ಕನಸು ನಿದ್ರೆಯ ಅವಿಭಾಜ್ಯ ಅಂಗ. ನಾವು ಗಾಢವಾದ ನಿದ್ರೆಗೆ ಜಾರಿದಾಗ ನಮ್ಮ ಸುಪ್ತ ಮನಸ್ಸು ಎಚ್ಚರವಾಗಿರುತ್ತದೆ. ಅದು ನಮ್ಮ ಮನದ ಆಳದಲ್ಲಿ ಹುದುಗಿದ ಭಾವನೆಗಳನ್ನು ಹೊರ ಹಾಕುತ್ತದೆ. ನಮ್ಮ ದೇಹಕ್ಕೆ ವಿಶ್ರಾಂತಿ ಇದೆ ಹೊರತು ಮೆದುಳಿಗೆ ವಿಶ್ರಾಂತಿಯಿರುವುದಿಲ್ಲ, ಕನಸುಗಳು ಕೆಲ ವೊಂದು ಬಾರಿ ಕಾಲ್ಪನಿಕವಾಗಿ ರುತ್ತದೆ. ಇನ್ನು ಕೆಲವು ಸಂದರ್ಭದಲ್ಲಿ ನಿಜ ಜೀವನಕ್ಕೆ ಸಂಬಂಧಿಸಿದಂತೆ ಇರುತ್ತದೆ. ಕೆಲವು ಕನಸುಗಳು ಮನಸ್ಸಿಗೆ ಹಿತ ನೀಡಿದರೆ ಇನ್ನು ಕೆಲವು ಮನಸ್ಸಿಗೆ ಕಿರಿಕಿರಿ ಉಂಟು ಮಾಡುತ್ತದೆ. ಕೆಲವರಿಗೆ ಕನಸು ಬಿದ್ದದ್ದು ಜ್ಞಾಪಕದಲ್ಲಿರುತ್ತದೆ, ಇನ್ನು ಕೆಲವರಿಗೆ ಅದು ಅರೆಬರೆಯಾಗಿ ಜ್ಞಾಪಕವಾಗಿರುತ್ತದೆ. ನಾವು ಯಾವುದಾದರೂ ವಿಷಯದ ಬಗ್ಗೆ ಅತಿಯಾಗಿ ಯೋಚಿಸುತ್ತಿದ್ದರೆ ಅಥವಾ ಚಿಂತಿಸುತ್ತಿದ್ದರೆ, ಆ ವಿಷಯವು ನಮಗೆ ತಿಳಿಯದೆ ನಮ್ಮ ಮನಸ್ಸಿನ ಆಳದಲ್ಲಿ ಬೇರೂರಿರುತ್ತದೆ. ಹಾಗಾಗಿ ಅದನ್ನು ಕನಸಿನ ರೂಪದಲ್ಲಿ ಕಾಣುತ್ತೇವೆ. ಇನ್ನು ಕೆಲವರು, ಕನಸುಗಳು ವ್ಯಕ್ತಿಯ ಜೀವನದಲ್ಲಿ ಮುಂದೆ ನಡೆಯುವ ಘಟನೆಗಳ ಮುನ್ಸೂಚನೆ ಎಂದು ನಂಬುತ್ತಾರೆ. ಕೆಲವೊಂದು ಬಾರಿ ಬರಿ ಕೆಟ್ಟ ಕನಸು ಗಳೇ ಬೀಳುತ್ತವೆ. ದತ ಈ ರೀತಿಯ ಕನಸುಗಳು ನಮ್ಮ ದಿನ ನಿತ್ಯದ ಚಟುವಟಿಕೆಯ ಮೇಲೆ ಕೆಟ್ಟ ಪರಿಣಾಮ ವನ್ನು ಉಂಟು ಮಾಡುವುದರ ಜತೆಗೆ ನಮ್ಮ
ವಿಶ್ವಾಸವೇ ವಿಶ್ವ ಕನಸುಗಳ ಬೆನ್ನೇರಿ ನೆಮ್ಮದಿಯನ್ನು ಹಾಳುಮಾಡುತ್ತದೆ. ಸುಪ್ತವಾಗಿ ಉಳಿದದ್ದು ಕನಸಾಗಿ ಪ್ರಕಟ. ಯಾವುದಾದರೂ ಆಘಾತ ಅಪಘಾತ ಸಂಭವಿಸಿದ್ದರೆ. ಅದು ಮನಸ್ಸಿನ ಮೇಲೆ ತುಂಬಾ ಪರಿಣಾಮವನ್ನು ಬೀರಿರುತ್ತದೆ. ಹಾಗೆ ಆ ಘಟನೆ ಮನಸ್ಸಿನ ಆಳದಲ್ಲಿ ಬೇರೂರಿ ಸುಪ್ತವಾಗಿ ಅಡಗಿರುತ್ತದೆ. ಅದು ವಿಚಿತ್ರ ಕನಸಿನ ರೂಪದಲ್ಲಿ ಕಾಡುತ್ತಿರುತ್ತದೆ.
ದುಃಸ್ವಪ್ನಕ್ಕೆ ಕಾರಣ
ದುಃಸ್ವಪ್ನಗಳು ಬೀಳಲು ಒತ್ತಡದ ಜೀವನವೇ ಪ್ರಮುಖ ಕಾರಣ. ನಮ್ಮ ದೇಹ ಮತ್ತು ಮನಸ್ಸು ಬಹಳ ಆಯಾಸಗೊಂಡ ಸಂದರ್ಭದಲ್ಲಿ ನಮ್ಮ ದೇಹದಲ್ಲಿ ಕಾರ್ಟಿಸೋಲ್ ಆಡ್ರಿನಾಲ್‌ನಂತಹ ಹಾರ್ಮೋನ್ ಗಳು ಬಿಡುಗಡೆ ಆಗುತ್ತದೆ. ಆಗ ನಮ್ಮ ಮನಸ್ಸಿಗೆ ಚಿಕ್ಕ ಸಮಸ್ಯೆಯೂ ದೊಡ್ಡದಂತೆ ಭಾಸವಾಗಿ ಅದು ಬಹಳ ಒತ್ತಡಕ್ಕೆ ಸಿಲುಕುತ್ತದೆ. ಆ ಸಂದರ್ಭದಲ್ಲಿ ನಮಗೆ ವಿಚಿತ್ರವಾದ ಹಾಗೂ ಭಯಾನಕ ಕನಸುಗಳು ಬೀಳುತ್ತದೆ. ಮಕ್ಕಳು ಅತಿಯಾದ ಒತ್ತಡದಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ, ಅವರಿಗೆ ಪರೀಕ್ಷೆ ಮುಗಿದು ಅಂಕಗಳು ತಿಳಿದ ಮೇಲೂ, ಕನಸಿನಲ್ಲಿ ನಾಳೆ ಪರೀಕ್ಷೆ ಇದೆ ನಾನು ಇನ್ನೂ ಚೆನ್ನಾಗಿ ತಯಾರಿ ಮಾಡಿಕೊಂಡಿಲ್ಲ ಎಂದು ಭಯದ ರೂಪದಲ್ಲಿ ಕನಸು ಬೀಳುತ್ತಿರುತ್ತದೆ. ಮುಂಜಾನೆ ನಿದ್ರೆಯಿಂದ ಎದ್ದ ಮೇಲೆ ವಾಸ್ತವದ ಅರಿವಾಗುತ್ತದೆ.
ಮೆದುಳಿನ ನರಗಳ ಮೇಲೆ ಪ್ರಭಾವ ಬೀರುತ್ತದೆ ಅಂತಹ ಔಷಧಿಗಳನ್ನು ದೀರ್ಘಕಾಲದಿಂದ ಬಳಸುತ್ತಿದ್ದರೆ ಅವು ನಮ್ಮ ನಿದ್ರೆ ಮತ್ತು ಕನಸುಗಳನ್ನು ನಿಯಂತ್ರಿಸುತ್ತದೆ. ಆ ಸಂದರ್ಭ ದಲ್ಲೂ ನಮಗೆ ವಿಚಿತ್ರ ಕನಸಿನ ಅನುಭವವಾಗು ತ್ತದೆ. ನಮಗೆ ಬಹಳ ಪ್ರಿಯವಾದ ವ್ಯಕ್ತಿಗಳು ಹಠಾತ್ ಆಗಿ ನಿಧನ ಹೊಂದಿದ ಸಮಯದಲ್ಲಿ ಅವರು ನಮ್ಮೊಡನೆ ವಾಸ್ತವಿಕವಾಗಿ ಇರದೇ ಇದ್ದರೂ, ನಮ್ಮ ನಡುವೆಯೇ ಜೀವಂತವಾಗಿದ್ದಾರೆ ಅವರೊಡನೆ ನಾವು ಸಂಭಾಷಿಸುತ್ತಿ ರುವಂತೆ ಕನಸು ಬೀಳುತ್ತದೆ. ಕಾರಣವೇನೆಂದರೆ ನಮ್ಮ ಮನಸ್ಸು ಆ ಘಟನೆಯನ್ನು ಒಪ್ಪಿಕೊಂಡಿರುವುದಿಲ್ಲ. ಈ ಅನುಭವವನ್ನು ಸ್ವತಃ ನಾನು ಅನುಭವಿಸಿದ್ದೇನೆ. ನನ್ನ ಪ್ರೀತಿಯ ಅತ್ತೆಯವರು ಹಠಾತ್ ಆಗಿ ನಿಧನರಾದ ಸಂದರ್ಭದಲ್ಲಿ, ದಿನನಿತ್ಯದ ಕೆಲಸವನ್ನು ಅವರೊಂದಿಗೆ ಮಾಡುತ್ತಿದ್ದಂತೆ ಕನಸು ಬೀಳುತ್ತಿತ್ತು. ಎಷ್ಟೋ ಬಾರಿ ಕನಸಿಂದ ಎದ್ದು ಕೂತು ಅಯ್ಯೋ ಅವರಿಲ್ಲವಲ್ಲ ಎಂದು ಬೆಹರಿಸಿಕೊಂಡು ಮತ್ತೆ ನಿದ್ರೆಗೆ ಜಾರಿದ್ದೇನೆ. ಅವರು ದೈಹಿಕವಾಗಿ ನಮ್ಮ ನಡುವೆ ಇಲ್ಲ
ಎಂದು ಒಪ್ಪಲು ನನ್ನ ಮನಸ್ಸು ತಯಾರೇ ಇರಲಿಲ್ಲ. ನೆನಪಿಗೂ ಹಾಗೂ ಕನಸಿಗೆ ನೇರವಾದ ಸಂಬಂಧವಿದೆ ಎಂದು ವಿಜ್ಞಾನಿಗಳ ಅಭಿಪ್ರಾಯ. ನಿದ್ದೆಯ ಆರ್‌ಇಎಂ (ರಾಪಿಡ್ ಐಮ್ಯೂಮೆಂಟ್ ) ಹಂತದಲ್ಲಿ ಸ್ಪಷ್ಟ ಕನಸುಗಳು ಬೀಳುತ್ತವೆ ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿಯೇ ತಮ್ಮ ಅನುಭವಕ್ಕೆ ಬಂದಿದ್ದು ನಿಜವೋ ಕನಸು ಎಂಬ ಗೊಂದಲ ಮೂಡುತ್ತದೆ. ಮನೋ ವೈದ್ಯರ ಪ್ರಕಾರ ಕನಸುಗಳ ಮೂಲಕವೂ ಮಾನಸಿಕ ಖಾಯಿಲೆಗಳ ಚಿಕಿತ್ಸೆಗಳನ್ನು ನೀಡಬಹುದು.
0 Followers
0 Following