ಅಪರಿಚಿತ ಅಪ್ಪಿ ...

ProfileImg
25 Apr '24
2 min read


image

ಜೀವನದಲ್ಲಿ ಅನೇಕ ವ್ಯಕ್ತಿಗಳು ನಮಗೆ ಪರಿಚಿತರಾಗ್ತಾರೆ ಆ ಪರಿಚಿತರಲ್ಲಿ ಚಿರಪರಿಚಿತರಾಗುವವರು ಕೆಲವರು ಮಾತ್ರ ಅವರು ನಮ್ಮ ಖುಷಿ ಜೀವನವನ್ನು ಸಂಪೂರ್ಣವಾಗಿ ದಡ ಸೇರಿಸುವ ನಮ್ಮ ಜೀವನವನ್ನು ಅಂತಿಮ ಘಟ್ಟದವರೆಗೂ ಕೈ ಹಿಡಿದು ನಡೆಸುವ ಅನುಭವವನ್ನು ಭರವಸೆಯನ್ನ ನಮ್ಮಲ್ಲಿ ತುಂಬಿ ನಮ್ಮಲ್ಲಿ ಇರತಕ್ಕಂತ ಕೆಟ್ಟ ಆಲೋಚನೆಗಳನ್ನು ದೂರ ಮಾಡಿ ಬದುಕಿನಲ್ಲಿ ಹೊಸ ಭರವಸೆಯನ್ನ ತುಂಬಿ ನವಚೈತನ್ಯವನ್ನು ತಮ್ಮ ಮಾತುಗಳಿಂದ ನಮ್ಮ ಮನಸ್ಸಿನ್ನ  ಪರಿವರ್ತಿಸಿ ಬದಲಾವಣೆಗೆ ಕಾರಣವಾಗುತ್ತಾರೆ, ಹಾಗೆ ಅವರು ನನ್ನ ಬದುಕಲು ಕೂಡ ಒಬ್ಬರು,ಭರವಸೆಯ ಬದುಕಿಗೆ ಕಾರಣಿಕರ್ತರಾದ ಅವರೇ "ಅಪ್ಪಿ "ಅಂತ .ಇವರು ಸ್ನೇಹಿತರಲ್ಲದಿದ್ದರೂ ಕೂಡ ಸ್ನೇಹಿತರಾದವರು ಪರಿಚಿತರ ಅಲ್ಲದಿದ್ದರೂ ಕೂಡ ಚಿರಪರಿಚಿತರಾದವರು ನಾನಿರುವ ಪರಿಸ್ಥಿತಿಗೆ ಲಯವಾಗಿ ಮರುಜೀವ ತುಂಬಿದವರು , ಯಾರು ಯಾರಿಗೆ ಯಾವಾಗ ಪರಿಚಯವಾಗುತ್ತಾರೆ ಅನ್ನೋದು ದೇವರ ವಿಧಿ ಲಿಖಿತ ಇರಬಹುದು ಆದರೆ ನನಗೆ ಇವರು ಪರಿಚಯವಾಗಿದ್ದು ಮಾತ್ರ ನನ್ನ ಬ್ರಹ್ಮ ಲಿಖಿತ ಯಾಕೆ ಅಂತ ಹೇಳಿದರೆ, ಸಮಯ ಮತ್ತು ಸಂದರ್ಭ ಕೈ ಕೊಟ್ಟಾಗ ಭರವಸೆಯಲ್ಲಿ ನನ್ನನು ಕೈ ಹಿಡಿದು ನಡೆಸುವವರೇ ನಮ್ಮವರು ಅವರಿಗೆ ನಾವು ಏನು ಅಂತ ಅರ್ಥ ಆಗಲಿಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ, ಮನೆಯವರೆ ನಮ್ಮನ್ನು ಅರ್ಥಮಾಡಿಕೊಳ್ಳದಿರುವಾಗ,ನನ್ನ ಕಣ್ಣ್ ಅಂಚಿನ ಕಣ್ಣೀರ ಕಂಡು ಕರಗಿದ ಜೀವಗಳಲ್ಲೋಬ್ಬರು ಈ ಅಪ್ಪಿ ,ಇನ್ನೊಬ್ಬರು ನಮ್ಮನ್ನ ಅರ್ಥ ಮಾಡಿಕೊಳ್ಳಲು ಅವರಿಗೆ ನಾವು ಅನುಭವಿಸುವ ನೋವಿನ ಪರಿಕಲ್ಪನೆ ಸಂಪೂರ್ಣವಾಗಿ ತಿಳಿದಿದೆ ಎಂದರ್ಥ ಹಾಗೆ ತಿಳಿದುಕೊಂಡವರೇ ಈ ಅಪ್ಪಿ, ಇವರ ಮಾತುಗಳು ನಮ್ಮ ಬದುಕಿಗೆ ಭರವಸೆಯಾದಂತು ಸುಳ್ಳಲ್ಲ ಇವರ ಮಾತುಗಳನ್ನು ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳಬೇಕು ಎನ್ನುವ ತವಕ ,ಎಲ್ಲಿ ಮಾತುಗಳು  ಮುಗಿದುಬಿಡುತ್ತಾವೋ ಎನ್ನುವ ಆತಂಕ ಈ  ಮನಸ್ಥಿತಿ ತಾನಾಗಿಯೇ ಬಂದು ಮನದಲ್ಲಿ ಕುಳಿತುಕೊಂಡಿರುವುದಂತು ಸುಳ್ಳಲ್ಲ ಇವರು ನನಗೆ ಪರಿಚಿತರಾಗಿದ್ದು ತುಂಬಾ ತಡವಾಗಿ ಆದರೆ ನನ್ನನ್ನು ಅರ್ಥ ಮಾಡಿಕೊಂಡಿದ್ದು ಮಾತ್ರ ಬಹುಬೇಗ  ನಿಜಕ್ಕೂ  ನಾನೇ ಅದೃಷ್ಟವಂತ ಇಂತಹ ಒಬ್ಬ ಸ್ನೇಹಿತೆ ಅದಕ್ಕೂ ಹೆಚ್ಚಾದಂತಹ ವ್ಯಕ್ತಿತ್ವ ಹೊಂದಿರುವ ಸಹ ಹೃದಯಿ ಮನಸ್ಸುಳ್ಳ ಮುಗ್ದತೆ ಗುಣದವಳು ,ನಾ ಎಂದು ಕಳೆದು ಕೊಳೆದುಕೊಳ್ಳಲಾರದಂತಹ ವ್ಯಕ್ತಿತ್ವ ಹೊಂದಿರುವ ನನ್ನ ಅಪ್ಪಿ ಇವರು .ನಾ ಆ ಭಗವಂತನಲ್ಲಿ ಕೇಳೋದು ಇಷ್ಟೇ ಕೊನೆ ತನಕ ನಮ್ಮ ಮೇಲೆ ಯಾವ ಕೆಟ್ಟ ದೃಷ್ಟಿ ಬೀಳದಿರಲಿ ಅಂತ🙏

Category:Personal Experience



ProfileImg

Written by Holeyappa