ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಮುದಾಯದ ಪಾತ್ರ ಮಹತ್ವದ್ದು :ಹನುಮಂತಪ್ಪ

ಹೊಸ ಶೈಕ್ಷಣಿಕ ವರ್ಷವನ್ನು ಸ್ವಾಗತಿಸುವ ಸಮಯ...

ProfileImg
31 May '24
1 min read


image

ಬೇಸಿಗೆ ಕಳೆದು, ರಜೆಯ ಗುಂಗಿನಿಂದ ಹೊರಬಂದ ಮಕ್ಕಳಿಗೆ ಈಗ ಶಾಲೆಗೆ ತೆರಳುವ ಸಮಯ, ಪಾಲಕರು ಸಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕೆಗೆ ಬೇಕಾದ ಉಪಕರಣಗಳನ್ನು ಕೊಡಿಸಿ, ಶಾಲೆಗೆ ಕಳಿಸುವ ತರಾತುರಿಯಲ್ಲಿರುವುದು ವಿಶೇಷವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರವು 2024-25ನೇ ಸಾಲಿನ ಈ ಶೈಕ್ಷಣಿಕ ವರ್ಷವನ್ನು ಶೈಕ್ಷಣಿಕ ಬಲವರ್ಧನೆ ವರ್ಷ ಎಂದು ಘೋಷಿಸಿದ್ದಾರೆ.

ಅದರಂತೆ ಸಿಂಧನೂರು ತಾಲೂಕಿನ ದುಗ್ಗಮ್ಮನಗುಂಡ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದುಗ್ಗಮ್ಮನಗುಂಡ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಕನಕನಗರ ಸಮೂಹ ಸಂಪನ್ಮೂಲ ವ್ಯಕ್ತಿ ಹನುಮಂತಪ್ಪ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಕಲಿಕೆಯೊಂದಿಗೆ ಸಂತಸದಾಯಕ ಕಲಿಕೆ ವಾತಾವರಣ ಹೊಂದಿದೆ.  ಉಚಿತ ಸಮವಸ್ತ್ರ ಉಚಿತ ಪಠ್ಯಪುಸ್ತಕದ ಜೊತೆಗೆ ಹಲವಾರು ಸೌಲಭ್ಯಗಳು ಮಕ್ಕಳಿಗೆ ದೊರೆಯಲಿದೆ ಸರಕಾರಿ ಶಾಲೆಗಳ ಸೌಲಭ್ಯವನ್ನು ತಾವೆಲ್ಲರೂ ಪಡೆಯಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಶಂಕರ ದೇವರು ಹಿರೇಮಠ ಅವರು ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ದಾನಿಗಳು ನೀಡಿದ ಸಾಮಗ್ರಿಗಳನ್ನು ಉಚಿತವಾಗಿ ಕಲಿಕೋಪಕರಣಗಳನ್ನು ,ನೋಟ್ ಬುಕ್, ಪೆನ್ ಹಾಗೂ ನೀರಿನ ಬಾಟಲ್ ಗಳನ್ನು ಒಳಗೊಂಡ ಕಿಟ್ ಅನ್ನು ವಿದ್ಯಾರ್ಥಿಗಳಿಗೆ ವಿತರಿಸಿ,ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ದಾನಿಗಳ ಸಹಕಾರ ಅಗತ್ಯವೆಂದು ತಿಳಿಸಿದರು.

ಶಾಲಾ ಪ್ರಾರಂಭೋತ್ಸವದ ಸಂದರ್ಭದಲ್ಲಿ ಮುಖ್ಯ ಅಡಿಗೆಯವರಾದ ರೇಣುಕಾ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಗುಡದಪ್ಪ ಹಾಗೂ ಮಾಜಿ ಅಧ್ಯಕ್ಷರಾದ ಲಕ್ಷ್ಮಣ, ಉಪಾಧ್ಯಕ್ಷರಾದ ರೇಣಮ್ಮ ಅವರು, ಅಂಗನವಾಡಿ ಶಿಕ್ಷಕಿ ಭಾಗ್ಯಮ್ಮ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಪ್ರದೀಪ್ ಕುಮಾರ್ ಅವರು, ಸ್ವಾಗತವನ್ನು ಭಾಗ್ಯಶ್ರೀ, ಸಂಪ್ರೀತ್ ಅವರು ವಂದಿಸಿದರು.

Category:Education



ProfileImg

Written by Avinash deshpande

Article Writer, Self Employee

0 Followers

0 Following