Do you have a passion for writing?Join Ayra as a Writertoday and start earning.

ಕಾಡುವ ಅಗೋಚರ ಭಾಗ - 7

ಅಗೋಚರ

ProfileImg
17 Jan '24
4 min read


image

ಅಗೋಚರ

ಭಾನು ಆ ಕ್ಯಾಮರಾ ಎತ್ತಿಕೊಂಡು ಅದನ್ನ ಓಪನ್ ಮಾಡಿ ನೋಡಿದಳು, ಅದರಲ್ಲಿ ಆ ಡ್ರೈವರ್ ಏನೇನು ಮಾಡಿದ ಎಲ್ಲಾ ಅದರಲ್ಲಿ ರೆಕಾರ್ಡ್ ಆಗಿತ್ತು, ಆದ್ರೆ ಅವ್ನ ಸಾಯಿಸೋ ರೀತಿ ತಿಳಿತಿತ್ತು ಆದ್ರೆ ಯಾರು ಮಾಡಿದ್ದೂ ಅಂತ ತೊರ್ಥ ಇರ್ಲಿಲ್ಲ. ಇದನ್ನ ನೋಡಿ ಭಯದಲ್ಲಿ ಕುಳಿತಾಗ ಹೊರಗಿಂದ ಮನೆ ಬಾಗಿಲು ಯಾರೋ ತಟ್ಟಿದ್ದರು, ಹೆದರುತ್ತಾ ಹೋಗಿ ಬಾಗಿಲು ತೆಗೆದಾಗ ಅತ್ತೆ, ಮಾವ ಅವರನ್ನ ನೋಡಿ ಅಳು ತಡೆಯಲು ಆಗದೆ ಅತ್ತಳು. ಮಾವ, ಅತ್ತೆಗೆ ಏನಂದು ತಿಳಿಯದೆ ಸಮಾಧಾನ ಮಾಡಿದರು. ಆಮೇಲೆ ಏನಾಯಿತು ಕೇಳಿದಾಗ ನೆಡೆದ ಸಂಗತಿ ಜೊತೆಗೆ ಕ್ಯಾಮರಾ ತೋರಿಸಿದಳು. ಅದನ್ನ ನೋಡಿ ಅವ್ರು ಭಯಭಿತರಾದರು,ಆಮೇಲೆ ಆಗಿದ್ದು ಆಗಿ ಹೋಯಿತು, ಅದಕ್ಕೆ ಚಿಂತೆ ಮಾಡ್ಬೇಡ ನಿನ್ನ ಮಗುಗೆ ತೊಂದ್ರೆ ಆಗುತ್ತೆ ಅಂತ ಹೇಳಿ ರೆಸ್ಟ್ ಮಾಡಲು ಹೇಳಿದರು. ಭಾನುಗೆ ಅತ್ತೆ ಮಾವ ಬಂದದ್ದು ಒಂದು ರೀತಿಲಿ ಖುಷಿ ಆಯಿತು. ಆದ್ರೆ ಗಂಡನಿಗೆ ಇದರ ಬಗ್ಗೆ ಹೇಳಿದ್ರೆ ಅವ್ರು ಟೆಂಷನ್ ಮಾಡ್ತಾರೆ ಅಂತ ವಿಷ್ಯ ಹೇಳಲೇ ಇಲ್ಲ, ಅದೇ ಯೋಚನೆ ಅಲ್ಲಿ ಅವಳು ಭಾನು ಹೆದರಿ ಜ್ವರ ಬಂದಿತ್ತು. ಮತ್ತೆ ಅಶೋಕ್ ಕೂಡ ಬಂದ ಮನೆಗೆ ಅಮ್ಮ, ಊಟ ಬಡಿಸಿ ,ಮಗನ ಕೈಲಿ ಹಾಲು ಕೊಟ್ಟು ಹೆಂಡತಿಗೆ ಕೊಡು, ಅವಳಿಗೆ ಜ್ವರ ಬಂದಿತ್ತು, ರಾತ್ರಿ ಜ್ವರ ಬಂದ್ರೆ ಅಲ್ಲೇ ಡ್ರಾಯಾರ್ ಅಲ್ಲಿ ಮಾತ್ರೆ ಇದೆ, ಕೊಡು, ಬೆಳ್ಗೆ ಹಾಸ್ಪಿಟಲ್ ಕರೆದುಕೊಂಡು ಹೋಗು ಅಂತ ಹೇಳಿ ಅವಳು ಹೋದಳು.
   ಅಶೋಕ್ ಹಾಲು ತಂದು, ಹೆಂಡ್ತಿ ಕೊಟ್ಟು ಜ್ವರ ಇದೆಯಾ ಅಂತ ನೋಡಿದ ಆದ್ರೆ ಅದಾಗಲೇ ನಾರ್ಮಲ್ ಆಗಿದ್ಲು, ಮತ್ತೇನು ಹೇಳದೆ ಅವಳಿಗೆ ರಗ್ಗುನ್ನು ಹಾಕಿ ಮಲಗಿಸಿ, ತಾನು ಮಲಗಿದ....

ಭಾನು ಬೆಳಿಗ್ಗೆನೇನಾರ್ಮಲ್ ಆಗಿ ಇದ್ಲು, ಅತ್ತೆ ಜೊತೆಗೆ ತಿಂಡಿ ಮಾಡೋಕೆ ಸಹಾಯ ಮಾಡ್ತಾ ಇದ್ಲು, ಅತ್ತೆಗೂ ಮಾವಂಗೂ ಸಮಾಧಾನ ಆಯಿತು ಅವ್ಳನ್ನ ನೋಡಿ... 
ಭಾನು ಇದ್ದ ಮನೆ ತುಂಬಾ ಚನ್ನಾಗಿತ್ತು, ಹಳೆಯ ಮನೆ ಅನ್ನೋದು ಬಿಟ್ರೆ ಎಲ್ಲಾ ಸವಲತ್ತು ಇತ್ತು, ಮೂರು ರೂಮ್,ಒಂದು ದೊಡ್ಡ ಹಾಲ್, ಒಂದು ಅಡುಗೆ ಕೋಣೆ, ಬಾಲ್ಕನಿ, ಹೀಗೆ ಎಲ್ಲಾ ಇತ್ತು. ಮನೆಗೆ ಬಂದು ಎರೆಡು ದಿನ ಆದ್ರೂ ಸಾಮಾನನ್ನು ಜೋಡಿಸಲು ಹೋಗಿರದ ಭಾನು, ಮದ್ಯಾನ ಎದ್ದವಳೇ, ಬಟ್ಟೆನ, ಪಾತ್ರೆನಾ ಜೋಡಿಸಿ ಇಟ್ಟು, ಮನೆ ಒಮ್ಮೆ ನೋಡಬೇಕು ಅಂತ ಹೇಳಿ, ಆಚೆ ಈಚೆ ನೋಡುತ್ತಾ, ಮೆಲ್ಲಗೆ ಹೋದಳು, ಒಂದು ಕೋಣೆಲಿ ಅವಳು ಇದ್ಲು, ಮತ್ತೊಂದು ಕೋಣೇಲಿ, ಅತ್ತೆ, ಮಾವ ಇದ್ರು, ಇನ್ನೊಂದು ಕೋಣೆನಾ ನೋಡಲು ಆ ಕಡೆ ಹೋದಳು, ಹೋಗಿ ಮೆಲ್ಲಗೆ ಬಾಗಿಲು ತೆಗೆದು ಒಳಗೆ ಹೋದಳು, ಯಾರು ಇಲ್ಲದ ಕಾರಣ ಕೋಣೆ ದುಳಿಂದ ತುಂಬಿತ್ತು, ಆದ್ರೂ ಅಲ್ಲೇ ಇದ್ದ ಹಳೆಯ ಫೋಟೋ, ಸಮಾನ್ ಎಲ್ಲಾ ನೋಡುತ್ತಾ ನಿಂತಳು. ಪಕ್ಕದಲ್ಲಿ ಏನೋ ಒಂದು ಸಣ್ಣ ಆಟದ ಸಮಾನ್ ಬಿದಿತ್ತು, ಅದನ್ನ ಎತ್ತಿಕೊಂಡು ನೋಡುತ್ತಾ, ಇದು ಯಾವ್ದೋ ಮಗುನ ಆಟ ಸಮಾನ್ ಇರ್ಬೇಕು, ಪಾಪ ಇಲ್ಲೇ ಬಿಟ್ಟು ಹೋಗಿದೆ. ಎಷ್ಟು ಚನ್ನಾಗಿದೆ, ನನ್ನ ಮಗುಗು ಆಗ್ಬಹುದು ಅಂತ ಹೊಟ್ಟೆ ಮುಟ್ಟಿಕೊಂಡು ಮೆಲ್ಲಗೆ ನಕ್ಕಳು, ಮತ್ತೆ ಅದನ್ನ ಪಕ್ಕದಲ್ಲಿ ಇಟ್ಟು, ಗೋಡೆಯಲ್ಲಿ ಹಾಕಿದ ಫೋಟೋ ನೋಡಿದಳು, ಅದರಲ್ಲಿ ಪುಟ್ಟದೊಂದು ಮಗು, ತನ್ನ ತಂದೆ ತಾಯಿ ಜೊತೆಗೆ ಇದ್ದ ಫೋಟೋ, ಅದನ್ನ ನೋಡಿ, ಎಷ್ಟು ಚನ್ನಾಗಿ ಇದೆ, ಈ ಮಗು ಅಂತ ಅದನ್ನ ಅಲ್ಲಿಂದ ತಂದು ತನ್ನ ಕೋಣೇಲಿ ಇಟ್ಟಳು.ಆ ಕೋಣೆಗೆ ಕಾಲು ಇಟ್ಟ ಮೇಲೆ ಏನೇನೊ ಶಬ್ದ ಬರೋ ಹಾಗೆ, ಹಿಂದೆ ಬಂದ ಹಾಗೆ ಆಗ್ತಿತ್ತು. ಆದ್ರೂ ಅದಕ್ಕೆ ನನ್ನ ಭ್ರಮೆ ಅಂತಾನೆ ತಿಳಿದುಕೊಂಡಿದ್ಲು...
        ಆ ದಿನ ಅಶೋಕ್ ಗೆ ರಜ ಇದ್ದ ಕಾರಣ, ಎಲ್ರು ಸೇರಿ ಲೂಡೊ ಆಟ ಆಡ್ತ ಇದ್ರು ಆ ದಿನ....
ಹೊರಗೆ ಒಂದೇ ಸಮನೆ, ಮಳೆ ಬರ್ತಾ ಇತ್ತು, ಅಶೋಕ್ ತಂದೆ ಸೋಮಶೇಖರ್ ವಾಕಿಂಗ್ ಮಾಡಿಕೊಂಡು ಬಂದವನನ್ನ ನೋಡಿ ಗಂಡನ ಪಕ್ಕದಲ್ಲಿ ಆಡುತಿದ್ದ ಭಾನು, ಮಾವಯ್ಯ ಈಗ ಬಂದ್ರ ಕಾಫಿ ಮಾಡ್ತೀನಿ, ಅಂತ ಅಲ್ಲಿಂದ ಅಡುಗೆ ಮನೆಗೆ ಹೋಗಿ ಕಾಫಿ ಮಾಡಲು ಹೋದಳು.
    ಸೋಮಶೇಖರ್ ಮುಖ ತೊಳೆದು ಬರಲು ಬಾತ್ರೂಮ್ಗೆ ಹೋಗಿ ಮುಖಕ್ಕೆ ನೀರು ಹಾಕಿಕೊಂಡು ಕನ್ನಡಿ ನೋಡಿ ಅಲ್ಲಿಂದ ಹೋಗಲು ಒಂದು ಹೆಜ್ಜೆ ಇಟ್ಟ ಆದ್ರೆ ಕನ್ನಡಿ ಅಲ್ಲಿ ಅವನ ಬಿಂಬ ಅಲ್ಲೇ ನಿಂತಿತ್ತು, ಒಮ್ಮೆ ಅಲ್ಲೇ ತಟಸ್ಥವಾಗಿ  ನಿಂತು, ಕನ್ನಡಿನ ಮುಟ್ಟಲು ಹೋದ ಆಗ ಬಿಂಬ ಮರೆ ಆಯಿತು. ನೀರಲ್ಲಿ ಒದ್ದೆ ಅದಾ ಮುಖದಲ್ಲಿ ಬೆವರು ತುಂಬಿತ್ತು. ಮೆಲ್ಲಗೆ ಅಲ್ಲಿಂದ ಹೊರಗೆ ಬಂದ, ಮತ್ತೆ ಹಾಲ್ ಅಲ್ಲಿ ಬಂದು ಕುಳಿತ, ಗಾಬರಿ ಮುಖದಲ್ಲಿ ಎದ್ದು ಕಾಣ್ತಿತ್ತು, ಹಿಂದಿನಿಂದ ಬಂದ ಭಾನು  ಮಾವ ಅಂತ ಕರೆದಾಗ ಹಾ ಭಾನು, ಕಾಫಿ ತಂದ್ಯಾ ಕೊಡು ಅಂತ ಬಿಸಿ ಕಾಫೀ ಅಂತ ಗೊತ್ತಿದ್ದರು ಭಯದಲ್ಲಿ ಒಮ್ಮೆಲೆ ಕುಡಿಯಲು ಹೋಗಿ ಬಾಯಿ ಸುಟ್ಟುಕೊಂಡ , ಅದನ್ನ ನೋಡಿ ಅವನ ಹೆಂಡತಿ ಲಕ್ಷ್ಮಿ, ವಾಕಿಂಗ್ ಹೋಗಿ ಬಂದವರಿಗೆ ತಲೆ ತಿರಗ್ತಾ ಇದ್ಯಾ, ಬಿಸಿ ಕಾಫೀ ಅದನ್ನ ನೀರ್ ತರ ಕುಡಿತಿರಲ್ಲ, ಅಂದಾಗ ಏನು ಹೇಳದೆ ಅಲ್ಲಿಂದ ಎದ್ದು ಹೋದ, ಆಗ ಅಶೋಕ್, ಅಮ್ಮ, ಅಪ್ಪ ಯಾಕೆ ಮೌನ ಆಗಿದಾರೆ, ಹೋಗಿ ಏನಂತ ವಿಚಾರಿಸಿ ಅಂತ ಕಳಿಸಿಕೊಟ್ಟ.

      ಸೋಮಶೇಖರ್ ಕೋಣೇಲಿ ಕುಳಿತು ಆ ಕನ್ನಡಿ ಮುಂದೆ ನಿಂತ ವ್ಯಕ್ತಿ ಯಾರು, ಅದು ನಾನೆ ಆದ್ರೆ, ನಮ್ಮ ಬಿಂಬ, ನಾವು ಮಾಡಿದ ಹಾಗೆ ಮಾಡಬೇಕು, ಆದ್ರೆ ಅಲ್ಲಿ ನೋಡಿದ ದೃಶ್ಯ ಭಯಾನಕ ಆಗಿತ್ತು.
  ರೀ, ಎಲ್ಲಿದಿರಾ? ಓಹ್.. ಇಲ್ಲೇ ಇದ್ದೀರಾ, ಏನಾಗಿದೆ ನಿಮಗೆ ತುಂಬಾ ಮೌನವಾಗಿ ಇದ್ದೀರಾ, ಹುಷಾರು ಇದ್ದೀರಾಲ್ವಾ, ಅಂತ ಮೈ ಮುಟ್ಟಿ ಕೇಳಿದಾಗ
     ಹಾ ಲಕ್ಷ್ಮಿ, ನನ್ ಚನ್ನಾಗಿ ಇದ್ದೀನಿ, ವಾಕಿಂಗ್ ಹೋಗಿ ಬಂದು ಸಾಕಾಯಿತು, ಅದಕ್ಕೆ ಒಂಚೂರ್ ರೆಸ್ಟ್ ಮಾಡೋಣ ಅಂತ ಅಷ್ಟೇ, ಅಂತ ಅಲ್ಲೇ ವರೆಗಿ ಮಲಗಿದ. ಲಕ್ಷ್ಮಿ ಸರಿ ಅಂತ ಹೊರಗೆ ಬಂದಳು.
       ಗಟ್ಟಿಯಾಗಿ ಮಲಗಿದ ಸೋಮಶೇಖರ್, ಒಮ್ಮೆಲೇ, ಎಚ್ಚರವಾಗಿ ಟೈಮ್ ನೋಡಿದಾಗ ಸಂಜೆ ಆಗಿತ್ತು, ಮನೆ ನಿಶಬ್ದ ಮೌನ, ಭಾನು, ಅಶೋಕ್, ಲಕ್ಷ್ಮಿ ಅಂತ ಕರೆದ ಆದ್ರೆ ಯಾರು ಇರಲಿಲ್ಲ, ಎಲ್ಲಾ ಕಡೆ ಹುಡುಕಿದರೂ ಯಾರು ಇಲ್ಲ, ಇನ್ನೇನು ಮನೆ ಹೊರಗಡೆ ಇರ್ಬೇಕು ಅಂತ ಹೊರಗೆ ಬಂದು ಕರೀತಾ ಇರುವಾಗ ಹಿಂದಿನಿಂದ ಅವನ ಹೆಗಲ ಮೇಲೆ ಕೈ ಇಟ್ಟಾಗ ಭಯದಲ್ಲಿ ಹೆದರಿ ಕೂಗಬೇಕು , ಅಷ್ಟರಲ್ಲಿ ಎಲ್ಲಾ ಒಟ್ಟಾಗಿ ಹ್ಯಾಪಿ ಬರ್ತ್ಡೇ ಅಂತ ಕಿರುಚಿದರು, ಮತ್ತೆ ಸೋಮಶೇಖರ್, ಅಬ್ಬಾ ಅನ್ನೋ ಹಾಗೆ ಎಲ್ಲರನ್ನು ನೋಡಿ ಥ್ಯಾಂಕ್ ಯು ಅಂದು ಮುಗಳು ನಗೆ ಬೀರಿದರು....
 

ಮುಂದುವರೆಯುವುದು……

Category : Stories


ProfileImg

Written by Sahana gadagkar