ಜಪಾನ್ ನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಮಹಿಳೆಯರ 400 ಮೀಟರ್ ಟಿ 20 ವಿಭಾಗದ ಓಟದಲ್ಲಿ ತೆಲಂಗಾಣದ ವಾರಂಗಲ್‌ನ ದಿನಗೂಲಿ ಕಾರ್ಮಿಕರ ಪುತ್ರಿ ದೀಪ್ತಿ ಜೀವನ್ ಎಂಬುವವರು 55.07 ಸೆಕೆಂಡುಗಳಲ್ಲಿ ಗುರಿ ತಲುಪಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ.
2023ರಲ್ಲಿ ಪ್ಯಾರಿಸ್ ನಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ದೀಪ್ತಿ 55.12 ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ನಿರ್ಮಿಸಿದ್ದರು.
ದಲಿತ ಕುಟುಂಬದಿಂದ ಬಂದ ಈ ಯುವತಿ ಸಾಧನೆ ಮಾಡಲು ಅನೇಕ ಅಡೆತಡೆಗಳನ್ನು ಎದುರಿಸಿದ್ದಾರೆ. ಸವಾಲುಗಳ ವಿರುದ್ಧ ಹೋರಾಡಿದ 20 ವರ್ಷದ ಯುವತಿಯ ಸಾಧನೆ ಅಸಾಧಾರಣವಾಗಿದೆ. ಕೆಲವು ವರ್ಷಗಳ ಹಿಂದೆ ದೀಪ್ತಿಗೆ ತರಬೇತಿಗಾಗಿ ಹೈದರಾಬಾದ್ ಗೆ ಬಸ್ ಟಿಕೆಟ್ ಸಹ ಮಾಡಲು ಸಾಧ್ಯವಾಗಲಿಲ್ಲ.
ದೀಪ್ತಿ ಜೀವನ್ ಜಿ ಮೊದಲು 200 ಮೀಟರ್ ಓಟದತ್ತ ದೃಷ್ಟಿ ಹಾಯಿಸಿದರು. ಕೊನೆಯಲ್ಲಿ ಕ್ಲಾರ್ಕ್ ಗೋಲು ಗಳಿಸಿದರೂ, ದೀಪ್ತಿ ಕೊನೆಯ ಐದು ಮೀಟರ್ ಗಳಲ್ಲಿ ಅಂತಿಮ ಪ್ರಯತ್ನ ಮಾಡಿ ಗೆಲುವು ಸಾಧಿಸಿದರು. ಟರ್ಕಿಯ ಐಸೆಲ್ ಒಂಡರ್ 55.19 ಸೆಕೆಂಡುಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರೆ, ಈಕ್ವೆಡಾರ್ನ ಲಿಜಾನ್ಶೆಲಾ ಅಂಗುಲೊ 56.68 ಸೆಕೆಂಡುಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು.
ದೀಪ್ತಿ ಅವರ ಅಥ್ಲೆಟಿಕ್ ಪ್ರಯಾಣವನ್ನು ತರಬೇತುದಾರ ಪುಲ್ಲೇಲ ಗೋಪಿಚಂದ್ ನಡೆಸುತ್ತಿರುವ ಅಥ್ಲೆಟಿಕ್ಸ್ ಪ್ರತಿಭಾನ್ವೇಷಣೆ ಕಾರ್ಯಕ್ರಮವಾದ ಗೋಪಿಚಂದ್-ಮೈತ್ರಾ ಫೌಂಡೇಶನ್ ಸಹ ಬೆಂಬಲಿಸಿತು. ಕಳೆದ ಕೆಲವು ವರ್ಷಗಳಲ್ಲಿ ಇವರು ಹಲವಾರು ರಾಷ್ಟ್ರೀಯ ಮಟ್ಟದ ಪದಕಗಳನ್ನು ಗೆದ್ದಿದ್ದಾರೆ. ಏನೇ ಆಗಲಿ ಕಷ್ಟದ ಬೇಗೆಯಿಂದ ಎದ್ದು ಬಂದು ಅಪೂರ್ವ ಸಾಧನೆ ಮಾಡಿರುವ ಕಾರ್ಮಿಕನ ಮಗಳಾದ ದೀಪ್ತಿ ಸಾಧನೆ ಎಲ್ಲರಿಗೂ ಮಾದರಿಯಾದದ್ದು.
- ಶಂಶೀರ್ ಬುಡೋಳಿ
Author, Journalist, Poet, Anchor, PhD Scholar
0 Followers
0 Following