ನಾ ಕಂಡ ಕನಸು

ಕನಸುಗಳನ್ನು ಕಾಣುವುದು ತಪ್ಪಲ್ಲ ಕಂಡ ಕನಸು ನಮ್ಮ ಮನಸ್ಥಿತಿಯನ್ನು ಘಟ್ಟಿಗೊಳಿಸುತ್ತವೆ.

ProfileImg
25 Jun '24
1 min read


image

ಕನಸು ಕಾಣುವುದು ಯಾರಿಗೆ ಇಷ್ಟವಿಲ್ಲಾ ಹೇಳಿ…?? ಅದೊಂದು ದಿನ ರಾತ್ರಿ ನಾ ಮಲಗಿರುವಾಗ ಅಂದಾಜ ಸುಮಾರು ೧-೨ ಗಂಟೆ ಆಗಿರಬಹುದು ಆಗ ಒಂದು ಪುಟ್ಟ ಕನಸು ಬಿದ್ದಿತು, ಅದೇನಪ್ಪಾ ಅಂದ್ರೆ ನಾನು ತುಂಬಾ ಅಳುತ್ತಾ ದೇವರಿಗೆ ಬೈಯುತ್ತಿದೆ " ಯಾಕೆ ತಂದೆ ನಾನು ಅಂದರೆ ನಿನಗೆ ಇಷ್ಟವಿಲ್ಲವೇನು, ನಾನು ಏನಾದ್ರೂ ತಪ್ಪು ಮಾಡಿದ್ದೀನಿ ಏನು.... ಹಾಗೇನಾದ್ರೂ ಇದ್ದರೆ, ನನಗೆ ತಿಳಿ ಹೇಳು ಅದು ಬಿಟ್ಟು ಈ ತರ ಕಷ್ಟ ಕೊಡಬೇಡಾ ಅಥವಾ ಕಷ್ಟ ಕೊಟ್ಟರು ಸಹಿಸಿಕೊಳ್ಳುವ ಶಕ್ತಿಯನ್ನಾದರು  ಕೊಡು ತಂದೆ" ಎಂದು ಅಳುತಿರುವಾಗ ಒಂದು ಸ್ವರ ಕೇಳಿಬಂತು ಅದೇನಪ್ಪಾ ಅಂದರೆ ಆ ನಮ್ಮ ನಿಮ್ಮೆಲ್ಲರ ಮೆಚ್ಚಿನ ದೇವರು, ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ ಧ್ವನಿ ಕೇಳಿ ಬಂತು ಏನೆಂದರೆ......" ತೆಗೆದುಕೋ ಈ ಮಂತ್ರಕ್ಷತೆಗಳನ್ನು ದಿನ ನಿನ್ನ ತಲೆಯ ಮೇಲೆ ಹಾಕಿಕೋ ಅಳಬೇಡ, ನಿನ್ನ ಎಲ್ಲ ಕಷ್ಟ ಪರಿಹಾರವಾಗುತ್ತದೆ " ಎಂದು ಹೇಳಿದ ಕೂಡಲೇ ನನಗೆ ಎಚ್ಚರವಾಯಿತು. ಧನ್ಯೋಸ್ಮಿ "ಓಂ ಶ್ರೀ ರಾಘವೇಂದ್ರ ನಮಃ". "ಧೈರ್ಯಂ ಸರ್ವತ್ರ ಸಾಧನಂ"
ನಾವು ಮಾಡುವ ಕೆಲಸದಲ್ಲಿ ಅಥವಾ ನಾವು ಇಡುವ ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲೂ ಮನಸ್ಥೈರ್ಯ ಒಂದಿದ್ದರೆ ಸಾಕು ಏನು ಬೇಕಾದರೂ ಸಾಧಿಸಬಲ್ಲ ಶಕ್ತಿ ಇರುತ್ತದೆ. ಜೊತೆಗೆ ನಂಬಿಕೆ ಮುಖ್ಯ ನಾವು ನಂಬಿದ ದೇವರು ಎಂದು ನಮ್ಮನ್ನು ಕೈಬಿಡುವುದಿಲ್ಲ. ಇಂದಲ್ಲ ನಾಳೆಗೆ ನಮ್ಮ ಸರದಿ ಬಂದೆ ಬರುತ್ತದೆ, ಆಗ ನಾವು ನಂಬಿದ ದೇವರು ನಮಗೆ ತಪ್ಪದೇ ಸಹಾಯ ಮಾಡುತ್ತಾರೆ. ತಾಳ್ಮೆ ಇರಲಿ " ಹರೇ ಶ್ರೀನಿವಾಸ".

Category:Personal Experience



ProfileImg

Written by Spoorthy S Desai

0 Followers

0 Following