ಕಾಡುವ ಅಗೋಚರ ಭಾಗ - 4

ಅಗೋಚರ

ProfileImg
13 Jan '24
4 min read


image

ಅಗೋಚರ

ಅಜ್ಜಿ, ಏನು ಹೇಳದೆ, ಕೋಣೆ ಅತ್ತ ಹೋದಳು, ಮಗು ಓಡಿ ಹೋಗಿ ಕಿಟಕಿ ಅಲ್ಲಿ ತನ್ನ ಮನೆಯನ್ನ ದಿಟ್ಟಿಸಿ ನೋಡಿತು, ಅಜ್ಜಿ ಕೊಟ್ಟ ಸರ, ಆಚೆ, ಈಚೆ ಅಳುಗಾಡಡುತ್ತ, ಗಾಳಿ ಅಲ್ಲಿ ತೆಲುತ್ತ  ಇತ್ತು, ಅದನ್ನ ನೋಡಿ ಭಯದಲ್ಲಿ ಎಂಜಲು ನುಂಗುತ್ತಾ, ಮಗು ಅದನ್ನೇ ನೋಡುತ್ತಾ, ಅಮ್ಮ ಅಮ್ಮ ಅಂತ ಕೈ ಹೊರಗೆ ಹಾಕುತ್ತೀದನ್ನ ನೋಡಿದ ಗೌರಿ ಏನಿದೆ ಅಲ್ಲಿ, ಯಾಕೆ ಯಾವಾಗ್ಲೂ ಕೈ ತೋರಿಸ್ತೀಯ, ಅಂತದು ಏನಿದೆ ಹೇಳು ಶ್ರೇಯ, ಹೇಳು, ನೋಡಿ ಪಾರುಕ್ಕ, ಯಾವಾಗ್ಲೂ ಕೈಯಲ್ಲಿ ಅಲ್ಲಿ ನೋಡು, ಇಲ್ಲಿ ನೋಡು ಅಂತ ಕೈ ತೋರಿಸ್ತಾಳೆ, ನಂಗಂತೂ, ಎಲ್ಲಾ ವಿಚಿತ್ರ ಆಗೇ ಕಾಣ್ತಿದೆ, ಇದು ನನ್ನ ಭ್ರಮೇನೋ, ಅಥವಾ ನಿಜಾನೋ ತಿಳಿತಿಲ್ಲ, ಗೊತ್ತಿರೋರು ಹೇಳ್ತಾನು ಇಲ್ಲ, ನಾನಿನ್ನು ಬರ್ತೀನಿ, ಅಂತ ಮಗುನ್ನ ಎತ್ತಿಕೊಂಡು ಹೋದಳು.

      ಅಜ್ಜಿ ನೀವು ಯಾಕ್ ಹೇಳೋಕೆ, ಬಿಡ್ತಾ ಇಲ್ಲ, ಪಾಪ, ಗೌರಿ , ಆ ಮಗು ಕಷ್ಟ ಪಡೋದ್ನ ನನ್ನಿಂದ ನೋಡೋಕೆ ಆಗ್ತಿಲ್ಲ, ಆದ್ರೆ ನಾವು ಹೇಳೋದ್ರೆ ಅವ್ರ್ಗೆ ಇನ್ನು ಚಿತ್ರಹಿಂಸೆ ಜಾಸ್ತಿ ಆಗುತ್ತೆ, ಯಾಕಂದ್ರೆ ಆ ಮನೆ ಬಗ್ಗೆ ನಿಂಗೆ ಹೊಸದಾಗಿ ಹೇಳೋದು ಏನು ಇಲ್ಲ ಅಂದ್ಕೊಳ್ತಿನೀ, ಅಂತ್ಯ ಕಾಲ ಹತ್ತಿರ ಇದೆ, ದೆವ್ವದ ಶಕ್ತಿನಾ ಅಥವಾ ದೈವ ಶಕ್ತಿನಾ ನೋಡೋಣ ಅಂತ ಹೇಳಿದಳು.

        ಸಂಜುಗೆ ಕಾಲ್ ಮಾಡಿ ಹೇಳಲಾ, ಇಲ್ಲಿ ನೆಡೆದ ವಿಚಾರ, ಬೇಡ ಪಾಪ ನಮಗಾಗಿ ಎಷ್ಟು ದುಡೀತಾರೆ, ಅವ್ರು ಹೇಳಿದಂಗೆ ಈ ಮನೆಲಿ ಎಷ್ಟು ಕಷ್ಟ ಆದ್ರೂ ಪರವಾಗಿಲ್ಲ, ಸಂಜೂಗೋಸ್ಕರ ನಾನು ಸಹಿಸಿಕೊಳ್ತೀನಿ. ಮಗುನ್ನ ಆಚೆ ಈಚೆ ಹೋಗಲು ಬಿಡದೆ, ಪಕ್ಕದಲ್ಲಿ ಕೂರಿಸಿಕೊಂಡು ಅವಳ ಕೆಲಸ ಮಾಡ್ತಾ ಇದ್ಲು, ಹೀಗೆ ಮದ್ಯಾನ ಆಯಿತು, ಊಟ ಮಾಡಿ, ಮಲಗಿದ ಮೇಲೆ ಮತ್ತೆ ಅದೇ ನರಳಾಟಾ , ಅದನ್ನ ಕೇಳಿದ ಕೂಡಲೇ, ಗೌರಿ ಮಗುನ್ನ ಎತ್ತಿಕೊಂಡು ಆ ಸ್ವರ ಬಂದ ಕಡೆಗೆ ನಡೆದಳು, ಆ ಕೋಣೆ ಹತ್ತಿರ ಬಂದ ಕೂಡಲೇ ನಾಯಿ ಜೋರಾಗಿ ಬೊಬ್ಬೆ ಹೊಡಿತು, ಅಲ್ಲಿಗೆ ಆ ಶಬ್ದ ಕೂಡ ನಿಂತಿತ್ತು.
         ಈ ನಾಯಿ, ಅದೇ ಸಮಯಕ್ಕೆ ಕೂಗುತ್ತೆ, ಕಾಣದ ಶಕ್ತಿ ಏನೋ ಇದೆ ಇಲ್ಲಿ, ಅದೇನು ಅಂತ ನಾ ನೋಡಬೇಕಾದ್ರೆ ಈ ನಾಯಿನ ಬಾಯಿ ಮುಚ್ಚಿಸಬೇಕು, ಇಲ್ಲ ಅಂದ್ರೆ ಖಂಡಿತ ನಂಗೆ ಏನು ತಿಳ್ಕೊಳೋಕೆ ಅಗಲ್ಲ. ಅಂತ ಮತ್ತೆ ಹೋಗಿ ಮಲಗಿದಳು.

ಮತ್ತೆ ರಾತ್ರಿ ಆದಮೇಲೆ ಮೆಲ್ಲಗೆ ಹೊರಗೆ ಹೋಗಿ ಆ ನಾಯಿನ ಸರಪಳಿ ಹಾಕಿ?ಮನೆ ಇಂದ ದೂರ ಕರೆದುಕೊಂಡು ಹೋಗಿ ಕಟ್ಟಿ ಬಂದಳು. ನಾಯಿ ಹೋಗಲು ಕೇಳದೆ ಇದ್ರು, ಒತ್ತಾಯವಾಗಿ ಕರೆದುಕೊಂಡು ಹೋದಳು. ಮನಸಲ್ಲಿ ದೃಢ ನಿರ್ಧಾರ ಮಾಡಿಯೇ ಮನೆಗೆ ಬಂದಳು, ಶಬ್ದ ಬರೋ ತನಕ ಕಾದು ಕುಳಿತಳು.
   ಸರಿ ಸುಮಾರು 12ಗಂಟೆ ಆಗೋವಾಗ, ಅದೇ ನರಳಾಟಾ ಕೇಳಿತು, ಮಗುನ್ನ  ಎತ್ತಿಕೊಂಡು ಆ ನರಳಾಟದ ಕೋಣೆ ಹತ್ರ ಹೋಗಿ ನಿಂತಳು. ಬಾಗಿಲು ಹಾಕಿಯೇ ಇತ್ತು, ಅದರ ಕೀ ಹಾಕಿಯೇ ಇತ್ತು, ಆಗ ನೆನಪಿಗೆ ಬಂತು, ಆ ದಿನ ಮನೆ ಕೊಡುವಾಗ ಈ ರೂಮ್ಗೆ ಹೋಗ್ಬೇಡಿ, ಅಂತ ಹೇಳಿ ಹೋಗಿದ್ರು, ಅದ್ರ ಕೀ, ಆ ಕೀ ಗೊಂಚಲಲ್ಲಿ ಇರಬಹುದು ಅಂತ ಹುಡುಕಿ ಒಂದೊಂದೇ ಹಾಕಿ ನೋಡಿದಳು. ಬಾಗಿಲು ಓಪನ್ ಆಯಿತು, ಒಳಗೆ ಕತ್ತಲು ಅವರಿಸಿತ್ತು, ಮೆಲ್ಲಗೆ ಹೆಜ್ಜೆ ಇಡುತ್ತ ರೂಮ್ ಅಲ್ಲಿ ಬಂದಳು, ಅಲ್ಲಿ ಯಾರೋ ನಿಂತಿರೋ ಹಾಗೆ ಆಯಿತು, ಯಾರು ಯಾರು, ನಾ ನೋಡಿದೆ, ಅಲ್ಲಿ ನಿಂತಿದ್ದು ಯಾರು, ಅಂತ ಅದ್ರ ಹತ್ತಿರ ಹೋದಳು. ಕೈಲಿದ್ದ ಮೊಬೈಲ್ ಟಾರ್ಚ್ ಆನ್ ಮಾಡಿ ಆ ಕಡೆ ಹಿಡಿದಳು.ಅಲ್ಲಿ ಯಾವ್ದೋ ಹಳೇದಾದ ಫೋಟೋ ಇತ್ತು, ಮತ್ತೆ ಕೆಲವಂದು ಫೋಟೋ ಇತ್ತು, ಅದನ್ನ ನೋಡುತ್ತಾ ಅಲ್ಲೇ ನಿಂತಳು, ಯಾವ್ದೋ ನರಳಾಟ ಹತ್ತಿರ ದಿಂದ ಕೇಳತೊಡಗಿತ್ತು, ಪ್ರಣತಿ ಬೆನ್ನ ಹಿಂದೆ ಇದೆ, ಆ ಶಬ್ದ ಹಿಂದೆ ನೋಡಲು ಭಯ, ಹಿಂದೆ ನೋಡಿದರೆ ಏನೋ ವಿಕ್ರತ ರೂಪ,ಅಮ್ಮ, ಅಮ್ಮ ಅಂತ ಬೊಬ್ಬೆ ಹಾಕಿದಳು, ಮತ್ತೆ ಮಾಯವಾಯ್ತು, ಹೊರಗೆ ಹೋಗಲು ಪ್ರಯತ್ನ ಮಾಡಿದರು ಏನು ಮಾಡಲು ಆಗಲಿಲ್ಲ, ಆ ವಿಕ್ರತ ನೆರಳು ಗೌರಿ ನಾ ಹತ್ತಿರವೇ ಬರ್ತಿತ್ತು,
   ಮಲಗಿದ್ದ ಅಜ್ಜಿ, ಎದ್ದು ಪಾರು ಗೌರಿ ಜೊತೆಗೆ ಇರೋ ನಾಯಿನ ದೂರದಲ್ಲಿ ಕಟ್ಟಿ ಹಾಕಿದಾಳೆ, ಅದನ್ನ ಬೇಗ,ಬಿಟ್ಟು ಬಿಡು,ಹೋಗು ಅಂದಳು. ಪಾರು ಒಂದೇ ಉಸಿರಲಿ ಓಡಿ, ನಾಯಿನ ಬಿಟ್ಟು ಬಿಟ್ಟಳು, ಎಲ್ಲಿಂದ ಬಂತೋ ನಾಯಿ ಒಮ್ಮಲ್ಲೇ,, ಮನೆಯ ಒಳಗಡೆ ಹೋಗಿ, ಕೋಣೆ ಹತ್ತಿರ ಹೋಗಿ ಬೊಗಳಲು ಶುರು ಮಾಡಿತ್ತು, ಮತ್ತೆ ಶಬ್ದ ಸಂಪೂರ್ಣ ನಿಂತು ಹೋಯಿತು, ಬಾಗಿಲು ತಗೆದು ಹೊರಗೆ ಬಂದಳು. ಇಷ್ಟೆಲ್ಲ ಆಗ್ತಾ ಇದ್ರು, ಅಷ್ಟು ಬೊಬ್ಬೆ ಕೇಳಿದ್ರು ಎಲ್ಲರೂ ಏನು ಆಗ್ಲಿಲ್ಲ ಅಂತ ಅವರರವರ ಕೆಲ್ಸದಲ್ಲಿ ಇದ್ರು, ದಿನ ಅಳೋರಿಗೆ ಏನು ಹೇಳೋದು ಅನ್ನೋ ಹಾಗೆ ಇತ್ತು ಸನ್ನಿವೇಶ.

    ಇಲ್ಲ ಈ ಮನೇಲಿ ಏನೋ ಇದೆ, ನಂಗೋತ್ತು, ನನ್ನ ಭ್ರಮೆ ಅಲ್ಲ, ಇದು ನನ್ ಹೇಳಿದ್ರೆ ಸಂಜು ನಂಬಲ್ಲ, ಏನು ಮಾಡ್ಲಿ, ಇಲ್ಲ ಇದಕ್ಕೆ ಪರಿಹಾರ ಬೇಕೇ ಬೇಕು, ಅಂತ ನಾಯಿ ಹತ್ತಿರ ಬಂದು, ನೀನು ಇಲ್ಲ ಅಂದಿದ್ರೆ ನಾನು ನನ್ ಮಗು ಇವತ್ತು ಉಳಿತಾನೆ ಇರ್ಲಿಲ್ಲ, ನಿನ್ನ ದೂರ ಕಟ್ಟಿ ತಪ್ಪು ಮಾಡ್ಬಿಟ್ಟೆ, ಕ್ಷಮಿಸು ಅಂತ ನಾಯಿಗೆ ಕೈ ಮುಗಿದಳು.

   ಬೆಳಬೆಳ್ಗೆ ಮನೆ ಬಾಗಿಲು ಯಾರೋ ಬೆಲ್ ಮಾಡಿದರು, ಹೋಗಲು ಭಯ, ಹೆದರುತ್ತಾ ಮೆಲ್ಲಗೆ ಬಾಗಿಲು ತೆರೆದಳು, ಗಂಡನನ್ನ ನೋಡಿ ಖುಷಿ ಅಲ್ಲಿ ತಬ್ಬಿಕೊಂಡು ಅಳಲು ಶುರು ಮಾಡಿದಳು, ನನ್ನ ನಂಬಿ ಇಲ್ಲಿ ಏನೋ ಇದೆ, ನನ್ನ ನಂಬಿ,  ಪಾರುಕ್ಕನಾ ಹತ್ರ ಕೇಳಿ ಯಾವದಾದ್ರು ಮಂತ್ರವಾದಿ ಮನೆಗೆ ಹೋಗಿ ಬರೋಣ, ನಂಗೆ ಭಯ ಆಗ್ತಿದೆ ಇಲ್ಲಿ ಇರೋಕೆ, ಅಂದಾಗ ಸಂಜು ಮನಸು ಇಲ್ಲದಿದ್ರೂ, ಹೆಂಡತಿ ಸಮಾಧಾನಕ್ಕೆ ಒಪ್ಪಿದ,ಸರಿ  ಹೋಗೋಣ, ನಾ ವಂಚೂರು ಮಲಗ್ತೀನಿ ಅಂತ ಹೋಗಿ ಮಲಗಿದ....

ಬೆಳ್ಗೆ ಎದ್ದು ಸ್ನಾನಕ್ಕೆ ಹೋದ ಗೌರಿ , ಅಮ್ಮ ಅಂತ ಕಿರುಚಿದಳು, ಅವಳ ಸ್ನಾನದ ನೀರು ಪುರ ರಕ್ತದಿಂದ ಕುಡಿತ್ತು. ಅದನ್ನ ಕೇಳಿ ಸಂಜು ಬಾತ್ರೂಮ್ ಕಡೆ ಓಡಿದ ನೀರು ರಕ್ತದಿಂದ ಕುಡಿತ್ತು, ಅದನ್ನ ನೋಡಿ ಸಂಜು, ಏನಿದು ಈ ತರ ನೀರು, ಗೌರಿ ಏನು ಆಗ್ತಿದೆ ಇಲ್ಲಿ ಅಂದಾಗ, ನಾ ಹೇಳಿಲ್ವ ನಿಮಗೆ ಇಲ್ಲಿ ಏನೋ ಇದೆ, ಆದಷ್ಟು ಬೇಗ ಪರಿಹಾರ ಕೊಂಡುಕೊಳ್ಳಬೇಕು, ಸರಿ ಬಾ ಗೌರಿ ಹೋಗೋಣ ಅಂತ ಇಬ್ಬರು ಹೊರಗೆ ಬಂದು ಇನ್ನೇನು ತಾವು ರೆಡಿ ಆಗಿ ಮಗುನ್ನ ಎತ್ತಿಕೊಳ್ಳಬೇಕು ಅನ್ನೋವಾಗ ಮಗು ಮುಖ ವಿಕಾರವಾಗಿತ್ತು, ಹಹಹಹ ಅಂತ ವಿಚಿತ್ರವಾಗಿ ನಗುತ್ತ ನನ್ನ ಏನು ಮಾಡೋಕ್ ಆಗಲ್ಲ ನಿಮಗೆ, ಮೊದ್ಲು ನಿಮ್ಮ ಮಗುನ ಆಮೇಲೆ ನಿಮ್ಮನ್ನ, ಇಲ್ಲಿ ಬಂದವ್ರನ್ನ ಒಬ್ಬರನ್ನು ಬಿಟ್ಟಿಲ್ಲ ನಾನು,  ನಿಮ್ಮನ್ನ ಬಿಡ್ತೀನಾ, ಹೋಗಿ ಎಲ್ಲಿ ಬೇಕಾದ್ರು ಹೋಗಿ, ನನ್ನ ಏನು ಮಾಡ್ಲಿಕ್ಕೆ ಆಗಲ್ಲ ಅಂತ ಜೋರಾಗಿ ಅರಚಿತ್ತು. ಮತ್ತೆ ಅಲ್ಲಿಂದ ಓಡಿದ ಮಗು ಆ ನಿಗೂಢ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಬಿಡ್ತು. ಗೌರಿ,ಸಂಜು ಬಾಗಿಲು ಬಡಿದರು, ಆದ್ರೂ ಏನು ಪ್ರಯೋಜನ ಆಗಲಿಲ್ಲ.
  
ಗೌರಿ ಅಜ್ಜಿ ಅಜ್ಜಿ ಅಂತ ಅವರ ಮನೆಗೆ ಓಡಿದಳು....
 

ಮುಂದುವರೆಯುವುದು……..

Category:Stories



ProfileImg

Written by Sahana gadagkar

0 Followers

0 Following