ಧರೆಯಲ್ಲಿರುವ ದೇವತೆ

ProfileImg
14 May '24
1 min read


image

1) ಪ್ರತಿ ಮುಂಜಾನೆ ಬೆಳಗುವ ದೀಪ…

ಅಣು ಅಣುವಲ್ಲಿ ದೇವರ ರೂಪ…

ಪ್ರತಿ ಅಕ್ಷರ ಕಲಿಸಿದ ಬಳಪ…

ನಿನ್ನ ಮಮತೆಗೆ ಕಾಣದು ಲೋಪ…

ತಾಯಿಯು ಒಬ್ಬಳೇ ನೂರುಮಕ್ಕಳಿಗೂನು…

ನೀ ಹಾಡುವ ಲಾಲಿಯು ಹಾಲುಸಕ್ಕರೇಜೇನು…

ಉಸಿರಲ್ಲಿ ಸನಿಹ ಬೆರೆತು ಜಗವ ಮರೆತು…

ನಗುವಿನ ಮಾತು ಮುತ್ತು ಖುಷಿಯು ಅರಿತು…

 

2) ಎದೆಹಾಲು ನೀಡುವ ದೈವವು…

ಏಳೇಳು ಜನ್ಮದ ವರವು…

ನೀನೇನೆ ಈ ಜೀವದ ಬಲವು…

ನೀನಿದ್ದಲ್ಲೆ ಎಲ್ಲೆಲ್ಲೂ ಗೆಲುವು…

ಎದೆಗೂಡಲಿ ಅಡಗಿಹೆ ನೂರೊಂದು ನೆನಪಿನ ಪುಟವೂ…

ಲೇಖಕಿ ನೀನಾದೆಯು ನನ್ನಬದುಕಿನ ಹೆಮ್ಮರವು…

ನೋವಲ್ಲೂ ನನಗೆ ತ್ರಾಣ ನೀನು ಪಂಚಪ್ರಾಣ…

ಕನಸಲ್ಲೂ ನಿನ್ನ ಧ್ಯಾನ ಇದೇ ವರದಾನ…

 

3) ನಿನ್ನ ಕೈರುಚಿ ಎಂದೆಂದು ಅಧ್ಭುತ…

ಬೇರೇನು ಬೇಕಿಲ್ಲ ಅಮೃತ…

ಬಾಳಿಗೆ ನೀ ದೊಡ್ಡ ಪರ್ವತ…

ಪ್ರತಿ ಹೆಜ್ಜೆಗೂ ಕಾಯುವೆ ಖಚಿತ…

ಮಡಿಲಲ್ಲಿ ಸ್ವರ್ಗವು ಧರೆಗಿಳಿದುಬಂದಹಾಗೆ…

ಬಾನಿನ  ಧ್ರುವತಾರೆಯು ಸ್ಪೂರ್ತಿ ನೀನು ನನಗೆ…

ಮುಗಿಯದ ಸ್ನೇಹ ಬಂಧ ಆಹಾ ಎಂಥ ಚಂದ…

ಮಿಡಿಯದೆ ಅಮ್ಮನೆಂದ ನಿನ್ನ ಪುಟ್ಟಕಂದ... 

                               - ಅನಿರುಧ್ ವಿ.ಎ

Category:Poem



ProfileImg

Written by Anirudh V A

0 Followers

0 Following