ಭರವಸೆಯ ಬೆಳಕು

ನಿತ್ಯ ನುಡಿ



image

ನಾವು ಎಂತಹ ಸಂದಿಗ್ದ ಪರಿಸ್ಥಿತಿ ಬಂದರು ದೇಹ ಮನಸ್ಸು ಆತ್ಮ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಸಿದ್ದಗೊಳಿಸಿ,ಸಕಾರಾತ್ಮಕವಾಗಿ ಸ್ಪಂದಿಸುವುದನ್ನು ರೂಢಿಸಿಕೊಂಡು, ಹೃದಯದಲ್ಲಿ ಎಷ್ಟೇ ನೋವು, ಮನಸ್ಸಿನಲ್ಲಿ ಯಾವುದೇ  ತಳಮಳ, ಆತಂಕ, ನಿರಾಸೆ ಏನೇ ಇದ್ದರೂ ಮುಖದಲ್ಲಿ ನಗು ಇಟ್ಟುಕೊಂಡು, ನೋವಿನಲ್ಲೂ ನಲಿವುದನ್ನ ರೂಢಿಸಿಕೊಂಡರೆ ಜೀವನ ಅತ್ಯಂತ ಸಂತಸ, ಸುಖ ಶಾಂತಿ ನೆಮ್ಮದಿಯಿಂದ ಇರುತ್ತದೆ. 


ಸಕಾರಾತ್ಮಯೋಚನೆ ನಮ್ಮಲ್ಲಿ ವಿಶೇಷ ಶಕ್ತಿಯನ್ನು ತುಂಬುತ್ತದೆ ಹಾಗೂ ಜೀವನ ಸುಗಮವಾಗಿ ಸಾಗುತ್ತದೆ ಸಕಾರಾತ್ಮಕ ವ್ಯಕ್ತಿಗಳ ಸಹಯೋಗದಿಂದ ಅದ್ಭುತಗಳೇ ನಡೆಯುತ್ತವೆ.


ನಕಾರಾತ್ಮಕ ಶಕ್ತಿಗಳಿಗಿಂತ ನಕಾರಾತ್ಮ ವ್ಯಕ್ತಿಗಳು ತುಂಬಾನೇ ಅಪಾಯಕಾರಿ , ಅಂತಹ ವ್ಯಕ್ತಿಗಳು ಯಾರೇ ಆದರೂ ಅವರಿಂದ ದೂರವಿರುವುದು ಸೂಕ್ತ,

ಕೆಲವು ವ್ಯಕ್ತಿಗಳು ಸದಾ ನಕಾರಾತ್ಮಕವನ್ನೇ ಯೋಚನೆ ಮಾಡುತ್ತಾರೆ ಹಾಗೂ ಇತರರಿಗೂ ಇದನ್ನೇ ಭೋದಿಸುತ್ತಾರೆ, 

ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಇದು ನಿನ್ನಂದ ಸಾಧ್ಯವಾಗದು, ನಿನಗೆ ಇದು ಸರಿ ಕಾಣುವುದಿಲ್ಲ, ಇದರಿಂದ ನಿನಗೆ ಯಾವುದೇ ಪ್ರಯೋಜನವಿಲ್ಲ, ನೀನು ತುಂಬಾನೇ ನಷ್ಟವನ್ನ ಮಾಡಿಕೊಳ್ಳುತೀಯ, ಭವಿಷ್ಯದಲ್ಲಿ ಇದರಿಂದ ನಿನಗೆ ತೊಂದರೆನೇ ಜಾಸ್ತಿ ಇದನ್ನು ಮುಂದುವರಿಸಬೇಡ ಇಲ್ಲಿಗೆ ಬಿಟ್ಟುಬಿಡು ಹೀಗೆ ಇಂತಹ ವ್ಯಕ್ತಿಗಳು ಸದಾ ಅಪಶಕುನವನ್ನು ನುಡಿಯುತ್ತಾ ಅವರು ಮಾಡದೆ ಮಾಡುವರನ್ನು ಮಾಡಲು ಬಿಡುವುದಿಲ್ಲ ಹಾಗಾಗಿ ಇಂತಹ ವ್ಯಕ್ತಿಗಳಿಂದ ದೂರ ನಿಲ್ಲಿವುದು ಹಾಗೂ ಅಂತವರನ್ನು ಉದಾಸೀನ ಮಾಡುವುದು ಉತ್ತಮ, 

ನಕಾರಾತ್ಮ ವ್ಯಕ್ತಿಗಳು ಜೀವನದಲ್ಲಿ ಎಂದಿಗೂ ಉದ್ಧಾರ ಆಗುವುದಿಲ್ಲ ಬದಲಾಗಿ ಅವರು ತಮಗೆ ತಾವೇ ಅತಿ ಬುದ್ದಿವಂತರು , ನಮಗೆ ಎಲ್ಲಾ ತಿಳಿದಿದೆ, ಜನರಿಗೆ  ನಮ್ಮಿಂದ ಅನುಕೂಲವಾಗಿತ್ತದೆ   ಎನ್ನುವ ಭ್ರಮೆಯಲ್ಲಿರುತ್ತಾರೆ, ಆದರೆ ವಾಸ್ತವಾಗಿ ಅವರಂತಹ ಹಿತ ಶತ್ರುಗಳೂ ಬೇರೆ ಯಾರು ಇಲ್ಲ,

 

ಸಮಾಜದಲ್ಲಿ ಕೆಲವು ವ್ಯಕ್ತಿಗಳು ವಿಶೇಷವಾಗಿ ಜನರಿಗೆ ತುಂಬಾ ಹತ್ತಿರವಾಗುತ್ತಾರೆ ಅವರೇ ಸಕಾರಾತ್ಮಕ ವ್ಯಕ್ತಿಗಳು, ಇವರು ಪ್ರತೀ ಕೆಲಸಕ್ಕೂ ಸಕಾರಾತ್ಮವಾಗಿ ಸ್ಪಂದಿಸುತ್ತಾರೆ ಹಾಗೂ ಪ್ರೇಪಿಸುತ್ತಾರೆ, ಆಗದೆ ಇರುವ ಕೆಲಸ ಕಾರ್ಯವನ್ನು ಆಗುವಂತೆ ಮಾಡುತ್ತಾರೆ, ನಿನ್ನಿಂದ ಎಲ್ಲವೂ ಸಾಧ್ಯ, ಈ ಕೆಲಸದಿಂದ ನಿನಗೆ ಭವಿಷ್ಯದಲ್ಲಿ ತುಂಬಾ ಪ್ರಯೋಜನವಿದೆ ನೀನು ಇದನ್ನು ನಿಲ್ಲಿಸಬೇಡ ಮುಂದುವರೆಸು ಅಂತ ಹುರುದುಂಬಿಸುತ್ತಾರೆ ಹಾಗೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಾನು ಬೇಕಾದರೆ ನಿನಗೆ ಈ ಕಲಸದಲ್ಲಿ ಸಹಾಯ ಮಾಡುತ್ತೇನೆ ಅಂತ ಸಹಾಯ ಹಸ್ತವನ್ನು ನೀಡುತ್ತಾರೆ ಹಾಗೂ ಅಭಯವನ್ನು ನೀಡುತ್ತಾರೆ, ಇಂತಹವರಿಂದ ಎಂತಹ ಅಸಹಾಯಕ ವ್ಯಕ್ತಿಯು ಆಸಾಧ್ಯವಾದ ಕೆಲಸವನ್ನು ಮಾಡಿ ಸಾಧನೆ ಮಾಡುತ್ತಾನೆ, ಅದಕೆ ನಾವುಗಳು ಸದಾ ಸಕಾರಾತ್ಮಕ ವ್ಯಕ್ತಿಗಳ ಸಹವಾಸ ಮಾಡಬೇಕು, ಅದಕ್ಕೆ ನಮ್ಮ ಹಿರಿಯರು ಬಹಳ ಚೆನ್ನಾಗಿ ತಮ್ಮ ಅನುಭವದಲ್ಲಿ ಹೇಳಿದ್ದಾರೆ " ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ, ದುರ್ಜನರ ಸಹವಾಸ ಹೆಜ್ಜೆನೇ ಕಾಡಿದಂತೆ' ಅಂತ 

ರಾಮಾಯಣದ ಒಂದು ಪ್ರಸಂಗದಲ್ಲಿ ಶ್ರೀ ಆಂಜನೇಯನ ಶಕ್ತಿ ಸಾಮರ್ಥ್ಯಗಳನ್ನು ಜ್ನಾಪಿಸಲು ಪ್ರಭು ಶ್ರೀ ರಾಮಚಂದ್ರ ಮಾಡಿದ್ದು ಇದೆ ಸಕಾರಾತ್ಮಕ ಭೋಧನೆ, ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಹನುಮಾನ್ ಗೆ ತನ್ನ ಶಕ್ತಿ ಸಾಮರ್ಥ್ಯಗಳ ಅರಿವಿರಲಿಲ್ಲ, ತಾನು ಸಪ್ತ ಸಮುದ್ರಗಳನ್ನು ಧಾಟಬಲ್ಲೆ ಎನ್ನುವ ಭರವಸೆ ಇರಲಿಲ್ಲ, ಪ್ರಭು ಶ್ರೀಮಚಂದ್ರ ಅವನಿಗೆ ನಿನ್ನಿಂದ ಎಲ್ಲವೂ ಸಾಧ್ಯ, ನಿನ್ನ ಬಿಟ್ಟರೆ ಬೇರೆ ಯಾರಿಂದಲೂ ಇದು ಸಾಧ್ಯವಾಗದು, ಸಪ್ತ ಸಮುದ್ರಗಳನ್ನು ದಾಟುವುದು ನಿನಗೆ ಅತೀ ಸಾಮಾನ್ಯದ ಕೆಲಸ, ಎದ್ದು ಕಾರ್ಯೋನ್ಮುಖನಾಗು ಅಂತ ಹುರುದುಂಬಿಸಿದಾಗ ಹನುಮಾನ್ ಗೆ ತನ್ನ ಶಕ್ತಿಯ ಅರಿವಾಯಿತು, ಸಪ್ತ ಸಮುದ್ರಗಳನ್ನು ದಾಟಿ ಸೀತಾ ಮಾತೆಯನ್ನು ಪತ್ತೆ ಹಚ್ಚಿದ, 

ಸ್ನೇಹಿತರೇ, ಮನುಷ್ಯನಿಂದ ಸಾಧ್ಯವಾಗದ ಯಾವುದೇ ಕೆಲಸವಿಲ್ಲ, ಆದರೆ ಪ್ರಯತ್ನಪಡಬೇಕು ಹಾಗೂ  ನಕಾರಾತ್ಮಕ ವ್ಯಕ್ತಿಗಳಿಂದ ದೂರವಿರಬೇಕು, ಅಣ್ಣಾವ್ರು ತಮ್ಮ ಬಂಗಾರದ ಮನುಷ್ಯ ಚಿತ್ರದಲ್ಲಿ ಹಾಡಿನ ಮೂಲಕ ಎಷ್ಟೋ ಜನರ ಪಾಲಿಗೆ ದೇವರೆನಿಸಿಕೊಂಡರು 

“ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ

ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು

ಕೆತ್ತಲಾಗದು ಕಗ್ಗಲ್ಲೆಂದು ಎದೆಗುಂದಿದ್ದರೆ ಶಿಲ್ಪಿ ಆಗುತಿತ್ತೆ ಕಲೆಗಳ ಬೀಡು

ಗೊಮ್ಮಟೇಶನ ನೆಲೆನಾಡು ಬೇಲೂರು ಹಳೆಬೀಡು ಬೇಲೂರು ಹಳೆಬೀಡು

ಆಗದು ಎಂದುದು ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ

ಸಾಗದು ಕೆಲಸವು ಮುಂದೆ ಸಾಗದು ಕೆಲಸವು ಮುಂದೆ

ಕಾವೇರಿಯನು ಹರಿಯಲು ಬಿಟ್ಟು

ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ

ಕನ್ನಂಬಾಡಿಯ ಕಟ್ಟದಿದ್ದರೆ

ಬಂಗಾರ ಬೆಳೆವ ಹೊನ್ನಾಡು ಅಹಾ ಬಂಗಾರ ಬೆಳೆವ ಹೊನ್ನಾಡು

ಆಗುತಿತ್ತೆ ಈ ನಾಡು ಕನ್ನಡ ಸಿರಿನಾಡು ನಮ್ಮ ಕನ್ನಡ ಸಿರಿನಾಡು

ಆಗದು ಎಂದು ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ

ಸಾಗದು ಕೆಲಸವು ಮುಂದೆ ಸಾಗದು ಕೆಲಸವು ಮುಂದೆ

ಕೈಕೆಸರಾದರೆ ಬಾಯಿ ಮೊಸರೆಂಬ ಹಿರಿಯರ ಅನುಭವ ಸತ್ಯ

ಇದ ನೆನಪಿಡಬೇಕು ನಿತ್ಯ

ದುಡಿಮೆಯ ನಂಬಿ ಬದುಕು

ಅದರಲೆ ದೇವರ ಹುಡುಕು

ಬಾಳಲಿ ಬರುವುದು ಬೆಳಕು

ನಮ್ಮ ಬಾಳಲಿ ಬರುವುದು ಬೆಳಕು

ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ

ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು

ಎಂತಹ ಅದ್ಬುತ ಸಂದೇಹವನ್ನು ನೀಡಿ ಜನರ ಮನಸಿನಲ್ಲಿ ಕೆಚ್ಚೆದೆಯ ಧೈರ್ಯ ತುಂಬಿ ತಮ್ಮ ಜೀವನದಲ್ಲಿ ಮುಂದೆ ಬರಲು ಸ್ಪೂರ್ತಿಯಾದರೂ,

                                                                    ಕಾ.ವೆಂ.ಶ್ರೀನಿವಾಸ ಮೂರ್ತಿ

✍️
Category:Spirituality



ProfileImg

Written by ಕಾ.ವೆಂ.ಶ್ರೀನಿವಾಸ ಮೂರ್ತಿ