ಜಿಂಕೆಯನ್ನು ರಕ್ಷಿಸಿದ ವನಸಿರಿ ಫೌಂಡೇಶನ್

ProfileImg
09 May '24
1 min read


image

ಸಿಂಧನೂರು ನಗರದ PWD ಕ್ಯಾಂಪ್ ನ KEBಕಛೇರಿಯ ಮುಂಭಾಗದ ಹೆದ್ದಾರಿಯಲ್ಲಿ ಜಿಂಕೆಯೊಂದು ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದ ಕಾರಣ ಅದಕ್ಕೆ ಗಾಯಗಳಾಗಿದ್ದನ್ನು ಕಂಡು, ವನಸಿರಿ ಫೌಂಡೇಶನ್ ಸಂಸ್ಥಾಪಕರಾದ ಅಮರೇಗೌಡ ಮಲ್ಲಾಪೂರ ಅವರು ಸ್ಥಳಿಯ ಯುವಕರು ನೆರವಿನಿಂದ ಸಿಂಧನೂರು ನಗರದ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ , ವೈದ್ಯರ ಸಹಕಾರದಿಂದ ಗುಣಮುಖವಾದ ಜಿಂಕೆಯನ್ನು ಪುನಃ ಊರಿನ ಹೊರವಲಯದಲ್ಲಿರುವ ಜೋಳದರಾಶಿ ಆಂಜನೇಯ ಸ್ವಾಮಿ ದೇವಸ್ಥಾನ ಹಿಂಬಾಗದಲ್ಲಿರುವಂತಹ ಹಳ್ಳದ ದಡದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.

ಬಿಸಿಲಿನ ತಾಪಮಾನಕ್ಕೆ ಕಾಡು ಪ್ರಾಣಿಗಳು ನಗರ ಪ್ರದೇಶಕ್ಕೆ ನೀರಿನ ದಾಹ ತೀರಿಸಿಕೊಳ್ಳಲು ಬರುತ್ತಿವೆ. ಪ್ರಾಣಿ ಪಕ್ಷಿಗಳ ಸಂಕುಲ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂಬ ಸದುದ್ದೇಶದಿಂದ ವನಸಿರಿ ತಂಡ ಗಾಯಗೊಂಡ ಜಿಂಕೆಯೊಂದನ್ನು ಆರೈಕೆ ಮಾಡಿ, ರಕ್ಷಣೆ ಮಾಡಲಾಯಿತು. ನಮ್ಮ ಪರಿಸರದಲ್ಲಿ ವಾಸವಾಗಿರುವ ಪ್ರಾಣಿ ಪಕ್ಷಿಗಳನ್ನು ಮಾನವೀಯತೆ ದೃಷ್ಟಿಯಿಂದ ಕಾಪಾಡುವುದೇ ವನಸಿರಿ ತಂಡದ ಗುರಿಯಾಗಿದೆ. 

ಸಾರ್ವಜನಿಕರು ಪ್ರಾಣಿ ಪಕ್ಷಿಗಳ ಮೇಲೆ ದಯೆ ತೊರಬೇಕು ಅವುಗಳಿಗೂ ನಮ್ಮ ಪರಿಸರದಲ್ಲಿ ಜೀವಿಸಲು ಹಕ್ಕಿದೆ ಎಂದು ಅರಿತು ಅವುಗಳೊಂದಿಗೆ ಜೀವಿಸೋಣ ಎಂದ ವನಸಿರಿ ಫೌಂಡೇಶನ್ ಸಂಸ್ಥಾಪಕರಾದ ಅಮರೇಗೌಡ ಮಲ್ಲಾಪೂರ ಅವರ ಈ ಮಾನವೀಯತೆ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ಇವನ ಫೌಂಡೇಶನ್ ಸಂಸ್ಥಾಪಕರಾದ ಅಮರೇಗೌಡ ಮಲ್ಲಾಪೂರ, ಗಂಗಾಧರ ಕಾಂಗ್ರೆಸ್ ಯುವ ಮುಖಂಡರು,ಸಂಚಾರಿ ಪೋಲಿಸ್ ಇಲಾಖೆಯ ಅಧಿಕಾರಿಗಳು,ವನಸಿರಿ ಫೌಂಡೇಶನ್ ಸದಸ್ಯರಾದ ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಪಶು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು,ಯುವಕರ ರಾಜು ಮತ್ತು ಕೈಪ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳಿದ್ದರು.

Category:News



ProfileImg

Written by Avinash deshpande

Article Writer, Self Employee

0 Followers

0 Following