ಸಮಾಜಸೇವೆಯಲ್ಲಿ ಜೀವನದ ಸಾರ್ಥಕತೆ ಕಂಡುಕೊಳ್ಳುತ್ತಿರುವ ಕಾರುಣ್ಯಾಶ್ರಮದ ದಂಪತಿಗಳು

ಕಾರುಣ್ಯ ವೃದ್ಧಾಶ್ರಮದ ಆಡಳಿತಾಧಿಕಾರಿ ಚನ್ನಬಸವಸ್ವಾಮಿ ಹಿರೇಮಠ ದಂಪತಿಯ 25ನೇ ವಿವಾಹ ವಾರ್ಷಿಕೋತ್ಸವ ಅಂಗವಾಗಿ ಲೇಖನ

ProfileImg
25 Jun '24
1 min read


image

ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ದಾಶ್ರಮ ಮತ್ತು ವಯಸ್ಕರ ಬುದ್ದಿಮಾಂದ್ಯ ಆಶ್ರಮವು ಸುಮಾರು 6ವರ್ಷದಿಂದ ನಗರದಲ್ಲಿ ಅನಾಥರಿಗೆ ಜೀವಿಸುವ ಹಕ್ಕು ಕಲ್ಪಿಸಿ, ಉಚಿತವಾಗಿ ಆಶ್ರಯ ನೀಡುತ್ತಿರುವ ಆಶ್ರಮವಾಗಿದೆ. ಅನಾಥ ವೃದ್ದರು ವಯಸ್ಕರ ಬುದ್ದಿಮಾಂದ್ಯರಿಗೆ ಆಶ್ರಯ ನೀಡಿ, ಸಮಾಜ ಸೇವೆಯಲ್ಲಿ ಸಾರ್ಥಕ ಜೀವನ ನಡೆಸಿಕೊಂಡು ನಿರಂತರ ಸೇವೆಯಲ್ಲಿರುವ ಕಾರುಣ್ಯ ವೃದ್ಧಾಶ್ರಮದ ಆಡಳಿತಾಧಿಕಾರಿ ಚನ್ನಬಸವಸ್ವಾಮಿ ಹಿರೇಮಠ ಹಾಗೂ ಸುಜಾತಾ ಚನ್ನಬಸವಸ್ವಾಮಿ ಹಿರೇಮಠ ದಂಪತಿಯ ಕಾರ್ಯವು ಸಮಾಜಕ್ಕೆ ಮಾದರಿಯಾಗಿದೆ.

ಸರಳವಾಗಿ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮ:

ಇಂದಿನ ದಾಂಪತ್ಯ ಜೀವನ ಕೇವಲ ಕುಟುಂಬ ನಿರ್ವಹಣೆಗಾಗಿ ಕಷ್ಟ ಪಟ್ಟು  ಜೀವನ ಸಾಗಿಸುವ ಹಾಗಾಗಿದೆ ಇಂತಹ ಸಂದರ್ಭದಲ್ಲಿ ಕಾರುಣ್ಯ ವೃದ್ಧಾಶ್ರಮದ ಆಡಳಿತಾಧಿಕಾರಿ ಚನ್ನಬಸವಸ್ವಾಮಿ ಹಿರೇಮಠ ದಂಪತಿಯು 25ನೇ ವಿವಾಹ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸಿಕೊಂಡಿದ್ದು ಮಾದರಿಯಾಗಿದೆ. ಅದೇ ರೀತಿ ಸಮಾಜಮುಖಿಯಾಗಿ ಸುಮಾರು 50ಕ್ಕೂ ಹೆಚ್ಚು ಅನಾಥರಿಗೆ ಕಾರುಣ್ಯ ವೃದ್ಧಾಶ್ರಮದ ಮೂಲಕ ಆಶ್ರಯದಾತರಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ವಸಿಷ್ಠ ಧಾಮ ಸಂಚಾಲಕರಾದ ಭೀಮಸೇನಾಚಾರ್ಯ ನವಲಿ ಹೇಳಿದರು.

‌ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯ ಕಾರುಣ್ಯ ನೆಲೆ ವೃದ್ದಾಶ್ರಮ ಮತ್ತು ವಯಸ್ಕರ ಬುದ್ದಿಮಾಂದ್ಯ ಆಶ್ರಮದಲ್ಲಿ ನಡೆದ ಚನ್ನಬಸವಸ್ವಾಮಿ ಹಿರೇಮಠ ದಂಪತಿಯ 25ನೇ ವಿವಾಹ ವಾರ್ಷಿಕೋತ್ಸವ ಸಮಾರಂಭದಲ್ಲಿ  ಜೀವ ಸ್ಪಂದನ ಚಾರಿಟಬಲ್ ಟ್ರಸ್ಟ್, ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್, ವಸಿಷ್ಠಧಾಮದಿಂದ ಕಾರುಣ್ಯ ವೃದ್ಧಾಶ್ರಮದ ಆಡಳಿತಾಧಿಕಾರಿ ಚನ್ನಬಸವಸ್ವಾಮಿ ಹಿರೇಮಠ ದಂಪತಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ,ದಾಂಪತ್ಯ ಜೀವನ ಸಮಾಜ ಸೇವೆ ಮಾಡುವ ಮೂಲಕ ಇನ್ನಷ್ಟು ಸಂತೋಷ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ವಸಿಷ್ಟಧಾಮದ ಶ್ರೀಮತಿ ಸ್ವಪ್ನ ಶ್ರೀ ಭೀಮಸೇನಾಚಾರ್ಯ ನವಲಿ ದಂಪತಿಗಳಿಗೆ ಆಶ್ರಮದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಿದರು..

ಈ ಸಮಯದಲ್ಲಿ ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ ಅಕ್ಷಯ ಆಹಾರ ಜೋಳಿಗೆ ಟ್ರಸ್ಟ್ ಅಶೋಕ್ ನಲ್ಲ ಸೇರಿದಂತೆ ಹಲವರಿದ್ದರು

Category:NewsProfileImg

Written by Avinash deshpande

Article Writer, Self Employee