ಕಾಡುವ ಅಗೋಚರ ಭಾಗ - 13

ProfileImg
31 May '24
3 min read


image

ಅಗೋಚರ
 

            ಜಪ ಮಾಲೆ ಕೊರಳಲ್ಲಿ ಹಾಕಿ, ಅಶೋಕ್ ಇದ್ದ ಮನೆಗೆ ಹೊರಟರು, ಮನೆ ದಾರಿ ಬಿಟ್ಟು , ಆ ಮನೆ ಗೇಟ್ ಹತ್ತಿರ ಬಂದಾಗ ಜೋರಾದ ಗಾಳಿ, ಬರಲು ಶುರುವಾಯ್ತು, ಗೇಟ್ ಬಾಗಿಲು ತೆಗೆದು ಸಿದಾ ಮನೆ ಹತ್ತಿರ ಬಂದ, ಅಲ್ಲಿ ಬರುವಾಗನೇ ಮೇಲಿಂದ ದೊಡ್ಡ ಬಿರುಗಾಳಿ ಸುರುಳಿ ಸುತ್ತಿ ಬಂತು, ಅದನ್ನ ನೋಡಿ ರಮೇಶ್, ಕೈಲಿದ್ದ ಜಪದ ಮಣಿ ಹಿಡಿದುಕೊಂಡು ಮಂತ್ರ ಹೇಳಿದ, ಆ ಬಿರುಗಾಳಿ ಅಲ್ಲಿಂದ ಮಾಯಾ,
      ಮತ್ತೆ ಮನೆ ಬಾಗಿಲು ತೆಗೆದು ಒಳಗೆ ಹೋದ, ಹೋದ ಕ್ಷಣ, ಎಲ್ಲಿದ್ದೋ ಏನೋ ಬಾವಲಿಗಳು ಒಂದೇ ಸಲ ಓಡೋಡಿ ಬಂದವು, ಅದನ್ನ ತಪ್ಪಿಸಿ ಒಳಗೆ ಬಂದ, ಹಿಂಬಾಲಿಸಿ ಬಂದ ನೆರಳು ನೋಡಿ, ರಮೇಶ್, ಹೇಳಿದ
    ಬರುವುದಾದ್ರೆ, ಎದುರು ಬಾ, ಹೀಗೆ ನೆರಳಂತೆ ಬರಬೇಡ, ಹೇಡಿ ಅಂತೇ ಅಂದಾಗ ಮೇಲಿನ ಫ್ಯಾನ್ ಕೆಳಗೆ ಬಿತ್ತು, ಆದ್ರೆ ರಮೇಶ್ಗೆ ಏನು ಮಾಡೋಕ್ ಆಗ್ಲಿಲ್ಲ,
ಅವ್ನು ನಗಾಡುತ್ತ , ನಿನಗೆ ಏನು ಮಾಡೋಕೆ ಆಗಲ್ಲ, ನನ್ನ  ಅಂತ ಮತ್ತೆ ಕೋಣೆ ಕಡೆ ಹೋದ, ಅಲ್ಲಿ ಹೋದಾಗ ಅವನ ಕಣ್ಣು ಕ್ಯಾಮರಾ ಮೇಲೆ ಬಿತ್ತು, ಆದ್ರೂ ಗೊತ್ತಾಗದ ಹಾಗೆ ಆಚೆ ಈಚೆ ಎಲ್ಲಾ ಕಡೆ ನೋಡಿದ, ನಂತರ ಅಶೋಕನ ಬುದಿ ನೋಡಿ,ಆದಷ್ಟು ಬೇಗ ಮುಕ್ತಿ ಕೊಡ್ತೀನಿ, ಅಂತ ಅಲ್ಲಿಂದ ಮುಂದೆ ಸಾಗಿದ, ಅಲ್ಲಿ ಇಲ್ಲಿ ಎಲ್ಲಾ ಕಡೆ ನೋಡಿ, ಮತ್ತೆ ಹೊರಗೆ ಬಂದ ಕೂಡಲೇ ರಪಕ್ಕನೆ ಬಾಗಿಲು ಹಾಕಿಕೊಂಡಿತ್ತು.
     ರಮೇಶ್ ಏನು ಹೇಳದೆ ಅಲ್ಲಿಂದ ಹೋದ..... ಬಾಗಿಲು ಮುಟ್ಟಿ, ಮತ್ತೆ ಮನೆ ಆಚೆ, ಈಚೆ ಎಲ್ಲಾ ಕಡೆ ನೋಡಿ, ಮತ್ತೆ ಕಾಲು ತೊಳೆದು ಒಳಗೆ ಹೋದ.....

     ಅಣ್ಣಾ ಒಳಗೆ ಬಂದ ಕೂಡಲೇ, ಶಂಕರ್ ಓಡಿ ಬಂದು ಅಣ್ಣಾ ನಿಮಗೆ ಏನು ಆಗ್ಲಿಲ್ಲ ಅಲ್ವಾ,ಅಂದಾಗ ಶಂಕರ್ ತಲೆ ಸವರಿ, ನಮಗೆ ಏನು ಮಾಡೋಕೋ ಆಗಲ್ಲ, ಭಯ ಪಡಬೇಡ, ಹೋಗಿ ಊಟಕ್ಕೆ ಸಿದ್ಧತೆ ಮಾಡು, ನಂಗೆ ಜಪ ಮಾಡಬೇಕು, ಹಾಗೆ ಪೂಜೆ ಕೂಡ ಮಾಡೋದ್ ಇದೆ, ಅಂದಾಗ ಶಂಕರ್, ಹೆಂಡ್ತೀನ ಕರೆದು ಅಣ್ಣಾನಾ ಊಟ ರೆಡಿ ಮಾಡಲು ಹೇಳಿದ..
   ರತ್ನ, ಬಾವನಿಗೆ ಬಡಿಸಿದರು ಮತ್ತೆ ರಮೇಶ್ ಹೇಳಿದ
ಶಂಕರ್,ನಾಳೆ ಒಂದು ಹೋಮ ಮಾಡಿಸ್ಬೇಕು, ಎಲ್ಲಾ ಸಿದ್ದತ್ತೆ ಆಗ್ಬೇಕು, ಅಂದ  ಶಂಕರ್ ಆಗ್ಲಿ  ಅಣ್ಣಾ ಅಂತ ಹೇಳಿದ..

        ರಾತ್ರಿ ಆಯಿತು,ಎಲ್ಲಾ ಮಲಗಿದ್ದಾಗ, ರಮೇಶ್ ಎದ್ದು ಹೊರಗೆ ಬಂದ,,.... ಮನೆ ಸ್ಮಶಾನ ಮೌನ, ಆ ಮನೆ ಕಡೆ ಬೇಗ ಬೇಗ ದಾಪು ಕಾಲಕಿ ಬಂದನು,ಆ ಮನೆ ಬಾಗಿಲಿಗೆ ತನ್ನ ಶಕ್ತಿ ಯಂತ್ರ ಕಟ್ಟಿ ಹಿಂದೆ ಕಾಣದಂತೆ ಹೋದ, ಆದ್ರೆ ಆ ನಿಗೋಚರ ಶಕ್ತಿಗೆ ಏನು ಮಾಡಲು ಆಗಲೇ ಇಲ್ಲ....

    ಶಂಕರ್ ಬೆಳಗ್ಗೆ ಬೆಳಗ್ಗೆ ಎದ್ದು, ಪೂಜೆಗೆ ಬೇಕಾಗೋ ಎಲ್ಲ ವಿಧದ ಸಾಮಾನು ತಂದು ಮನೆಗೆ ಇಟ್ಟು, ಇನ್ನೇನು ಕಾಯಿ ತೆಗಿಸ್ಬೇಕು ಅಂತ, ಮರದ ಅಡಿ ಅಲ್ಲಿ ನಿಂತ ಆಗ ಒಂದು ಕಾಯಿ ಕೈ ತಪ್ಪಿ ಇನ್ನೇನು ಬೀಳ್ಬೇಕು ಅನ್ನೋವಾಗ ಅಲ್ಲೇ ಪಕ್ಕಾದಲ್ಲಿ ಇದ್ದ ಇನ್ನೊಬ ವ್ಯಕ್ತಿ ಬಂದು ಆಚೆ ಕಡೆ  ಕರೆದುಕೊಂಡು ಹೋದರು. ಒಮ್ಮೆ ಶಂಕರ್, ಅಬ್ಬಾ ಅಂದುಕೊಂಡ, ಮತ್ತೆ ಕಾಯಿ ಹಿಡಿದುಕೊಂಡು ಮನೆ ಕಡೆ ಬಂದು ಹೋಗಿ ಆದದು ಏಣಿಸಿ ಆಲೋಚನೆ ಅಲ್ಲಿ ಬಿದ್ದ ತಮ್ಮನನ್ನ ನೋಡಿ ರಮೇಶ್..... ಏನಾಯಿತು, ಶಂಕರ್, ಆ ವಕ್ರದೃಷ್ಟಿ  ನಿನ್ನ ಮೇಲೆ ಬಿದಿದೆ ,ನೀನು ತುಂಬಾ ಜಾಗ್ರತೆ ಅಲ್ಲಿ ಇರ್ಬೇಕು, ಅಂತ ತನ್ನ ಹತ್ತಿರವಿದ್ದ ಸಣ್ಣ ಕೃಷ್ಣನಾ ಪದಕ ಇರೋ ಸರನ ಅವ್ನ ಕತ್ತಿಗೆ ಹಾಕಿದ, ಇದನ್ನ ಕಾಪಾಡಿಕೊಂಡು ಬಾ, ನಿಂಗೆ ಏನು ಆಗಲ್ಲ ಅಂತ ಹೇಳಿದ.

       ಪೂಜೆ ಮಾಡಲು ಸಿದ್ದನಾದ ರಮೇಶ್ ಬಂದು ದೇವರಿಗೆ ಕೈ ಮುಗಿದು ಬಂದು ಕುಳಿತ, ನಂತರ ಅನೇಕ ಮಂತ್ರ ಪಟಿಸಿ, ಒಂದೊಂದು ತಾಯತಕು ಪೂಜೆ ಮಾಡಿದ, ನಂತರ ಆ ತಾಯತನ್ನ ಒಂದೊಂದು ಮನೆಯವರಿಗೆ ಕೈಗೆ ಕಟ್ಟಿ, ಇನ್ನೇನು ಭಯ ಇಲ್ಲ, ದೈರ್ಯವಾಗಿ ಇರಿ, ಹಾಗೆ ಇನ್ನೇರೆಡು ದಿನ ಮುಂದಿನ ಕಾರ್ಯ ಹೇಳ್ತಿನಿ... ಅಂದ..

     ರತ್ನ ದಿನಾಲೂ ಲಕ್ಷ್ಮಿಗೆ ಎಣ್ಣೆ ಉಜ್ಜಿ, ರಮೇಶ್ ಕೊಟ್ಟ ಗಂಧವನ್ನ ಹಾಕಿ ಅವಳನ್ನ ನೋಡಿಕೊಂಡಿದ್ದಳು ಶಂಕರ್ ಅಣ್ಣನಲ್ಲಿ,
ಅಣ್ಣಾ, ಇನ್ನು ಏನು ಮಾಡಬೇಕು, ಮುಂದಿನ ಕೆಲಸ ಏನು ಅಂದಾಗ ರಮೇಶ್.....
  ಆ ಮನೆಗೆ ಹೋಗಿ ಪೂಜೆ ಮಾಡಬೇಕು...........
 

ಮುಂದುವರೆಯುವುದು..............
 


 

Category:Parenting and Family



ProfileImg

Written by Sahana gadagkar