◾ಎಸ್.ಮೂರ್ತಿ, ಮಾಜಿ ಕಾರ್ಯದರ್ಶಿ
ಕರ್ನಾಟಕ ವಿಧಾನಸಭೆ (ಲೇಖಕರು)
ಈ ದೇಶ ಮತ್ತು ಈ ಸಮಾಜ - ನಮ್ಮ ದಿನನಿತ್ಯದ / ಮುಂದಿನ, ನಿಜವಾದ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದು ಕೊಳ್ಳುತ್ತಿಲ್ಲ. ಗಂಭೀರ ಸಮಸ್ಯೆಗಳನ್ನು ಬಿಟ್ಟು , ಗಂಭೀರವಲ್ಲದ ಸಮಸ್ಯೆ ಗಳನ್ನು ಗಂಭೀರವಾಗಿ ತೆಗೆದುಕೊಂಡು, ಬದುಕುತ್ತಿದೆ.
1. ನಿರುದ್ಯೋಗ :
ಒಂದು ಸಣ್ಣ ಜವಾನ ದರ್ಜೆಯ ನೌಕರಿಗೆ, ಎರಡು ಹುದ್ದೆಗೆ, 20000 ಅರ್ಜಿಗಳು ಬರುತ್ತಿವೆ. ನಿರುದ್ಯೋಗ ಸಮಸ್ಯೆಯು ಯಾವ ಹಂತದಲ್ಲಿದೆ ಎಂದು ಗೊತ್ತಿದೆ. ಇದರ ಬಗ್ಗೆ ಯಾರಿಗೂ ಯೋಚನೆ ಇಲ್ಲ.
2. ಭ್ರಷ್ಟಾಚಾರ :
ಸಾರ್ವಜನಿಕರು, ಸರ್ಕಾರ ದಿಂದ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು, ಲಂಚ ನೀಡಬೇಕಿದೆ. ಮಂತ್ರಿಗಳು, ಮಗ, ಅವರ ಕುಟುಂಬ, ಅಧಿಕಾರಿಗಳು, ಸರ್ಕಾರದ ಇಲಾಖೆಗಳು ಸಂಪೂರ್ಣ ಭ್ರಷ್ಟವಾಗಿವೆ. ಲೋಕಾಯುಕ್ತ , ACB, COD., Police, IT., ED., ಇತ್ಯಾದಿ ತನಿಖಾ ಸಂಸ್ಥೆಗಳು ಕೂಡ ಭ್ರಷ್ಟವಾಗಿವೆ. ಒಮ್ಮೆ ಚುನಾಯಿತರಾದ ಪ್ರತಿನಿಧಿ ಕೋಟಿ ಗಳಿಸುತ್ತಾನೆ ,
ಸಣ್ಣ ನೌಕರಿದಾರ ಲಕ್ಷ ಗಳಿಸುತ್ತಾನೆ. ಈ ಬಗ್ಗೆ ಯಾರಿಗೂ ಆತಂಕ, ಚಿಂತೆಗಳಿಲ್ಲ. ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಮಾಡುವುದರ ಬಗ್ಗೆ ಯಾರಿಗೂ ಯೋಚನೆ ಇಲ್ಲ!
3. ಬಡತನ :
ಈ ದೇಶದ ಸಂಪತ್ತು , ಆರ್ಥಿಕ ಶಕ್ತಿ - ದೇಶದ ನಾಗರಿಕರಿಗೆ ಸಮನಾಗಿ ಹಂಚಿಕೆ ಆಗಲಿಲ್ಲ. ಶತಶತಮಾನಗಳ ಹಿಂದೆ ಸೃಷ್ಟಿಸಿದ ವರ್ಣಾಶ್ರಮ ನೀತಿ... ಇತ್ಯಾದಿಗಳ ಕಾರಣಗಳಿಂದ ಈ ದೇಶದ ಸಂಪತ್ತು ಮೇಲ್ವರ್ಗದವರ ಬಳಿ ಇದೆ ಮತ್ತು ಮುಂದುವರೆದಿದೆ. ಬಡವರು ಮತ್ತಷ್ಟು ಬಡವ ರಾಗುತ್ತಿದ್ದಾರೆ. ಭಾರತ ಸಂವಿಧಾನದ ಅನುಚ್ಛೇದ 14ರಲ್ಲಿ "ಸಮಾನತೆ" ಮೂಲಭೂತ ಹಕ್ಕಾಗಿದ್ದರು. ದೇಶದ ನಾಗರಿಕರ ಮಧ್ಯೆ ಸಮಾನತೆ ಇಲ್ಲ. ಈ ದೇಶದ ಸ್ವಾತಂತ್ರಕ್ಕಾಗಿ ದುಡಿದು, ರಾಷ್ಟ್ರವನ್ನು ಕಟ್ಟಿದ ರಾಷ್ಟ್ರ ನಾಯಕರ ಸಮ ಸಮಾಜ ನಿರ್ಮಾಣದ ಕನಸು ನನಸಾಗಿಲ್ಲ . ನನಸಾಗುವುದು ಮರಿಚಿಕೆಯಾಗಿದೆ. ಬಡವರ ಮತ್ತು ಸಮ ಸಮಾಜ ನಿರ್ಮಾಣದ ಬಗ್ಗೆ ಯಾರಿಗೂ ಯೋಚನೆ ಇಲ್ಲ.
4. ಜಾತಿಯತೆ :
ಧಾರ್ಮಿಕತೆ, ಜಾತೀಯತೆ, ಭಾಷೆ. ಹೀಗೆ ಹಲವು ಕಾರಣಗಳಿಂದ ಈ ದೇಶದ ನಾಗರಿಕರು ವಿಭಜನೆ ಯಾಗಿದ್ದಾರೆ. ಮನು ಸ್ಮೃತಿ / ವರ್ಣಾಶ್ರಮ ನೀತಿ.. ಗಳಿಂದ ಜಾತಿಯನ್ನು ಜನ್ಮಾಧಾರಿತಗೊಳಿಸಿ, ಸಮಾಜವನ್ನು , ನಾಗರಿಕರನ್ನು ವಿಭಜಿಸಲಾಗಿದೆ. ಬುದ್ಧ , ಬಸವ, ಮಹಾತ್ಮ ಗಾಂಧೀಜಿ, ಕುವೆಂಪು. ಮುಂತಾದ ವಿಶ್ವಮಾನವರು ಈ ಭೂಮಿಯಲ್ಲಿ ಜನಿಸಿದರು, ಅವರ ವಿಚಾರ ಧಾರೆಗಳನ್ನು ಹೇಳಿದರು. ಪ್ರತಿ ಮನುಷ್ಯನ ರಕ್ತ , ಉಸಿರು, ದೇಹದ ಎಲ್ಲೆಲ್ಲಿಯೂ ಜಾತಿ ಸೇರಿದೆ. ಕೇವಲ ಶೇ.3ರಷ್ಟಿರುವ ಮೂಲಭೂತವಾದಿಗಳಿಗೆ, ರಾಜಕೀಯ ಪಕ್ಷಗಳಿಗೆ, ಮತ್ತು ರಾಜಕಾರಣಿಗಳಿಗೆ ಈ ಜಾತಿ ವ್ಯವಸ್ಥೆ , ಜನರ ವಿಭಜನೆ ಮುಂದುವರಿಯಬೇಕಿದೆ. ಈ ಬಗ್ಗೆ ಯಾರಿಗೂ ಯೋಚನೆ ಇಲ್ಲ.
5. ಯುವಶಕ್ತಿ / ವ್ಯವಸಾಯ :
ಈ ರಾಷ್ಟ್ರದಲ್ಲಿ ವ್ಯವಸಾಯ, ಕೃಷಿ ಹಳಿ ತಪ್ಪಿದೆ.ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಕ್ಕುತಿಲ್ಲ . ರೈತರು ನಿರಂತರ ಸಾಲಗಾರ ರಾಗುತ್ತಿದ್ದಾರೆ. ರಸಗೊಬ್ಬರ, ಕೀಟನಾಶಕಗಳ , ಕೃಷಿ ಕಾರ್ಮಿಕರ ವೇತನ... ಇತ್ಯಾದಿಗಳು ಗಗನಕ್ಕೇರಿವೆ.
ಯುವಕರು ವ್ಯವಸಾಯದ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ರೈತ ಮತ್ತು ಕೃಷಿ ಕಾರ್ಮಿಕರ ಮಕ್ಕಳು ಯಾವುದೋ ಜಾತಿ , ಧರ್ಮ , ಪಕ್ಷದ ಪರವಾಗಿ ಪೋಸ್ಟ್ ಗಳನ್ನು ಹಾಕುತ್ತಾ , ಸದಾ ಮೊಬೈಲ್ ಗಳನ್ನು ವೀಕ್ಷಣೆ ಮಾಡುತ್ತಾ , ಯೌವನ ಕಳೆದು ಕೊಳ್ಳುತ್ತಿದ್ದಾರೆ. ಕೆಲ ಯುವಕರು ಚಲನಚಿತ್ರ ನಟರ ಕಟೌಟ್ ಕಟ್ಟುವುದರಲ್ಲಿ ಬ್ಯುಜಿಯಾಗಿದ್ದಾರೆ. ರೈತರ ಸಾಲವನ್ನು ನಿರಂತರವಾಗಿ ಮನ್ನಾ ಮಾಡುತ್ತಿದ್ದರೂ, ಈ ರಾಷ್ಟ್ರದ ಕೃಷಿಕರ, ರೈತರ ಸ್ಥಿತಿ ಈಗಲೂ ಉತ್ತಮವಾಗಿಲ್ಲ . ಈ ಬಗ್ಗೆ ಯಾರಿಗೂ ಯೋಚನೆ ಇಲ್ಲ .
6. ಮಾಧ್ಯಮ :
ದೇಶದಲ್ಲಿ ಭಾವನಾತ್ಮಕ / ಧಾರ್ಮಿಕ ವಿಷಯಗಳೆ ಅತಿಯಾಗಿ ಚರ್ಚೆ ನಡೆಯುತ್ತಿವೆ. ಮಾಧ್ಯಮ ದವರು ತಮ್ಮ ಲಾಭಕ್ಕಾಗಿ ಭಾವನಾತ್ಮಕ / ಧಾರ್ಮಿಕ ವಿಷಯಗಳಿಗೆ ಹೆಚ್ಚಿಗೆ ಪ್ರಚಾರ ಕೊಡುತ್ತಾರೆ. ನಿಜವಾದ ಸಮಸ್ಯೆಗಳ ಬಗ್ಗೆ ಜನ ಸಾಮಾನ್ಯರು ಬಿಡಿ, ವಿದ್ಯಾವಂತರೆ ತಲೆ ಕೆಡಿಸಿ ಕೊಳ್ಳುವುದಿಲ್ಲ. ಇದು ರಾಜಕಾರಣಿಗಳಿಗೆ ತುಂಬಾ ಅನುಕೂಲವಾಗಿ ಬಿಟ್ಟಿದೆ.
ಚುನಾವಣೆ ಬಂತೆಂದರೆ ಅಭಿವೃದ್ಧಿ ಬದಲು, ಭಾವನಾತ್ಮಕವಾಗಿ ಆಟ ಆಡಿ ಗೆದ್ದು ಬರುವ, ಸರಳ ತಂತ್ರಗಾರಿಕೆಯ ವಾಮ ಮಾರ್ಗ ಹಿಡಿದಿದ್ದಾರೆ. ಈ ರಾಜಕೀಯ ಪಕ್ಷಗಳಿಗೆ ಮಾಧ್ಯಮ ಗೋಜಲಕ್ಕಿಯ ಕೆಲಸ ಮಾಡುತ್ತಿದೆ. ಈ ಬಗ್ಗೆ ಯಾರಿಗೂ ಯೋಚನೆ ಇಲ್ಲ.
7. ಖಾಸಗಿ ಶಿಕ್ಷಣ/ಆರೋಗ್ಯ ದುಬಾರಿ :
ವೃತ್ತಿ ಮತ್ತು ಆರೋಗ್ಯ ಶಿಕ್ಷಣ ಅತ್ಯಂತ ದುಬಾರಿಯಾಗಿದೆ. ಬಡವರು ಸಾಮಾನ್ಯ ವರ್ಗದ ಜನರು ಮಕ್ಕಳನ್ನು ಓದಿಸುವುದು ಕಷ್ಟವಾಗುತ್ತಿದೆ.ಇನ್ನು ಖಾಸಗಿ ಆಸ್ಪತ್ರೆಗಳು ತಮ್ಮ ಚಿಕಿತ್ಸಾ ದರಗಳನ್ನು ಹೆಚ್ಚಳ ಮಾಡಿಕೊಂಡು, ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ಬಡವರ ಕೈಗೆಟ್ಕದಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಖಾಸಗಿಕರಣ ಮಾಡಿದ್ದು ತಪ್ಪು ನಿರ್ಧಾರವಾಗಿದೆ. ಈ ಬಗ್ಗೆ ಯಾರಿಗೂ ಯೋಚನೆ ಇಲ್ಲ…
8. ಬರಗಾಲ :
ರಾಜ್ಯದ ಬಹುತೇಕ ಭೂಮಿ ಒಳಗಿನ ಅಂತರ್ಜಲ ಕುಸಿದಿದೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ, ವ್ಯವಸಾಯಕ್ಕೆ ತೊಂದರೆ ಆಗಿದೆ. ಪ್ರಾಣಿ ಪಕ್ಷಿ
ದನ ಕರುಗಳಿಗೆ ಕುಡಿಯುವ ನೀರು, ಮೇವು ಸಿಗುತ್ತಿಲ್ಲ . ಗೋಮಾಳ, ಸರ್ಕಾರಿ ಭೂಮಿ ಮಾಯವಾಗಿ ಗೋವುಗಳಿಗೆ ಮೇವಿನ ಕೊರತೆ ಉಂಟಾಗಿ, ಹಲವಾರು ದಶಕಗಳೇ ಕಳೆದಿವೆ. ಬರಗಾಲ ಪುನರಾವರ್ತನೆ ಆಗುತ್ತಿದೆ. ಈ ಬಗ್ಗೆ ಯಾರಿಗೂ ಯೋಚನೆ ಇಲ್ಲ.
9. ನಮ್ಮ ಕರ್ತವ್ಯ :
ದೇಶದ ಪ್ರತಿಯೊಬ್ಬ ನಾಗರಿಕನ ಮುಂದಿರುವ ಕರ್ತವ್ಯ , ಜವಾಬ್ದಾರಿ, ಗುರಿ - ಆರೋಗ್ಯವಂತ, ಸುಂದರ ಸಮಾಜ ನಿರ್ಮಾಣ ಮಾಡುವ ಬಗ್ಗೆ ಯಾರಿಗೂ ಯೋಚನೆ ಇಲ್ಲ. ಅನೇಕ ಕಡೆ ಕಣ್ಣೆದುರೇ ಭ್ರಷ್ಟಾಚಾರ ನಡೆಯುತ್ತಿದ್ದರೂ ಜವಾಬ್ದಾರಿ ತೆಗೆದುಕೊಳ್ಳದೆ ಈ ಕುರಿತು ಪ್ರಶ್ನೆಯೂ ಮಾಡುತ್ತಿಲ್ಲ. ಇವುಗಳೆಲ್ಲ ವೂ ನಿರ್ಲಕ್ಷ್ಯ ಮಾಡಿಕೊಂಡು ಹೋದರೆ ಮುಂದಿನ ದೇಶದ ಪರಿಸ್ಥಿತಿ ಹದೋಗತ್ತಿಗೆ ಸಾಗುತ್ತದೆಂದು ತಿಳಿದ ವಿಷಯ.
ಪರಿಸ್ಥಿತಿ ನಿವಾರಣೆಗೆ ಪ್ರಜ್ಞಾವಂತ ನಾಗರಿಕ ಸಮಾಜ ಎದ್ದು ನಿಲ್ಲಬೇಕಿದೆ. ತಾಂಡವಾಡುತ್ತಿರುವ ಸಮಸ್ಯೆಗಳುನ್ನು ಪರಿಹರಿಸಿಕೊಳ್ಳಲು ನಮಗೆ ಸಂವಿಧಾನ ಹಕ್ಕು ಇದೆ, ಹೀಗಾಗಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ನಾವೆಲ್ಲರೂ ಕಂಕಣಬದ್ದರಾಗಬೇಕು. ಕೈಲಾದಷ್ಟು ಈ ಸಮಾಜದಲ್ಲಿ ಅಳಿಲು ಸೇವೆ ಸಲ್ಲಿಸಬೇಕಿದೆ. ನಮ್ಮ ಆರ್ಥಿಕತೆಯ ಜೊತೆಯಲ್ಲಿಯೇ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಸಾಗಬೇಕು. ಎಲ್ಲದಕ್ಕೂ ಟೀಕೆಗಳು ಅಗತ್ಯವಿಲ್ಲ. ಕೆಲವೊಮ್ಮೆ ನಮ್ಮಲ್ಲಿ ತಾಳ್ಮೆ ಇರಬೇಕು. ಹೀಗಾಗಿ ಸಮಾಜದಲ್ಲಿ ಅನ್ಯಾಯ ಭ್ರಷ್ಚಚಾರ ವಿರೋಧಿಗಳಿಗೆ ಸ್ವಯಂ ಪ್ರೇರಿತರಾರೆ ಮುಂದೆ ನಮ್ಮ ಮಕ್ಕಳು ಹಾಗೂ ಸಮಾಜಕ್ಕೂ ಭವಿಷ್ಯ ಇದೆ ಎಂಬುದು ಯಾರು ಮರೆಯುವಂತಿಲ್ಲ. ಅಲ್ಲವೇ ಈ ಕಾರ್ಯಕ್ಕೆ ಇಳಿಯಲು ಇನ್ನೇೆಷ್ಟು ದಿನ ಕಾಯುತ್ತಾ ಸಹಿಸುತ್ತಾ ಸುಮ್ಮನ್ನಿರಬೇಕು.
ದೇಶದ ಸ್ವತಂತ್ರಕ್ಕಾಗಿ ಹಾಗೂ ಸಂವಿಧಾನ ರಚಿಸಿ, ಪ್ರಜಾಪ್ರಭುತ್ವ ರಾಷ್ಟ್ರವನ್ನಾ ಗಿಸಲು ಶ್ರಮಿಸಿದ ಎಲ್ಲಾ ಮಹನೀಯರಿಗೆ ರಾಷ್ಟ್ರ ನಾಯಕರುಗಳಿಗೆ ಗೌರವ ಅರ್ಪಿಸಿ ಮತ್ತು ನಿಮಗೆಲ್ಲರಿಗೂ 75ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿ, ನನ್ನ "ವಿನಂತಿ"ಯ ಈ ಲೇಖನ ಮುಗಿಸುತ್ತೇನೆ.
0 Followers
0 Following