ಆಹಾರದ ಬೆನ್ನೆಲುಬು "ಜೇನು ಹುಳು"

ವಿಶ್ವ ಜೇನು ಹುಳು ದಿನ

ProfileImg
20 May '24
2 min read


image

 

ಪ್ರಕೃತಿಯಲ್ಲಿ ನಡೆಯುವ ಅದೆಷ್ಟೋ ವಿಸ್ಮಯಗಳು ಕಣ್ಣಿಗೆ ಕಾಣಸಿಕ್ಕರೂ ಅದರ ಹಿಂದಿನ ಕುತೂಹಲ ತಿಳಿಯುವುದರಲ್ಲಿ ವಿಫಲ ಆಗುತ್ತೇವೆ ಕಾರಣ ಇಂದಿನ ಸ್ಮಾರ್ಟ್ ಯುಗದ ಪರಿಣಾಮ. ಈ ಕೆಲ ವಿಸ್ಮಯಗಳಲ್ಲಿ ಜೇನು ಹುಳು ಕೂಡಾ ಒಂದು.. ಮನುಷ್ಯ ಹುಟ್ಟುವ 6000 ವರ್ಷಗಳ ಹಿಂದೆಯೇ ಜೇನುನೊಣಗಳ ಅಸ್ತಿತ್ವವಿತ್ತು ಎಂದು ಹೇಳಲಾಗುತ್ತದೆ.

ಜೇನು ಹುಳುಗಳ ಪರಾಗ ಸ್ಪರ್ಶದ ಕಾರಣದಿಂದ ಇಂದಿಗೂ ಕೂಡ ಸಸ್ಯಗಳ ಕೆಲ ಪ್ರಭೇದಗಳು ಬೇರೂರಿದೆ. ಜೇನು ಗೂಡು ಒಂದು ಕುಟುಂಬದ ಸಂಕೇತ ಎಂದೇ ಹೇಳಬಹುದು. ಜೇನುನೊಣಗಳು ಮಾಡುವ ಕೆಲಸ ಇತರ ಯಾವ ಮನುಷ್ಯರಿಗಾಗಲಿ ಅಥವಾ ಯಾವುದೇ ಯಂತ್ರದ ಸಹಾಯದಿಂದಲೂ ಮಾಡಲು ಸಾಧ್ಯವಿಲ್ಲ. 
ಬಹಳ ಕ್ರಿಯಾಶೀಲತೆಯನ್ನು ಹೊಂದಿರುವ ಈ ಜೇನುಹುಳು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಬದುಕುತ್ತವೆ.

 

ಮೇ 20 ವಿಶ್ವ ಜೇನು ಹುಳು ದಿನ.. 2018ರಲ್ಲಿ ವಿಶ್ವಸಂಸ್ಥೆ, ಜೇನುಹುಳುಗಳ ದಿನ ಎಂದು ಮೊದಲ ಬಾರಿಗೆ ಘೋಷಿಸಿತು. ಜೇನುಹುಳುಗಳ ಸಂತತಿ ಕ್ರಮೇಣ ಕಡಿಮೆಯಾಗುತ್ತಿರುವ ಹಿನ್ನೆಲೆ, ಜೇನು ಹುಳುಗಳ ಉಳಿವಿಗಾಗಿ ಹಾಗೂ ಅದರ ಸಂತತಿ ಹೆಚ್ಚಿಸುವ ಸಲುವಾಗಿ ವಿಶ್ವ ಜೇನು ಹುಳು ದಿನ ಎಂದು ಆಚರಿಸಲಾಗುತ್ತದೆ.

ಮೇ 20, 1734 ರಲ್ಲಿ ಜನಿಸಿದ ಖ್ಯಾತ ಜೇನು ಕೃಷಿಕ ಅಂಟೆನ್ ಜಾನಿಯ ಅವರ ಜನ್ಮದಿನ ಕೂಡ ಹೌದು.
ಇನ್ನು ಜೇನು ಹುಳುಗಳ ಬಗ್ಗೆ ಹೇಳಬೇಕಾದರೇ 
ರಾಣಿ ಜೇನು, ಕೆಲಸಗಾರ ಜೇನು ಹುಳು, ಗಂಡು ಜೇನು, ಈ ಮೂರು ಜೇನು ಹುಳಗಳು ಒಟ್ಟಿಗೆ ವಾಸಿಸುವುದರ ಜೊತೆ ಸ್ವತಂತ್ರವಾಗಿ ಬೇರೆ ಬೇರೆ ಕೆಲಸಗಳನ್ನು ಮಾಡುತ್ತದೆ.


ರಾಣಿ ಜೇನು ಹುಳು: ಜೇನು ಹುಳಗಳಲ್ಲಿ ಪ್ರಮುಖ ಪಾತ್ರ ವಹಿಸುವ ರಾಣಿ ಜೇನು, ಇತರ ಜೇನು ಹುಳಗಳಿಗಿಂತ ವಿಭಿನ್ನ. 
ಬೇರೆ ಜೇನು ಹುಳಗಳಿಗಿಂತ ದೊಡ್ಡ ಗಾತ್ರದಲ್ಲಿರುವ ರಾಣಿ ಜೇನುಹುಳ ದಿನಕ್ಕೆ 1500 ಮೊಟ್ಟೆಗಳನ್ನು ಇಡುವಷ್ಟು ಸಾಮರ್ಥ್ಯ ಹೊಂದಿರುತ್ತಾಳೆ.
ಕೇವಲ ಮೂರು ವರ್ಷದ ಜೀವಿತಾವಧಿ ಹೊಂದಿರುವ ರಾಣಿ ಜೇನುಹುಳ ಬಹಳ ಶಕ್ತಿಶಾಲಿ. ತನ್ನ ಗೂಡಿನಲ್ಲಿ ಯಾವುದೇ ಇತರ ರಾಣಿ ಜೇನು ಜನಿಸಿದರೂ ಅದನ್ನ ಕೊಲ್ಲುತ್ತಾಳೆ.


ಗಂಡು ಜೇನುಹುಳು: ಗೂಡಿನಲ್ಲಿರುವ ಎಲ್ಲಾ ಗಂಡು ಜೇನುಗಳು ಸಂತಾನೋತ್ಪತ್ತಿಯ ಗುಣ ಹೊಂದಿರುವುದಿಲ್ಲ. ಕೆಲವು ಗಂಡುಗಳಲ್ಲಿ ಮಾತ್ರ ಸಂತಾನೋತ್ಪತ್ತಿಯ ಶಕ್ತಿ ಇರುತ್ತದೆ ಇವು ಜೇನು ಸಂಗ್ರಹಿಸುವುದು ಕೂಡ ಕಡಿಮೆ.
 

ಕೆಲಸಗಾರ ಜೇನುಹುಳ: ಕನಸುಗಾರ ಜೇನುಹುಳಗಳು ಜೇನುತುಪ್ಪವನ್ನು ಸಂಗ್ರಹಿಸುವುದು, ಗೂಡನ್ನ ರಕ್ಷಿಸುವುದು ಹಾಗೂ ರಾಜ, ರಾಣಿ ಜೇನು ಲಾರ್ವಾಗಳನ್ನ ನೋಡಿಕೊಳ್ಳುವುದು ಇದರ ಕೆಲಸ.

ಜೇನುಗಳ ಪರಾಗಸ್ಪರ್ಶದಿಂದ ಅನೇಕ ಗಿಡಗಳು ಹಾಗೂ ಬೆಳೆಗಳನ್ನ ಉತ್ಪಾದಿಸಲು ಸಾಧ್ಯ, ಜೇನುಗೂಡುಗಳ ಪರಾಗಸ್ಪರ್ಶದಿಂದ ಅನೇಕ ರೈತರು ತಮ್ಮ ಬೆಳೆಗಳಲ್ಲಿ ಅತಿ ಹೆಚ್ಚು ಇಳುವರಿಯನ್ನು ಕಂಡಿದ್ದಾರೆ.

ಜೇನು ಹುಳಗಳ ಸಂವಹನ ವಿಭಿನ್ನ: ಜೇನು ಹುಳುಗಳು ಶತ್ರುಗಳ ರಕ್ಷಣೆಗಾಗಿ ತನ್ನ ವಿಭಿನ್ನ ಸಂವಹನದ ಮೂಲಕ ಇತರ ಜೇನು ಹುಳುಗಳಿಗೆ ಸಂದೇಶ ರವಾನೆ ಮಾಡುತ್ತದೆ.

ಜೇನು ಹುಳುಗಳು ತಮ್ಮ ತಂಡದೊಳಗಿನ ಸಂಪರ್ಕಕ್ಕಾಗಿ ವಿವಿಧ ರಸಾಯನಿಕಗಳನ್ನು ಮತ್ತು ದೇಹದ ವಾಸನೆಗಳನ್ನು ಬಳಸಿಕೊಳ್ಳುತ್ತೆ.


ಕೀಟನಾಶಕದಿಂದ ಸಂತತಿಗೆ ಹಾನಿ
ಕ್ರೀಟನಾಶಕಗಳ ಬಳಕೆಯಿಂದಾಗಿ ಇಂದಿಗೂ ಅನೇಕ ಜೇನುಹುಳಗಳ ಸಂತತಿ ಕಡಿಮೆಯಾಗುತ್ತಿದೆ. ಜೇನುಹುಳಗಳು ಮುಂಜಾನೆ ಮಕರಂದ ಇರುವ ಸಲುವಾಗಿ ಗಿಡಗಳ ಮೇಲೆ ಕುಳಿತುಕೊಂಡಾಗ ಮಾನವ ಸಿಂಪಡಿಸಿದ ಕ್ರೀಟ ನಾಶಕಗಳ ಮಿಶ್ರಣದೊಂದಿಗೆ ಬೆರೆತ ಮಕರಂದವನ್ನು ಹೀರಿದಾಗ ಜೇನುಹುಳಗಳು ಕ್ರಿಮಿನಾಶಕ ಸೇವನೆಯಿಂದಾಗಿ ಸಾಯುತ್ತೇವೆ.


ಜೇನು ಹುಳಗಳ ಸಂತತಿ ಕಡಿಮೆಯಾದರೆ ಮನುಷ್ಯನಿಗೆ ಆಹಾರದ ಅಭಾವ ಕಾಡಬಹುದು ಹಾಗೆಯೇ ಭೂಮಿಯ ಸ್ವಾಶಕೋಶ ಎಂದೇ ಕರೆಯುವ ಅರಣ್ಯಗಳಿಗೂ ಕೂಡ ಅಪಾಯಕಾರಿ ಎಂದು ಹೇಳಲಾಗುತ್ತದೆ.

ಇಂದಿನ ಶಿಕ್ಷಣದಲ್ಲಿ ಜೇನು ಹುಳಗಳ ಪ್ರಾಮುಖ್ಯತೆಯನ್ನು ಮಕ್ಕಳಿಗೆ ತಿಳಿಸುವುದು ಒಳ್ಳೆಯದು. ಪರಿಸರಕ್ಕೂ ಹಾಗೂ ಜೇನು ಹುಳುಗಳಿಗೂ ಇರುವ ನಂಟನ್ನ ತಿಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಜೇನು ಹುಳುಗಳ ಸಾಕಾಣಿಕೆ ವೃದ್ಧಿ ಆಗಬೇಕು. ಅನೇಕ ಯುವಕರು ಉದ್ಯೋಗವನ್ನು ಬಿಟ್ಟು ಜೇನು ಉದ್ಯಮದಲ್ಲಿ ತೊಡಗಿಕೊಂಡಿರುವುದು ಸಂತಸದ ವಿಷಯ. 
ಎಲ್ಲರಿಗೂ ವಿಶ್ವ ಜೇನು ಹುಳು ದಿನದ ಶುಭಾಶಯಗಳು..

Category:Nature



ProfileImg

Written by Meghana Basavanna

Photographer, Graphic Designer, Content Writer