Do you have a passion for writing?Join Ayra as a Writertoday and start earning.

ಅಭ್ಯಾಸದ ರೀತಿ ಶ್ರಮಜೀವಿಯ ರಹಸ್ಯ!

ನಿಮಗೆ ಯಶಸ್ಸು ಸಿಗಬೇಕೆ? ಇವುಗಳೇ ಅದರ ಸೂತ್ರಗಳು

ProfileImg
08 Jun '24
3 min read


image

ನೀವು ಪ್ರತಿದಿನವೂ ಎಷ್ಟು ಹೊತ್ತು ಅಭ್ಯಾಸ ನಡೆಸುತ್ತಿದ್ದಿರಿ?' ಎನ್ನುವ ಪ್ರಶ್ನೆಗೆ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದು ಹೀಗೆ – ನಾನು ಅಭ್ಯಾಸಕ್ಕೆ ಅಂತ ಮನೆಯಿಂದ ಹೊರಗೆ ಹೊರಡುವಾಗ ಒಂದು ನಿರೀಕ್ಷೆಯನ್ನು ಇಟ್ಟುಕೊಂಡು ಹೋಗಿರುತ್ತಿದ್ದೆ, ಅದು ಈಡೇರುವ ತನಕ ನನ್ನ ಅಭ್ಯಾಸವನ್ನು ನಿಲ್ಲಿಸುತ್ತಿರಲಿಲ್ಲ. ಸಮಯದ ಗಡುವು ಇಟ್ಟುಕೊಳ್ಳದೆ ಒಂದು ಹೊಸ ಅನುಭವವು ಸಿಗುವ ತನಕ, ವಿಶಿಷ್ಟವಾದ ಕಲಿಕೆಯು ಕೈಗೂಡುವವರೆಗೆ, ಮನಸ್ಸಿಗೆ ಸಂತೃಪ್ತಿ ಎನಿಸುವವರೆಗೆ, ಹೃದಯವು 'ಇನ್ನು ಸಾಕು' ಎನ್ನುವ ತನಕ, ನಿರಂತರವಾಗಿ ಅಭ್ಯಾಸ ನಡೆಸುತ್ತಿದ್ದೆ. ಪ್ರತಿಯೊಂದು ದಿನವೂ ಒಂದಲ್ಲಾ ಇನ್ನೊಂದು ರೀತಿಯಲ್ಲಿ ನಮ್ಮೊಳಗೆ ಹೊಸದಾದ ಅನುಭವವನ್ನು ಅಥವಾ ಕಲಿಕೆಯನ್ನು ಕೊಡುವ ಹಾಗಿರಬೇಕು.

ಸಚಿನ್ ತೆಂಡೂಲ್ಕರ್ ಒಬ್ಬರದ್ದೇ ಅಲ್ಲ ಬಹುಶಃ ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಮನಸ್ಸಿನ ಮಾತೂ ಇದೇ ಆಗಿರುತ್ತದೆ. 'ಪ್ರಾಕ್ಟಿಸ್ ಮೇಕ್ಸ್‌ ಒನ್ ಪರ್ಫೆಕ್ಟ್' ಎನ್ನುವ ಮಾತಿನಂತೆ ಯಾವುದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬೇಕು ಅಂದರೆ ಅಭ್ಯಾಸ ಮುಖ್ಯ. ಆದರೆ ಕೇವಲ ಅಭ್ಯಾಸ ಮಾಡಿದರೆ ಸಾಲುವುದಿಲ್ಲ, ಎಷ್ಟು ಹೊತ್ತು ಪ್ರಾಕ್ಟಿಸ್ ಮಾಡುತ್ತೇವೆ ಎನ್ನುವುದೂ ಮುಖ್ಯವಲ್ಲ. 'ಹೇಗೆ ಪ್ರಾಕ್ಟಿಸ್ ಮಾಡಬೇಕು?' ಎನ್ನುವುದು ಬಹಳ ಮುಖ್ಯ. ಪ್ರತಿ ಅಭ್ಯಾಸವೂ ನಮ್ಮನ್ನು ಹಿಂದಿನದಕ್ಕಿಂತ ಉತ್ತಮಗೊಳಿಸಬೇಕು. ಪ್ರತಿ ಪ್ರಯತ್ನದಲ್ಲೂ ನಾವು ಹೊಸದೊಂದು ಪಾಠವನ್ನು ಕಲಿಯಬೇಕು. ಆಗಲೇ ನಮ್ಮಲ್ಲಿ ಗಮನಾರ್ಹವಾದ ಬದಲಾವಣೆ ಆಗಲು ಸಾಧ್ಯ. ಬದುಕಿನಲ್ಲಿ ಗೆಲುವು ಮತ್ತು ಸೋಲು ಎನ್ನುವುದು 'ಅಭ್ಯಾಸದ ಕಲೆ'ಯಲ್ಲಿ ಹುದುಗಿದೆ. ಯಾವುದೇ ಆಗಲಿ ಅಭ್ಯಾಸ ಮಾಡದ ಹೊರತು ನಮಗೆ ದಕ್ಕುವುದಿಲ್ಲ. ದಿನದಿಂದ ದಿನಕ್ಕೆ ಹೊಸ ಹೊಸ ಕೌಶಲ್ಯವನ್ನು ಕಲಿಯುತ್ತಾ ನಮ್ಮ ಸಾಮರ್ಥ್ಯವನ್ನು ತೀಕ್ಷವಾಗಿ ರೂಪಿಸಿಕೊಳ್ಳುವುದೇ ನಿಜವಾದ ಅಭ್ಯಾಸ.

ಟ್ರೆಂಡಿಂಗ್‌ನಲ್ಲಿರುವ ಹಾರ್ಡ್‌ವರ್ಕಿಂಗ್

ಯಶಸ್ಸು ಬೇಕೆಂದರೆ ಪರಿಶ್ರಮವೂ ಮುಖ್ಯವಾದದ್ದು. 'ಹಾರ್ಡ್ ವರ್ಕಿಂಗ್' ಇತ್ತೀಚೆಗೆ ತುಂಬಾ ಟ್ರೆಂಡಿಂಗ್‌ನಲ್ಲಿರುವ ಪದ. ಕಷ್ಟಪಡದೇ ಏನೂ ಸಿಗುವುದಿಲ್ಲ, ನಿಜ, ಆದರೆ ಮೇಲೆ ಇಲ್ಲೂ ಎಷ್ಟು ಕಷ್ಟಪಡಬೇಕು? ಯಾವ ರೀತಿ ಕಷ್ಟಪಡಬೇಕು? ಎನ್ನುವ ಪ್ರಶ್ನೆಗಳು ಮುಖ್ಯವಾಗುತ್ತವೆ. ಇವತ್ತಿನ ಸಮಸ್ಯೆಯೆಂದರೆ ಒಂದೆರಡು ಸಣ್ಣ ಪ್ರಮಾಣದ ಯಶಸ್ಸು ಸಿಕ್ಕಿದಾಕ್ಷಣ ಬಹಳಷ್ಟು ಜನರು ನಿರಂತರವಾಗ ಅಭ್ಯಾಸವನ್ನು ಮರೆತೇ ಬಿಡುತ್ತಾರೆ. ಅವರ ಬದುಕು ನಿಂತ ನೀರಿನಿಂತಾಗುತ್ತದೆ. ಕೆಲಸ ಇದೆ, ಜೀವನ ನಡೆಯುತ್ತದೆ, ಇನ್ಯಾಕೆ ಹೊಸದಾದ ಕೌಶಲ್ಯವನ್ನು ಕಲಿಯಬೇಕು? ಎಂಬ ಆಲಸ್ಯ. ಒಂದೋ ಎರಡೋ ಸಣ್ಣ ಯಶಸ್ಸಿನ ಗುಂಗಿನಲ್ಲಿ ಎದುರಿಗೆ ವೇಗವಾಗಿ ಓಡುತ್ತಿರುವ ಜಗತ್ತೇ ಕಾಣುವುದಿಲ್ಲ. ಹಾಗಂತ ಅವರೆಲ್ಲ ಕಷ್ಟಪಡುವುದಿಲ್ಲ ಅಂತಲ್ಲ, ನೂರಕ್ಕೆ ಎಂಬತ್ತು ಶೇಕಡಾ ಜನರು ಕಷ್ಟಪಟ್ಟಿ ದುಡಿಯುತ್ತಾರೆ. ಹಗಲಿರುಳು ದುಡಿದು ಜೀವನ ನಡೆಸುತ್ತಾರೆ. ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಂತೂ ಪರಿಶ್ರಮಪಟ್ಟಷ್ಟು ಕಡಿಮೆಯೇ. ಆದರೆ ಆ ಪರಿಶ್ರಮ ಸರಿಯಾದ ದಿಕ್ಕಿನಲ್ಲಿರುತ್ತದೆಯೇ? ಇಲ್ಲ, ಅದಕ್ಕಾಗಿಯೇ ಅವರೆಲ್ಲ ಬದುಕಿನಲ್ಲಿ ತಾವು ಏನನ್ನು ಸಾಧಿಸಬೇಕು ಅಂದುಕೊಂಡಿ ದ್ದರೋ ಅಷ್ಟು ಸಾಧಿಸುವುದಿಲ್ಲ. ಅವರೊಳಗೆ ತೃಪ್ತಿಯೇ ಇರುವುದಿಲ್ಲ.

ಶ್ರಮಜೀವಿಯ ರಹಸ್ಯ!

ಯಾವುದೇ ಕ್ಷೇತ್ರವಿರಲಿ, ಅಲ್ಲಿ ಶ್ರಮಜೀವಿಗೇ ಮೇಲುಗೈ. 'ಅವರು ಸ್ಮಾರ್ಟ್ ಆಗಿ ಕೆಲಸ ಮಾಡುತ್ತಾರೆ, ನಾವು ಹಾರ್ಡ್‌ ವರ್ಕ್ ಮಾಡುತ್ತೇವೆ, ಆದರೂ ಏನೂ ಉದ್ಧಾರ ಆಗುತ್ತಿಲ್ಲ' ಎಂದು ದೂರುವವರು, ಹೀಗೆ ದೂರುವುದಕ್ಕೂ ಮುನ್ನ ಹತ್ತು ಸಲವಾದರೂ ಯೋಚಿಸಬೇಕು.

ದಿಕ್ಕಿನಲ್ಲಿ ತೊಡಗಿಸಿಕೊಳ್ಳಬೇಕು.

ಯಶಸ್ಸಿಗೆ ಬುನಾದಿ! ಅತ್ಯಂತ ಸೂಕ್ಷ್ಮವಾಗಿ ಗಮನಿಸಿ, ನಾವು ನಮ್ಮ ಕೆಲಸವನ್ನು ಪರಿಶ್ರಮದಿಂದ ಮಾಡುವುದರ ಜತೆಗೆ ಆ ಕೆಲಸದ ಜತೆ ನಮ್ಮನ್ನು ಇನ್ನೂ ಹೆಚ್ಚು ಅಭಿವೃದ್ಧಿ ಪಡಿಸಿಕೊಳ್ಳುವುದಕ್ಕೆ ಪರಿಶ್ರಮ ಪಡಬೇಕು. ನಮಗೆ ಸಿಕ್ಕ ಅಥವಾ ಕೊಟ್ಟ ಕೆಲಸವನ್ನು ನಾವು ಪರಿಶ್ರಮಪಟ್ಟು ಮುಗಿಸುತ್ತಾ ಹೋದರೆ ಅದು ಕೇವಲ ಜೀವನ ನಡೆಸಿಕೊಂಡು ಹೋಗಲು ಸಹಾಯವಾಗುತ್ತದೆ. ಆದರೆ ನಮ್ಮ ಕೌಶಲ್ಯವನ್ನು ಉತ್ತಮಗೊಳಿಸಲು ಕಷ್ಟಪಟ್ಟರೆ ಅದು ನಮ್ಮನ್ನು ಇನ್ನೊಂದು ಬೇರೆಯೇ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಯಶಸ್ಸು ನಮ್ಮ ಪಾಲಾಗುತ್ತದೆ. ಸಾಧನೆಯು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಮಾಡುವ ಕೆಲಸದಲ್ಲೂ ಆಸಕ್ತಿ ಹೆಚ್ಚುತ್ತದೆ. ಅದರಲ್ಲಿ ಸಿಗುವ ಸಂತೃಪ್ತಿಯೇ ಬೇರೆ. ಸುತ್ತ ಮುತ್ತಲಿರುವ ಯಶಸ್ವಿ ವ್ಯಕ್ತಿಗಳನ್ನು ಗಮನಿಸಿ. ಅವರೆಲ್ಲ ತಮ್ಮ ಕೆಲಸವನ್ನು ಮುಗಿಸಬೇಕು ಎಂದು ಪರಿಶ್ರಮ ಪಟ್ಟವರಲ್ಲ; ಬದಲಾಗಿ ತಮಗೆ ಸಿಕ್ಕ ಕೆಲಸದಲ್ಲಿ ತಮ್ಮನ್ನು ತಾವು ಹೇಗೆ ಬೆಳೆಸಿಕೊಳ್ಳಬಹುದು ಎಂದು ಅರಿತು, ಆ ನಿಟ್ಟಿನಲ್ಲಿ ಹಾರ್ಡ್ವಕ್್ರ ಮಾಡಿ, ಅದರಿಂದ ತಮ್ಮನ್ನು ತಾವು ಸುಧಾರಿಸಿಕೊಳ್ಳುತ್ತಾ ಹೋದರು. ಅದೇ ಅವರ ಯಶಸ್ಸಿಗೆ ಬುನಾದಿಯಾಯಿತು.

ನೋಡಿ ಕಲಿ, ಮಾಡಿ ತಿಳಿ

ಯಾವುದೇ ಕ್ಷೇತ್ರವಿರಲಿ, ಅಲ್ಲಿ ಶ್ರಮಜೀವಿಗೇ ಮೇಲುಗೈ. 'ಅವರು ಸ್ಟಾರ್ಟ್ ಆಗಿ ಕೆಲಸ ಮಾಡುತ್ತಾರೆ. ನಾವು ಹಾರ್ಡ್ವಕ್್ರ ಮಾಡು ತ್ತೇವೆ, ಆದರೂ ಏನೂ ಉದ್ದಾರ ಆಗುತ್ತಿಲ್ಲ' ಎಂದು ದೂರುವ ವರು, ಹೀಗೆ ದೂರುವುದಕ್ಕೂ ಮುನ್ನ ಹತ್ತು ಸಲವಾದರೂ ಯೋಚಿಸಬೇಕು. ಅವರು ಯಾವ ರೀತಿ ಕೆಲಸ ಮಾಡುತ್ತಾರೆ? ಎನ್ನುವುದನ್ನು ಗಮನಿಸಬೇಕು, ಅವರಿಂದ ಕಲಿಯಬೇಕು. ಅವರ ಜತೆ ಗೆಳೆತನ ಬೆಳೆಸಿ ಅವರ ರೀತಿಯನ್ನು ನಮ್ಮದಾಗಿಸಿಕೊಂಡರೆ ಯಶಸ್ಸು ನಮ್ಮ ಕಡೆಗೂ ಬರುತ್ತದೆ. ನಾರಾಯಣ ಮೂರ್ತಿಯ ವರು ಕೇವಲ ತಾವು ಸೇರಿದ ಕಂಪನಿಯ ಕೆಲಸವನ್ನು ಹಗಲಿರುಳು ಮಾಡುತ್ತಾ ಕೂತಿದ್ದರೆ ಇನ್ಫೋಸಿಸ್ ಆಗುತ್ತಿತ್ತೇ? ತಾನು ಧೀರೂ ಭಾಯಿ ಅಂಬಾನಿಯವರ ಮಗ ಎನ್ನುತ್ತಾ ಹಾಯಾಗಿದ್ದು, ಅಪ್ಪ ಮಾಡಿಟ್ಟ ಕಂಪನಿಗಳನ್ನೇ ನಡೆಸಿಕೊಂಡು ಹೋಗಿದ್ದರೆ ಇವತ್ತು ಜಿಯೋ ಎನ್ನುವ ಕಂಪನಿಯು ಹುಟ್ಟಿಕೊಳ್ಳುತ್ತಿತ್ತೇ? ನಾವು ಮಾಡುವ ಕಾರ್ಯಕ್ಷೇತ್ರಗಳಲ್ಲೇ ಕೂಲಂಕುಶವಾಗಿ ನೋಡಿದರೆ ಈ ಒಗಟು ಬಗೆ ಹರಿಯುತ್ತದೆ. ಯಶಸ್ಸಿನ ಮೆಟ್ಟಿಲೇರಿದವರು ತಮ್ಮ ಕೆಲಸವನ್ನು ಮಾತ್ರ ಕಷ್ಟಪಟ್ಟು ಮಾಡಿಲ್ಲ. ಬದಲಾಗಿ ಕೆಲಸದ ಹೆಸರಿನಲ್ಲಿ ತಮ್ಮ ಮೇಲೆ ಕಷ್ಟಪಟ್ಟು ಅಭ್ಯಾಸ ಮಾಡಿ, ಕೌಶಲ್ಯವನ್ನು ಹೆಚ್ಚಿಸುತ್ತಾ ಹೋದರು. ತಾವು ಶ್ರಮಪಟ್ಟು ಇನ್ನೊಂದು ಮೂರ್ತಿ ಯನ್ನು ಕೆತ್ತದೇ ತಮ್ಮನ್ನೇ ತಾವು ಒಂದು ಶಿಲ್ಪವನ್ನಾಗಿ ರೂಪಿಸಿ ಕೊಂಡರು. ಇದೇ ಅಭ್ಯಾಸದ ರೀತಿ, ಇದೇ ಶ್ರಮಜೀವಿಯ ರಹಸ್ಯ!

Category:Personal Development


ProfileImg

Written by Balu Kukke8277