“ಗುತ್ತಿಗೆ ನೌಕರಿ” ಎನ್ನುವ ಆಧುನಿಕ ಗುಲಾಮಗಿರಿ ಪದ್ದತಿ

ಶ್ರಮಕ್ಕೆ ಒಂದೇ ಬೆಲೆ ಇರಬೇಕಲ್ಲ. ಆದರೆ ಇವತ್ತಿನ ಆಳುವ ವ್ಯವಸ್ಥೆಯಲ್ಲಿ “ಶ್ರಮ” ಯಾರು ಮಾಡುತ್ತಿದ್ದಾರೆ ಅನ್ನುವದ ಮೇಲೆ ಬೆಲೆ ಕಟ್ಟಲಾಗುತ್ತಿದೆ

ProfileImg
01 May '24
2 min read


image

ಮೇ ೧ ಕಾರ್ಮಿಕರ ದಿನಾಚರಣೆ. ಕಾರ್ಮಿಕರ ಶ್ರಮವನ್ನು ಗೌರವಿಸುವ ಸಲುವಾಗಿ, ಮತ್ತು ಕಾರ್ಮಿಕರಿಗೆ ಸಿಗಬೇಕಾದ ಮಾನವೀಯ ಮತ್ತು ನ್ಯಾಯಯುತ ಸೌಲಭ್ಯಗಳ ಬಗ್ಗೆ ದುಡಿಸಿಕೊಳ್ಳುವವರ ಗಮನ ಸೆಳೆಯುವ ಸಲುವಾಗಿ  ಮೇ ೧ ನ್ನು ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತದೆ. ಹಾಗೇ ನೋಡಿದರೆ ಜಗತ್ತು ಆಧುನಿಕತೆಗೆ ತೆರೆದುಕೊಳವ ಮೊದಲು ಶ್ರಮಿಕರು ಮತ್ತು ಪ್ರಾಣಿಗಳ ನಡುವೆ ಅಂತಹ ವ್ಯತ್ಯಾಸವೆನು ಇರಲಿಲ್ಲ. ಆ ದಿನಗಳಲ್ಲಿ ದುಡಿಸಿಕೊಳ್ಳುವವರು ಶ್ರಮಿಕರನ್ನು ವಸ್ತು ಖರಿದಿಸಿದಂತೆ ಖರೀದಿಸಿ “ಗುಲಾಮ” ಹೆಸರಿನಲ್ಲಿ ದುಡಿಸಿಕೊಳ್ಳುತ್ತಿದ್ದರು. ಶಕ್ತಿ ಇರೋ ತನಕ ದುಡಿಸಿಕೊಂಡು ನಂತರ ಬಿಸಾಕುತ್ತಿದ್ದರು.ಹಾಗೇ ಜಗತ್ತು ಅಕ್ಷರ ಪ್ರಪಂಚಕ್ಕೆ  ಹೆಚ್ಚು ಹೆಚ್ಚು ತೆರೆದುಕೊಳ್ಳುತ್ತಿದ್ದಂತೆ ವಿವಿಧ ಬಗೆಯ ಕಾರ್ಮಿಕ ಹೋರಾಟಗಳ ಮೂಲಕ ಗುಲಾಮ ಎನ್ನುವ ಶಬ್ದ ಹೊರಟು ಹೋಯಿತು ವಿನ:ಆ ಪದ್ದತಿ ಪೂರ್ತಿ ಹೊರಟು ಹೋಗಿಲ್ಲ. ನಂತರದ ದಿನಗಳಲ್ಲಿ ಜಗತ್ತು ಜಾಗತ್ತೀಕರಣಕ್ಕೆ ತೆರೆದುಕೊಂಡಿತ್ತು. ಆಳುವ ವ್ಯವಸ್ಥೆ ಗುಲಾಮಿ ಪದ್ದತಿಯನ್ನು  ತುಂಬಾ ವ್ಯವಸ್ಥಿತವಾಗಿ, ಕಾನೂನಿನ ಭಾಷೆಯ ಅಡಿಯಲ್ಲಿ ಜಾರಿಗೆ ತಂದಿದೆ. ಅದುವೇ “ಗುತ್ತಿಗೆ ನೌಕರಿÀ” ಎನ್ನುವ ಆಧುನಿಕ ಗುಲಾಮಗಿರಿ ಪದ್ದತಿ. ಜಗತ್ತು ಬದಲಾದರೂ ಮಾನವನ ಮನಸ್ಥಿತಿ ಬದಲಾಗದ ಪರಿಣಾಮವೇ ಇಂದಿಗೂ ಸಂವಿಧಾನ ಬದ್ದವಾಗಿ ನಡೆಯುತ್ತಿರುವ ಗುತ್ತಿಗೆ ನೌಕರಿ ಎನ್ನುವ ಗುಲಾಮಗಿರಿ ಪದ್ದತಿ. ಇವತ್ತು ಭಾರತದಲ್ಲಿ ಕಾರ್ಯಂಗ ಮತ್ತು ನ್ಯಾಯಂಗ ವ್ಯವಸ್ಥೆಯಲ್ಲಿ ಬಹುತೇಕ ದುಡಿಮೆಗಾರರು ಗುತ್ತಿಗೆ ನೌಕರರು. ಇವರೆಲ್ಲರು ಸರಕಾರಿ ನೌಕರರು ಹೌದು ಎಂದರೆ ಹೌದು. ಅಲ್ಲ ಎಂದರೆ ಅಲ್ಲ. ಇವರಿಗೆ ಸೇವಾ ಸವಲತ್ತುಗಳನ್ನು ನೀಡುವಾಗ ಕಾರ್ಮಿಕರನ್ನಾಗಿಯೂ ಪರಿಗಣಿಸುತ್ತಿಲ್ಲ. ಇತ್ತ ಸರಕಾರಿ ನೌಕರರನಾಗಿಯೂ ಪರಿಗಣಿಸುತ್ತಿಲ್ಲ. ಎಲ್ಲ ರೀತಿಯ ಕೆಲಸಗಳನ್ನು ಮಾತ್ರ ಮಾಡಿಸಿಕೊಳ್ಳಲಾಗುತ್ತದೆ. ಇವತ್ತಿಗೂ ಬಹುತೇಕ ಇಲಾಖೆಗಳಲ್ಲಿ ಗುತ್ತಿಗೆ ನೌಕರರನ್ನು ಗುಲಾಮರ ರೀತಿ ದುಡಿಸಿಕೊಳ್ಳುತ್ತಿರುವುದು ಬಹಿರಂಗ ಸತ್ಯ. ಉಧಾಹರಣೆಗೆ ಸಮನಾದ ಹುದ್ದೆಯಲ್ಲಿ ಸರಕಾರಿ ನೌಕರ ಮತ್ತು ಗುತ್ತಿಗೆ ನೌಕರ ಇದ್ದರೆ ಕೆಲಸ ಮತ್ತು ವೇತನ ಒಂದೇ ರೀತಿ ಇರಬೇಕಲ್ಲ. ಆದರೆ ಹಾಗಾಗುತ್ತಿಲ್ಲ. ಸರಕಾರಿ ನೌಕರಿನಿಗೆ ಕೆಲಸ ಕಡಿಮೆ ಸಂಬಳ ಜಾಸ್ತಿ, ಗುತ್ತಿಗೆ ನೌಕರನಿಗೆ ಕೆಲಸ ಹೆಚ್ಚು ಸಂಬಳ ಕಡಿಮೆ ಎನ್ನುವುದು ಸಾಮನ್ಯವಾಗಿದೆ.ಗುತ್ತಿಗೆ ನೌಕರನಿಗೆ ದಾಖಲೆಗಳಲ್ಲಿ ನಿಗದಿ ಮಾಡಿರುವ ಕೆಲಸಗಳು ಕಡಿಮೆ ಇದ್ದರೂ ಮೇಲಾಧಿಕಾರಿಗಳು ದುಡಿಸಿಕೊಳ್ಳುವ ರೀತಿ ಮಾತ್ರ ಹಳೆಯ ಕಾಲದ ಜಮೀನ್ದಾರಿಕೆಯನ್ನು ನೆನಪು ಮಾಡುತ್ತದೆ.ಗೌರವ ಧನ ಹೆಸರಿನಲ್ಲಿ ಪ್ರತಿ ತಿಂಗಳ ಒಂದಿಷ್ಟು ಹಣವನ್ನು ನಾಯಿಗೆ ಬಿಸ್ಕಿತ್ ಒಗೆದ ಹಾಗೇ ಒಗೆಯಲಾಗುತ್ತದೆ.ಕೆಲವೊಮ್ಮೆ ಬಜೆಟ್ ಕೊರತೆಯ ಕಾರಣ ಬರುವ ತಿಂಗಳ ಗೌರವ ಧನ ನಾಲ್ಕೆöÊದು ತಿಂಗಳಿಗೆ ಬರುವುದಿದೆ. ಅದನ್ನು ಬಿಡುಗಡೆ ಮಾಡಿಸಿಕೊಳ್ಳಲು ಸಹ ಹರಸಾಹಸ ಪಡೆಯಬೇಕಾಗುತ್ತದೆ.ಇನ್ನು ಆಗುತ್ತಿರುವ ಅನ್ಯಾಯಗಳ ಬಗ್ಗೆ ಧ್ವನಿ ಎತ್ತಿದ್ದರೆ, ಸಕಾರಣವಿಲ್ಲದೇ ಕೆಲಸದಿಂದ ಮುಕ್ತಿಗೊಳಿಸಿಬಿಡುತ್ತಾರೆ.ಗುತ್ತಿಗೆ ನೌಕರರು ಅನಕ್ಷರಸ್ಥರೆನಲ್ಲಾ.ಹಾಗಾಗಿ ಅಕ್ಷರಸ್ಥ ಗುಲಾಮರು.ತಮಗೆ ಅನ್ಯಾಯವಗುತ್ತಿದೆ ಎಂದು ಗೊತ್ತಿದ್ದರೂ ಏನು ಮಾಡಲಾಗದ ಅಸಾಹಯಕ ಪರಿಸ್ಥಿತಿ.ಇಂದೆಲ್ಲಾ ನಾಳೆ ಉತ್ತಮ ದಿನಗಳು ಬರಬಹುದೆಂಬ ನಿರೀಕ್ಷೆ. ಆದರೆ ಆಳುವ ವರ್ಗ ಮಾತ್ರ ಗುತ್ತಿಗೆ ನೌಕರರನ್ನು ಇನ್ನಷ್ಟು ಹೇಗೆ ಅವಮಾನೀಯವಾಗಿ ನಡೆಸಿಕೊಳ್ಳಬಹುದು ಎಂದು ನೀತಿ ನಿಯಮಗಳ ಅಡಿಯಲ್ಲಿ ಇನ್ನಷ್ಟು ಅವರನ್ನು ಕಟ್ಟಿಹಾಕಬಹುದು ಎಂದು ಯೋಚಿಸುತ್ತಿರುತ್ತಾರೆ. ಅದಕ್ಕೆ ತಕ್ಕ ಹಾಗೇ ಪ್ರತಿ ವರ್ಷ ಹೊಸ ಹೊಸ ನೀತಿ ನಿಯಗಳ ಜಾರಿ ಮಾಡುವದರ ಮೂಲಕ ತಮ್ಮ ಗುಲಾಮಿ ಮನಸ್ಥಿತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. “ನಿಗದಿತ ಸಮಯದ ಯೋಜನೆಯ ಅಡಿಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಿರುವದರಿಂದ ಸರಕಾರಿ ನೌಕರರಿಗೆ ಸಿಗುವ ಕನಿಷ್ಟ ಸೌಲಭ್ಯಗಳನ್ನು ನೀಡಲು ಸಾದ್ಯವಿಲ್ಲ” ಎನ್ನುವ ನೀತಿಯ ಅಡಿಯಲ್ಲಿ ಸಾಂವಿಧಾನಿಕ ರಕ್ಷಣೆಯನ್ನು ಅಧಿಕಾರಿ ವರ್ಗ ಪಡೆದುಕೊಳ್ಳುತ್ತಾರೆ.ಆಳುವ ವರ್ಗಕ್ಕೆ ದಬ್ಬಾಳಿಕೆ ಮನಸ್ಥಿತಿ ಹೋಗದ್ದಿದ್ದರೆ “ಗುತ್ತಿಗೆ ನೌಕರಿ” ಎನ್ನುವ ಗುಲಾಮಗಿರಿ ಪದ್ದತಿ ಹೋಗಲು ಸಾದ್ಯವಿಲ್ಲ. ಶ್ರಮ ಒಂದೇ ರೀತಿ ಆದರೆ ಅದಕ್ಕೆ ಬೆಲೆ ಸರಕಾರಿ ನೌಕರನಿಗೆ  ಹೆಚ್ಚು, ಗುತ್ತಿಗೆ ನೌಕರಿನಗೆ ಕಡಿಮೆ ಎಂದರೆ ಹೇಗೆ. ಆದರೆ ಇವತ್ತು ಈ ಪರಿಸ್ಥಿತಿ ಸರಕಾರಿ ಪ್ರತಿಯೊಂದು ಇಲಾಖೆಯಲ್ಲಿ ನಡೆಯುತ್ತಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಅದನ್ನು ನ್ಯಾಯಿಕ ಭಾಷೆಯೊಳಗೆ ಸಮರ್ಥನೆ ಮಾಡಲಾಗುತ್ತದೆ. ಒಟ್ಟಿನಲ್ಲಿ ಶ್ರಮಕ್ಕೆ ಬೆಲೆಯಿಲ್ಲ. ಆಧುನಿಕ ಜಗತ್ತಿನಲ್ಲಿ ಗುತ್ತಿಗೆ ನೌಕರರು “ಆಧುನಿಕ ಗುಲಾಮರು”. ಶ್ರಮಕ್ಕೆ ಬೆಲೆ ಸಿಗಬೇಕಾದರೆ ಹೋರಾಟ ಮತ್ತೆ ಪ್ರಾರಂಭಿಸಬೇಕಾಗಿದೆ.ಆದರೆ ಜಾಗತ್ತೀಕರಣದ ಜಗತ್ತು ಹೋರಾಟವನ್ನು ಹೊಸಕಿಹಾಕಿದೆ.

Category:News



ProfileImg

Written by Vinayak Patgar

0 Followers

0 Following