ಒಡಲ ಒಡೆದಿರಬಹುದು
ಕಣ್ಣೀರ ಕಡಲ ಬತ್ತಿರಬಹುದು
ಬೆಳಕಿನ ಕಿರಣ ಮಂದವಾಗಿರಬಹುದು
ಬಂದೂಕು ನೆಲಕ್ಕೆ ಬಿದ್ದಿರಬಹುದು
ನಮ್ಮ ದೇಹ ಧರೆಗುರುಳಿರಬಹುದು
ಆದರೆ ಕಿಚ್ಚು ದೇಶಾದ್ಯಂತ ಹೊರಬಂದಿದೆ
ಕಲ್ಲಿನಿಂದ ಹೊಡೆಸಿದಿರಿ ಕ್ಷಮಿಸಿದೆವು;
ಬದುಕಿನ ಜತೆ ಆಟವಾಡಿದೀರಿ ಸುಮ್ಮನಿದ್ದೆವು.
ಹೇಡಿಗಳಂತೆ ನಮ್ಮ ಪ್ರಾಣಕ್ಕೂ ಇರಿದಿರಿ
ನಮ್ಮ ಅಸು ಸ್ವರ್ಗ ಸೇರಿದೆ ನಿಜ. ಅಸುವಿಗೆ ಅಸುವಾಗಿದ್ದ ಮಿತ್ರರು ನಿಮ್ಮ ಪ್ರಾಣ ಬಿಡರು
ಅವರ ಪ್ರತಿಜ್ಞೆ ಸ್ವರ್ಗದಲ್ಲಿದ್ದೇ ನೋಡಿದೆವು, ಪ್ರತೀಕಾರಕ್ಕಿಂತ ಇಲ್ಲಿ ದೇಶದ ಶೌರ್ಯ ಮುಖ್ಯ
ಆ ಎದೆಶೂರರು ನಮ್ಮ ಗೆಳೆಯರು
ಅವರಿಂದ ನಮಗೆ ಆತ್ಮಶಾಂತಿ ಸಿಗುತ್ತೆ...
ನಮ್ಮ ಸುಖಿಕುಟುಂಬದ ಹನಿಹನಿ ಕಣ್ಣೀರು
ಗುಂಡಾಗಿ ಅದು ಬದಲಾಗುತ್ತೆ
ಪಾಪಿಗಳೇ.., ನಿಮ್ಮ ತಲೆ ಉರುಳೋವರಿಗೂ
ಸುಮ್ಮನೆ ಬಿಡದು ಕಣ್ಣೀರಗುಂಡುಗಳು
ಸ್ವರ್ಗದ ಹುಚ್ಚಿನವರೇ ನಿಮಗೇ
ನರಕದಪಾಠ ಮಾಡಲು ಯೋಧಮಿತ್ರರ
ಬಂದೂಕು ನಿಮ್ಮ ಹಣೆಗೆ ಗುರಿಯಿಟ್ಟು ನಿಂತಿವೆ..
ಅಸಲಿಯಾಟಕ್ಕೆ ತರಗೆಲೆಗಳು ಆಗ್ತೀರಾ
ಮಾನವೀಯತೆಯಲಿ ಎಂದೋ ಸತ್ತೋದವರೇ…
*ಹನುಮಂತ.ಮ.ದೇಶಕುಲಕರ್ಣಿ*
-ಹನುಮಂತ.ಮ.ದೇಶಕುಲಕರ್ಣಿ.
"ಪ್ರತ್ಯಗ್ರ ಲೇಖಕ"