆಟಗಾರ ಎಂದರೆ ಅದು ಸುನೀಲ್ ಅನ್ನೋದು ನಿಜಕ್ಕೂ ಗ್ರೇಟ್. ಮೂರು ಖಂಡಗಳಲ್ಲಿ ಫುಟ್ಬಾಲ್ ಆಡಿದ ಭಾರತದ ಆಟಗಾರ ಕೂಡ ಅವನೊಬ್ಬನೇ!
ಜಾಗತಿಕ ಮಟ್ಟದಲ್ಲಿ ಭಾರತದ ಧ್ವಜಧಾರಿ.
ನಮಗೆಲ್ಲ ತಿಳಿದಿರುವಂತೆ ಜಗತ್ತಿನ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಆಟ ಅಂದರೆ ಫುಟ್ಬಾಲ್! ಆದರೆ ಭಾರತದ ಫುಟ್ಬಾಲ್ ಸಾಧನೆ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ. ಆದರೂ ಸುನೀಲ್ ಅಂಡರ್ 20, ಅಂಡರ್ 23 ವಿಶ್ವಮಟ್ಟದ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2002ರಿಂದ ಇಂದಿನವರೆಗೆ ಭಾರತ ಆಡಿದ ಎಲ್ಲ ಏಷಿಯಾ ಮತ್ತು ವಿಶ್ವಮಟ್ಟದ ಟೂರ್ನಮೆಂಟಗಳಲ್ಲಿ ಭಾರತದ ಪರವಾಗಿ ಆಡಿದ್ದಾರೆ. ಸತತ ಏಳು ಬಾರಿ ಏಷಿಯಾ ಮಟ್ಟದ ಪ್ಲೇಯರ್ ಆಫ್ ದ ಇಯರ್ ಪ್ರಶಸ್ತಿ ಪಡೆದಿದ್ದಾರೆ. FPAI ಪ್ಲೇಯರ್ ಆಫ್ ದ ಇಯರ್ ಪ್ರಶಸ್ತಿಯನ್ನು ಮೂರು ಬಾರಿ ಪಡೆದಿದ್ದಾರೆ. 2018ರಲ್ಲಿ ಇಂಡಿಯನ್ ಸೂಪರ್ ಕಪ್ ಕೂಟದಲ್ಲಿ ಗೋಲ್ಡನ್ ಬೂಟ್ ಪ್ರಶಸ್ತಿ ಗೆದ್ದಿದ್ದಾರೆ. ತಾನು ಆಡಿದ ಪ್ರತೀ ಪಂದ್ಯಗಳಲ್ಲೂ ಸೆಂಟರ್ ಫಾರ್ವರ್ಡ್ ಆಟಗಾರನಾಗಿ ಮಿಂಚಿದ್ದಾರೆ.
ಅವರ ಆಕ್ರಮಣಕಾರಿ ಆಟ, ಚುರುಕಾದ ಪಾದಗಳ ಚಲನೆ, ದೇಹದ ಮೇಲಿನ ಅದ್ಭುತವಾದ ನಿಯಂತ್ರಣ, ಎರಡೂ ಕಾಲುಗಳಿಂದ ಬಾಲ್ ಡ್ರಿಬಲ್ ಮಾಡುವ ಸಾಮರ್ಥ್ಯ, ದಣಿವು ಅರಿಯದ ದೇಹದ ತ್ರಾಣ, ಪಂದ್ಯದ ಕೊನೆಯ ಕ್ಷಣದವರೆಗೂ ಕ್ವಿಟ್ ಮಾಡದ ಮನೋಸಾಮರ್ಥ್ಯ ಅವರನ್ನು ಚಾಂಪಿಯನ್ ಆಟಗಾರನಾಗಿ ರೂಪಿಸಿವೆ. ಫುಟ್ಬಾಲಿನಲ್ಲಿ ಸುನೀಲ್ ಚೆಟ್ರಿ ಮಾಡಿದ ದಾಖಲೆಗಳನ್ನು ಸದ್ಯಕ್ಕೆ ಯಾವ ಭಾರತೀಯ ಆಟಗಾರನೂ ಮುರಿಯುವ ಸಾಧ್ಯತೆ ಇಲ್ಲವೇ ಇಲ್ಲ!
ಪ್ರಶಸ್ತಿಗಳು ಸುನೀಲಗೆ ಹೊಸದಲ್ಲ.
ಒಬ್ಬ ಕ್ರೀಡಾಪಟುವಿಗೆ ದೊರೆಯುವ ಅತ್ಯುನ್ನತ ಪ್ರಶಸ್ತಿ 'ಖೇಲ್ ರತ್ನ ಪ್ರಶಸ್ತಿ', ಭಾರತ ಸರಕಾರ ಕೊಡಮಾಡುವ ಪದ್ಮಶ್ರೀ, 2011ರ ಅರ್ಜುನ ಪ್ರಶಸ್ತಿ ಅವರಿಗೆ ಈಗಾಗಲೇ ದೊರೆತಿವೆ. ಭಾಗವಹಿಸಿದ ಎಲ್ಲ ಜಾಗತಿಕ ಕೂಟಗಳಲ್ಲಿ ಒಂದಲ್ಲ ಒಂದು ಪ್ರಶಸ್ತಿ ಗೆಲ್ಲದೇ ಸುನೀಲ್ ಹಿಂದೆ ಬಂದ ಒಂದು ಉದಾಹರಣೆ ಕೂಡ ದೊರೆಯುವುದಿಲ್ಲ. ಸುನೀಲ್ ಕಾರಣಕ್ಕೆ ಭಾರತದಲ್ಲಿ ಫುಟ್ಬಾಲ್ ಆಕರ್ಷಣೆ ಹೆಚ್ಚಿತು ಮತ್ತು ಹೆಚ್ಚು ಯುವಜನತೆ ಫುಟ್ಬಾಲ್ ಆಡಲು ಪ್ರಾರಂಭ ಮಾಡಿದರು ಅನ್ನುವ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲ! ಅಂತಹ ಚೇಟ್ರಿ ನಿವೃತ್ತಿ ಘೋಷಣೆ ಮಾಡಿದಾರೆˌಅವರಿಂದ ಯುವ ಸಮಾಜ ಕಲಿಯುವುದು ತುಂಬಾ ಇದೆ ಸುನೀಲ್ ಚೆಟ್ರಿ ಭಾರತೀಯ ಫುಟ್ಬಾಲ್ ಲೋಕದ ಲೆಜೆಂಡ್ ಆಟಗಾರ ಎನ್ನುವುದರಲ್ಲಿ ಯಾವ ಸಂಶಯವಿದೆˌˌ