ಆಧುನಿಕ ಪ್ರೇಮಿಯ ಚಡಪಡಿಕೆಗಳು

ನಿಮ್ಮದು ಎಷ್ಟನೇ ಟ್ರೂ ಲವ್‌ ?

ProfileImg
09 May '24
1 min read


ಒಂದೇ ಹೃದಯದಿ ಎರಡೆರೆಡು ಬಾರಿ ಪ್ರೀತಿ ಮಾಡಬಹುದೇ ?

ಕಳೆದುಹೋದ ನೆನಪುಗಳು ತಿರುಗಿ ಮರಳಿ ಬರಬಹುದೇ ?

ಬಿಟ್ಟು ಹೋದ ಹುಡುಗಿಯನ್ನು ತಕ್ಕ ಮಟ್ಟಿಗೆ ಮರೆಯಬಹುದೇ ?

ಹೀಗೆಲ್ಲ ಅನಿಸುವಾಗ ಹೊಸ ಗೆಳತಿಯ ಮುಖವನ್ನು ನೋಡಬಹುದೇ?

---------------------------------------------------------------

ಒಂದೇ ಸಮಯದಿ ಎರಡೆರಡು ಕೆಲಸಗಳನ್ನು ಮಾಡಬಹುದೇ ?

ಕೆಲಸವಲ್ಲವದು, ಪ್ರೀತಿಯ ವ್ಯವಸಾಯವೆಂದು ಕರೆಯಬಹುದೇ ?

ಖುಷಿಯಲಿ ಅಳುವು, ಬೇಸರದಲ್ಲಿ ನಗುವು ಮೂಡಬಹುದೇ?

ಏನಾದರಾಗಲಿ ಇವಳೇ ಬೇಕು ಎಂದು ಹೃದಯ ಹಠಮಾಡುವುದೇ?

----------------------------------------------------------------

ಅವಳ ನಗುವು ಇವಳ ಮೊಗದಲ್ಲಿ ಮೂಡಿದಂತೆ ಕಂಡರೆ ಏನು ಮಾಡಲಿ ?

ಇವಳ ಕನಸು ಅವಳ ನೆಪದಲ್ಲಿ ಕಂಡರೆ ಹೇಗೆ ನೆಮ್ಮದಿಯಾಗಿ ಮಲಗಲಿ ?

ಇಬ್ಬಿಬ್ಬರ ಪ್ರೀತಿಮಾಡಿ ನನ್ನ ಪಾಡು ನಾಯಿಯಂತಾದರೆ ಯಾರನ್ನು ದೂರಲಿ?

ತಪ್ಪು ಎಂದು ತಿಳಿದಿದ್ದರೂ ಹಳ್ಳಕ್ಕೆ ಬಿದ್ದರೆ ಮತ್ತೇ ಹೇಗೆ ಮೇಲೇಳಲಿ?

----------------------------------------------------------------

ನನಗೆ ನಿನ್ನ ಕಾಣಿಸಿದ ಆ ದೇವರುಗಳನ್ನು ಏನೆಂದು ಪ್ರಾರ್ಥಿಸಲಿ ?

ಬೇರೇನು ಬೇಡಲ್ಲ, ನೀನೇ ನನ್ನ ಮಡದಿಯಾಗಿರು ಏಳೇಳು ಜನುಮದಲ್ಲಿ

ಕೇವಲ ನಿನ್ನ ಹೆಸರೇ ಬರೆದಿರುವೇ ನನ್ನ ಎದೆಯ ಪ್ರತಿ ಮೂಲೆಯಲ್ಲಿ

ಇನ್ನಾರೂ ಬೇಡ, ನೀನೇ ನನ್ನ ಕೊನೆಯ ಹುಡುಗಿಯಾಗಿರು ಈ ಜೀವನದಲ್ಲಿ..

 

 

Category:Poem



ProfileImg

Written by Sunil Gowda

EVERY END HAS A NEW 'BIG'INNING

0 Followers

0 Following