ಒಂದುಕಡೆ ನೆಲೆ ನಿಲ್ಲದೆ ಜೀವನೋಪಾಯಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುವ ಜನರನ್ನು ಅಲೆಮಾರಿಗಳು ಎನ್ನಬಹುದು. ಒಂದೇ ಕಡೆ ವರ್ಷದ ಎಲ್ಲಾ ದಿನಗಳಲ್ಲೂ ಹೊಟ್ಟೆಪಾಡು ನಡೆಸಲು ಅಗತ್ಯವಾದ ವಾತಾವರಣ ಲಭ್ಯವಾಗುವುದಿಲ್ಲ. ಆದ್ದರಿಂದ ಎತ್ತ ಕಡೆ ಸಮೃದ್ಧವಾಗಿ ಮಳೆ, ಬೆಳೆ ಆಗುತ್ತದೋ, ಎಲ್ಲಿ ಜಾತ್ರೆಗಳು, ಹಬ್ಬ-ಹರಿದಿನಗಳು ನಡೆಯುತ್ತವೋ ಅತ್ತ ಕಡೆ ಹೋಗಿ ಅಲ್ಲಿನ ಶಾಲಾ ಮೈದಾನದಲ್ಲೋ, ದೇವಸ್ಥಾನಗಳ ಬಳಿಯೋ ಅಥವಾ ಊರಿನ ಹೊರಗೋ ಸಾರ್ವಜನಿಕ ಸ್ಥಳಗಳಲ್ಲಿ ಟೆಂಟ್ ಅಥವಾ ಜೋಪಡಿಗಳನ್ನು ಹಾಕಿಕೊಂಡು ಜೀವನ ಮಾಡಲು ಈ ಸಮುದಾಯಗಳು ಆರಂಭಿಸುತ್ತವೆ. ಇವರಿಗೆ ಮೊದಲೆಲ್ಲ ಖಾಯಂ ನೆಲೆ ಎಂಬುದು ಇರಲಿಲ್ಲ. ಅಲೆಮಾರಿಗಳು ತಮ್ಮ ಜೀವನಕ್ಕಾಗಿ ಅಗತ್ಯವಿರುವ ಧವಸ-ಧಾನ್ಯ, ಹಣಕಾಸು ವೃದ್ಧಿಸಿಕೊಳ್ಳುವ ಜೊತಗೆ ತಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಪ್ರಚಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಜೀವನೋಪಾಯಕ್ಕಾಗಿ ಇವರಲ್ಲಿ ಕೆಲವರು ಪ್ರದರ್ಶನ ಕಲೆಗಳು, ಕರಕುಶಲ ಕಲೆಗಳನ್ನು, ಧಾರ್ಮಿಕ ಸಂಬAಧಿ ವೃತ್ತಿ, ಪಾರಂಪರಿಕಮೂಲ ವೃತ್ತಿಗಳು, ಬೇಟೆ, ಪಶುಪಾಲನೆ ಮತ್ತು ಆಹಾರ ಸಂಗ್ರಹಣೆಯAತಹ ಮೂಲ ಕಸುಬುಗಳುಸೇರಿದಂತೆ ವಿವಿಧ ವೃತ್ತಿಗಳಲ್ಲಿ ತೊಡಗಿದ್ದಾರೆ.
ಇಂದಿಗೂ ಗುರುತಿಲ್ಲದ, ಅಸಂಘಟಿತರಾದ, ಸಂಸ್ಕೃತಿ, ಶಿಕ್ಷಣ, ಆರ್ಥಿಕ ಶಕ್ತಿ, ಅಧಿಕಾರ, ಜಾತಿ ಪ್ರಮಾಣ ಪತ್ರ, ರೇಷನ್ ಕಾರ್ಡ್ ಇಲ್ಲದ, ಹೊತ್ತಿನ ಊಟಕ್ಕಾಗಿ ಹೆತ್ತ ಮಕ್ಕಳನ್ನೇ ಮಾರಿಕೊಂಡು ಬದುಕುತ್ತಿರುವ ಅಸಂಖ್ಯ ಅಲೆಮಾರಿ ಕುಟುಂಬಗಳು ನಮ್ಮ ನಡುವೆ ಜೀವನ ಮಾಡುತ್ತಿವೆ. ಸ್ವಾತಂತ್ರö್ಯ ಬಂದು ೭೫ವರ್ಷಗಳು ಕಳೆದಿದ್ದರೂ ಎರಡೊತ್ತಿನ ಅನ್ನದ ಅನ್ವೇಷಣೆಯಲ್ಲಿ ಅಲೆದಾಡುವ ಈ ಸಮುದಾಯಗಳು ಸಾಮಾಜಿಕಅನಿವಾರ್ಯತೆಯನ್ನು ಎದುರಿಸುತ್ತಿದ್ದು ಸ್ವಂತ ನೆಲೆ ಇಲ್ಲದೆ ಊರ ಹೊರಗೆ ಟೆಂಟ್ಮತ್ತು ಜೋಪಡಿಗಳನ್ನು ಹಾಕಿಕೊಂಡು ಕಷ್ಟಗಳ ಸರಮಾಲೆಯನ್ನು ಹಾಕಿಕೊಂಡು ಕಾಲ ಕಳೆಯುತ್ತಿದ್ದಾರೆ. ಕರ್ನಾಟಕದಲ್ಲಿ ಬಾಲಸಂತೋಷಿ – ಜೋಷಿ, ಬಾಜಿಗರ್, ಭರಡಿ, ಬುಡ್ ಬುಡಕಿ-ಜೋಷಿ-ಗೊಂಧಳಿ, ಚಾರ, ಚಿತ್ರಕಥಿ-ಜೋಷಿ, ಧೋಲಿ, ಡವೇರಿ, ದೊಂಬರಿ, ಘಿಸಾಡಿ, ಗಾರುಡಿ, ಗೋಪಾಲ್, ಗೊಂದಳಿ, ಹೆಳವ, ಜೋಗಿ, ಕೇಲ್ಕರಿ, ಕೋಲ್ಹಟಿ, ನಂದಿವಾಲ-ಜೋಷಿ-ಗೊAದಳಿ,ಪುಲ್ಮಾಲಿ, ನಾಥಪಂಥಿ,ಡೌರಿಗೋಸಾವಿ, ನಿರ್ಶಿಕಾರಿ, ಪಾಂಗ್ಯುಯಲ್, ಜೋಷಿ (ಸಾದ ಜೋಷಿ), ಸಾನ್ಸಿಯ, ಸರಾನಿಯ, ತಿರುಮಲಿ, ವಾಯ್ಡು, ವಾಸುದೇವ್, ವಾಡಿ, ವಾಗ್ರಿ, ವಿರ್, ಬಜನಿಯ, ಶಿಕ್ಕಲಿಗರ್, ಗೊಲ್ಲ, ಕಿಲ್ಲಿಕ್ಯಾತ, ಸರೋಡಿ, ದುರ್ಗ-ಮುರ್ಗ (ಬುರ್ ಬುರ್ ಚ), ಹಾವ್ ಗಾರ್ (ಹಾವಾಡಿಗಾರ್), ಪಿಚಗುಂಟಲ, ಮಸಣಿಯ ಯೋಗಿ, (ಬೆಸ್ತರ್) ಬುಂಡಬೆಸ್ತ, ಕಟಬು, ದರ್ವೆಶ್, ಕಾಶಿ ಕಪಾಡಿ, ದೊಂಬಿದಾಸ, ಬೈಲಪತರ್ ಸಮುದಾಯಗಳು ಸರ್ಕಾರಿ ಆದೇಶ ಸಂಖ್ಯೆ : ಪಿ.ಹೆಚ್.ಎಸ್. ೨೬೨ ಎಸ್ ಇ ಡಬ್ಲೂö್ಯ೬೫ ದಿನಾಂಕ ೦೧.೦೨.೧೯೬೬ರಪ್ರಕಾರ ಅಲೆಮಾರಿ ಜನಾಂಗದ ವ್ಯಾಪ್ತಿಗೆ ಬರುತ್ತವೆ. ಇಂದು ಅಲೆಮಾರಿಗಳು ಇತ್ತ ಆಧುನಿಕ ಜಗತ್ತಿಗೂ ಹೊಂದಿಕೊಳ್ಳಲಾಗದÀ ಅತ್ತ ಸಾಂಪ್ರದಾಯಿಕ ಜೀವನ ಪದ್ಧತಿಯನ್ನು ಕಾಪಾಡಿಕೊಂಡು ಹೋಗಲು ಆಗದ ಸಂಕಷ್ಠ ಪರಿಸ್ಥಿತಿಯಲ್ಲಿದ್ದಾರೆ. ಕಳೆದ ಕೆಲವು ದಶಕಗಳಿಂದೀಚೆಗೆ ಅಲೆಮಾರಿಗಳಲ್ಲಿ ಕೆಲವರು ಶುದ್ಧ ಅಲೆಮಾರಿಗಳಾಗಿ ಉಳಿದಿಲ್ಲ. ತಮ್ಮ ಪಾರಂಪರಿಕ ವೃತ್ತಿಗಳನ್ನು ಕೈಬಿಟ್ಟು ಕೆಲವರು ಕೃಷಿಕರಾಗಲು ಪ್ರಯತ್ನಿಸುತ್ತಿದ್ದಾರೆ. ಶಿಕ್ಷಣ ದೊರೆತ ಅಲ್ಪ ಪ್ರಮಾಣದ ಜನ ಔದ್ಯೋಗಿಕ ರಂಗಗಳತ್ತಮುಖ ಮಾಡುತ್ತಿದ್ದಾರೆ.
ಈ ಅಲೆಮಾರಿ ಹಾಗೂಅರೆ ಅಲೆಮಾರಿ ಜನಾಂಗದಲ್ಲಿ ಹಲವು ಜಾತಿಗಳು, ಒಳ ಪಂಗಡಗಳನ್ನು ಕಾಣಬಹುದು. ಭಾರತದ ಧರ್ಮ, ಸಂಸ್ಕೃತಿ ಮತ್ತು ಜಾನಪದ ಕಲೆಗಳಿಗೆ ಒಂದೊAದು ಜಾತಿಯ ಅಲೆಮಾರಿಸಮುದಾಯವೂ ಕೂಡ ತನ್ನದೇ ಆದ ಉತ್ಕೃಷ್ಠ ಕೊಡುಗೆಯನ್ನುನೀಡುತ್ತಾ ಬಂದಿದೆ. ಉದಾಹರಣೆಗೆ ದೊಂಬಿದಾಸರು ಲೌಕಿಕ ವೃತ್ತಿ ಗಾಯಕರಾಗಿರುವ ಜೊತೆಗೆ ನೆಲಮೂಲ ನಾಟಕಕಾರಾಗಿದ್ದಾರೆ. ಶಿಳ್ಳೇಕ್ಯಾತರು ತೊಗಲುಗೊಂಬೆಯಾಟ, ಡೊಂಬರು ತಮಾಷೆ ಪ್ರದರ್ಶನಗಳನ್ನು, ಸುಡುಗಾಡು ಸಿದ್ದರು ಕಾಲಜ್ಞಾನ ಹೇಳುವುದು ಮತ್ತು ಕೈಚಳಕದ ಪ್ರದರ್ಶನಗಳನ್ನು ಮಾಡುವುದು, ಬುಡುಬುಡಕೆ ಸಮುದಾಯದವರು ಶಕುನ ಹೇಳುವುದು ಹೀಗೆ ಹಲವು ಕಲೆಗಳನ್ನು ಕರ್ನಾಟಕದ ಜಾನಪದ ಕಲೆಗೆ ತಮ್ಮ ಸಿಂಹ ಪಾಲನ್ನು ನೀಡಿವೆ. ಕೆಲವುಸಮುದಾಯಗಳು ಪರೋಕ್ಷವಾಗಿ ಧರ್ಮ ಪ್ರಚಾರವನ್ನು ಮಾಡುವ ಕೆಲಸವನ್ನು ಕೂಡ ಮಾಡಿಕೊಂಡು ಬಂದಿವೆ. ಇಂತಹ ಹಲವು ಜಾನಪದ ಕಲೆಗಳು, ರಂಗಭೂಮಿ ಕಲೆಗಳು, ಪ್ರದರ್ಶನ ಕಲೆಗಳು ಇಂದು ಅವಸಾನದ ಅಂಚಿನಲ್ಲಿವೆ. ಈ ಸಮುದಾಯಗಳ ಭಾಷೆ, ಸಂಸ್ಕೃತಿ, ಆಚರಣೆ, ಕಲೆ, ನಂಬಿಕೆಗಳು ಮತ್ತು ಅವರ ಮೌಖಿಕ ಸಾಹಿತ್ಯ ನಾಶವಾಗುವ ಆತಂಕ ಕಾಡುತ್ತಿದೆ. ಅಲೆಮಾರಿ ಸಮುದಾಯಗಳ ಜಾನಪದ ಕಲೆಗಳು, ಪ್ರದರ್ಶನ ಕಲೆಗಳು ಹಾಗೂ ಕುಶಲ ಕಲೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಅಗತ್ಯವಾದ ಆರ್ಥಿಕ ನೆರವು ನೀಡಬೇಕು.
ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಕೆಲವು ಸಮುದಾಯಗಳನ್ನು ಪರಿಶಿಷ್ಟ ಜಾತಿ -ಪರಿಶಿಷ್ಟ ವರ್ಗಗಳ ಗುಂಪಿಗೆ ಸೇರಿಸದ್ದರೆ ಇನ್ನೂ ಕೆಲವು ಸಮುದಾಯಗಳನ್ನು ಹಿಂದುಳಿದ ಪ್ರವರ್ಗ-೧ರಲ್ಲಿ ಸೇರಿಸಲಾಗಿದೆ. ಪರಿಶಿಷ್ಟ ಜಾತಿಯ ಗುಂಪಿಗೆ ಸೇರಿರುವ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ಅಧಿಕಾರಿಗಳು ಮೀನಾ-ಮೇಷ ಎಣಿಸುತ್ತಿದ್ದಾರೆ. ಕೆಲವು ಅಧಿಕಾರಿಗಳು ಜಾತಿ ಪ್ರಮಾಣ ಪತ್ರವನ್ನು ಕೊಡಲು ನಿರಾಕರಿಸುತ್ತಿದ್ದಾರೆ. ತಂದೆ-ತಾಯಿಗಳ ಶೈಕ್ಷಣಿಕ ದಾಖಲಾತಿಗಳಲ್ಲಿ ಜಾತಿಯನ್ನು ಸ್ಪಷ್ಟವಾಗಿ ನಮೂದಿಸಿದ್ದರೂ ಅಧಿಕಾರಿಗಳು ಜಾತಿ ಪ್ರಮಾಣ ಪತ್ರಗಳನ್ನು ನೀಡದೇ ಸತಾಯಿಸುತ್ತಿರುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಯುವಕರಿಗೆ ಮತ್ತು ಅವರ ಪೋಷಕರಿಗೆ ತೊಂದರೆಯಾಗಿದೆ. ಜಾತಿ ಪ್ರಮಾಣ ಪತ್ರಗಳನ್ನು ನೀಡಬೇಕೆಂಬ ಸ್ಪಷ್ಟ ಆದೇಶವನ್ನು ಸರ್ಕಾರ ಹೊರಡಿಸಿದ್ದರೂ ದೇವರು ಕೊಟ್ಟರು ಪೂಜಾರಿ ಕೊಡಲಾರ ಎಂಬAತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಈ ಮನೋಭಾವ ಬದಲಾಗಬೇಕಾಗಿದೆ.
ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯ ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದೆ. ಜೀವನೋಪಾಯಕ್ಕಾಗಿ ಊರಿಂದ ಊರಿಗೆ ಸಂಚರಿಸುವ ಈ ಸಮುದಾಯದ ಕುಟುಂಬಗಳಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಆದ್ದರಿಂದ ಸರ್ಕಾರ ನಡೆಸುತ್ತಿರುವ ವಿದ್ಯಾರ್ಥಿನಿಲಯಗಳಲ್ಲಿ ಮತ್ತು ವಿವಿಧ ವಸತಿ ಶಿಕ್ಷಣ ಶಾಲೆಗಳಲ್ಲಿ ಈ ಸಮುದಾಯಗಳ ಮಕ್ಕಳಿಗೆವಿಶೇಷ ಪ್ರಾತಿನಿಧ್ಯ ನೀಡುವ ಮೂಲಕ ಉತ್ತಮ ಶಿಕ್ಷಣ ಸಿಗುವಂತೆ ಮಾಡಬೇಕಾಗಿದೆ. ಇಲ್ಲದಿದ್ದರೆ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವೇ ಸರಿಯಾಗಿ ದೊರೆಯದೆ ಶಾಲೆಯಿಂದು ಹೊರಗುಳಿಯುವ ಮಕ್ಕಳ ಪ್ರಮಾಣ ಮತ್ತುಷ್ಟು ಹೆಚ್ಚಾಗಲಿದೆ. ಸರ್ಕಾರ ಈ ನಿಟ್ಟಿನಲ್ಲಿ ತುರ್ತುಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಪ್ರಾಥಮಿಕ ಶಿಕ್ಷಣದಿಂದ ಪಿಹೆಚ್,ಡಿ ಪದವಿಯವರೆಗೂ ಅಲೆಮಾರಿಮತ್ತು ಅರೆ ಅಲೆಮಾರಿ ಸಮುದಾಯದ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಬೇಕು.
ರಾಜಕೀಯದಿಂದಲೇ ಅಲೆಮಾರಿ ಸಮುದಾಯಗಳ ಜನರ ಉದ್ಧಾರ ಎಂಬುದು ಆಧುನಿಕ ಚಿಂತನೆಯಾಗಿದೆ. ರಾಜಕೀಯ ಕ್ಷೇತ್ರವಂತೂ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳಗೆ ನಿಲುಕದ ನಕ್ಷತ್ರವಾಗಿಯೇ ಉಳಿದಿದೆ. ಯಾವುದೇ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯವಿಲ್ಲದೆ ಅವರ ಪ್ರಗತಿ ಸಾಧ್ಯವಿಲ್ಲವೆಂಬುದು ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಘೋಷವಾಕ್ಯವಾಗಿತ್ತು. ಸರ್ಕಾರ ಏನೇ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಅವುಗಳಲ್ಲಿ ಸಹಭಾಗಿಗಳಾಗದೇ ಯಾವುದೇ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ. ಅದೇ ರೀತಿ ಸರಿಯಾದ ರಾಜಕೀಯ ಸ್ಥಾನ-ಮಾನಗಳು ದೊರಕದ ಸಮುದಾಯಗಳ ಅಭಿವೃದ್ಧಿಯನ್ನು ಕಲ್ಪಿಸಿಕೊಳ್ಳುವುದೂ ಕೂಡ ಸಾಧ್ಯವಿಲ್ಲ. ಆದ್ದರಿಂದ ಈ ಸಮುದಾಯಗಳ ಜನರುರಾಜಕೀಯದಲ್ಲಿ ಆಸಕ್ತಿ ವಹಿಸುವಂತೆ ಮಾಡುವುದು ಸರ್ಕಾರದ ಜೊತೆಗೆ ಎಲ್ಲಾ ರಾಜಕೀಯ ಪಕ್ಷಗಳ ಜವಾಬ್ದಾರಿಯೂ ಆಗಿದೆ. ರಾಜಕೀಯ ಪಕ್ಷಗಳು ಈ ಸಮುದಾಯಗಳಿಗಾಗಿ ಸ್ವಲ್ಪಮನಸ್ಸು ಮತ್ತು ತ್ಯಾಗ ಮಾಡಿದರೆ ಇವರೂ ಕೂಡ ರಾಜಕೀಯ ಪಕ್ಷಗಳ ವಿವಿಧ ಹುದ್ದೆಗಳು ಮತ್ತು ಚುನಾವಣೆಗಳಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಟ್ಟಂತಾಗಿದೆ. ಕೇವಲ ಬಾಯಿ ಮಾತಿನಿಂದ ಯಾವ ಪ್ರಯೋಜನವೂ ಇಲ್ಲ. ಇದನ್ನು ಕಾರ್ಯರೂಪಕ್ಕೆ ಜಾರಿಗೆ ಬರುವಂತೆ ನೋಡಿಕೊಳ್ಳುವುದು ಸರ್ಕಾರ, ಸಮಾಜ ಮತ್ತು ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಿದೆ.
ದೇಶದ ಅತ್ಯಂತ ಹಿಂದುಳಿದ ಸಮುದಾಯಗಳೆಂದರೆ ಅಧಿಸೂಚಿತ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳು. ಈ ಸಮುದಾಯಗಳನ್ನು ಗುರುತಿಸುವುದುಮತ್ತು ತಲುಪುವುದು ಅತ್ಯಂತ ಕಷ್ಟಕರವಾದ ಕೆಲಸ. ಆದ್ದರಿಂದ ಕರ್ನಾಟಕದಲ್ಲಿರುವ ಎಲ್ಲಾ ಅಲೆಮಾರಿ ಹಾಗೂ ಅರೆ ಅಲೆಮಾರು, ಸೂಕ್ಷö್ಮ ಮತ್ತು ಅತಿಸೂಕ್ಷö್ಮ ಜಾತಿಗಳು ಅದರಲ್ಲೂಮುಖ್ಯವಾಗಿ ೧ ಲಕ್ಷದಿಂದ ೩ಲಕ್ಷವನ್ನು ಮೀರದ ಎಲ್ಲ ಸಣ್ಣ ಪುಟ್ಟ ಸಮುದಾಯಗಳ ಕುರಿತು ಕುಲಶಾಸ್ತಿçÃಯ ಅಧ್ಯಯನ ನಡೆಸಬೇಕು. ಒಂದೇ ಸಮುದಾಯಕ್ಕೆ ಹತ್ತಾರು ಹೆಸರುಗಳಿದ್ದು ಇಂತಹಸಮುದಾಯಗಳ ಹರಿದು ಹಂಚಿ ಹೋಗಿವೆ. ಈ ಸಮುದಾಯಗಳ ಎಲ್ಲಾಜನರನ್ನು ದಾಖಲು ಮಾಡುವ ಕಾರ್ಯವಾಗಬೇಕಾಗಿದೆ. ಕುಲಶಾಸ್ತ್ರೀಯ ಅಧ್ಯಯನದ ಆಧಾರದ ಮೇಲೆ ಅಲೆಮಾರಿಗಳನ್ನು ಒಂದು ಪ್ರವರ್ಗಕ್ಕೆ ಸೇರ್ಪಡೆ ಮಾಡಬೇಕು. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಾನ-ಮಾನಗಳ ಆಧಾರದ ಮೇಲೆ ಮೀಸಲಾತಿಯನ್ನು ಜಾರಿಗೊಳಿಸಬೇಕಾಗಿದೆ. ಅಲೆಮಾರಿ, ಅರೆ ಅಲೆಮಾರಿಗಳು ಸಂವಿಧಾನ ಬದ್ದವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದರೂ ಆಯಾ ಗುಂಪಿನಲ್ಲಿರುವ ಬಲಾಢ್ಯ ಸಮುದಾಯಗಳು ಇವರ ಸೌಲಭ್ಯಗಳನ್ನು ಆಕ್ರಮಿಸುತ್ತಿದ್ದು ಅಲೆಮಾರಿ ಸಮುದಾಯಗಳ ಅತಂತ್ರ ಸ್ಥಿತಿ ಮುಂದುವರಿದೇ ಇದೆ. ಮೀಸಲಾತಿಯ ಪ್ರಮುಖ ಉದ್ದೇಶವು ಸಾಮಾಜಿಕ ವೈವಿಧ್ಯತೆಯಲ್ಲಿ ತಾರತಮ್ಯ ಅನುಭವಿಸುವ ಜನಾಂಗಗಳ ಹಕ್ಕು ರಕ್ಷಿಸುವುದಾಗಿದೆ. ಕಡಿಮೆ ಪ್ರಾತಿನಿಧ್ಯವಿರುವ ಸಮುದಾಯಗಳನ್ನು ಸಾಮಾನ್ಯ ಸರಾಸರಿಯೊಂದಿಗೆ ಮೇಳೈಸುವುದೇ ಇದರ ಪ್ರಮುಖ ಗುರಿಯೂ ಆಗಿದೆ. ಈಪ್ರಕ್ರಿಯೆಯಲ್ಲಿ ಪ್ರತಿ ಸಮುದಾಯದ ದುರ್ಬಲರು, ಧಮನಿತರಿಗೆ ಅವಕಾಶ ದೊರೆಯುವಂತೆ ನೋಡಿಕೊಳ್ಳಬೇಕಾದುದು ಮತ್ತು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದುದು ಅತ್ಯಾವಶ್ಯಕ. ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಅಲೆಮಾರಿ ಸಮುದಾಯಗಳ ಅಧ್ಯಯನ ಪೀಠಗಳನ್ನು ಸ್ಥಾಪನೆ ಮಾಡಿ ಇವರ ಕಲೆ, ಪರಂಪರೆ, ಆಚಾರ-ವಿಚಾರಗಳ ವೈಜ್ಞಾನಿಕ ಅಧ್ಯಯನಕ್ಕೆ ಅನುವು ಮಾಡಿಕೊಡಬೇಕು.
ಉತ್ತಮ ಜೀವನ ನಡೆಸುವ, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ, ಪೌಷ್ಠಿಕ ಆಹಾರ, ಗರ್ಭಿಣಿಯರು ಮತ್ತು ಮಕ್ಕಳ ಆರೋಗ್ಯ ಸೇರಿದಂತೆ ಮೂಲಭೂತ ಸೌಕರ್ಯಗಳು ಈ ಸಮುದಾಯಗಳಿಗೆ ದೊರೆಯಬೇಕು. ರಾಜಕೀಯ ಆರ್ಥಿಕ ಮತ್ತು ಸಾಮಾಜಿಕವಾಗಿ ಉತ್ತೇಜನ ನೀಡುವಂತಹ, ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಸಮ್ಮೀಳನರಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಕರ್ನಾಟಕದಲ್ಲಿ ಅಲೆಮಾರಿ ಜನಾಂಗಗಳನ್ನು ಅಧ್ಯಯನ ಮಾಡಿದರೆ ಹೆಣ್ಣು ದೇವರ ಆರಾಧನೆಯನ್ನು ಹೆಚ್ಚಾಗಿ ಕಾಣಬಹುದು. ಅಲೆಮಾರಿ ಸಮುದಾಯದಲ್ಲಿ ಹೆಣ್ಣು ಸಂತಾನವನ್ನು ಕೆಟ್ಟದೆಂದು ಬಯಸುವುದು ಅಥವಾ ಗಂಡು ಸಂತಾನ ಶ್ರೇಷ್ಠ ಎಂದು ಭಾವಿಸುವ ನಂಬಿಕೆ ಇಲ್ಲ. ಊರಿಂದ ಊರಿಗೆ ವಲಸೆ ಹೋಗಿ ಜೀವನ ಸಾಗಿಸುವ ಈ ಜನಾಂಗದಲ್ಲಿ ಅನಿವಾರ್ಯವಾಗಿಹೆಣ್ಣು ಅವಿಭಾಜ್ಯ ಅಂಗವಾಗಿದ್ದಾಳೆ. ಈ ಸಮುದಾಯಗಳಲ್ಲಿ ಪುರುಷರಿಗಿಂತಸ್ತಿçÃಯರಲ್ಲಿ ಹೆಚ್ಚು ಅನಕ್ಷರತೆ ಇದೆ. ಹೆಚ್ಚಿನ ಅಲೆಮಾರಿ ಸಮುದಾಯಗಳಲ್ಲಿ ತೆರ ಕೊಟ್ಟು ಮದುವೆಯಾಗುವ ಪದ್ದತಿ ಇಂದಿಗೂ ಜೀವಂತವಾಗಿದೆ. ಇದು ನಾಗರೀಕ ಸಮಾಜದಲ್ಲಿ ಚಾಲ್ತಿಯಲ್ಲಿರುವ ವರದಕ್ಷಿಣೆ ಪದ್ದತಿಗೆ ವಿರುದ್ಧವಾದುದು. ಆದರೆ ಅಲೆಮಾರಿ ಜನಾಂಗದ ಮಹಿಳೆಯರು ಇಂದು ಹಲವು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಈ ಸಮುದಾಯದ ಗರ್ಭಿಣಿಮತ್ತು ಬಾಣಂತಿ ಮಹಿಳೆಯರು ಅಲೆಮಾರಿತನದಲ್ಲಿ ಬಹಳ ಕಷ್ಟಕ್ಕೆ ಸಿಲುಕುವುದು ಸಾಮಾನ್ಯವಾಗಿದೆ. ನವಜಾತ ಶಿಶುಗಳ ಪಾಲನೆ ಮತ್ತು ಪೋಷಣೆಗಳು ಸಹ ಕಷ್ಟಕರ ವಿಷಯಗಳೇಆಗಿವೆ. ಮಹಿಳೆಯರು ಆರ್ಥಿಕವಾಗಿ ಬಹಳ ಹಿಂದುಳಿದಿದ್ದು ಅಲೆಮಾರಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತರಬೇಕಾಗಿದೆ. ಅವರಿಗೆ ಸ್ವ ಉದ್ಯೋಗ ಮತ್ತು ಕೌಶಲ್ಯ ತರಬೇತಿಗಳನ್ನು ನೀಡುವ ಜೊತೆಗೆ ಆರ್ಥಿಕ ಸಹಾಯ ಮಾಡುವ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಲೆಮಾರಿ ಸಮುದಾಯದ ಮಹಿಳೆಯರನ್ನು ಆರ್ಥಿಕ ಸ್ವಾವಲಭಿಗಳನ್ನಾಗಿ ಮಾಡಬೇಕಾಗಿದೆ.
ಇಂದಿಗೂ ಹಲವು ಅಲೆಮಾರಿ ಸಮುದಾಯಗಳು ಅಸಂಘಟಿತವಾಗಿವೆ. ಕೆಲವು ಸಮುದಾಯಗಳು ಉತ್ತಮ ರೀತಿಯಲ್ಲಿ ಸಂಘಟಿತರಾಗುತ್ತಿದ್ದಾರೆ. ಹಲವಾರು ಮುಖಂಡರುಗಳು ಆಯಾ ಸಮುದಾಯಗಳ ಅಭಿವೃದ್ದಿದಾಗಿ ನಿಸ್ವಾರ್ಥವಾಗಿ ದುಡಿಯುತ್ತಿದ್ದಾರೆ. ಇದೊಂದು ಆಶಾಧಾಯಕ ಬೆಳವಣಿಗೆಯಾಗಿದೆ. ಇಂತಹ ಮುಖಂಡರುಗಳು ತಮ್ಮ ಸಮುದಾಯಗಳನ್ನು ಸಂಘಟಿಸುತ್ತಿದ್ದು ಆ ಮೂಲಕ ಜನಾಂಗದಕುಂದು-ಕೊರತೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ. ಅದರೆ ಇಂತಹ ಮುಖಂಡರು ಮತ್ತು ಸಂಘಗಳಿಗೆ ಸಮುದಾಯದ ಜನರು ಇನ್ನಷ್ಟು ಉತ್ತಮ ರೀತಿಯಲ್ಲಿ ಸ್ಪಂಧಿಸಬೇಕಾಗಿದೆ. ಆ ಮೂಲಕ ಇಂತಹಸಂಘ-ಸAಸ್ಥೆಗಳು ಮತ್ತುಮುಖಂಡರುಗಳಿಗೆ ಶಕ್ತಿ ನೀಡುವ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಈಗಾಗಲೇ ಸರ್ಕಾರಿ ಉದ್ಯೋಗಗಳನ್ನು ಪಡೆದಿರುವವರು ತಾವು ಬೆಳೆದು ಬಂದ ಸಮುದಾಯಗಳ ಜೊತೆ ಉತ್ತಮ ಬಾಂಧವ್ಯವನ್ನು ಮುಂದುವರೆಸಿಕೊAಡು ಹೋಗಬೇಕಾಗಿರುವ ಜೊತೆಗೆಅವರ ಪ್ರಗತಿಗೆ ಸಹಕಾರ ನೀಡಬೇಕಾಗಿದೆ.
ಅಲೆಮಾರಿಗಳ ಹಲವು ಸಮಸ್ಯೆಗಳಲ್ಲಿ ಪ್ರಮುಖವಾದುದು ವಸತಿ ಸಮಸ್ಯೆ. ಇಂದಿಗೂ ಅನೇಕ ಅಲೆಮಾರಿ ಸಮುದಾಯಗಳು ಟೆಂಟ್ ಅಥವಾ ಜೋಪಡಿಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂತಹ ಅಲೆಮಾರಿಗಳಿಗೆ ಉತ್ತಮ ಜೀವನ ನಿರ್ವಹಿಸಲು ಸರ್ಕಾರ ನಿವೇಶನವಿಲ್ಲದ ಅಲೆಮಾರಿ ಕುಟುಂಬಗಳಿಗೆ ಸರ್ಕಾರಿ ಜಮೀನು ಗುರುತಿಸಿ ನಿವೇಶನಗಳನ್ನು ಉಚಿತವಾಗಿ ನೀಡಬೇಕು. ಸರ್ಕಾರಿ ಜಮೀನು ಲಭ್ಯವಿಲ್ಲದ ಕಡೆ ಖಾಸಗಿ ಜಮೀನನ್ನು ಖರೀದಿಸಿ ನಿವೇಶನ ಹಂಚಿಕೆ ಮಾಡಬೇಕು ಮತ್ತು ಅವರಿಗೆ ಮನೆಗಳನ್ನು ಕಟ್ಟಿ ಕೊಡಬೇಕು. ಹೀಗೆ ನಿವೇಶನ ಮತ್ತು ಮನೆಗಳನ್ನು ನಿರ್ಮಿಸಿಕೊಡುವ ವಸತಿ ಸ್ಥಳಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಾದ ನೀರು, ಚರಂಡಿ, ವಿದ್ಯುತ್ ಸಂಪರ್ಕಗಳನ್ನು ಒದಗಿಸಬೇಕು. ಇಂತಹ ಸಮುದಾಯಗಳು ತಮ್ಮ ಕಲೆಯನ್ನು ಉಳಿಸಿಕೊಂಡು ಹೋಗಲು ಅನುವಾಗುವಂತೆ ಮತ್ತು ಮದುವೆ ಮುಂತಾದ ಶುಭಕಾರ್ಯಗಳನ್ನು ನಡೆಸಲು ಸಮುದಾಯ ಭವನಗಳನ್ನು ನಿರ್ಮಿಸಿಕೊಡಬೇಕು. ಈ ಸಮುದಾಯಗಳು ಆರ್ಥಿಕವಾಗಿದ್ದುತುಂಬಾ ದುರ್ಭಲವಾಗಿದ್ದು ಇವರ ಆರ್ಥಿಕ ಸಬಲೀಕರಣಕ್ಕಾಗಿ ಆದಾಯ ಹೆಚ್ಚಿಸಲು ಅನುವಾಗುವಂತೆ ವೃತ್ತಿ ಕೌಶಲ್ಯ ತರಬೇತಿಗಳನ್ನು ರೂಪಿಸಿ ಉಚಿತವಾಗಿ ನೀಡುವ ಜೊತೆಗೆ ಇಂತಹ ವೃತ್ತಿಗಳನ್ನು ಮುಂದುವರೆಸಿಕೊAಡು ಹೋಗಲು ಧನಸಹಾಯ ಯೋಜನೆಯನ್ನು ಜಾರಿಗೆ ತರಬೇಕು. ಸ್ವಯಂ ಉದ್ಯೋಗ, ಪಾರಂಪರಿಕ ಕಸುಬುಗಳನ್ನು ಮುಂದುವರೆಸಿಕೊAಡು ಹೋಗಲು ಆರ್ಥಿಕಸಹಾಯ, ಭೂರಹಿತರಿಗೆ ಭೂ ಒಡೆತನ, ಕಡಿಮೆಬಡ್ಡಿ ದರದಲ್ಲಿ ಅಥವಾ ಬಡ್ಡಿ ರಹಿತ ಸಾಲ ಸೌಲಭ್ಯದ ವ್ಯವಸ್ಥೆ ಮಾಡಬೇಕು. ದೇಸಿ ನೆಲೆಯಲ್ಲಿ ಇವರ ಅಭಿವೃದ್ಧಿ ಆಗಬೇಕಿದೆ. ಮಾನವ ಹಕ್ಕುಗಳು ಈ ಸಮುದಾಯದ ಜನರಿಗೆಸರಿಯಾಗಿ ದೊರೆಯುತ್ತಿವೆಯೇ? ಎಂಬ ಕುರಿತು ಮಾನವ ಹಕ್ಕುಗಳ ಆಯೋಗ ಅಧ್ಯಯನ ನಡೆಸಬೇಕು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಅಲೆಮಾರಿಗಳ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಹಾಕಿಕೊಳ್ಳಬೇಕಾಗಿದೆ.
ಲೇಖಕರುಮತ್ತು ಮಾಧ್ಯಮ ವಿಶ್ಲೇಷಕರ
0 Followers
0 Following