ಅಪಾರ ದಕ್ಷತೆ ಸಮಯ ಪ್ರಜ್ಞೆಯ ಸಹೃದಯಿ ಪೋಲೀಸ್ ಆಫೀಸರ್ ಕೆ ಪಿ ಸತ್ಯನಾರಾಯಣ
ಕೊರೋನ ಸಂಕಷ್ಟ ಸಮಯದಲ್ಲಿ. ಅದ್ಭುತವಾದ ಸಮಯ ಪ್ರಜ್ಞೆ,ದೃಢತೆ,ಆತ್ಮವಿಶ್ವಾಸ,ಸ್ವಸಾಮರ್ಥ್ಯದಿಂದ ಆಗಲಿದ್ದ ಅನಾಹುತವನ್ನು ತಪ್ಪಿಸಿದ ಇವರು ಪೋಲೀಸ್ ಇಲಾಖೆಗೆ ರಾಜ್ಯಕ್ಕೆ ,ದೇಶಕ್ಕೆ ಹೆಮ್ಮೆ
ಒಂದು ವೀಡಿಯೋ ದಲ್ಲಿ ಮಾದನಾಯನಕ ಹಳ್ಳಿ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ ಪಿ ಸತ್ಯನಾರಾಯಣ ಅವರು ಉದ್ರಿಕ್ತರಾಗಿದ್ದ ಐದು ಸಾವಿರ ಬಿಹಾರಿ ವಲಸೆ ಕಾರ್ಮಿಕರನ್ನು ನಿಯಂತ್ರಿಸಿದ ಪರಿಯನ್ನು ನೋಡಿ ಮೂಕ ವಿಸ್ಮಿತಳಾಗಿದ್ದೆ
ನಿಜಕ್ಕೂ ಅಲ್ಲಿ ಗೋಲಿಬಾರ್ ಆಗಿ ಏನೆನೋ ಆಗಬಹುದಿತ್ತು.ಅದನ್ನು ದೇಶ ಭಕ್ತಿಯನ್ನು ಜಾಗೃತಿ ಗೊಳಿಸುವ ಮೂಲಕ ತಹಬದಿಗೆ ತಂದ ಸತ್ಯನಾರಾಯಣ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಆಗುತ್ತದೆ ..ಸಿನೇಮಾದಲ್ಲೆಲ್ಲ ಇಂತಹದ್ದನ್ನು ನಾವು ನೋಡಿರ್ತೇವೆ..ಆದರೆ ನಿಜ ಜೀವನದಲ್ಲೂ ಇಂತಹ ಪವಾಡ ಸದೃಶ ಚಮತ್ಕಾರವನ್ನು ಮಾಡಿದ್ದಾರೆ..ನಿಜಕ್ಕೂ ಗ್ರೇಟ್ ಅವರು
ನನಗೆ ಅವರ ಪರಿಚಯವಾದದ್ದು ಪೇಸ್ ಬುಕ್ ಮೂಲಕವೇ.
ಸುಮಾರು ಸಮಯ ಅವರು ಪೋಲೀಸ್ ಇಲಾಖೆಯಲ್ಲಿ ಇದ್ದರೆಂಬುದೇ ನನಗೆ ಗೊತ್ತಿರಲಿಲ್ಲ.
ಬಹಳ ಒಳ್ಳೆಯ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಹಾಕುತ್ತಿದ್ದರು. ಒಳ್ಳೆಯ ಹವ್ಯಾಸಿ ಫೋಟೋ ಗ್ರಾಫರ್ ಅವರು.
ಒಳ್ಳೆಯ ಬರಹಗಾರರು ಕೂಡ
ಹೆಚ್ಚು ಬರೆದಿಲ್ಲ ಅಥವಾ ಫೇಸ್ ಬುಕ್ ನಲ್ಲಿ ಹಾಕಿಲ್ಲ..ಆದರೆ ಬರೆದಿರುವ ಬರಹಗಳು ಬಹಳ ಸತ್ವಯುತವಾದವುಗಳು.
ಒಂದು ದಿನ ನಾನು ಮಗನಲ್ಲಿ ಅವರು ಹಾಕಿದ ಫೋಟೋ ತೋರಿಸಿ ಇದೆಷ್ಟು ಚಿನ್ನಾಗಿದೆ ನೋಡು ಎಂದೆ
ಮಗ ಯಾರು ಹಾಕಿದ್ದು ಕೇಳಿದ..ಯಾರು ಗೊತ್ತಿಲ್ಲ ಮಾರಾಯ ನನ್ನ ಫೇಸ್ ಬುಕ್ ಫ್ರೆಂಡ್ ಸತ್ಯ ಹರಿಯಬ್ಬೆ ಹಾಕಿದ್ದು ಎಂದೆ.
ಅವನು ಇವರ ಫ್ರೊಪೈಲ್ ಪೋಟೋ ನೋಡಿ ಯಬ್ಬೋ ದೇವರೇ .ಇವರ್ಯಾರು ಅಂತ ಗೊತ್ತು ಅಮ್ಮ..ಇವರು ನಮ್ಮ ಬ್ಯಾಡರ ಹಳ್ಳಿಗೆ ಇತ್ತೀಚಿಗೆ ಬಂದಿರುವ ಪೋಲೀಸ್ ಇನ್ಸ್ಪೆಕ್ಟರ್ ಎಂದ..
ಇವರ ಬಗ್ಗೆ ಮಗ ನನ್ನಲ್ಲಿ ಅನೇಕ ಬಾರಿ ಹೇಳಿದ್ದ.ಮಗನ ಕೆ ಎಲ್ ಲಾ ಕಾಲೇಜು ಉಳ್ಳಾಲು ಕೆರೆ ಸಮೀಪದಲ್ಲಿ ಮಾಗಡಿ ರಸ್ತೆಗೆ ಹೋಗುವ ಮಾರ್ಗದಲ್ಲಿ ಇದೆ
ಇಲ್ಲಿ ಉಳ್ಳಾಲು ಸುತ್ತಮುತ್ತಲಿನ ಪ್ರದೇಶವಿಡೀ ರೌಡಿಗಳ ಹೊಡಿಬಡಿ ಕೇಂದ್ರವಾಗಿ ಕುಖ್ಯಾತ ವಾಗಿತ್ತು.ಗಾಂಜಾ ಅಫೀಮು ಮಾರಾಟದ ದಂಧೆ ಕೂಡ ವ್ಯಾಪಕವಾಗಿತ್ತು.ಅಲ್ಲಿ ಮುಖ್ಯ ರಸ್ತೆಯಲ್ಲಿ ನಡೆದು ಕೊಂಡು ಹೋಗುವವರಿಂದ ಹಾಡು ಹಗಲೇ ರೌಡಿಗಳಯ ತಲವಾರು ತೋರಿಸಿ ಬ್ಯಾಗ್ ದುಡ್ಡು ಕಿತ್ತುಕೊಳ್ಳುತ್ತಾ ಇದ್ದರು.ಇದೆಲ್ಲವನ್ನು ಬ್ಯಾಡರಹಳ್ಳಿ ಪೋಲೀಸ್ ಸ್ಟೇಷನ್ ಗೆ ಟ್ರಾನ್ಸ್ಫರ್ ಅಗಿ ಬಂದಿದ್ದ ಪೋಲೀಸ್ ಇನ್ಸ್ಪೆಕ್ಟರ್ ವಾರದೊಳಗೆ ಕಂಟ್ರೋಲ್ ಮಾಡಿದ ಬಗ್ಗೆ ಮಗ ಸುಮಾರು ಸಲ ಹೇಳಿದ್ದ.
ಅವರ ಹೆಸರು ಸತ್ಯ ನಾರಾಯಣ ಎಂದು ಕೂಡ ಹೇಳಿದ್ದ.
ಅಲ್ಲಿ ನ ಜನ ಆ ಇನ್ಸ್ಪೆಕ್ಟರ್ ಪಿಸ್ತೂಲ್ ಹಿಡಿದೇ ಮಾತಾಡುತ್ತಾರೆ ಎಂದು ಹೆದರ್ತಾ ಇದ್ದರಂತೆ.
ಸಿವಿಲ್ ಡ್ರೆಸ್ ನಲ್ಲಿ ಬಂದು ಗಾಂಜಾ ಅಫೀಮು ಮಾರಾಟ ಮಾಡುತ್ತಿದ್ದವರ ಜಾಲವನ್ನು ಪತ್ತೆ ಮಾಡಿ ಹಿಡುದು ಜೈಲಿಗೆ ಹಾಕಿದರಂತೆ.ರಾತ್ರಿ ಸಡನ್ ಬಂದು ರೆಡ್ ಹ್ಯಾಂಡ್ ಅಗಿ ಹಿಡಿದರಂತೆ..ದೊಡ್ಡ ಕಳ್ಳರ ಗ್ಯಾಂಗ್ ಅನ್ನು ಮಟ್ಟ ಹಾಕಿದರಂತೆ..ಹೀಗೆ ಆಗಾಗ ಮಗ ಹೇಳ್ತಾ ಇದ್ದ.ಅಂತು ನಾಗರಿಕರು ಸ್ವಲ್ಪ ಭಯ ಬಿಟ್ಟು ಓಡಾಡುವ ಸ್ಥಿತಿಗೆ ತಂದಿಟ್ಟ ಬಗ್ಗೆ ಮಗ ಹೇಳಿದ್ದ
ಆದರೆ ಸತ್ಯ ಹರಿಯಬ್ಬೆ ಯೇ ಆ ಪೋಲೀಸ್ ಇನ್ಸ್ಪೆಕ್ಟರ್ ಅಂತ ಗೊತ್ತಿರಲಿಲ್ಲ.
ನಮ್ಮ ಮನೆ ಬ್ಯಾಡರ ಹಳ್ಳಿ ಪೋಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇತ್ತು
ಯಾವುದೋ ಒಂದು ಸಂದರ್ಭದಲ್ಲಿ ನಾನು ಸ್ಟೇಷನ್ ಗೆ ಹೋಗಿದ್ದಾಗ ಭೇಟಿ ಮಾಡಿದ್ದೆ.
ಅಲ್ಲಿ ಪೋಲೀಸ್ ಸ್ಟೇಷನ್ ನ ಆವರಣದಲ್ಲಿ ಸ್ವಲ್ಪ ಖಾಲಿ ಜಾಗ ಇತ್ತು.ಅಲ್ಲಿ ಮೊದಲು ಕಸ ಕಡ್ಡಿ ತುಂಬಿ ವಾಸನೆ ಹೊಡೆಯತ್ತಾ ಇತ್ತು
ಅದನ್ನೆಲ್ಲ ಸ್ವಚ್ಛ ಪಡಿಸಿ ಅಲ್ಲೊಂದು ಚಂದದ ಪಾರ್ಕ್ ಅನ್ನು ಸತ್ಯನಾರಾಯಣ ಅವರು ನಿರ್ಮಿಸಿದ್ದರು.
ನಂತರ ಈ ಪ್ರದೇಶದ ಅಪರಾಧಗಳ ನಿಯಂತ್ರಣಕ್ಕಾಗಿ ಅನೇಕ ಆಧುನಿಕ ತಂತ್ರ ಜ್ಞಾನವನ್ನು ಬಳಸಿದ್ದರು.
ಬ್ಯಾಡರ ಹಳ್ಳಿ ವ್ಯಾಪ್ತಿಯ ಎಲ್ಲ ಆಯಕಟ್ಟಿನ ಜಾಗಗಳಲ್ಲಿ ಸಿಸಿ ಕೆಮರಾ ಅಳವಡಿಸಿದ್ದರು.
ಸಿಸಿ ಕ್ಯಾಮರ ಕಣ್ಣು ತಪ್ಪಿಸಿ ಒಂದು ನರ ಪಿಳ್ಳೆ ಕೂಡ ಹೋಗದಂತೆ ವ್ಯವಸ್ಥೆ ಮಾಡಿದ್ದರು.
ಇದನ್ನು ಪೋಲೀಸ್ ಸ್ಟೇಷನ್ ನ ಕಂಟ್ರೋಲ್ ರೂಮಿನ ಕೊಠಡಿಯಲ್ಲಿ ಕುಳಿತು ಕೊಂಡು ನೋಡಲು ಆಗುವಂತೆ ತಂತ್ರಜ್ಞಾನ ವನ್ನು ಅಳವಡಿಸಿದ್ದರು.ಇದರ ಪರಿಣಾಮವಾಗಿ
70% ಕ್ರೈಮ್ ಗಳು ಆರು ತಿಂಗಳಲ್ಲಿ ಕಡಿಮೆ ಆಗಿದ್ದವು.
ಇಡೀ ರಾಜ್ಯ ,ದೇಶದಲ್ಲಿ ಇಂತಹ ತಂತ್ರಜ್ಞಾನ ವನ್ನು ಅಳವಡಿಸಿ ಇಂತಹ ಸಾಮರ್ಥ್ಯ ವಂತ ಪೋಲೀಸ್ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದರೆ ಭಾರತ ಮತ್ತೆ ಗುಪ್ತರ ಕಾಲದ ಸುವರ್ಣ ಯುಗವನ್ನು ಕಾಣಬಹುದು.
ಓರ್ವ ಪೊಲೀಸ್ ಇನ್ಸ್ಪೆಕ್ಟರ್ ಸ್ಥಳೀಯರ ಸಹಕಾರದಿಂದ ಇದನ್ನು ಮಾಡಿರುವಾಗ ಸರ್ಕಾರಕ್ಕೆ ಮನಸು ಮಾಡಿದರೆ ಇದನ್ನು ರಾಜ್ಯಾದ್ಯಂತ ಅಳವಡಿಸಿ ಜನ ನೆಮ್ಮದಿಯಿಂದ ಬದುಕುವಂತೆ ಮಾಡುವದ್ದು ಕಷ್ಟದ ಕೆಲಸ ಅಲ್ಲ.ಅದರೆ ಮಾಡುವ ಮನಸು ಬೇಕು ಅಷ್ಟೇ.
ಮೂರು ವರ್ಷಗಳ ಹಿಂದೆ ಕೊರೋನ ಸಮಯದಲ್ಲಿ ಮಾಗಡಿ ರಸ್ತೆಯಲ್ಲಿ ಸಾವಿರಕ್ಕಿಂತ ಹೆಚ್ಚಿನ ವಲಸೆ ಕಾರ್ಮಿಕರಿಗೆ ಊಟ ತಿಂಡಿ ಯ ವ್ಯವಸ್ಥೆಯನ್ನು ಮಾಡಿದ್ದರು.
ಇತ್ತೀಚಿಗೆ ಅವರ ಕೈಕೆಳಗಿನ ಪೋಲೀಸ್ ಒಬ್ಬರು ಬಿ ಎ ಎಲ್ ಎಲ್ ಬಿ ಪದವಿ ಪಡೆದಿರುವ ಬಗ್ಗೆ ಹೆಮ್ಮೆಯಿಂದ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು.
ಇಂತಹ ಉದಾದತ್ತತೆ ಇರುವ ಮೇಲಧಿಕಾರಿಗಳು ತುಂಬಾ ಕಡಿಮೆ,ತಮ್ಮ ಸಹೋದ್ಯೋಗಿಗಳು ,ಕೈ ಕೆಳಗಿನ ಅಧಿಕಾರಿಗಳ ಸಾಧನೆ ಬಗ್ಗೆ ಹೆಮ್ಮೆ ಪಡುವುದು ಬಿಡಿ, ಹೊಟ್ಡೆಕಿಚ್ಚಿನಿಂದ ಕೇಡು ಬಗೆಯುವವರೇ ತುಂಬಿದ್ದಾರೆ ಜಗತ್ತಿಡೀ..ಅಂತಹವರ ನಡುವೆ ಇವರು ಭಿನ್ನರಾಗಿ ಕಾಣಿಸುತ್ತಾರೆ
ಇರಲಿ
ಪ್ರಸ್ತುತ ವಿಚಾರಕ್ಕೆ ಬರೋಣ ,ಕೊರೋನ ಸಮಯದಲ್ಲಿ
ಐದು ಸಾವಿರ ವಲಸೆ ಕಾರ್ಮಿಕರು ಅಲ್ಲಿ ಉದ್ರಿಕ್ತರಾಗಿದ್ದರು. ಹೊರ ರಾಜ್ಯಗಳಿಗೆ ಕಳುಹಿಸಬೇಕಾದರೆ ಆ ರಾಜ್ಯಗಳ ಒಪ್ಪಿಗೆ ಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಅವರಿರಲಿಲ್ಲ.
ಕೊರಾನಾದ ಆತಂಕ,ಕೆಲಸವಿಲ್ಲದೆ ಕಳೆದ ದಿನಗಳು,ಲಾಕ್ ಡೌನ್ ,ಊರಿಗೆ ತೆರಳಲಾಗದ ಹತಾಶೆ ಅವರನ್ನು ತಾಳ್ಮೆ ಕೆಡಿಸಿರುತ್ತದೆ.
ಇಂತಹ ಸಮಯದಲ್ಲಿ ಪೀಣ್ಯ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಮೇಲೆ ಕಲ್ಲು ಬಿಸಾಡಿದ್ದರು.
ಇಂತಹ ಐದು ಸಾವಿರ ಬಿಹಾರಿ ಉದ್ರಿಕ್ತ ಕಾರ್ಮಿಕರನ್ನು ರಾಷ್ಟ್ರ ಗೀತೆ ಹಾಡುವುದರ ಮೂಲಕ ಮಂತ್ರಮುಗ್ದರನ್ನಾಗಿಸಿ ಕಂಟ್ರೋಲ್ ಗೆ ತಂದಿದ್ದರು.ಗಲಾಟೆ ನಿಲ್ಲಿಸಿ ರಾಷ್ಟ್ರ ಗೀತೆಗೆ ಧ್ವನಿ ಗೂಡಿಸಿದ ಐದು ಸಾವಿರ ಜನರ ಗುಂಪು ಹಾಡಿ ಮುಗಿವಷ್ಟರಲ್ಲಿ ತಣ್ಣಗಾಗಿದ್ದರು.ಭಾರತ್ ಮಾತಾಕೀ ಜೈ ಎಂಬ ಘೋಷಣೆ ಅಲ್ಲಿ ಮೊಳಗಿತ್ತು
ಇದರ ಮೂಲಕ ನಾವೆಲ್ಲರೂ ಜೊತೆಗಿದ್ದೇವೆ ಎಂಬ ಭರವಸೆ ಅವರಲ್ಲಿ ಮೂಡಿಸಿ ಅವರನ್ನು ತಮ್ಮ ತೆಕ್ಕೆಗೆ ತಗೊಂಡ ,ಅವರನ್ನು ಮನ ಒಲಿಸಿದ ಮಾದನಾಯಕನ ಹಳ್ಳಿ ಪೋಲೀಸ್ ಠಾಣೆ ಇನ್ಸ್ಪೆಕ್ಟರ್ ಕೆಪಿ ಸತ್ಯನಾರಾಯಣ ( ಬ್ಯಾಡರ ಹಳ್ಳಿ ಠಾಣೆ ಯಿಂದ ಅವರಿಗೆ ಚಿಕ್ಕಬಳ್ಳಾಪುರ ಕ್ಕೆ ವರ್ಗ ಅಗಿ ಅಲ್ಲಿಂದ ಮಾದನಾಯಕನ ಹಳ್ಳಿ ಪೋಲೀಸ್ ಠಾಣೆಗೆ ಇನ್ಸ್ಪೆಕ್ಟರ್ ಆಗಿ ಇತ್ತೀಚೆಗೆ ಬಂದಿದ್ದರು)
ಕೊರಾನಾ ಭಯ ,ಹಸಿವು, ಬಿಸಿಲಿನ ತಾಪಗಳಿಂದ ಹತಾಶೆಗೊಳಗಾಗಿದ್ದ ಐದು ಸಾವಿರದಷ್ಟು ಇದ್ದ ಉದ್ರಿಕ್ತ ಗುಂಪಿನಿಂದ ಆಗುವ ಅನಾಹುತವನ್ನು ತಮ್ಮ ದೃಢ ವಿಶ್ವಾಸ ಪೂರ್ಣ ನಿಲುವು ಮತ್ತು ಚಾಕಚಕ್ಯತೆಯಿಂದ ತಡೆದಿದ್ದರು.
ಉದಾರತೆ ,ಸಹೃದಯತೆ, ಸಾಮರ್ಥ್ಯ, ಕರ್ತವ್ಯ ನಿಷ್ಠೆ ಎಲ್ಲ ಒಂದು ಕಡೆ ಇರುವುದು ಅಪರೂಪ
ಇವರು ಒಂದು ಮಗುವಿನ ಕಿಡ್ನಾಪ್ ಪ್ರಕರಣವನ್ನು 24 ಗಂಟೆಯೊಳಗೆ ಛೇದಿಸಿ ಮಗುವನ್ನು ಮತ್ತು ಆತನ ಪ್ರಿಯ ನಾಯಿ ಮರಿಯನ್ನು ಕೂಡ ಪತ್ತೆ ಮಾಡಿ ಹೆತ್ತವರಿಗೆ ಒಪ್ಪಿಸಿದ್ದರು
ಓರ್ವ ಮಾಹಿತಿ ಹಕ್ಕು ಕಾರ್ಯಕರ್ತನನ್ನು ಯಾರೋ ರೌಡಿಗಳು ರಸ್ತೆಯಲ್ಲಿ ಅಟ್ಟಾಡಿಸಿ ಕೊಲ್ಲಲು ಯತ್ನ ಮಾಡುತ್ತಿರುವುದನ್ನು ಆ ದಾರಿಯಲ್ಲಿ ಬರುತ್ತಿದ್ದ ಸತ್ಯನಾರಾಯಣ ಅವರು ಕೂಡಲೇ ಆ ಯು ಕನನ್ನು ರಕ್ಷಿಸಿ ದ್ದರು.
ಬಹಳ ಸರಳವಾದ ನಡೆ ನುಡಿ ಇರುವ ಸಹೃದಯಿ ಅವರು.
ಆದರೆ ಅವರ ದೃಢತೆ,ಕರ್ತವ್ಯ ನಿಷ್ಠೆ ,ಸಾಮರ್ಥ್ಯವನ್ನು ಎಷ್ಟು ಹೇಳಿದರೂ ಸಾಲದು
ಇವೆಲ್ಲವೂ ಮೇಳೈಸಿರುವ ಪೋಲೀಸ್ ಅಧಿಕಾರಿ ಕೆಪಿ ಸತ್ಯನಾರಾಯಣ ನಮ್ಮೊಂದಿಗೆ ಇದ್ದಾರೆ ಎಂದು ಹೇಳಲು ನನಗೆ ಹೆಮ್ಮೆಆಗುತ್ತದೆ.
ಪೋಲೀಸ್ ಇಲಾಖೆಗೆ ರಾಜ್ಯಕ್ಕೆ ದೇಶಕ್ಕೆ ಹೆಮ್ಮೆ
ಕೆ ಪಿ ಸತ್ಯನಾರಾಯಣ ಅವರು..
ಮಾದನಾಯಕನ ಹಳ್ಳಿಯಿಂದ ಯಲಹಂಕಕ್ಕೆ ವರ್ಗಾವಣೆ ಆಗಿ ಅಲ್ಲಿಂದ ಈಗ ಚಿಕ್ಕ ಬಳ್ಳಾಪುರಕ್ಕೆ ವರ್ಗಾವಣೆ ಪಡೆದಿದ್ದು ಈಗ ಎಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ..
ಡಾ.ಲಕ್ಷ್ಮೀ ಜಿ ಪ್ರಸಾದ ,ಕನ್ನಡ ಉಪನ್ಯಾಸಕರು
ಸರ್ಕಾರಿ ಪಿಯು ಕಾಲೇಜು
ಬ್ಯಾಟರಾಯನಪುರ
ಬೆಂಗಳೂರು
0 Followers
0 Following