ಅಗೋಚರ
ರಾತ್ರಿ ಜೋರಾಗಿ ಗಾಳಿ, ಮಳೆ,ಭಾನು ಚಳಿ ಅಲ್ಲಿ ನಡಗ್ತಾ ಇದ್ಲು,ಆಫೀಸ್ಗೆ ಹೋದ ಗಂಡ ಬರೋದು ಕೂಡ ಲೇಟ್ ಆಗಿತ್ತು, ಅತ್ತೆ ಮಾವ, ಬೇರೆ ಕೋಣೇಲಿ ಮಲಗಿದ್ದರು. ಭಾನು ಮಾತ್ರೆ ಕುಡಿದು, ಕಣ್ಣು ಮುಚ್ಚಿ ತನ್ನ ಹಳೆಯ ದಿನನ ಮೆಲಕು ಹಾಕಿದಳು.ಅಶೋಕ್,ಒಂದು ದೊಡ್ಡ ಮನೆತನದ ಹುಡುಗ, ಭಾನುಮತಿ ತಂದೆ ತಾಯಿ ಯಾರೆಂದು ಕೂಡ ತಿಳಿದವಳು ಅಲ್ಲ. ಹುಟ್ಟಿದಗಳಿಂದ ಅನಾಥಶ್ರಮದಲ್ಲೆ ಬೆಳೆದು ದೊಡ್ಡವಳು ಆದಳು. ಅಲ್ಲಿ ಅಶೋಕ್ ಆಗಾಗ ಕೆಲಸದ ಸಲುವಾಗಿ ಬಂದು ಹೋಗುತ್ತಿದ್ದ, ಹೀಗೆ ಅಶೋಕ್ ಮತ್ತೆ ಭಾನುಮತಿ ಇಷ್ಟ ಪಡಲು ಶುರು ಮಾಡಿದರು. ಮನೆಯಲ್ಲಿ ಮೊದಲು ಮದ್ವೆಗೆ ಒಪ್ಪದ ತಂದೆ ಮಗನ ಮಾತಿಗೆ ಮಣಿದು ಮದ್ವೆ ಮಾಡಿಸಿದ್ರು.., ಅತ್ತೆ, ಮಾವನ್ನ ತಂದೆ ತಾಯಿ, ತರ ಪ್ರೀತಿ ಮಾಡ್ತಾ ಇದ್ಲು, ಅವರು ಕೂಡ ಭಾನುನಾ ಮಗಳ ತರಾನೇ ನೋಡತಾ ಇದ್ದರು . ಮದ್ವೆ ಅದಾ 2ತಿಂಗಳಿಗೆ ಭಾನು ಗರ್ಭಿಣಿ ಅನ್ನೋ ಖುಷಿ ಅಲ್ಲಿ ಅತ್ತೆ ಮಾವ ಊರೆಲ್ಲ ಸಿಹಿ ಕೊಟ್ಟು ಸಂಭ್ರಮ ಪಟ್ಟಿದ್ದರು.. ಹೀಗೆ ಆ ಮಗು ಬರೋ ಘಳಿಗೆನೇ ಕಾಯ್ತ ಇದ್ರು ಹೀಗೆ ಇರೋವಾಗ , ಅಶೋಕ್ಗೆ ಬೇರೆ ಊರಿಗೆ ಟ್ರಾನ್ಸ್ಫರ್ ಆಯಿತು.ಹಾಗಾಗಿ ಊರನ್ನ ಬಿಟ್ಟು, ಈ ಮಂಗಳೂರಗೆ ಹೋಗಬೇಕಾಗಿ ಬಂತು,
ಆಫಿಸ್ ಇಂದ ಬಂದವನೇ,ಅಪ್ಪ, ಅಮ್ಮ,ಭಾನು ಎಲ್ಲಿದಿರಾ? ಅಂತ ಕೂಗೋದನ್ನ ನೋಡಿ ಅಡುಗೆ ಮನೇಲಿ ಇದ್ದ ಅಮ್ಮ, ಸಾಂಬಾರ್ ಮಾಡುತಿದ್ದ ಸೌಟನ್ನೇ ಹಿಡಿದುಕೊಂಡು ಓಡಿ ಬಂದರು. ತಂದೆ, ಭಾನು ಎಲ್ರು ಗಾಬರಿ ಅಲ್ಲೇ ಅವನ ಎದುರು ಬಂದು, ಏನಾಯಿತು ಅನ್ನೋ ಕಾತುರ ಮುಖದಲ್ಲಿ ಮನೆ ಮಾಡಿತ್ತು. ಆಗ ಅಶೋಕ್, ಏನಮ್ಮ ಸೌಟನ್ನ ಹಿಡಿದುಕೊಂಡು ಬಂದ್ಬಿಟ್ಟಿದಿಯಾ ಅಲಾ ಅಂತ ನಕ್ಕನು, ಆಗ ತಾಯಿ ಅಲ್ಲ, ಸಡನ್ ಆಗಿ ಬಂದವನೇ ಎಲ್ರನು ಕೂಗ್ತಾ ಇದ್ದಿ ಅಲಾ, ಗಾಬರಿ ಅಲ್ಲಿ ಓಡಿಬಂದ್ರೆ, ನೀನು ತಮಾಷೆ ಮಾಡ್ತ್ಯ. ಮೊದ್ಲು ವಿಷ್ಯ ಹೇಳು,ಏನಾಯಿತು ಅಶೋಕ್ ಅಂದಾಗ ಅಮ್ಮನ್ನ ಅಲ್ಲೇ ಸೋಫಾ ದಲ್ಲಿ ಕೂರಿಸಿಕೊಂಡು, ಕೂಲ್ ಆಗಿರಿ ಅಮ್ಮ , ಅಪ್ಪ, ಭಾನು ಕುತ್ಕೋಳಿ ಹೇಳ್ತಿನಿ. ಅಂತ ಪಕ್ಕದಲ್ಲಿ ಇಟ್ಟ ಸ್ವೀಟ್ ಬಾಕ್ಸ್ ತೆಗೆದು ಮೊದ್ಲು ಇದ್ನ ತಿನ್ನಿ, ಆಮೇಲೆ ಎಲ್ಲಾ ಹೇಳ್ತಿನಿ ಅಂತ ಎಲ್ರಗೂ ತಿನ್ನಿಸಿದ..
ಅಮ್ಮ, ನಂಗೆ ಪ್ರಮೋಷನ್ ಸಿಕ್ತು , ಸಂಬಳ ದುಪ್ಪಟ್ಟು ಸಿಗುತ್ತೆ, ಆದ್ರೆ ನನ್ನ ಬೇರೆ ಕಡೆ ಟ್ರಾನ್ಸ್ಫರ್ ಮಾಡಿದ್ರು, ಅದು ಮಂಗಳೂರು ಗೆ ಹೋಗಲೇಬೇಕು, ನಾಳೇನೇ ಹೊರಡ್ಬೇಕು, ಅಂದಾಗ ತಾಯಿ ಬಂದು ಅಲ್ಲ ಅಶೋಕ, ಅಷ್ಟ್ ದೂರ ನೀನು ಹೋಗ್ಲೇಬೇಕಾ, ಅಂದಾಗ ಭಾನು, ಮುಖ ನೋಡಿದ ಅವಳ ಕಣ್ಣಲ್ಲಿ ನೀರು ತುಂಬಿತ್ತು, ಅವಳ ಹತ್ತಿರ ಬಂದು ಅಯ್ಯೋ ಹುಚ್ಚಿ ಅಳ್ತಾ ಇದ್ಯಾ, ನಿನ್ನ ಕರೆದುಕೊಂಡು ಹೋಗ್ತೀನಿ, ಬಿಟ್ ಹೋಗಲ್ಲ, ನಾಳೆ ನಾವು ಹೋಗೋಣ ಸರಿನಾ, ಅಮ್ಮ, ಅಲ್ಲಿ ಎಲ್ಲಾ ರೆಡಿ ಆದ್ಮೇಲೆ ನೀವು ಅಲ್ಲಿಗೆ ಬಂದ್ ಬಿಡಿ, ಇಲ್ಲೂ ಬಾಡಿಗೆ, ಅಲ್ಲೂ ಬಾಡಿಗೆ ಸುಮ್ನೆ ಖರ್ಚು, ಅಲ್ಲಿ ಹೋಗಿ ಇರ್ತಿವಲ್ಲ, ಆ ಮನೇನ ಸೆಲ್ ಮಾಡ್ತಾರಂತೆ, ಅದ್ನ ತಗೋಳೋಕೆ ಮಾತಾಡಿ ಇಟ್ಟಿದೀನಿ. ಇನ್ನಾದ್ರೂ ನಾವು ಸ್ವಂತ ಮನೇಲಿ ಇರೋಣ,ನೀವು ಇಲ್ಲಿ ಎಲ್ಲಾ ಕ್ಲಿಯರ್ ಮಾಡಿ ಅಲ್ಲಿಗೆ ಬಂದು ಬಿಡಿ ಅಂತ ಹೇಳಿದ.
ಬೆಳ್ಗೆ ಎದ್ದು, ಅತ್ತೆ ಮಾವಂಗೆ ಕಾಲಿಗೆ ಬಿದ್ದು,ಕಾರ್ ಅಲ್ಲಿ ಹೊರಟರು,ಅವರು ಮನೆ ಇಂದ ಕಾಲು ಹೋರಗಿಟ್ಟ ಕೂಡಲೇ, ಅವರ ಮದ್ವೆ ಫೋಟೋ ಕೆಳಗೆ ಬಿದ್ದು ಒಡೆದು ಹೋಯಿತು. ತಂದೆ ತಾಯಿ ಒಬ್ಬರ ಮುಖ ಒಬ್ಬರು ನೋಡಿಕೊಂಡರು.ಆದ್ರೆ ಅದಾಗಲೇ ಮಗ ಕಾರ್ ಹತ್ತಿ ಹೊರಟಾಗಿತ್ತು.ಕಾರ್ ಅಲ್ಲಿ ಹೋಗುವಾಗ, ಮದ್ಯ ಕಾರ್ ಹಾಳಾಗಿ ನಿಂತಿತ್ತು, ಕಾರ್ ಡ್ರೈವರ್ ಏನು ಮಾಡಿದ್ರು ಕಾರ್ ಸ್ಟಾರ್ಟ್ ಆಗಲೇ ಇಲ್ಲ, ಕತ್ತಲಾಗುತ್ತಾ ಬಂತು, ಅದು ದಟ್ಟವಾದ ಕಾಡು ಅದಾಗಿತ್ತು, ಇನ್ನೇನು ಮಾಡುವುದು ಅಂತ ಹತ್ತಿರದಲ್ಲಿ ಮನೆ ಇದ್ರೆ ಯಾರಾದ್ರೂ ಮೆಕ್ಯಾನಿಕ್ ಇದ್ದಾರಾ ಕೇಳಿ ಬರ್ತೀನಿ ಅಂತ ಡ್ರೈವರ್ ಹೋದ,
ಅಲ್ಲೊಂದು ಒಂಟಿ ಮನೆ ಇತ್ತು, ಹೊರಗಿಂದ ಲೈಟ್ ಉರೀತಿತ್ತು, ಆದ್ರೆ ಬಾಗಿಲು ಹಾಕಿಯೇ ಇತ್ತು, ಯಾರಾದ್ರೂ ಇದ್ದೀರಾ ಒಳಗೆ , ಸರ್, ಮೇಡಮ್ ಏನು ಶಬ್ದ ಇಲ್ಲ, ಏನು ಮನೆ ನೋಡಿದ್ರೆ ಚನ್ನಾಗೇ ಇದೆ ಆದ್ರೆ ಯಾರು ಇಲ್ಲ, ವಿಚಿತ್ರ ಅನ್ಸುತ್ತೆ, ಸರಿ ಇವತ್ತು ಹೋಗೋ ಹಾಗೆ ಕಾಣ್ತಿಲ್ಲ, ರಾತ್ರಿ ಇಲ್ಲೇ ಇದ್ದು ಬೆಳ್ಗೆ ಏನಾದ್ರು ಮಾಡಬಹುದು, ಅಂತ ಹೊರಟ ಆದ್ರೆ ಹೋಗುವಾಗ ಮನೆ ಬಾಗಿಲು ಓಪನ್ ಆಯಿತು, ಅರೆ ಶಬ್ದ ಆಯಿತು ಯಾರೋ ಬಂದ್ರು ಅನ್ಸುತ್ತೆ, ಅಂತ ಹಿಂತಿರುಗಿ ನೋಡಿದ, ಆದ್ರೆ ಯಾರು ಇಲ್ಲ, ಯಾರೋ ಆಟ ಅಡಿಸ್ತಾ ಇರ್ಬೇಕು ಅಂತ ಮನೆ ಸುತ್ತ ಕಿಟ್ಟಕಿ ಇದ್ದ ಕಡೆ ಎಲ್ಲಾ ಬ್ಯಾಟರಿ ಹಿಡಿದುಕೊಂಡು ನೋಡುತ್ತಾ ಬಂದ, ಹೋಗುವಾಗ ಏನೋ ಕಾಲಿಗೆ ಅಡ್ಡ ಸಿಕ್ಕಿ ಬಿದ್ದ,ಅದನ್ನ ಏನಂದು ನೋಡಲು ಹೋದ ಅದೊಂದು ತುಂಬಾ ಹಳೇದಾದ ಒಂದು ಕ್ಯಾಮರಾ ಆಗಿತ್ತು, ಅದನ್ನ ನೋಡಲು ಓಪನ್ ಮಾಡಿದ ಅದನ್ನ ನೋಡಿ ಭಯದಲ್ಲಿ ಹೆದರಿ ಅಲ್ಲಿಂದ ಓಡಲು ಮುಂದಾದ ಅಷ್ಟರಲ್ಲಿ ಅವನನ್ನ ಒಂದು ದೊಡ್ಡ ಬಿರುಗಾಳಿ ಆ ಮನೆ ಒಳಗೆ ಕರೆದುಕೊಂಡು ಹೋಯಿತು,
ಇಷ್ಟು ಹೊತ್ತಾದರೂ ಯಾಕೆ ಬರಲಿಲ್ಲ, ಈ ಅಸ್ಸಮಿ ಅಂತ ಅವನಿಗೆ ಕಾಲ್ ಮಾಡಿದ, ಆಗ ದೂರದಲ್ಲಿ ಡ್ರೈವರ್ ಬರುತ್ತಾ ಇದದ್ದು ಗಮನಿಸಿದ, ಆ ವ್ಯಕ್ತಿ ಬಂದವನೇ ಭಾನುನಾ, ಅಶೋಕನ ದಿಟ್ಟಿಸಿ ನೋಡಿದ, ಮತ್ತೆ ಅಶೋಕ್ ಹೋಗೋಣ ಲೇಟ್ ಆಗ್ತಿದೆ, ನೋಡು ಒಮ್ಮೆ ಗಾಡಿ ಸ್ಟಾರ್ಟ್ ಆದ್ರೂ ಆಗ್ಬಹುದು, ಅಂತ ಹೇಳಿದ ಮೇಲೆ ಗಾಡಿ ಒಮ್ಮೆಲೇ ಸ್ಟಾರ್ಟ್ ಆಯಿತು, ಮತ್ತೆ ಕಾರ್ ಒಂದು k. M ದೂರ ಹೋಗಿ ಅಲ್ಲಿ ಹೋಗಿ ನಿಂತಿತ್ತು, ಡ್ರೈವರ್ ಲಗೇಜ್ ಎಲ್ಲ ಕೊಟ್ಟು ಅಲ್ಲಿಂದ ಹೊರಟು ಬಿಟ್ಟ, ಈ ಮನೆಗೆ ಬಂದು ಇಬ್ಬರು ರೆಸ್ಟ್ ಮಾಡಿದ್ರು,, ಸುಸ್ತಿಗೇನೋ ಚನ್ನಾಗಿ ನಿದ್ರೆ ಬಂದು ಬಿಡ್ತು.
ಬೆಳ್ಗೆ ಎದ್ದಾಗ ಪೊಲೀಸ್ ಇಂದ ಕಾಲ್ ಬಂತು, ಇಲ್ಲಿ ನಿಮ್ಮ ಬಿಟ್ಟ ಡ್ರೈವರ್ ಕೊಲೆ ಆಗಿದೆ ಅಂತ, ಹೆಂಡ್ತಿನ ಕರೆದುಕೊಂಡು ಅಲ್ಲಿಗೆ ಹೋದನು , ರಾತ್ರಿ ಕೆಟ್ಟು ನಿಂತ ಸ್ಥಳದಿಂದ ಸ್ವಲ್ಪ ದೂರದಲ್ಲಿ ಹೆಣ ಇತ್ತು, ಅದನ್ನ ನೋಡಿ ಭಾನು ಕಣ್ಣು ಮುಚ್ಚಿ ಅಲ್ಲೇ ನಿಂತಳು. ಅಶೋಕ್ ಅವಳನ ಅಲ್ಲೇ ನಿಲ್ಲಿಸಿ ಪೊಲೀಸ್ ಹತ್ರ ಮಾತಾಡಲು ಹೊರಟರು, ಆಗ ಪೊಲೀಸ್ ಹೇಳಿದ ಮಾತು ಕೇಳಿ ಅವನಿಗೆ ಆಶ್ಚರ್ಯ ಆಯಿತು, ಏನೆಂದರೆ ಈ ಸಾವು ಆಗಿ ಸುಮಾರು 8ಗಂಟೆ ಆಗಿದೆ ಅಂತ, ಆಗ ಅಶೋಕ್ ಹೇಳ್ತಾನೆ ನಮ್ಮನ್ನ ಮನೆಗೆ ಬಿಟ್ಟು ಬಂದಿದಾನೆ 4ಗಂಟೆ ಆಗಿದೆ ಅಷ್ಟೇ, ಆದ್ರೆ ಪೊಲೀಸ್ ತನಿಖೆ ಪ್ರಕಾರ 8ಗಂಟೆ ಆಗಿದೆ ಅಂದಾಗ ಅವನು ಏನು ಹೇಳದೆ ಸ್ಟೇಟ್ಮೆಂಟ್ ಕೊಟ್ಟು ಬಂದ, ಭಾನು ನಿಂತ ಸ್ವಲ್ಪ ದೂರದಲ್ಲಿ ಒಂದು ಕ್ಯಾಮರಾ ಬಿದಿತ್ತು ಅದನ್ನ ಎತ್ತಿ ಆನ್ ಮಾಡುವಾಗ ಅಶೋಕ್ ಬರುವುದನ್ನ ನೋಡಿ ಸೀರೆ ಅಲ್ಲೇ ಇಟ್ಟುಕೊಂಡಳು, ಅಶೋಕ್ ಬಂದು ಭಾನು ಬಾ ಹೋಗೋಣ, ಭಾನು ಅವ್ನು ನಮ್ಮನ್ನ ಬಿಟ್ಟು ಹೋಗಿ ಒಂದು 4ಗಂಟೆ ಆಗಿದೆ ಅಷ್ಟೇ ಅಲ್ವಾ, ಅವ್ರ್ ಹೇಳೋದು 8ಗಂಟೆ ಆಗಿದೆ ಅಂತಾರೆ, ಆದ್ರೂ ಪಾಪ ಅವರ ಮನೆಯವರಿಗೆ ಹೇಗೆ ಆಗ್ಬೇಕು, ಛೆ ಅಂತ ಮಂಡೆ ಮೇಲೆ ಕೈ ಇಟ್ಟು ಕುಳಿತ,ಮನೆಗೆ ಬಂದವನೇ ಆಫೀಸ್ ಗೆ ಹೋಗಿ ಬರ್ತೀನಿ ಅಂತ ಹೇಳಿ ಹೋದ.
ಮುಂದುವರೆಯುವುದು……..
0 Followers
0 Following