ಅಗೋಚರ
ಮನೆ ಎದುರು ಕಾರ್ ಬಂದು ನಿಂತಿತ್ತು, ಶಂಕರ್ ಹೊರಗೆ ಬಂದು ಅಣ್ಣ ಅಂತೂ ಬಂದೆ ಅಲಾ,ಬಾ ಒಳಗೆ ಅಂದಾಗ, ಏನೋ ಬಂದ ಹಾಗೆ ತೋರಿತು, ಒಮ್ಮೆ ಕಣ್ಣು ಮುಚ್ಚಿ ಜಪದ ಮಾಲೆನ ಹಿಡಿದು ನಿಂತರು, ಮತ್ತೆ ಶಂಕರ್ ಹೆಂಡತಿ ಹತ್ತಿರ..
ರತ್ನ ,ಒಂದು ಚಂಬು ನೀರು ತಾರಮ್ಮ, ನನ್ನ ಜೊತೆಗೆ ಬಂದ ದೂಳು, ಹೊರಗೆ ಇರಲಿ, ಅಂತ ಹೇಳಿ ನಕ್ಕ, ಶಂಕರ್, ರತ್ನ ಮುಖ ನೋಡಿಕೊಂಡರು, ಏನೆಂದು ಅರ್ಥ ಆಗಲಿಲ್ಲ .
ನೀರಲ್ಲಿ ಕಾಲು ತೊಳೆದು, ಒಳಗೆ ಹೋದರು, ಹೊತ್ಸಿಲಲ್ಲಿ ನಿಂತು ಹಿಂದೆ ನೋಡಿದ, ಕಾಲು ತೊಳೆದ ನೀರು ಆ ಮುಂಜಾವಿನ ತಂಪಲು ಬೇಗನೆ ಒಣಗಿತ್ತು...ಅದನ್ನ ನೋಡಿ ರಮೇಶ್ ಮನಸಲ್ಲಿ ನಕ್ಕು,ಒಳಗೆ ಹೋದನು.
ರತ್ನ ನಂಗೆ ಉಪಹಾರ ತುಂಬಾ ನಿಯಮದಿಂದ ಮಾಡಬೇಕು, ಅದರ ಕರ್ತವ್ಯ ನಿಂದು ಸರಿನಾ ಅಂದಾಗ
ಸರಿ ಭಾವ ಅಂತ ಅಡುಗೆ ಮನೆ ಕಡೆ ಹೋದಳು.
ಶಂಕರ್ ಹತ್ತಿರ ಮಾತಾಡ್ಬೇಕು, ಬಾ ಅಂತ ಕರೆದುಕೊಂಡು ಹೋದ
ಹೇಳು, ಶಂಕರ್ ಏನೋ ಮಾತಾಡ್ಬೇಕು ಅಂದೇ ಅಲ್ಲ, ಹೇಳು
ಅದು, ಅಣ್ಣ, ನನ್ನ ಸ್ನೇಹಿತ ಅಶೋಕ್ ಅಂತ ಒಟ್ಟಿಗೆ ಕೆಲಸ ಮಾಡ್ತಾ ಇದ್ವಿ, ಆಮೇಲ್ ನಾನು ಟ್ರಾನ್ಸ್ಫರ್ ಮಾಡ್ಕೊಂಡು ಇಲ್ಗೆ ಬಂದೆ, ನಂತರ ಅಶೋಕ್ಗು ಟ್ರಾನ್ಸ್ಫರ್ ಆಯಿತು, ನಂಗು, ಅವಂಗೂ ಇಲ್ಲಿ ಅಕ್ಕ ಪಕ್ಕ ಹಾಗೆ ಇಲ್ಲೇ ಮನೆ ಸಿಕ್ತು....
,ಆದ್ರೆ ಅಂತ ನೆಡೆದ ವಿಷಯ ಎಲ್ಲಾ ತಿಳಿಸಿದ. ಅಶೋಕ್ ಸಾಯೋ 2ದಿನದ ಮೊದಲು ಆ ಮನೇಲಿ ಏನೋ ಸಮಸ್ಯೆ ಇದೆ ಅಂತ ಹೇಳ್ತಿದ್ಲು ನನ್ ಹೆಂಡ್ತಿ ಅಂತ ಹೇಳಿದ್ದ,ಆದ್ರೆ ಭಾನು ಡಿಪರೇಷನ್ ಆಗಿದ್ಲು, ಆ ಆಕ್ಸಿಡೆಂಟ್ ಇಂದ ನಾನೇನು ಕೇಳೋಕ್ ಆಗಿಲ್ಲ, ಆಮೇಲೆ ಅವ್ಳು ಡೆತ್ ಆದ್ಲು,ಆದ್ರೆ ನನ್ನ ಸ್ನೇಹಿತ ಸಾವಿಗೂ, ಅವ್ನ್ ಹೆಂಡ್ತಿ ಸಾವಿ ಗೂ ಏನೋ ಲಿಂಕ್ ಇದೆ, ಅವ್ರಿಬ್ರ ಕತ್ತಿನಲ್ಲೂ ಗಾಯದ ಕಲೆ ಒಂದೇ ಸ್ಥಳದಲ್ಲಿ ಇದೆ..
ಈಗ ಅವ್ನ್ ತಂದೆ, ತಾಯಿನಾ ಉಳ್ಸ್ಕೊಳೋದ್, ನನ್ನ ಕರ್ತವ್ಯ. ಅವ್ನು ಯಾವಾಗ್ಲೂ ಹೇಳ್ತಿದ್ದ, ನನ್ ಅಪ್ಪ, ಅಮ್ಮನ ಚನ್ನಾಗಿ ನೋಡ್ಕೊಳ್ಬೇಕು ಅಂತ, ಅವ್ನ್ ಇದ್ದಿದ್ರೆ ಅಪ್ಪ, ಅಮ್ಮನ ಚನ್ನಾಗೇ ನೋಡ್ಕೊಳ್ತಿದ್ದ, ಈಗ ಆ ಸ್ಥಾನ ನನದು ಆಗಿದೆ, ಅದಕ್ಕೆ ನಿನ್ನ ಸಹಾಯ ಬೇಕು..
ರಮೇಶ್ ಯೋಚ್ನೆ ಮಾಡುತ್ತ, ಈಗ ಅವ್ನ ತಂದೆ, ತಾಯಿ ಎಲ್ಲಿದ್ದಾರೆ,, ಅಂದಾಗ ಶಂಕರ್ ಅದು
ತಾಯಿ, ನಮ್ಮ್ ಮನೇಲಿ ಇದ್ದಾರೆ ಅವ್ರ್ಗೆ ಪಾಶ್ವ ವಾಯು ಆಗಿದೆ, ಅವ್ನ್ ತಂದೆ ಸ್ವಲ್ಪ ದಿನ ಮನಸು ಸರಿ ಆದ್ಮೇಲೆ ಬರ್ತೇನಿ ಅಂದವರು ಇವತ್ತಿನವರೆಗೂ ಬಂದಿಲ್ಲ,
ಸರಿ ಆ ತಾಯಿನ ತೋರ್ಸು ಅಂತ ಲಕ್ಷ್ಮಿ ರೂಮ್ ಕಡೆಗೆ ಬಂದು, ಅಮ್ಮ ನಮಸ್ತೆ ನಾನು ರಮೇಶ್ ಅಂತ, ಶಂಕರ್ನಾ ಅಣ್ಣ, ಎಲ್ಲಾ ವಿಷ್ಯ ತಿಳಿತು, ಭಯಪಡಬೇಡಿ, ನಾನಿದೀನಿ..
ಅಂತ ರತ್ನನಾ ಕರೆದರೂ
ಹಾ ಭಾವ ಬಂದೆ....
ರತ್ನ ಒಳಗೆ ಹೋಗಿ ನನ್ನ ಚಿಕ್ಕದು ಪೆಟ್ಟಿಗೆ ತಾ,.
ಸರಿ ಭಾವ, ತರ್ತೀನಿ ಅಂತ ತಂದು ಕೊಟ್ಟಳು.
ಅದರಲ್ಲಿ ಇದ್ದ ಒಂದು ಗಿಡ ಮುಲಿಕೆ ತೋರಿಸಿ ಚನ್ನಾಗಿ ಅರೆದು ತಕೊಂಡು ಬಾ ಅಂತ ಕೊಟ್ಟ
ಲಕ್ಷ್ಮಿ ಕೈ ಹಿಡಿದುಕೊಂಡು ಅಮ್ಮ ನೀವು ಹುಷಾರ್ ಆಗ್ತೀರಾ, ಧೈರ್ಯದಿಂದ ಇರಿ
ರತ್ನ ಅರೆದು ತಂದು,ಭಾವ ತಗೋಳಿ, ಅಂತ ಕೊಟ್ಟು ನಿಂತಳು..
ರತ್ನ, ಇದನ್ನ ನೀನೇ ಅವರಿಗೆ ಅರೆದು 3ದಿನ ಮೈಯೆಲ್ಲಾ ಹಚ್ಚಬೇಕು,ಅದು ನಿನ್ನ ಜವಾಬ್ದಾರಿ, ಅಂತ ಮದ್ದನ್ನು ಕೊಟ್ಟು ಹೊರಗೆ ನೆಡೆದರು.
ಅಣ್ಣ, ಈ ರೀತಿಯಲ್ಲಿ ಪಶ್ವಾವಾಯು ಆದವರು ಸರಿ ಆಗಲ್ಲ, ಅಂತ ಕೇಳಿದ್ದೆ, ಆದ್ರೆ ನೀವು ಸರಿ ಆಗುತ್ತೆ ಅಂತಿದೀರಾ, ಏನಿದು ಅಂದಾಗ..
ಜೀವ ಸ್ಥಿತಿ ಇಂದ ಆಗಿದ್ರೆ ಖಂಡಿತ ಆಗ್ತಾ ಇರ್ಲಿಲ್ಲ, ಆದ್ರೆ ಇಲ್ಲಿ ನಡೆದಿರೋ ವಿಚಾರ ಬೇರೆ,ಮಾತಲ್ಲಿ ಹೇಳಿದ್ರೆ ಗೋತ್ತಾಗಲ್ಲ, ನಿನಗೆ ನಿನ್ನ ಪ್ರಶ್ನೆ ಉತ್ತರ ಕೊಡ್ತೀನಿ ಸದ್ಯದಲ್ಲಿ..
ಸದ್ಯಕ್ಕೆ ನಾನು ಆ ಮನೆ ನೋಡ್ಬೇಕು, ಅಂತ ಹೊರಟ, ಶಂಕರ್ ಕೂಡ ಹೊರಟ ಅದನ್ನ ನೋಡಿ ರಮೇಶ್,, ನಿನ್ ಎಲ್ಲಿಗೆ ಹೊರಟೆ ಶಂಕರ್
ನಿನ್ನ ಜೊತೆಗೆ,ಅಣ್ಣ
ಬೇಡ ನನ್ ಒಬ್ನೇ ಹೋಗ್ತೀನಿ.
ಬೇಡ ಅಣ್ಣ, ನಂಗೆ ಭಯ ಆಗ್ತದೆ..ನಿನ್ ಒಬ್ನೇ ಹೋಗ್ತಿಯ, ಬೇಡ ನಾನು ಬರ್ತೀನಿ..
ಇಲ್ಲ, ಯಾರು ಬರೋ ಹಾಗಿಲ್ಲ, ನಾನು ಹೋಗಿ ಬರ್ತೀನಿ, ಹಾಗೆ ಮನೆ ಬಾಗಿಲು ಹಾಕಿಕೊಂಡು ಬಿಡು ಏನು ಶಬ್ದ ಆದರೂ ಬಾಗಿಲು ತೆಗಿಬೇಡ......
ಮುಂದುವರೆಯುವುದು............