ನೈವೇದ್ಯಕ್ಕೆ ಶ್ರೇಷ್ಠ ಬಾಳೆಹಣ್ಣು , ತೆಂಗಿನಕಾಯಿ

ಅಧ್ಯಾತ್ಮ

ProfileImg
01 Jun '24
2 min read


image


  ಭಾರತೀಯ ಸನಾತನ ಮಹಾನ್ ಸಾಂಸ್ಕೃತಿಕ ಪರಂಪರೆ ದೇವರನ್ನು ಅವಲಂಬಿಸಿದೆ .  ದೇವರ ದರ್ಶನಕ್ಕೆ ಹೋಗುವವರು ಸಾಮಾನ್ಯವಾಗಿ ಬರಿಗೈಯಲ್ಲಿ ಹೋಗುವುದಿಲ್ಲ . ಏನಿಲ್ಲವೆಂದರೂ ತೆಂಗಿನಕಾಯಿ , ಬಾಳೆಹಣ್ಣು , ಹೂವು ಇರಲೇಬೇಕು . ಯಾವುದು ಒಳ್ಳೆಯದು , ಶ್ರೇಷ್ಠ , ಯೋಗ್ಯ ಎಂಬುದನ್ನು ನಮ್ಮ ಪೂರ್ವಜರು ನಿರ್ಧರಿಸಿ ಪರಂಪರಾಗತವಾಗಿ ನಡೆದುಕೊಳ್ಳುವಂತೆ ಮಾಡಿದರು . ದೇವರಿಗೆ ತೆಂಗಿನಕಾಯಿ , ಬಾಳೆಹಣ್ಣನ್ನು ಏಕೆ ಅರ್ಪಿಸಬೇಕು ಎಂದರೆ ಇವೆರಡೂ ಹಣ್ಣುಗಳು ಪೂರ್ಣ ಪವಿತ್ರ ಫಲಗಳು . ಇದನ್ನು ದೇವರಿಗೆ ಅರ್ಪಿಸಿದರೆ ಅಪೇಕ್ಷೆ ನೆರವೇರುವುದು ಖಂಡಿತ ಎಂಬ ಭಾವನೆ . ಭೂಮಿಯಲ್ಲಿ ಬೆಳೆಯುವ ಗಿಡದ ಹಣ್ಣುಗಳನ್ನು ಪಶು , ಪಕ್ಷಿಗಳು ತಿಂದು ಬೀಜವನ್ನು ಎಸೆಯಬಹುದು ಅಥವಾ ಬಹು ದೂರ ಹಾರಿ ಹಿಕ್ಕೆ ಹಾಕುತ್ತವೆ . ಆ ಬೀಜದಿಂದ ಬೆಳೆದ ಗಿಡ - ಮರಗಳು ಎಂಜಲಿನಿಂದ ಬೆಳೆಯುವಂತಹವು . ಇಂತಹ ಫಲಗಳು ಪವಿತ್ರವೆನಿಸವು . ಆದ್ದರಿಂದ ದೇವರಿಗೆ ಇಂತಹವುಗಳನ್ನು ಪೂಜೆಯ ಹೆಸರಲ್ಲಿ ಸಮರ್ಪಿಸಿ ನೈವೇದ್ಯ ಮಾಡುವುದು ಶ್ರೇಷ್ಠವಲ್ಲ ; ಸರಿಯೂ ಅಲ್ಲ . ತೆಂಗಿನಕಾಯಿ , ಬಾಳೆಹಣ್ಣು ಈ ವರ್ಗಕ್ಕೆ ಸೇರದ ಪವಿತ್ರ ಫಲಗಳೆನಿಸಿವೆ . ಕರೆಸಿಕೊಂಡಿರುವ ; ಹೊಂಬಾಳೆಯಲ್ಲಿ ಏಲಕ್ಕಿ ಬಾಳೆ , ರಸಬಾಳೆ , ಪಚ್ಚಬಾಳೆ , ಬಾಳೆಹಣ್ಣು : ಬಾಳೆಗಿಡ , ಕದಳೀಗಿಡ , ರಂಭೆ ( ಸಂಸ್ಕೃತ ) ಎಂದು ಜವಾರಿ ಬಾಳೆ , ಮಿಟ್ಟಿಬಾಳೆ ಎಂದು ಅನೇಕ ಥರದ ತಳಿಗಳಿವೆ . ಬಾಳೆಹಣ್ಣು 40
ವೈವಂದ್ಯಲ್ಲಿ ಶ್ರೇಷ್ಠ ಬಾಚಿಹಣ್ಣು , ತೆಂಗಿನಕಾ ನಂ . ಯಾವತ್ತೂ ಬೀಜದಿಂದ ಬೆಳೆಯದೆ ಕಂದಿನ ಸಹಾಯದಿಂದ ಬೆಳೆಯುತ್ತದೆ . ಕಂದಿನಿಂದ ಚಿಗುರಿ ಗಿಡವಾಗಿ ಬಾಳೆ ಫಲ ನೀಡುತ್ತದೆ . ಇದು ಯಾವ ಜೀವಿಗಳ ಬಾಯಿಗೆ ಸಿಗದೆ ' ಮಡಿ'ಯಾಗಿಯೇ ಬೆಳೆದು ಫಲ ನೀಡುತ್ತದೆ . ಒಮ್ಮೆ ಫಲ ಬಿಟ್ಟ ನಂತರ ತನ್ನ ಆಯಸ್ಸು ಮುಗಿಸುತ್ತದೆ . ಮಡಿ ಊಟಕ್ಕೂ ಬಾಳೆ ಎಲೆ ಶ್ರೇಷ್ಠವೆನಿಸಿದೆ . ಬಾಳೆಯ ದಿಂಡಿನಿಂದ ಮಂಟಪಗಳನ್ನು ಕಟ್ಟುತ್ತಾರೆ . ದೇವತಾಕಾರ್ಯದಲ್ಲಿ ಸದಾ ಮುಂದಿದ್ದು ಶ್ರೇಷ್ಠವೆನಿಸುತ್ತದೆ . ಬಾಳೆ ತಾನು ಆಯುಷ್ಯ ಮುಗಿಸುವ ಮೊದಲು ಕಂದುಗಳನ್ನು ಮಾಡಿ ಸಸಿಗಳನ್ನು ಬೆಳೆಸುತ್ತದೆ . ಬಾಳೆಹಣ್ಣಿನ ತುದಿ ಮುರಿದು ನೈವೇದ್ಯ ಮಾಡಿ ಪವಿತ್ರ ಭಾವನೆ ಹೊಂದುತ್ತಾರೆ . ತೆಂಗಿನಕಾಯಿ * ಕಲ್ಪವೃಕ್ಷ ಎನಿಸಿಕೊಂಡಿರುವ ತೆಂಗಿನ ಗಿಡ ದೇವತಾಕಾರ್ಯದಲ್ಲಿ ಮುಂಚೂಣಿಯಲ್ಲಿರುತ್ತದೆ . ನೀರಿನ ತೆಂಗಿನಕಾಯಿಯನ್ನು ಕುಂಭದಲ್ಲಿಟ್ಟು ಸಿಪ್ಪೆಯ ಸಮೇತ ಅಥವಾ ಒಂದು ತಿಂಗಳು ಭೂಮಿಯಲ್ಲಿ ಹೂತರೆ ಅದು ಮರವಾಗಿ ಬೆಳೆಯುತ್ತದೆ . ನಂತರ ಅದು ಎತ್ತರದಲ್ಲಿ ಕಾಯಿ ಬಿಡುತ್ತದೆ . ಎಂಜಲು ಇದಕ್ಕೂ ಅನ್ವಯಿಸದು . ತೆಂಗಿನಕಾಯಿಯನ್ನು ಒಡೆಯದೆ ಯಾವ ಜೀವಿಯೂ ತಿನ್ನಲು ಸಾಧ್ಯವಿಲ್ಲ . ಒಡೆದು ತಿಂದು ಎಸೆದರೂ ಅದು ಸಸಿಯಾಗಿ ಬೆಳೆಯುವುದಿಲ್ಲ . ತೆಂಗಿನ ಕಾಯಲ್ಲಿ ಅಗೋಚರ ಶಕ್ತಿಯಿಂದ ನೀರು ತುಂಬಿರುತ್ತದೆ . ಎಳನೀರು - ಕಾಯಿನೀರು ಎಳನೀರು - ಕಾಯಿನೀರು ಅತ್ಯಂತ ಪವಿತ್ರವಾದ ನೀರು . ಇದರಲ್ಲಿರುವುದೆಲ್ಲ ' ಮಡಿನೀರು ' ಕಾಯಿ ನೀರನ್ನು ದೇವರ ಮುಂದಿರುವ ಪದಾರ್ಥಗಳು , ಫಲ - ಪುಷಗಳಿಗೆ ಸಿಂಪಡಿಸಿದರೆ ಪವಿತ್ರವಾಗುತ್ತದೆ . ಕಾಯಿ ನೀರಿನಿಂದಲೇ ದೇವರಿಗೆ ನೈವೇದ್ಯ ಮಾಡುವುದು ಹೆಚ್ಚು ಪರಿಶುದ್ಧ , ಕಾಯಿ ನೀರನ್ನು ' ತೀರ್ಥ ' ರೂಪದಲ್ಲಿ ಸೂಕ್ತ , ಕಾಯಿನೀರು ಸೇವನೆ ದೇಹದ ತಾಪಮಾನ ನಿವಾರಿಸಿ ಶಾಂತವಾಗಿಸುತ್ತದೆ . ಮನಸ್ಸಿನ ಬೇಗುದಿ ಪರಿಹರಿಸಲು ಎಳನೀರು ಸಹಕಾರಿ ಮತ್ತು ಆರೋಗ್ಯಕಾರಿ . ಮಳೆನೀರಿಗಿಂತಲೂ ಎಳನೀರು ಪವಿತ್ರ ಜಲ . ಯಾವ ದೇವಸ್ಥಾನಕ್ಕೆ ಹೋದರೂ ಬಾಳೆಹಣ್ಣು , ತೆಂಗಿನಕಾಯಿ ಒಯ್ದಿರಿ . ಅನ್ಯ ಫಲಗಳಿದ್ದರೂ ಇವೆರಡನ್ನೂ ಮರೆಯದಿರಿ . ಕೈಗೆಟುಕುವ ದರದಲ್ಲಿ ಸಿಗುವ ಶ್ರೇಷ್ಠ ಫಲ ಒಯ್ದು ದೇವರಿಂದ ಶ್ರೇಷ್ಠ ಫಲಗಳನ್ನೇ ಪಡೆಯಿರಿ.

-ಹನುಮಂತ ಮ. ದೇಶಕುಲಕರ್ಣಿ.

Category:Spirituality



ProfileImg

Written by Hanumant Deshkulkarni