ಕಾಡುವ ಅಗೋಚರ ಭಾಗ - 14

ProfileImg
09 Jul '24
5 min read


image

ಅಗೋಚರ

                  ಅಣ್ಣಾ, ಆ ಮನೆಗೆ ಹೋಗಿಯೇ ಪೂಜೆ ಮಾಡ್ಬೇಕಾ? ಯಾಕಂದ್ರೆ ಆ ಮನೇಲಿ ಏನೋ ತೊಂದ್ರೆ ಇದೆ ಅಂತ ನನ್ನ ಮನಸು ಹೇಳ್ತಿದೆ, ಇದ್ರಿಂದ ಏನಾದ್ರು ಹೆಚ್ಚು ಕಡಿಮೆ ಆದ್ರೆ, ಅಂತ ಅಷ್ಟೇ....
    ನೋಡು ಶಂಕರ್, ಒಂದು ಮನುಷ್ಯನಿಗೆ ಏನೋ ಒಂದು ಕಾಯಿಲೆ ಬಂದಿದೇ, ಅದಕ್ಕೆಅವನಿಗೆ ಬೇಕಾದ ಮೆಡಿಸಿನ್ ಅವನ್ಗೆ ಕೊಡದೆ ಡಾಕ್ಟ್ರ್ ತಾನೇ ತಿಂದ್ರೆ ರೋಗಿ ಕಾಯಿಲೆ ಗುಣ ಆಗುತ್ತಾ, ಹಾಗೆ ಆ ಮನೆ ಸಮಸ್ಯೆ ಅಲ್ಲೇ ಬಗೆಹರಿಬೇಕು, ನಾಳೇನೇ ಪೂಜೆ ಅಂತ ಎಲ್ಲಾ ಸಿದ್ಧತೆ ಮಾಡಿಕೋ ಅಂತ ಹೋದರು..
ಶಂಕರ್ ಸರಿ ಅಂತ ಅಲ್ಲಿಂದ ಹೋದನು....

          ರಾತ್ರಿ ಇಡೀ ಜೋರಾದ ಮಳೆ, ಗುಡುಗು ಸಿಡಿಲು, ಆಚೆ ಈಚೆ ಗೆಜ್ಜೆ ಶಬ್ದ, ಏನೋ ಶಬ್ದ ಆ ಮನೆ ಇಂದ ಕೇಳಿ ಬರ್ತಿತ್ತು, ಶಂಕರ್, ರತ್ನ ಮತ್ತೆ ಲಕ್ಷ್ಮಿ ಹೆದರಿಕೆ ಅಲ್ಲಿ ಕಿವಿ ಮುಚ್ಚಿ ಮಲಗಿದರೆ, ರಮೇಶ್ ಕಿಟಕಿ ಹತ್ತಿರ ಹೋಗಿ ಆ ಮನೇನ ದಿಟ್ಟಿಸಿ ನೋಡಿದ ಅವ್ನ ಜಪದ ಮಾಲೆ ಮುಟ್ಟಿ ನೋಡಿದ, ಏನೋ ಕಂಡವನಂತೆ ಮನಸಲ್ಲೇ ನಗುತ್ತಾ ಹೋಗಿ ಮಲಗಿದ....

               ಬೆಳಗಾಯಿತು, ಶಂಕರ್ ಅಣ್ಣಾನಾ ಹತ್ತಿರ ಬಂದು ಅಣ್ಣಾ, ಆ ಮನೆಗೆ ಹೋಗದೆ ಏನು ಮಾಡೋಕ್ ಅಗಲ್ಲ ಅಂತ ಗೋತ್ತಾಯಿತು, ಆದ್ರೆ ಆ ಮನೇಲಿ ಏನು ತೊಂದ್ರೆ ಆಗಲ್ವಾ, ನಮಗೆ ಅದೇ ಭಯ, ನಂಗೆ, ಈಗಾಗಲೇ ನನ್ನ ಪ್ರಾಣ ಸ್ನೇಹಿತನ ಕಳ್ಕೊಂಡ ದುಃಖ್ಖ ನೇ ಮರೆಯೋಕೆ ಆಗ್ತಿಲ್ಲ, ಅಂದಾಗ ರಮೇಶ್,ನಗುತ್ತಾ ಭಯ ಪಟ್ರೆ ಏನು ಮಾಡೋಕ್ ಆಗಲ್ಲ, ಧೈರ್ಯದಿಂದ ಇರಿ, ನಾನಿದೀನಿ, ನಿಮ್ಮ ಕೈಲಿ ಈ ತಯಾತ ಇರೋ ತನಕ ಏನು ಆಗಲ್ಲ, ಸಿದ್ಧತೆ ಮಾಡ್ಕೊಳಿ, ಹೋಗೋಣ ಅಂತ ಹೇಳಿ ಸ್ನಾನಕೆ ಹೋದ...
  
       ಎಲ್ಲಾ ಸಿದ್ದತೇ ನಡಿತಿತ್ತು, ರಮೇಶ್ ಬಂದು ಇನ್ನು ಹೋಗೋಣ,ಅಂದ ಸರಿ ಅಂತ ಎಲ್ರು ಹೊರಟರು, ಆಗ ರತ್ನ ಲಕ್ಷ್ಮಿಅಮ್ಮ ಒಬ್ರೇ ಇದ್ದಾರೆ ಅಂದಾಗ ರಮೇಶ್ :ಅವ್ರು ಬರ್ಬೇಕು, ಕರ್ಕೊಂಡು ಬನ್ನಿ ಅಂತ ನಿಂತ, ರತ್ನ ಅಶೋಕ್ ಇಬ್ರು ಅವರನ್ನು ಕರೆದುಕೊಂಡು ಬಂದರು .. ಬರುವಾಗ ಲಕ್ಷ್ಮಿ ಕಣ್ಣು ಮುಚ್ಚಿಕೊಂಡು ಬಂದಳು, ಅಶೋಕ್, ರತ್ನ ಹೆದರಿಕೆ ಇಂದ ಮೆಲ್ಲಗೆ ಬಂದರು, ಬಾಗಿಲ ಕಡೆಯಲ್ಲಿ ಏನೋ ರಕ್ತದ ಓಕುಳಿ ತರ ಹರಿತ ಇತ್ತು, ಅದನ್ನ ನೋಡಿ ರತ್ನ ಅಮ್ಮ ಅಂತ ಕೂಗಿದಳು,
  ಆಗ ರಮೇಶ್, ಹೆದರಬೇಡ ರತ್ನ ಅಂತ ಹೇಳಿ ಬಾಗಿಲು ತೆಗೆದ ಎಲ್ರು ಹೋದರು . ಅಲ್ಲೇ ಪೂಜೆ ಮಾಡಲು ಸಿದ್ಧತೆ ನಡೆಸಿದ, ಆಚೆ ಈಚೆ ಜೋರಾಗಿ ಕೂಗೋದು ಕೇಳಿದರು ಕೇಳದಂತೆ ಸಿದ್ಧತೆ ನಡಿತಾ ಇತ್ತು. ಮತ್ತೆ ಪೂಜೆಗೆ ಕುಳಿತುಕೊಳ್ಳುವ ಮುನ್ನ ರಮೇಶ್ ಹೇಳಿದ ಪೂಜೆ ಮುಗಿಯೋ ಮುಂಚೆ ಯಾರು ಹೊರಗಡೆ ಕಾಲು ಇಡಬಾರದು, ಯಾಕಂದ್ರೆ ಇವತ್ತು ಅಮಾವಾಸ್ಯ, ಅದರಲ್ಲೂ ಅದು ಶಕ್ತಿ ಶಾಲಿ ಆಗಿರುತ್ತೆ, ಮತ್ತೆ ಲಕ್ಷ್ಮಿ ಹತ್ತಿರ ಬಂದು ತಾಯಿ ನಿಮ್ಮ ಸಹಾಯ ನನಗೆ ಬೇಕು, ಅಂದಾಗ ಲಕ್ಷ್ಮಿ ಕಣ್ಣಲ್ಲಿ ನೀರು ತುಂಬಿ ಬಂತು, ಆದನ್ನ ನೋಡಿ ರಮೇಶ್ ಯಾಕೆ ಅಳ್ತಿರಾ, ನಿಮಗೆ ಈ ಪರಿಸ್ಥಿತಿಲಿ ಕೇಳ್ತೀನಿ ಅಂತಾನಾ, ಒಮ್ಮೆ ನಿಮ್ಮ ಕೈನ ನನ್ನ ಜಪಮಾಲೆ ಮುಟ್ಟಿ, ಆಗುತ್ತೆ ಅಮ್ಮ ಅಂದ ಲಕ್ಷ್ಮಿ, ಮೆಲ್ಲಗೆ ಕೈ ಜಪಮಾಲೆ ಹತ್ತಿರ ತಂದಳು. ಮತ್ತೆ ಲಕ್ಷ್ಮಿಗೆ ಏನೋ ಮಿಂಚು ಹೊಡೆದಂತೆ ಬಾಸವಾಯ್ತು, ಒಮ್ಮೆಲೇ ಕೈ, ಕಾಲು ಮೊದಲಿನಂತೆ ಚೈತನ್ಯ ಪಡೆದುಕೊಂಡವು.. ಮತ್ತೆ 🙏ಕೈ ಮುಗಿದು, ಅತ್ತಳು... ಶಂಕರ್, ರತ್ನ ಖುಷಿ ಪಟ್ಟರು.
     ಈಗ ಹೇಳಿ ಅಮ್ಮ, ನಿಮಗೆ ಗೋತ್ತಿರೋದು, ನೀವೇ ಹೇಳ್ಬೇಕು ಅಂದಾಗ..
     ಈ ಮನೆಗೆ ಮಗ ಬಂದು ಎರೆಡು ದಿನ ಅದ್ಮೇಲೇ  ನಾವು ಬಂದ್ವಿ, ಬಂದ್ಮೇಲೆ ಡ್ರೈವರ್ ಸತ್ತು ಹೋದ, ಆಮೇಲೆ ನನ್ ಸೊಸೆ ಏನೋ ಕ್ಯಾಮರಾ ತಂದ್ ನಮಗೆ ತೋರಿಸಿದ್ಲು, ಅದ್ರಲ್ಲಿ ಆ ಡ್ರೈವರ್ ಹೇಗೆ ಸತ್ತ ಅಂತಿದೆ ಆದ್ರೆ ಸಾಯ್ಸಿದ್ದು ಯಾರು ತೋರುತ್ತಾ ಇರ್ಲಿಲ್ಲ, ನನ್ ಸೊಸೆಗೆ ಹೆದ್ರಿ ಜ್ವರ ಬಂದಿತ್ತು. ಸಮಾಧಾನ ಮಾಡಿ, ಆ ಕ್ಯಾಮರಾ ಮನೆ ಇಂದ ಆಚೆಗೆ ಬಿಸಾಕೋಕೆ ನನ್ ಯಜಮಾನ್ರುಗೆ ಹೇಳಿದ್ದೆ, ಇದಾದ ಎರೆಡು ದಿನಕ್ಕೆ ನನ್ನ ಗಂಡ ಆ ಕೋಣೆಗೆ ಒಬ್ರೇ ಮಲಗೋಕೆ ಶುರು ಮಾಡಿದ್ರು, ಆ ದಿನ ಅವ್ರು ಮುಖದಲ್ಲಿ ಯಾವ್ದೋ ಪಿಶಾಚಿ ರೂಪ ನೋಡಿದೆ, ನನ್ನ ಈ ಸ್ಥಿತಿಗೆ ತಂದು ಬಿಡ್ತು, ಆಗಾಗ ಬಂದು ನಿನ್ನ ಮಗ ಹೇಗೆ ಈ ಮನೆ ತಗೊಳ್ತಾನೆ ನೋಡ್ತೀನಿ ಅಂತ ಹೇಳಿ ಹೋಗ್ತಿದ್ರು, ನನ್ನ ಸಾಯ್ಸಿಸಕ್ಕೆ ಸುಮಾರು ಸಲ ಪ್ರಯತ್ನ ಮಾಡಿದಾಗಲು ನನ್ನ ಸೊಸೆನೆ ಕಾಪಾಡಿದ್ದು... ಆದ್ರೆ ಇವತ್ತು ಅವಳೇ ಇಲ್ಲ ಅಂತ ಅತ್ತಳು... ಮತ್ತೆ ನನ್ನ ಸೊಸೆ ಹೇಗೆ ಸತ್ತಳು ಗೊತ್ತಿಲ್ಲ ನನ್ನ ಗಂಡ ಎಲ್ಲಿ ಹೋಗಿದಾರೆ ಅಂತಾನೂ ಗೋತ್ತಿಲ್ಲ ಅವ್ರು ಮೈ ಮೇಲೆ ಸೇರಿರೋ ಆ ಪ್ರೇತನ ಓಡಿಸಿ ನನ್ನ ಗಂಡನ್ನ ಉಳಿಸಿ ಕೊಡಿ ಅಂತ ಹೇಳಿದಾಗ ರಮೇಶ್     ......
     ಅಮ್ಮ, ನೀವು ಹೇಳಿದ್ದು, ಇದೆ ಕ್ಯಾಮರಾ ಅಲ್ವಾ ಅಮ್ಮ ಅಂದಾಗ ಅವ್ಳು ಹೆದರಿಕೆ ಇಂದ ಹೌದು ಇದೆ, ಇದೆ ಅಂತ ಹಿಂದೆ ಸರಿದಳು...
ಭಯ ಪಡಬೇಡಿ, ಈಗ ನೀವ್ ತಿಳ್ಕೊಳ್ಬೇಕಿದ್ದು ಏನಂದ್ರೆ ಸಮಸ್ಯೆ ಬಂದಿದ್ದೆ ಈ ಕ್ಯಾಮರಾ ದಿಂದ, ಈ ಮನೇಲಿ ಪ್ರೇತಾತ್ಮ ಇದೆ,ಮತ್ತೆ ನೀವು ತಿಳ್ಕೊಂಡ ಹಾಗೆ ಇವ್ರ್ ಗಂಡ ಎಲ್ಲೊ ಹೋಗಿಲ್ಲ,ಆ ಅಗೋಚರ ಶಕ್ತಿಗೆ ಬಲಿಯಾದ ಮೊದಲ ವ್ಯಕ್ತಿ ಅವ್ರೆ..
ಲಕ್ಷ್ಮಿ ಒಮ್ನೆ, ಏನು ಹೇಳ್ತಿದೀರಾ, ನನ್ನ ಗಂಡ, ಸತ್ತಿಲ್ಲ ಅವ್ರು ಮೈಯಲ್ಲಿ ಪ್ರೇತ ಸೇರಿದೆ ಅಷ್ಟೇ, ಆಗ ಶಂಕರ್
  ಹೌದು ಅಣ್ಣಾ, ಅವ್ರು ಕೊನೆಗೆ ಹೋಗಿದ್ದು, ನಾನು ನೋಡಿದೀನಿ, ಅದು ಅಶೋಕ್ ಸತ್ತ ಮೇಲೆ, ಹೋಗಿದ್ದು, ನೀವು ಹೀಗೆ ಹೇಳ್ತ ಇದ್ದೀರಾ, ಏನಣ್ಣ ಇದೆಲ್ಲ ಅಂದಾಗ ನಿಮಗೆ ಕಂಡಿದ್ದು ಮಾತ್ರ ಸತ್ಯ ಅಲ್ಲ, ಅಸಲಿ ಸತ್ಯ ಬೇರೇನೇ ಇದೆ........ಇದು ನಿಮಗೆ ತಿಳಿಬೇಕಾದ್ರೆ, ಒಮ್ಮೆ ಇಲ್ಲಿ ಕೇಳಿ... ಹಾಗೆ ಕಣ್ಣು ಮುಚ್ಚಿ ಒಂದೊಂದೇ ಎಳೆ ಎಳೆಯಾಗಿ ಹೇಳ್ತಿನಿ ಅಂದ...
   ಎಲ್ರು ಕೈ ಮುಗಿದು ಕಣ್ಣು ಮುಚ್ಚಿದರು ಆಗ ರಮೇಶ್ ತಾನು ಕಣ್ಣು ಮುಚ್ಚಿ ಅವನಿಗೆ ತೋರಿದ್ದು ಹೇಳಲು ಆರಂಭಿಸಿದ...
    ಆ ದಿನ ಅಶೋಕ್ ಮತ್ತೆ ಅವನ ಹೆಂಡತಿ  ಈ ಮನೆಗೆ ಬರೋವಾಗ ಅವ್ನ ಗಾಡಿ ಹಾಳಾಗಿತ್ತು,ಅದ್ಕೆ ಡ್ರೈವರ್ ಒಂದು ಮನೆ ಕಡೆ ಹೋದ ಆಗ ಅಲ್ಲಿ
      ಯಾರಾದ್ರೂ ಇದ್ದೀರಾ? ಒಳಗೆ ಹೆಲೋಹೆಲೋ, ಇಲ್ಲಿ ಯಾರು ಇಲ್ಲ, ಅಂತ ಹೊರಟ ಆಗ ಬಾಗಿಲು ಶಬ್ದ ಕೇಳಿ ಹಿಂದೆ ತಿರುಗಿ ಮನೆ ಕಿಟಕಿ ಹತ್ತಿರ ಹೋಗಿ ಎಲ್ಲ ಕಡೆ ನೋಡಿದ ಆದ್ರೆ ಆಗ ಅವನು ಆ ಮನೆ ಒಳಗೆ ಯಾರೋ ಇರೋದನ್ನ ನೋಡಿ, ಕರೆದ ಮತ್ತೆ ಯಾರೋ ಬೇಕಂತನೇ ಬಾಗಿಲು ತೆಗಿತಾ ಇಲ್ಲ, ಸರಿ ನನ್ ಹೋಗ್ತೀನಿ,ಅಲ್ಲಿ ಗರ್ಭಿಣಿ ಕಾರ್ ಅಲ್ಲಿ ಕಾಯ್ತ ಇದ್ದರೇ,..
ಅರೆ ಇದೇನು ಕ್ಯಾಮರಾ, ಯಾರದು ಹೊಸದಾಗಿ ಇದೆ,ಅಂತ ಎತ್ತಿ ನೋಡಿದ, ಅದನ್ನ ನೋಡಿ, ಅದರ ಸ್ವಿಚ್ ಆನ್ ಮಾಡಿ ಫೋಟೋ ಚನ್ನಾಗಿ ಬರುತ್ತಾ ನೋಡಿದಾಗ ಎದುರಲ್ಲಿ ಯಾರೋ ನಿಂತ ಹಾಗೆ ಆಯಿತು, ಮತ್ತೆ ನೋಡಿದ್ರೆ ಯಾರು ಇಲ್ಲ, ಮತ್ತೆ ಭ್ರಮೆ ಇರ್ಬೇಕು ಅಂತ ಒಂದು ಹೆಜ್ಜೆ ಮುಂದೆ ಹೋದ ಮತ್ತೆ ಕ್ಯಾಮರಾ ವಿಡಿಯೋ ತನ್ನಷ್ಟಕ್ಕೆ ಓಪನ್ ಆಯಿತು, ಅದರಲ್ಲಿ ಅವ್ನು ನಿಂತ ಮನೆನೇ ಆ ಮನೆ ಕಡೆ ಯಾರೋ ಕಾರ್ ಹಾಳಾಗಿದೆ ರಾತ್ರಿ ಆಯಿತು ಇಲ್ಲೇ ಹತ್ತಿರ ಏನಾದ್ರು ಮನೆ ಇದ್ರೆ ಏನಾದ್ರು ಸಹಾಯ ಸಿಗುತ್ತಾ ನೋಡಿ ಬರ್ತೀನಿ ಅಂತ ಅಪ್ಪ, ಮತ್ತೆ ಮಗ ಹೋದರು,ಆಗ ಆ ಮನೆ ಲೈಟ್ ಆನ್ ಆಗಿಯೇ ಇತ್ತು, ಸರಿ ಅಲ್ಲಿ ಯಾರೋ ಇರ್ಬೇಕು ಅಂತ ಹೋದ್ರು ಆದ್ರೆ ಅಲ್ಲಿ ಯಾರು ಇರಲಿಲ್ಲ, ಮತ್ತೆ ಸರಿ ಇಲ್ಲಿ. ಯಾರಾದ್ರೂ ಇದ್ದಾರಾ ಅಂತ ಬಾಗಿಲು ತಟ್ಟಿದ್ದರು, ಯಾರು ಇಲ್ಲ ಸರಿ ಮಗನೆ ಇಲ್ಲೇ ಮಲಗುವ ಹೋಗಿ ಅಮ್ಮ, ಅಕ್ಕ್ನ ಕರೆದುಕೊಂಡು ಬರೋಣ ಬೆಳ್ಗೆ ಹೋದ್ರೆ ಆಯಿತು, ಅಂತ ಅವ್ರ್ನ ಕರೆದುಕೊಂಡು ಅಲ್ಲೇ ಮಲಗಿದರು. ಆದ್ರೆ ಮದ್ಯ ರಾತ್ರಿ ಆ ಬಾಗಿಲು ಇದ್ದಕಿದ್ದಂತೆ ಬಾಗಿಲು ತೆರಿಯಿತು, ಅದರ ಶಬ್ದ ಕೇಳಿ ಮಗನಿಗೆ ಎಚ್ಚರಿಕೆ ಆಗಿ ಸಿದಾ ಒಳಗೆ ಹೋದ ಅವ್ನು ಹೋಗುದನ್ನ ಮಗಳು ನೋಡುತ್ತಾ ಇದ್ದಂತೆ ಬಾಗಿಲು ಹಾಕಿಕೊಂಡಿತ್ತುಅಪ್ಪ ಅಪ್ಪ ತಮ್ಮ ಒಳಗೆ ಹೋದ ಬಾಗಿಲು ಹಾಕಿಕೊಂಡಿತು ಅಂತ ಕೂಗಿಕೊಂಡಾಗ ಅಪ್ಪ, ನಾನು ಒಳಗೆ ಹೋಗ್ತೀನಿ ನೀವು ಇಲ್ಲೇ ಇರಿ ಅಂತ ಒಳಗೆ ಹೋದನು .ತಾಯಿ ಮಗಳು ಭಯದಲ್ಲಿ ಒಳಗಡೆ ಹೋಗೋಕೆ ಬಾಗಿಲು ಹಿಡಿದುಕೊಂಡು ನುಕಿದರು. ಹೊರಗಿಂದ ಕೂಗಾಟ ಜೋರಾಗೆ ಇತ್ತು, ಆಗ ತಾಯಿ ಮಗಳಲ್ಲಿ ಇಲ್ಲಿ ಇರು, ನಾನು ಆಚೆ ಎಲ್ಲಾದ್ರೂ ಜಾಗ ಇದ್ಯಾ ನೋಡ್ತೀನಿ ಅಂತ ಮನೆ ಹಿಂದೆ ಹೋದಳು, ಹೋದವಳನ್ನ ಯಾವ್ದೋ ಪ್ರೇತತ್ಮ ಬಂದು ಸಾಯಿಸಿ ಬಿಡ್ತು, ಮಗಳು ಬಾಗಲಲ್ಲಿ ಕುಳಿತು ಕಾಯ್ತ ಕುಳಿತಳು ಆಗ ಒಳಗಿಂದ ಅಪ್ಪ, ಮಗನ ಶವ ಹೊರಗೆ ಬಿತ್ತು ಅದನ್ನ ನೋಡಿ ಭಯದಲ್ಲಿ ಓಡಲು ಸುರು ಮಾಡಿದಳು ಮಗಳು ಹೋಗಿ ಅಮ್ಮನ ಹೆಣದ ಮೇಲೆ ಬಿದ್ದಳು ಆಗ ಹಿಂದಿನಿಂದ ಬಂದ ಕೈಗಳು ಕುತ್ತಿಗೆ ಹಿಸುಕಿ ಸಾಯ್ಸಿ ಬಿಡ್ತು, ಇದನ್ನ ಕಾರ್ ಡ್ರೈವರ್ ನೋಡಿ ಬೆವರಿ ಹೋದ,ಆಚೆ ಈಚೆ ನೋಡಿದ...,..
 

ಮುಂದುವರೆಯುವುದು.........
 


 

Category:Fashion



ProfileImg

Written by Sahana gadagkar