ಪೌಷ್ಟಿಕ ಆಹಾರದ ಭದ್ರತೆ ಇಂದಿನ ಅವಶ್ಯಕತೆಯಾಗಿದೆ

ಧರ್ಮಸ್ಥಳದ ಡಾ|.ಡಿ.ವೀರೇಂದ್ರ ಹೆಗ್ಗಡೆಯವರು ರೈತರಲ್ಲಿ ಸಿರಿಧಾನ್ಯ ಕೃಷಿ ಮೂಲಕ ಪೌಷ್ಟಿಕ ಆಹಾರ ಭದ್ರತೆಗೆ ನಾಂದಿ ಹಾಡಿರೋದು ಸ್ವಾಗತಾರ್ಹ: ಮಾಜಿ ಸಂಸದ ಕೆ.ವಿರುಪಾಕ್ಷಪ್ಪ

ProfileImg
25 Jun '24
2 min read


image

ಸಿಂಧನೂರು ನಗರದಲ್ಲಿ ಶ್ರೀ ಧರ್ಮಸ್ಥಳ ಸಿರಿಮನೆ ಬಸವಶ್ರೀ ಮಿಲೆಟ್ ಹೌಸ್ ನ್ನು ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪರವರು ಉದ್ಘಾಟಿಸಿ, ಆಧುನಿಕ ಯುಗದಲ್ಲಿ ವಿಷಯುಕ್ತ ಆಹಾರ ಪದ್ಧತಿ ಬದಲಾವಣೆ ಅವಶ್ಯಕತೆ ಇದ್ದು ಈ ನೆಲೆಯಲ್ಲಿ ಇಂದು ಧರ್ಮಸ್ಥಳದ ಪೂಜ್ಯ ಡಾ|.ಡಿ.ವೀರೇಂದ್ರ ಹೆಗ್ಗಡೆಯವರು ರೈತರಲ್ಲಿ ಸಿರಿಧಾನ್ಯ ಕೃಷಿ ಮೂಲಕ ಪೌಷ್ಟಿಕ ಆಹಾರ ಭದ್ರತೆಗೆ ನಾಂದಿ ಹಾಡಿರೋದು ಸ್ವಾಗತಾರ್ಹ ಎಂದು ತಿಳಿಸಿ, ಸಿಂಧನೂರು ಜನತೆ ಸದುಪಯೋಗ ಪಡಿಸಿಕೊಳ್ಳಲು  ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಿರಿ ಮಿಲೆಟ್ ನಿರ್ದೇಶಕರಾದ ದಿನೇಶ್ ಎಂ ರವರು ಮಾತನಾಡಿ, ಪೂಜ್ಶರು, ಮಾತೃಶ್ರೀ ಅಮ್ಮನವರ ಆಶಯ  ಪೌಷ್ಠಿಕಾಂಶ ಭರಿತ ಸಿರಿಧಾನ್ಶಗಳನ್ನು ರೈತರಲ್ಲಿ ಬೆಳೆಸುವಲ್ಲಿ ಪ್ರೋತ್ಸಾಹ ನೀಡುವುದು. ರೈತರಿಗೆ ಯೋಗ್ಶ ಬೆಲೆ ಒದಗಣೆ ˌ ಸಮಾಜಕ್ಕೆ ಪೌಷ್ಠಿಕಯುತ ಆಹಾರ ಆರೋಗ್ಶ ಭದ್ರತೆಯನ್ನು ಒದಗಿಸುವುದಾಗಿದೆ ಎಂದರು. ಇದರೊಂದಿಗೆ ಸಿರಿಧಾನ್ಶಗಳನ್ನು ಆಹಾರವಾಗಿ ಬಳಕೆ ಮಾಡುವ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಉಪಸ್ಥಿತಿರಾದ  ಶ್ರೀ ಪಿ, ರುದ್ರಪ್ಪ ಜಿಲ್ಲಾ ಅಧ್ಯಕ್ಷರು  ಜಾಗತಿಕ ಲಿಂಗಾಯತ ಮಹಾಸಭಾ ರಾಯಚೂರು ಇವರು ಸಿರಿಧಾನ್ಯ ಬಳಕೆಯಿಂದ ರೋಗದಿಂದ ಮುಕ್ತರಾಗಬಹುದು ಈ ಕಾರ್ಯಕ್ರಮದಿಂದ ಸಿಂಧನೂರು ಜನತೆಗೆ ಜಾಗೃತಿ ಮೂಡಬೇಕು ಈ ನಿಟ್ಟಿನಲ್ಲಿ  ನಾವೆಲ್ಲರೂ ಜಾಗೃತರಾಗ ಬೇಕಾಗಿದೆ ಇದೊಂದು ಭವಿಷ್ಯದ  ಆಹಾರ ಎಂದು ನಾವೆಲ್ಲರೂ ಪ್ರತಿ ದಿನ ಸಿರಿಧಾನ್ಯ ಬಳಕೆ ಮಾಡೋಣ ಹೇಳುತ್ತಾ ಅಭಿಪ್ರಾಯ ವ್ಯಕ್ತಪಡಿಸಿದರು .

 ನಿರ್ದೇಶಕರಾದ ಶ್ರೀ ರೋಹಿತಾಕ್ಷ , ಮಾತನಾಡಿ ಮಕ್ಕಳಿಗೆ ಸಿರಿಧಾನ್ಯ ಉತ್ಪನ್ನ ಬಳಕೆ ಮಾಡಿ ಮಕ್ಕಳ ಭವಿಷ್ಯ ರೂಪಿಸಿ, ಪಂಚ ಸಿರಿಧಾನ್ಯ ಬಳಕೆ ಮಾಡಿ ನಿಮ್ಮ ಮನೆ ಬಾಗಿಲಿಗೆ ಮುಟ್ಟಿಸುವ ಕಾರ್ಯಕ್ರಮ ಸಿರಿಮನೆ ಯಿಂದ ಆಗಬೇಕು ಈ ನಿಟ್ಟಿನಲ್ಲಿ ಮದುಮೇಹ ಇರುವಂತವರನ್ನು  ಗುರುತಿಸಿ ಮಾಹಿತಿ ಕಾರ್ಯಾಗಾರ ಮಾಡುವಂತೆ ಸಲಹೆ ನೀಡಿದರು. 

ಈ ಸಂದರ್ಭ ಕೆ ಭೀಮನಗೌಡ ಮಾಜಿ ಅಧ್ಯಕ್ಷರು ತಾಲೂಕು ನ್ಯಾಯವಾದಿಗಳ ಸಂಘ (ರಿ )ಸಿಂಧನೂರು, ಯೋಜನಾಧಿಕಾರಿಯವರಾದ ಶೇಖರ್ ಶೆಟ್ಟಿ ˌ ಮಾಲತೇಶ್ˌ ಸಿರಿಮಿಲೆಟ್ ಹೌಸ್ ಮಾಲಿಕರಾದ ಕೃಷ್ಣರಾವ್,ಗೀತಾˌ ಇನ್ನಿತರರು ಉಪಸ್ಥಿತರಿದ್ದರು.

ಸಿರಿಮಿಲೆಟ್ ಮಾರುಕಟ್ಟೆ  ಮೇಲ್ವಿಚಾರಕ ಶ್ರೀ ನಂದೀಶ್ ˌ ಹಾಗೂ ಸಿಂಧನೂರು ತಾಲೂಕಿನ ವಿತರಕರ ಶ್ರೀ ಕಾಳಿಂಗ ರೆಡ್ಡಿ ಹಾಗೂ ಮಂಜುನಾಥ , ವಲಯ ಮೇಲ್ವಿಚಾರಕರಾದ ಶ್ರೀಮತಿ   ನಂದಾ, ಪ್ರತಿಭಾ ಮತ್ತು ಕೃಷಿ ಮೇಲ್ವಿಚಾರಕರು ಶ್ರೀ ನಿಂಗಪ್ಪ ಮತ್ತು ಸೇವಾಪ್ರತಿನಿಧಿಯವರು ಕಾರ್ಯಕ್ರಮ ಸಂಘಟನೆಯಲ್ಲಿ ಸಹಕರಿಸಿದರು.

Category:News



ProfileImg

Written by Avinash deshpande

Article Writer, Self Employee