ಕೆಜಿಎಫ್ ಸಿನಿಮಾ ನೋಡಿ ಮೆಚ್ಚದವರಿಲ್ಲ .. ನಾನೂ ಕೂಡ ಎರಡೂ ಭಾಗಗಳನ್ನೂ ವೀಕ್ಷಿಸಿ ಮೆಚ್ಚಿ ಹುಚ್ಚನಾಗಿ ಹುಂಬನಂತೆ ಕೆಜಿಎಫ್ ನ ಮುಂದುವರಿದ ಭಾಗವನ್ನು ಬರೆಯಲು ಯತ್ನಿಸಿದ್ದೇನೆ… ಓದುಗ ಪ್ರಭುಗಳು ಸ್ವೀಕರಿಸಿ ಹಾರೈಸಿ…
40 ಗ್ರಾಂ ಚಿನ್ನಕ್ಕೆ ಇಡೀ ಪೋಲೀಸ್ ಸ್ಟೇಷನ್ನನ್ನೆ ಉಡಾಯಿಸಿದ್ದ ರಾಖಿ ಇನ್ನು ಅಷ್ಟೊಂದು ಚಿನ್ನವನ್ನ ಅಷ್ಟು ಸುಲಭವಾಗಿ ಕಳೆದುಕೊಳ್ಳಲು ತಯಾರಿರಲಿಲ್ಲ. ರಾಖಿಯನ್ನ ಒಡೆದದ್ದು ಭಾರತದ ಸೇನಾ ಪಡೆಯಾದ್ರೂ ಸಮಯ ಮತ್ತು ಜಾಗ ನಿಗದಿ ಮಾಡಿದ್ದು ಮಾತ್ರ ರಾಖಿನೇ!!!
ನನ್ನ ಹತ್ತಿರ ಕೂಡ ಪಡೆಗಳಿವೆ ಎಂದು ಪ್ರಧಾನಿಗಳು ಘರ್ಜಿಸಿದಾಗ ಮುಗುಳ್ನಗೆ ಬೀರಿದ್ದ ರಾಖಿಗೆ ಇಂತಹ ದಿನ ಬಂದೇ ಬರುತ್ತೆ ಎಂಬ ಊಹೆ ಮುಂಚೆಯೇ ಇತ್ತು ಮತ್ತು ಆ ಕಾರ್ಯದಲ್ಲಿ ಅವನು ಮುಂಚೂಣಿಯಲ್ಲಿದ್ದ. ಆದ್ದರಿಂದಲೇ ಅವನು ಹೊಸ ಗೋಲ್ಡ್ ಮೃನಿಂಗ್ ಪ್ರಾರಂಭ ಮಾಡೊ ಆಲೋಚನೆ ಬಂದ ತಕ್ಷಣವೇ ಸಮುದ್ರದಲ್ಲೊಂದು secret Underwater Naval base ನ ನಿರ್ಮಿಸಲು ಪ್ರಾರಂಭಿಸಿದ್ದ.
ಅಷ್ಟು ದೊಡ್ಡ ಸಾಮ್ರಾಜ್ಯವನ್ನೆ ಕಟ್ಟಿದವನಿಗೆ ಚಿನ್ನ ಸಾಗಿಸಲು ಮುಖ್ಯವಾದ ಮಾರ್ಗ ಸಮುದ್ರವಾಗಿತ್ತು. ಆದುದರಿಂದಲೇ ಸಮುದ್ರದಲ್ಲೊಂದು ದೊಡ್ಡ ಸೈನ್ಯವನ್ನೆ ಕಟ್ಟಿ ನಿಲ್ಲಿಸಿದ್ದ ಮತ್ತು ಇದಾವುದರ ಸುಳಿವು ಕೂಡಾ ಹೊರ ಜಗತ್ತಿಗೆ ಸಿಗದಂತೆ ನೋಡಿಕೊಂಡಿದ್ದ.World is my territory ಎನ್ನುತ್ತಿದ್ದ ರಾಖಿ ಅದರೆಡೆಗೆ ಹೆಜ್ಜೆ ಇಟ್ಟಾಗಿತ್ತು.
ಆ ರಾತ್ರಿ ರಾಖಿಯ ಹಡಗನ್ನ ಛಿದ್ರ ಮಾಡಿದ್ದ ಸೇನಾ ಪಡೆಗಳು ಬೆಳಗಾಗುವಷ್ಟರಲ್ಲಿ ರಾಖಿ ಮತ್ತು ಚಿನ್ನದ ಶೋಧ ಕಾರ್ಯದಲ್ಲಿ ತೊಡಗಿದ್ದರು. ಆದರೆ ಅಲ್ಲಿ ಸಿಕ್ಕಿದ್ದು ಅಲ್ಲಲ್ಲಿ ಚೆದುರಿ ಹೋಗಿ ಬಿದ್ದಿದ್ದ ಚಿನ್ನದ ಬಿಸ್ಕತ್ತುಗಳು ಮತ್ತು ಖಾಲಿ ಕಂಟೇನರ್ಗಳು.
ರಾಖಿಯ ಚಿಕ್ಕ ಕುರುಹು ಇಲ್ಲದನ್ನ ಕಂಡ ಡೈವರ್ ಗಳು ಯಾವುದೋ ಜಲಚರ ಪ್ರಾಣಿಗಳ ಪಾಲಿಗೆ ಆಹಾರವಾಗಿದ್ದಾನೆಂದು ದೆಹಲಿಗೆ ಸಂದೇಶ ರವಾನಿಸಿದರು. ಆದರೆ ರಾಖಿ ಮಾತ್ರ ಸೇರಬೇಕಾದ ಜಾಗವನ್ನು ಸೇರಿಯಾಗಿತ್ತು!!!.
ಹೌದು, ನಿಜ ಆವತ್ತು ರಾಖಿಯ ಹತ್ತಿರ ಪ್ರಪಂಚದಲ್ಲೇ ಯಾರ ಹತ್ತಿರವು ಇಲ್ಲದಷ್ಟು ಚಿನ್ನ ಇತ್ತು. ಆದರೆ ರಾಖಿ ಇದ್ದ ಹಡಗಿನಲ್ಲಲ್ಲ!!!. ಮತ್ತೆ ತನ್ನ ಚಾಣಾಕ್ಷತನ ತೋರಿದ್ದ ರಾಖಿ ಮುಂಚೆಯೇ ಚಿನ್ನದ ಕಂಟೇನರ್ ಗಳನ್ನು ತನ್ನ secret Navy ಪಡೆಯ ಸಹಾಯದಿಂದ ತನಗೆ ಬೇಕಾದ ರಾಷ್ಟ್ರಕ್ಕೆ ಸುರಕ್ಷಿತವಾಗಿ ಸಾಗಿಸಿದ್ದ ಹಾಗೂ ತಾನಿದ್ದ ಹಡಗಲ್ಲಿ ನಕಲಿ ಚಿನ್ನ ಮತ್ತು ಖಾಲಿ ಕಂಟೇನರ್ ಗಳನ್ನು ತುಂಬಿಸಿದ್ದ.
ಹವ್ಯಾಸಿ ಬರಹಗಾರನಾಗಿ ಕನ್ನಡ ಸಾಹಿತ್ಯಕ್ಕೆ ಅಳಿಲು ಸೇವೆ ಸಲ್ಲಿಸುವ ಆಶಯದೊಂದಿಗೆ.....