ಮಳೆ ಬಂದ್ರೂ ಆಗಲ್ಲ
ಬಿಸಿಲು ಬಂದ್ರೂ ಆಗಲ್ಲ
ಚಳಿಯಂತೂ ಬರಲೇಬಾರದಂತೆ
ಹಾಗಾದ್ರೆ
ಏನು ಬರಬೇಕು..?
ಒಮ್ಮೆ ಹೇಳುವೀರಾ..?
ಮಳೆಗಾಲದಲ್ಲಿ ಮಳೆ ಬಾರದೇ ಮತ್ತೇನ್ ಬರಬೇಕು..?
ಬೇಸಿಗೆ ಕಾಲದಲ್ಲಿ ಬಿಸಿಲು ಇರದೇ ಮತ್ತೇನ್ ಇರ್ಬೇಕ್..?
ಚಳಿಗಾಲದಲ್ಲಿ ಚಳಿ ಬದ್ಲು ಬೆವರು ಬರುತ್ತಾ..?
ಮನುಷ್ಯನ ಹುಚ್ಚು ಆಟಕ್ಕೆ
ಕಾಲವೇ ಬಲಿಯಾಯ್ತು..!
ಈಗಂತೂ
ಮಳೆಗಾಲದಲ್ಲಿ ಮಳೆಯೇ ಬರಲ್ಲ
ಜೂನ್, ಜುಲೈ ಮಳೆ
ಡಿಸೆಂಬರ್ ನಲ್ಲಿ ಒಮ್ಮೆಮ್ಮೆ ಸುರಿಯುತ್ತೆ..!
ಏನ್ ಹೇಳಲಿ ಗುರು..?
ಅಗೆದು ಅಗೆದು ಭೂಮಿಯೇ ಛಿದ್ರವಾಗಿದೆ..!
ಭೂಮಿ ಗರ್ಭವನ್ನೇ ಸೀಳಿ
ನೀರಿಗಾಗಿ ತಡಕಾಡಿದರು
ಚಿನ್ನ, ಬೆಳ್ಳಿಗಾಗಿ ಹುಡುಕಾಡಿದರು..
ಇಂಗು ಗುಂಡಿ ಮಾಡದೇ
ನೀರನ್ನೇ ಸ್ವಾಹ ಮಾಡಿದರು..!
ಮಳೆ ಬರಲ್ಲ ಎಂದು ಖಾತ್ರಿಯಾಯಿತು
ಎಲ್ಲೆಲ್ಲೂ ಪೂಜೆ, ಪ್ರಾರ್ಥನೆಗಳ ಸರದಿ
ಭಗವಂತನ ಈ ಭಯ
ಮೊದಲೇ ಯಾಕೆ
ಬರಲಿಲ್ಲ, ಮನುಜ..?
ಮಳೆಗಾಗಿ ಕಪ್ಪೆಗೂ, ಕತ್ತೆಗೂ
ಆಯ್ತು ಮದುವೆ..!
ಆಕಾಶವೇ ಭುವಿಗೆ ಬಿದ್ದರೂ
ಮಳೆ ಮಾತ್ರ
ಸುರಿಯಲೇ ಇಲ್ಲ...
Author, Journalist, Poet, Anchor, PhD Scholar