Do you have a passion for writing?Join Ayra as a Writertoday and start earning.

ಕಾಡುವ ಅಗೋಚರ ಭಾಗ - 10

ಅಗೋಚರ

ProfileImg
26 Jan '24
4 min read


image

ಅಗೋಚರ
 ಕ್ಯಾಮರಾ ಹಿಡಿದುಕೊಂಡು ನೋಡುತ್ತಾ ಕುಳಿತ ಮಾವನನ ನೋಡಿ ಭಾನು ಕಕ್ಕಬಿಕ್ಕಿ ಆದಳು. ಆದ್ರೂ ತಿಳಿಯದಂತೆ ಅವನ ಎದುರು ನಾರ್ಮಲ್ ಅಗೆ ಇದ್ಲು.ಸೋಮಶೇಖರ್ ಹಾ ಯಾವಾಗ ಬಂದೆ ಕೊಡು ಅಂತ ಕಾಫಿ ತಗೊಂಡು  ಕುಡಿದ ಹೀಗೆ ಹೇಳಿ ಅಲ್ಲಿಂದ್ ಸಿದ ಹೋಗಿಯೇ ಬಿಟ್ಟ. ಅತ್ತೆ ರೂಮ್ಗೆ ಹೋದಾಗ ಅವ್ಳು ಕೂಡ ಕ್ಯಾಮರಾ ಅನ್ನೋದನ್ನ ಕೇಳಿದದ್ದರಿಂದ ಅದ್ರಲ್ಲಿ ಏನೋ ಇರ್ಬೇಕು ಅನ್ನೋದು ದೃಢ ಆಯಿತು.

ಮನೆಗೆ ಸಂಬಂಧ ಪಟ್ಟವರು ಬಂದು ಮಾರು ಬಗ್ಗೆ ಹೇಳಿ ಇನ್ನೇರೆಡು ತಿಂಗಳು ಎಲ್ಲಾ ರೆಡಿ ಆಗುತ್ತೇ, ಮತ್ತೆ ಬೇರೆ ಮನೆ ಮಾಡಿ ಇದನ್ನ ರೇಡಿ ಮಾಡ್ಸೋವರೆಗೂ ಅಂತ ಹೇಳಿದರು. ಜಾಗದ ವಿಷ್ಯ ಇನ್ನೇನು ಸ್ವಲ್ಪ ದಿನದಲ್ಲಿ ಮುಗಿಬೇಕು ಅನ್ನೋ ಆಗ ಅಶೋಕ್ ಕೆಲ್ಸದಿಂದ ತೆಗೆದು ಹಾಕಿದರೂ. ಪಾಪ ಮನೆ ಖರ್ಚು, ನಡೆಸೋದು ಕಷ್ಟ ಆಗ್ತಾ ಬಂತು.ಹೆಂಡ್ತಿಗೆ ಸುಳ್ಳು ಹೇಳಿ ಕೆಲ್ಸಕ್ಕೆ ಹೋಗ್ತೀನಿ ಅಂತ ರೋಡ್ ಅಲೆದು ಬರ್ತಾ ಇದ್ದ,.
 

****************************

            ಹೇಗೋ ಅವನ ಜೊತೆಗೆ ಕೆಲಸ ಮಾಡ್ತಿದ್ದ ಸ್ನೇಹಿತ ಬೇರೆ ಕಡೆ ಕೆಲಸ ಹುಡುಕಿ ಕೊಟ್ಟ, ಅವರಿಬ್ಬರು ತುಂಬಾ ಒಳ್ಳೆ ಫ್ರೆಂಡ್ಸ್ ಆಗಿದ್ರು, ಅಶೋಕ್ ಪಕ್ಕದ ಮನೇಲೆ ಅವನ ಮನೆ ಇತ್ತು,ಮತ್ತೆ ಅಶೋಕ್ ಎಂದಿನಂತೆ  ಡ್ಯೂಟಿಗೆ ಹೋಗಿ ಬರ್ತಾ ಇದ್ದ,....

            ಮತ್ತೆ ಆ ದಿನ ಅಶೋಕ್ ಮತ್ತೆ ಭಾನು ಹೊರಗಡೆ ಹೋದಾಗ ಅಲ್ಲಿ ಒಂದು ಸನ್ಯಾಸಿ ಅವರನ್ನು ನೋಡಿ, ಮಗು ಗಂಡತಾರ ಎದುರಿಸೋ ಶಕ್ತಿ ಇನ್ನು ಜನ್ಮವಿತ್ತು ಬರೋ ಶಿಶುಗೆ ಬರಲಿಲ್ಲ, ಅದರ ರಕ್ಷಣೆ ಮಾಡಿದರೆ ಖಂಡಿತ ಮುಂದೆ ಒಳ್ಳೆದು ಆಗ್ತದೆ, ಎಲ್ಲಾ ನಿನ್ನ ಕೈಲೇ ಇದೆ ಅಂತ ಅರ್ಥವಿಲ್ಲದ ಮಾತಾಡಿ ಹೋದರು. ಅಶೋಕ್ ಅದಕ್ಕೆ ಭಾನು ಇದಕ್ಕೆಲ್ಲ ತಲೆ ಕೆಡಿಸ್ಕೊಳ್ಬೇಡ, ಅರ್ಥವಿಲ್ಲದ ಮಾತದು ಬಾ ಅಂತ ಇಬ್ಬರು ಹೋದರು.
       ಭಾನು ಅಪ್ಪ ಎಲ್ಲಿ, ನನ್ ಅವರನ್ನ ನೋಡಿ ಕೆಲ ದಿನ ಅದಾ ಹಾಗಿದೆ, ಅಂದಾಗ ಸೋಮಶೇಖರ್ ಇಲ್ಲೇ ಇದ್ದೀನಿ, ನೀನು ಬೆಳ್ಗೆ ಬೇಗ ಹೋಗ್ತಿಯ, ಸಂಜೆ ಲೇಟ್ ಆಗಿ ಬರ್ತೀಯ, ಅದ್ಕೆ ಸಿಕ್ಕಲ್ಲ ಅಷ್ಟೇ... ಈಗ ಫ್ರೀ ಇದ್ರೆ ಬಾ ಒಂದಾಟ ಕ್ಯಾರಂ ಆಡೋಣ ಅಂದಾಗ ಅಶೋಕ್ ಸರಿ ಅಪ್ಪ, ಅಮ್ಮಂಗೆ ಹೀಗಾದ ಮೇಲೆ ಮನಸು ಸರಿ ಇಲ್ಲ, ಸರಿ ಬನ್ನಿ ಅಪ್ಪ ಅಂತ ಕ್ಯಾರಂ ಎದುರು ಕುಳಿತ, ಭಾನು, ನಾನು ಸ್ನಾಕ್ಸ್ ಏನಾದ್ರು ಮಾಡಿ ತರ್ತೀನಿ, ನೀವು ಆಟ ಅಡ್ತ ಇರಿ ಅಂತ ಹೋದ್ಲು.

      ಸೋಮಶೇಖರ್ ಮತ್ತೆ ಅಶೋಕ್ ಆಡಲು ಶುರು ಮಾಡಿದ್ರು, ಖಂಡಿತ ನನ್ನ ಸೋಲಿಸೋಕೆ ನಿಮಗೆ ಆಗಲ್ಲ ಅಪ್ಪ, ಅಂತ ಹೇಳ್ತಾ ಆಟ ಆಡ್ತಿದ್ದ, ಖಂಡಿತ ಸಾಧ್ಯ ಇಲ್ಲ, ನಾನೆ ಗೆಲ್ಲೋದು, ನಿನ್ನ ಮುಗ್ಸಿ ಆದ್ರೂ ನನ್ ಗೆಲ್ತಿನಿ, ಆಗ ಭಾನು ಏನ್ ಮಾವ, ಮುಗಿಸ್ತೀನಿ ಅಂತ ಬಿಡ್ತು ಅನ್ನಿ ಮಾವ, ಮೊದಲು ಸ್ನಾಕ್ಸ್ ತಿನ್ನಿ ಅಂತ ಇಟ್ಟು ಅತ್ತೆ ಹತ್ತಿರ ಹೋದಳು. ಆಟ ಜೋರಾಗೆ ನಡಿತಾ ಇತ್ತು, ಆಟದಲ್ಲಿ ಸೋಮಶೇಖರ್ ಅಶೋಕ್ನ ಸೋಲಿಸಿ, ನಾ ಹೇಳಿಲ್ವ ಸೋಲಿಸ್ತೀನಿ ಅಂತ ಕೊನೆಗೂ, ನಾನೆ ಗೆಲ್ಲೋದು ಅಂತ ನಕ್ಕ.ಅಶೋಕ್ ಹಾ ಅಪ್ಪ ನೀವು ಗೆದ್ರೆ ನನ್ ಗೆದ್ದ ಹಾಗೆ..

          ಅಪ್ಪ ಇನ್ನೊಂದ್ ವಿಚಾರ ನಾಳೆ ಈ ಮನೆ ತಗೋಳೋ ವಿಷಯಕ್ಕೆ ಲಾಯೆರ್ ಮೀಟ್ ಆಗೋಕೆ ಹೋಗ್ಬೇಕು, ಬೆಳ್ಗೆ ನೇ ಹೊರಟೆ ನೀವು ಬೆಳ್ಗೆ ಸಿಗಲ್ಲ ಅಲ್ವಾ ಅದ್ಕೆ ಹೇಳ್ದೆ. ಆದಷ್ಟು ಬೇಗ ಈ ಮನೆ ನಮ್ದ್ ಆಗ್ಬೇಕು.
    ಅಶೋಕ್ ಈ ಮನೆ ನಮಗೆ ಬೇಡ, ಅನ್ಸುತ್ತೆ, ನಿಮ್ಮ ಅಮ್ಮ ನೋಡು ಇಲ್ಲಿ ಬಂದ ಮೇಲೆ ಹೇಗೆ ಆಗಿದಾಳೆ, ಇನ್ನು ಇಲ್ಲೇ ಇರ್ಬೇಕಾ ಹೇಳು ಅಂದಾಗ ಅಶೋಕ್
      ಇಲ್ಲ ಅಪ್ಪ, ಅಮ್ಮನ ಹಾಸ್ಪಿಟಲ್ ಕರ್ಕೊಂಡು ಹೋಗಿ ಸರಿ ಮಾಡಿಸೋ ಜವಾಬ್ದಾರಿ ನಂದು, ಹಾಗೆ ಈ ಮನೆ ಏನೆ ಸಮಸ್ಯೆ ಇದ್ರು ಎಲ್ಲಾ ನನ್ ಸರಿ ಮಾಡ್ತೀನಿ, ನಮ್ ಮಗು ಈ ಮನೇಲೆ ಹುಟ್ಟಬೇಕು, ಅದೇ ಭಾನು, ನನ್ನ ಅಸೆ, ನೀವು ಹೋಗಿ ಮಲಗಿ ಅಪ್ಪ ಅಂತ ಹೇಳಿ ಹೋದ... ಸೋಮಶೇಖರ್ ಅಲ್ಲಿಂದ ಹೋದ...

    ಭಾನು ಬೆಳ್ಗೆ ಬೇಗ ಏಳಿಸು , ನಂಗೆ ಅರ್ಜೆಂಟ್ ಮನೆ ವಿಷ್ಯ ಮಾತಾಡಲಿಕ್ಕೆ ಇದೆ,ಸರಿನಾ ಆದಷ್ಟು ಬೇಗ ನಾವು ಈ ಮನೆ ಮಾಲಿಕರು ಆಗ್ತಿವಿ,ನಮ್ಮ ಈ ಪುಟ್ಟ ಮಗು ಈ ಮನೆಗೆ ಬರುತ್ತೆ, ಅದೇ ನನ್ ಅಸೆ... ಸರಿ ನೀನು ಮಲಗು ಅಂತ ಮಲಗಿದ್ರು...

ಬೆಳ್ಗೆ ಬೇಗ ಎದ್ದವನೆ, ಬೇಗ ಬೇಗ ಹೊರಟು ನಿಂತಾಗ ಸೋಮಶೇಖರ್ ಬಂದು ಅಶೋಕ್ ನಾನು ಬರ್ಲಾ ಮನೆಲಿ ಇದ್ದು ಇದ್ದು ಬೇಜಾರ್ ಆಗ್ತಿದೆ, ಅಂತ ಅವನ ಜೊತೆಗೆ ಹೊರಟ,ಹೋಗುವಾಗ ಭಾನು ಮಲಗಿದ್ದು ನೋಡಿ ಪಾಪ ದಿನವಿಡೀ ಕೆಲಸ ಮಾಡಿ ಸಾಕಾಗಿ ಇರುತ್ತೆ ಇಷ್ಟು ಬೇಗ ಎದ್ರೆ ಪುನಃ ಕೆಲಸ ಮಾಡ್ತಾಳೆ ಮಲಗಲಿ ಅಂತ ಹೇಳದೆ ಹೊರಟ, ತಂದೆನ ಕರೆದುಕೊಂಡು ಹೊರಟ, ಸೋಮಶೇಖರ್ ಏನು ಮಾತಾಡಡೇ ಕುಳಿತಿದ್ದ,ಹೋಗುವಾಗ ಖಾಲಿ... ಮನೆ, ಮಗು ಇದರ ಬಗ್ಗೆನ್ನೆ ಮಾತು ಅವನದು ಆಗಿತ್ತು.

    ಭಾನು ಬೆಳ್ಗೆ ಎದ್ದು,ಎಂದಿನಂತೆ ಕೆಲಸ ಮಾಡಲು ಶುರು ಮಾಡಿದಳು. ಅತ್ತೆ ರೂಮ್ಗೆ ಹೋದಾಗ ಅವ್ಳು ಕೈಲಿ ಏನೋ ಸನ್ನೆ ಮಾಡಿ ಹೇಳಿದಳು, ಆದ್ರೆ ಕ್ಯಾಮರಾ ಅನ್ನೋದು ಗೋತ್ತಾಯಿತು, ಅದನ್ನ ಹುಡುಕಲು ಮೆಲ್ಲಗೆ ಆ ರೂಮ್ ಕಡೆ ಹೋದಳು, ಅದಾಗಲೇ ಕಾಲ್ ಬಂತು, ಆ ರೂಮ್ಗೆ ಹೋದವಳು ಹೋಗಿ ಕಾಲ್ ರಿಸೀವ್ ಮಾಡಿದಳು, ಆಚೆ ಇಂದ ಬಂದ್ ಸ್ವರ ಕೇಳಿ ಭಾನು ಒಮ್ಮೆ ಮೂರ್ಛೆ ತಪ್ಪಿದಳು.ಅಶೋಕನ ಸ್ನೇಹಿತ ಬಂದು ಭಾನು ನಾ ಕರೆದುಕೊಂಡು ಹೋದರು, ಹೋಗುವಾಗ ಭಾನು ಅಳುತ್ತ ಒಮ್ಮೆ ಎಚ್ಚರ ತಪ್ಪುತ್ತಾ ಅಂತೂ ದೊಡ್ಡ ಹಾಸ್ಪಿಟಲ್ ಹತ್ತಿರ ಬಂದರು.
     ಇಲ್ಲಿ ಅಶೋಕ್ ಅಂತ ಪೇಷಂಟ್ ಎಲ್ಲಿ ಅಂದಾಗ 4ನೇ ಮಹಡಿ ಅಂದ ಕ್ಷಣ ಬಾನುನ ಲಿಫ್ಟ್ ಅಲ್ಲಿ ಕರೆದುಕೊಂಡು ಬಂದ, ಅಲ್ಲೇ ನಿಂತ ಡಾಕ್ಟ್ರ್ ನೋಡಿ ಭಾನು, ಡಾಕ್ಟರ ನಾನು ಭಾನು ಅಂತ ಅಶೋಕ್ ಅವರ  ಹೆಂಡ್ತಿ, ಅವ್ರು ಎಲ್ಲಿದಾರೆ, ಹೇಳಿ ಡಾಕ್ಟ್ರ್ ಅಂದಾಗ ಎಮರ್ಜೆನ್ಸಿ ವಾರ್ಡ್ ಅಲ್ಲಿ ಇದ್ದಾರೆ, ಇನ್ನು ಏನು ಹೇಳೋಕಾಗಲ್ಲ ಇನ್ನು 2ಗಂಟೆ ತನಕ ಅಂದಾಗ ಡಾಕ್ಟರ್ ಕಾಲಿಗೆ ಬಿದ್ದು ನನ್ನ ಗಂಡನ ಉಳಿಸಿಕೊಡಿ ಅಂತ ಅತ್ತಳು, ಡಾಕ್ಟ್ರ್ ಏನು ಹೇಳದೇ ಹೋದರು.
  
ಅಶೋಕನ ಗೆಳೆಯನ ಹೆಂಡತಿ ಭಾನು ಏನು ಆಗಲ್ಲ, ಧೈರ್ಯ ಮಾಡಿ ಇರು.. ಅಂತ ಭರವಸೆ ನೀಡಿದಳು, ಮತ್ತೆ ಡಾಕ್ಟ್ರ್ ಹೊರಗೆ ಬಂದು ಭಾನು ಅವ್ರೆ ನಿಮ್ಮ ಜೊತೆಗೆ ಅಶೋಕ್ ಮಾತಾಡ್ಬೇಕು ಅಂತಿದ್ದಾರೆ ಹೋಗಿ ಅಂತ ಹೇಳಿ ಒಳ್ಗೆ ಕಳಿಸಿದರು .

ಒಂದು ಬೆಡ್ ಮೇಲೆ ಮೂಗಿಗೆ ಪೈಪ್ ಹಾಕಿ, ರಕ್ತ ಫುಲ್ ಮೈಲಿ ಗಾಯ, ಬಾಯಿಗೆ ಆಕ್ಸಿಜನ್ ಹಾಕಿದ್ರು, ಅರ್ಧ ಕಣ್ಣು ತೆರೆದು ಕೈ ಎತ್ತಲು ಆಗದಿದ್ರೂ,ಬಾ ಅಂತ ಕರೆದು  ಕಣ್ಣು ಬಿಡಲು ಕಷ್ಟ ಆಗ್ತಿತ್ತು ಆದ್ರೂ....

ಮುಂದುವರೆಯುವುದು.........

ಕಥೆ ಇಷ್ಟಾ ಆಗ್ತಿದೀಯಾ ಅಥವಾ ಏನಾದ್ರು ಬದಲಾವಣೆ ಮಾಡ್ಬೇಕಾ ಕಾಮೆಂಟ್ ಮಾಡಿ ತಿಳಿಸಿ
ಓದಿ ಪ್ರೋತ್ಸಾಹಿಸಿ
ಧನ್ಯವಾದಗಳು 
 

Category : Stories


ProfileImg

Written by Sahana gadagkar