Do you have a passion for writing?Join Ayra as a Writertoday and start earning.

ಕಾಡುವ ಅಗೋಚರ ಭಾಗ - 11

ಅಗೋಚರ

ProfileImg
30 Jan '24
4 min read


image

    ಅಗೋಚರ


ಇಲ್ಲಿ ಅಶೋಕ್ ಅಂತ ಪೇಷಂಟ್ ಎಲ್ಲಿ ಅಂದಾಗ 4ನೇ ಮಹಡಿ ಅಂದ ಕ್ಷಣ ಬಾನುನ ಲಿಫ್ಟ್ ಅಲ್ಲಿ ಕರೆದುಕೊಂಡು ಬಂದ, ಅಲ್ಲೇ ನಿಂತ ಡಾಕ್ಟ್ರ್ ನೋಡಿ ಭಾನು, ಡಾಕ್ಟರ ನಾನು ಭಾನು ಅಂತ ಅಶೋಕ್ ಅವರ  ಹೆಂಡ್ತಿ, ಅವ್ರು ಎಲ್ಲಿದಾರೆ, ಹೇಳಿ ಡಾಕ್ಟ್ರ್ ಅಂದಾಗ ಎಮರ್ಜೆನ್ಸಿ ವಾರ್ಡ್ ಅಲ್ಲಿ ಇದ್ದಾರೆ, ಇನ್ನು ಏನು ಹೇಳೋಕಾಗಲ್ಲ ಇನ್ನು 2ಗಂಟೆ ತನಕ ಅಂದಾಗ ಡಾಕ್ಟರ್ ಕಾಲಿಗೆ ಬಿದ್ದು ನನ್ನ ಗಂಡನ ಉಳಿಸಿಕೊಡಿ ಅಂತ ಅತ್ತಳು, ಡಾಕ್ಟ್ರ್ ಏನು ಹೇಳದೇ ಹೋದರು.
  
ಅಶೋಕನ ಗೆಳೆಯನ ಹೆಂಡತಿ ಭಾನು ಏನು ಆಗಲ್ಲ, ಧೈರ್ಯ ಮಾಡಿ ಇರು.. ಅಂತ ಭರವಸೆ ನೀಡಿದಳು, ಮತ್ತೆ ಡಾಕ್ಟ್ರ್ ಹೊರಗೆ ಬಂದು ಭಾನು ಅವ್ರೆ ನಿಮ್ಮ ಜೊತೆಗೆ ಅಶೋಕ್ ಮಾತಾಡ್ಬೇಕು ಅಂತಿದ್ದಾರೆ ಹೋಗಿ ಅಂತ ಹೇಳಿ ಒಳ್ಗೆ ಕಳಿಸಿದರು .

ಒಂದು ಬೆಡ್ ಮೇಲೆ ಮೂಗಿಗೆ ಪೈಪ್ ಹಾಕಿ, ರಕ್ತ ಫುಲ್ ಮೈಲಿ ಗಾಯ, ಬಾಯಿಗೆ ಆಕ್ಸಿಜನ್ ಹಾಕಿದ್ರು, ಅರ್ಧ ಕಣ್ಣು ತೆರೆದು ಕೈ ಎತ್ತಲು ಆಗದಿದ್ರೂ,ಬಾ ಅಂತ ಕರೆದು  ಕಣ್ಣು ಬಿಡಲು ಕಷ್ಟ ಆಗ್ತಿತ್ತು ಆದ್ರೂ....
 

****************************
 

                  ಭಾನು ನನ್ನ  ಕ್ಷಮಿಸು, ನಿನ್ನ ರಾಣಿ ತರ ನೋಡ್ಕೊಂಡು, ನಮ್ಮ ಮಗುನ ಭವಿಷ್ಯ ಕಟ್ಟೋ ಕನಸು ನನ್ನಿಂದ ಈಡೇರಲ್ಲ, ಅಂತ ನಂಗೆ ತಿಳೀತು, ಅಂದಾಗ ಭಾನು, ಹಾಗೆಲ್ಲ ಹೇಳ್ಬೇಡಿ, ನಾನು ನೀವು ಇಲ್ದೆ ಹೇಗೆ ಇರಬಲ್ಲೆ, ಅಂತ ಅತ್ತಳು. ಆಗ ಅಶೋಕ್
ಭಾನು ನನ್ನ ಹತ್ತಿರ ಬಾ ಅಂತ ಬಾನುನ ಹೊಟ್ಟೆ ಮುಟ್ಟಿ, ನನ್ನ ಕ್ಷಮಿಸು ಮಗಳೇ, ನಿನ್ನ ಅಪ್ಪ ನಿನ್ನ ನೋಡೋ ಪುಣ್ಯ ಪಡ್ಕೊಂಡು ಬರಲಿಲ್ಲ, ಈ ಸಮಯದಲ್ಲಿ  ನಿನ್ನ ಅಮ್ಮನ ಒಂಟಿ ಮಾಡಿ ಹೋಗ್ತಾ ಇದ್ದೀನಿ ಅಂತ ಅತ್ತ.. ಭಾನು ಅಳುತ್ತ ಹಾಗೆಲ್ಲ ಆಗಲ್ಲ ನಿಮಗೆ ಏನು ಆಗಲ್ಲ , ಅಂದಾಗ ಅಶೋಕ್
    ಇಲ್ಲ ಭಾನು ನನ್ ಬದುಕಲ್ಲ, ನನ್ನ ಮಗಳನ್ನ ಚನ್ನಾಗಿ ನೋಡ್ಕೋ, ಅವಳು ಭೂಮಿಗೆ ಬಂದ ಮೇಲೆ ನನ್ನ ಆಸ್ತಿನ ನೀರಿಗೆ ಬಿಡು, ನಾನ್ ಅವ್ಳನ್ನ ನೋಡ್ಬೇಕು, ಅಷ್ಟರ ತನಕ ನಾನು ಮೋಕ್ಷ ಪಡೆಯಲ್ಲ, ಕಾಯ್ತ ಇರ್ತೀನಿ, ನನ್ ಮಗಳು ಬಂದು  ಮೋಕ್ಷ ಕೊಡ್ಬೇಕು ಇದನ್ನ ನೆಡ್ಸಿ ಕೊಡ್ತ್ಯ ಮಾತು ಕೊಡು ಅಂತ ಭಾನು ಹತ್ತಿರ ಭಾಷೆ ತೆಗೆದುಕೊಂಡು ಪ್ರೀತಿ ಇಂದ ಭಾನು ಹೊಟ್ಟೆಗೆ ಮುತ್ತು ಕೊಟ್ಟು,ಭಾನು ಕ್ಷಮಿಸು ಅಂತ ಕೊನೆ ಉಸಿರು ಎಳೆದ, ಅದನ್ನ ನೋಡಿ, ಭಾನು ಅಲ್ಲೇ ಕುಸಿದು ಬಿದ್ದಳು. ಅದಾಗಲೇ ಸಿಸ್ಟೆರ್ ಬಂದು ಸಾರೀ ಅಂತ ಅಲ್ಲಿಂದ ಹೋದರು, ಹೊರಗೆ ಇದ್ದ ಅಶೋಕ್ ಸ್ನೇಹಿತ ಶಂಕರ್ ಒಳಗೆ ಬಂದು ಸ್ನೇಹಿತನ ನೋಡಿ ಅತ್ತನು, ಅಲ್ಲೆ ಬಿದ್ದ ಭಾನು ನಾ ಶಂಕರ್ ಹೆಂಡತಿ ಸಮಾಧಾನ ಮಾಡಿ ಅಲ್ಲಿಂದ ಕರೆದುಕೊಂಡು ಹೋದಳು.

          ಹಾಸ್ಪಿಟಲ್ ಪ್ರೊಸಿಜೆರ್ ಮುಗಿದ ಮೇಲೆ ಡೆಡ್ ಬಾಡಿನಾ ಕಳಿಸಿಕೊಟ್ರು, ಭಾನು ಒಂದು ಹನಿ ಕಣ್ಣೀರು ಕೂಡ ಹಾಕದೆ ಕುಳಿತಳು,ಅದನ ನೋಡಿ ಶಂಕರ್ ಭಾನು ಭಾನು, ಅತ್ತು ಬಿಡು ಈ ರೀತಿ ದುಃಖ್ಖನ ಮನಸಲೇ ಇಡಬೇಡ, ನಿನ್ನ ಹೊಟ್ಟೇಲಿ ಮಗು ಇದೆ,ಭಾನು ಭಾನು ಅಂದ್ರು ಏನು ಹೇಳಲೇ ಇಲ್ಲ, ಮನೇಲಿ ಅತ್ತೆ ಒಬ್ರೇ ಇದ್ರು ಹೊರಗಡೆ ಏನೋ ಬಂದದ್ದು ನೋಡಿ, ಮಗ ಬಂದ ಅಂತ ಖುಷಿ ಪಟ್ಟಳು...ಶಂಕರ್ ಬಾಡಿನಾ ಕೆಳಗೆ ಇಳಿಸಿದ,ಮತ್ತೆ ಒಳಗೆ ಇರೋ ಲಕ್ಷ್ಮೀನ ಕರೆದುಕೊಂಡು ಬರಲು ಹೊರಟಾಗ ಲಕ್ಷ್ಮಿ, ಅವನನ್ನು ನೋಡಿ,ಆಚೆ ಈಚೆ ನೋಡಿದಳು, ಮಗ ಬಂದನೇನೋ ಅಂದು, ಆಗ ಶಂಕರ್ ಗಟ್ಟಿ ಮನಸು ಮಾಡಿ...
  ಆಂಟಿ, ಅಶೋಕ್ ಬಂದಿದಾನೆ, ಹೊರಗೆ ಬನ್ನಿ ಅಂತ ಹೇಳಿ ಕರೆದುಕೊಂಡು ಬಂದ, ಅಲ್ಲೇ ಜಗಲಿ ಅಲ್ಲಿ ಬಿಳಿ ಬಟ್ಟೆ ಹಾಕಿ ಮುಸುಕು ಹಾಕಿದನ್ನ ನೋಡಿ ಶಂಕರ್ ಮುಖ ನೋಡಿದಳು, ಆಗ ಹೋಗಿ ಮುಸುಕು ತೆಗೆದು ನೋಡಿದ ಲಕ್ಷ್ಮಿ ಕೈನ ಒರೆ ಮಾಡಿ ಕುರ್ಚಿ ಇಂದ ಕೆಳಗೆ ಬಿದ್ದು, ನೆಲದಲ್ಲಿ  ಹೇಗೋ ಹೇಗೋ ತೆವಳಿಕೊಂಡು ಮಗನ ಶವದ ಮುಂದೆ ಹೋಗಿ ಕುಳಿತು, ಮುಟ್ಟಲು ಪ್ರಯತ್ನ ಮಾಡಿದಳು, ಆದ್ರೆ ಸಾಧ್ಯ ಆಗಲಿಲ್ಲ ಆಗ ಶಂಕರ್ ಸಹಾಯ ಮಾಡಿದ, ಮಗನನ್ನು ಮುಟ್ಟಿ,ಮುತ್ತು ಕೊಟ್ಟು ಕಣ್ಣೀರು ಸುರಿದಳು.
ಎಲ್ಲಾ ಕೆಲಸ ಆಗಿ ಇನ್ನೇನು ಹೊರಡಬೇಕು ಅನ್ನೋವಾಗ ಭಾನು, ಅಯ್ಯೋ ನನ್ ಗಂಡನಾ ಕರ್ಕೊಂಡು ಹೋಗ್ಬೇಡಿ, ಅವ್ರು ಇಲ್ದೆ ಇರೋಕೆ ಆಗಲ್ಲ, ಅಂತ ಜೋರಾಗಿ ಅತ್ತಳು. ಆಗ ಅಶೋಕ್ ಅವಳ ಬಳಿ ಬಂದು ಮುಂದಿನ ಕಾರ್ಯ ಆಗ್ಬೇಕು, ನಿನಗೆ ಯಾರೋ ಇಲ್ಲ ಅನ್ಕೋಳ್ಬೇಡ, ಅಣ್ಣ ನಾ ಸ್ನಾನದಲ್ಲಿ ನಾನಿದೀನಿ, ಅಂತ ಹೇಳಿದರು,ಆದ್ರೂ ಅಳುತ್ತ ಇದ್ದ ಪುಟ್ಟ ಕಂದಮ್ಮಗೆ ಸಮಾಧಾನ ಮಾಡೋ ತಾಯಿ ಆಗಿ ಶಂಕರ್ ಸಾಂತ್ವನ ನೀಡಿದನು. ಮುಂದಿನ ಕಾರ್ಯ ಸರಾಗವಾಗಿ ನೆಡೆಯಿತು, ಲಕ್ಷ್ಮಿ ಊಟ, ತಿಂಡಿ ಬಿಟ್ಟು ಕುಳಿತಳು  ಅಳುತ್ತ,ಆದ್ರೆ ಸೋಮಶೇಖರ್ ಎಲ್ಲಾ ನೋಡುತ್ತಾ ಇದ್ರು ಏನು ಆಗದ ಹಾಗೆ ಇರುತಿದ್ದ....
    
   , ಭಾನು ಗೆ ಊಟ ತಂದು ಕೊಟ್ಟಳು ಶಂಕರ್ ಹೆಂಡತಿ ಅದನ್ನು ತಿನ್ನಲು ಕೇಳದಾಗ ಮಗು ಬಗ್ಗೆ ಹೇಳಿ ಒಂದೆರೆಡು ತುತ್ತು ತಿನ್ನಿಸಿದಳು.ಹೇಗೋ ಎಲ್ಲಿ ಹೋದರು ಕಾಡೋ ಗಂಡನ ರೂಪ, ಅವನ ಮಾತು ಮನಸಿನ ಮೂಲೆ ಅಲ್ಲಿ ಗುನುಗುತ್ತಾನೆ ಇತ್ತು. ಶಂಕರ್ ಎಲ್ಲ ರೀತಿಯ ಸಹಾಯ ಮಾಡ್ತಾನೆ ಬಂದ...
   
      ಗಂಡನ ಆಸ್ತಿನಾ ಒಂದು ಬಟ್ಟೆಗೆ ಕಟ್ಟಿ ಒಂದು ಕತ್ತಲು ಕೋಣೇಲಿ ನೇತಾಕಿ ಇಟ್ಟಳು , ತನ್ನ ಮಗುನೇ ಮಾಡಬೇಕು ಅನ್ನೋ ಆಸೇನ ಈಡೇರಿಸಲು. ದಿನಾಲೂ ಅದರ ಜೊತೆಗೆ ಹೋಗಿ ಮಾತಾಡಿ ಬರ್ತಾ ಇದ್ಲು. ಹೀಗೆ ಒಂದು ದಿನ ಅತ್ತೆ ಊಟ ತಿನ್ನಿಸಿ, ಹೊರಗೆ ಬಂದು ಸುಮ್ಮ್ನೆ ಕುಳಿತು ಯೋಚ್ನೆ ಮಾಡ್ತಾ ಇದ್ದಳು.

     ಸೋಮಶೇಖರ್ ಭಾನು ಹತ್ತಿರ ಬಂದು ನಾನು ಸ್ವಲ್ಪ ದಿನದ ಮಟ್ಟಿಗೆ ಬೇರೆ ಕಡೆ ಹೋಗಿ ಇದ್ದು ಬರ್ತೀನಿ, ನಾನು ಅಂತ ಹೋಗಿಯೇ ಬಿಟ್ಟ, ಜೀವನನೇ ಸಾಕ್ ಅನಿಸಿ ಹೋದ ಬಾನುಗೆ ಯಾರ ಬಗ್ಗೆನೂ ಆಸಕ್ತಿ ಇರಲೇ ಇಲ್ಲ, ಹೀಗೆ ಒಂದೆರೆಡು ದಿನ ಕಳೆತು...

         ರಾತ್ರಿ ಮಲಗಿದಾಗ ಲಕ್ಷ್ಮಿ ರೂಮ್ ಕಿಟಕಿ ಬಡ ಬಡ ಬಡಿಯುತಿತ್ತು, ಕರೆಂಟ್ ಬಂದು ಹೋಗ್ತಿತ್ತು, ಭಯದಲ್ಲಿ ಲಕ್ಷ್ಮಿ ಬೆವರಿ ಹೋದಳು, ಎಲ್ಲೂ ಇಲ್ಲದ ದೊಡ್ಡ ಕೈ ಒಂದು ಅವಳ ಕತ್ತು ಹಿಸುಕಲು ಪ್ರಯತ್ನ ಮಾಡಿತು, ಅವಳು ತಪ್ಪಿಸಿಕೋಳೋಕೆ ಆಗದೆ ಒದ್ದಾಟ ಮಾಡ್ತಾ ಇದ್ದಾಗ ಭಾನು ಅತ್ತೆ ಜೊತೆಗೆ ಮಲಗಲು ಬಂದಳು. ಲಕ್ಷ್ಮಿ ಉಉಉಉಉ ಏನೋ ಅಂದ್ಲು ಅರ್ಥನೇ ಆಗಲಿಲ್ಲ, ಅವಳು ಅಲ್ಲೇ ಮಲಗಿ ಬಿಟ್ಟಳು.

   ಇಡೀ ರಾತ್ರಿ ಲಕ್ಷ್ಮಿ ಮಲಗದೆ ಎಲ್ಲ ಕಡೆ ನೋಡತಾ ಇದ್ಲು, ಆಗ ಕಿಟಕಿ ಆಚೆ ಒಂದು ವಿಕ್ರತ ರೂಪ ಕಂಡು ಭಯದಲ್ಲಿ ಭಾನು ನಾ ಎಬ್ಬಿಸಲು ಪ್ರಯತ್ನ ಪಟ್ಟಳು , ಆಗ ಆ ರೂಪ ಅವಳ ಎದುರು ಕುಳಿತು ಇನ್ನು ನಿನ್ನ ಸರದಿ ಇನ್ನು ಎರೆಡು ದಿನದಲ್ಲಿ ನಿನ್ನ ಮಗ ಹೋದ ಸ್ಥಳಕ್ಕೆ ನೀನು ಹೋಗ್ತಿಯ ನೋಡತಾ ಇರು, ಈ ಮನೆಲಿ ಯಾರು ಇರೋ ಹಾಗೆ ಇಲ್ಲ, ಅಂತ ಜೋರಾಗಿ ನಗ್ತಾ ಅವಳ ಕತ್ತನ್ನು ಹಿಸುಕಿತ್ತು, ಉಉಉಉಉಉ ಅಂತ ಹೇಳಿದ ಶಬ್ದ ಕೇಳಿ ಭಾನು ಅತ್ತೆ, ಏನಾಯಿತು ಅಂದಾಗ ಅವ್ಳು ಕೈ ತೋರಿಸಿ ಕಣ್ಣೀರು ಹಾಕಿದ್ಲು, ಭಾನು ಏನು ಹೇಳದೆ ಅತ್ತೆ ಮಲಗಿ ಅಂತ ಮಲಗಿಸಿದಳು.

ಮುಂದುವರೆಯುವುದು.........

ಕಥೆ ಓದಿ ಅಭಿಪ್ರಾಯ ತಿಳಿಸಿ 
 


 

Category : Stories


ProfileImg

Written by Sahana gadagkar