Do you have a passion for writing?Join Ayra as a Writertoday and start earning.

ಈ ಸಿನಿಮಾದ ಬಜೆಟ್ 3 ಕೋಟಿ- ಕಲೆಕ್ಷನ್ 130 ಕೋಟಿ!

"ಪ್ರೇಮಾಲು" ಮಾಡಿದ ಮ್ಯಾಜಿಕ್ ಎಂತಹದು?

ProfileImg
30 Mar '24
4 min read


image

ಪ್ರಸಕ್ತ 2024ರಲ್ಲಿ ಬಿಡುಗಡೆಗೊಂಡಿರುವ ಎಲ್ಲಾ ಭಾರತೀಯ ಭಾಷಾ ಸಿನಿಮಾಗಳ ಸಕ್ಸಸ್ ಹಾಗೂ ಕಲೆಕ್ಷನ್ ಅನ್ನು ಅವಲೋಕಿಸಿದರೆ, ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಅನ್ನಿಸಿಕೊಂಡ ಚಿತ್ರಗಳು ತೀರಾ ಅತ್ಯಲ್ಪ. ಹಿಂದಿಯಲ್ಲಿ 'Article 370', 'Shaitaan' ಅಂತಹ ಕೆಲವು ಚಿತ್ರಗಳು ಮಾತ್ರ ಸೂಪರ್ ಹಿಟ್ ಆಗಿವೆ. ಇನ್ನು ತಮಿಳು ಸಿನಿಮಾರಂಗದಲ್ಲಿ 'Captain Miller', 'Ayalaan' ಚಿತ್ರಗಳು ಆವರೇಜ್ ಹಿಟ್ ಕಂಡಿವೆ. ತೆಲುಗಿನಲ್ಲಿ 'Hanu- Man' ಪ್ಯಾನ್ ಇಂಡಿಯಾ ಸಕ್ಸಸ್ ಕಂಡಿದೆ. ಆದರೆ ಈ ವರ್ಷ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ 'ಕಾಟೇರ' ಕನ್ನಡದಲ್ಲಿ ರಿಜಿಸ್ಟರ್ ಆದ ಕೊನೆಯ ಬ್ಲಾಕ್ ಬಸ್ಟರ್ ಚಿತ್ರ. ಈ ವರ್ಷದಲ್ಲಿ ಇದುವರೆಗೆ ಬಿಡುಗಡೆಗೊಂಡಿರುವ ಯಾವ ಚಿತ್ರವೂ ಕೂಡ ದೊಡ್ಡ ಮಟ್ಟದ ಯಶಸ್ಸನ್ನು ಕನ್ನಡದಲ್ಲಿ ಕಂಡಿಲ್ಲ.

ಹೊಸಬರ ಹಲವು ಚಿತ್ರಗಳ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯರ್ಥವಾದರೂ ಬಾಕ್ಸ್ ಫೀಸ್ ನಲ್ಲಿ ಮಾತ್ರ ಅವು ಸದ್ದು ಮಾಡಲಿಲ್ಲ. ಕರ್ನಾಟಕದಲ್ಲಿ ಪರಭಾಷೆಯ ಚಿತ್ರಗಳು ದೊಡ್ಡ ಮಟ್ಟದಲ್ಲಿ ಹಣ ಗಳಿಕೆ ಮಾಡುತ್ತಿದ್ದರು ಕನ್ನಡ ಸಿನಿಮಾಗಳು ಮಾತ್ರ ಗಳಿಕೆಯಲ್ಲಿ ಸೋಲುತ್ತಿವೆ. 

ಈ ವರ್ಷ ಬಹುತೇಕ ಎಲ್ಲಾ ಭಾರತೀಯ ಸಿನಿಮಾರಂಗಗಳಲ್ಲೂ ಇದುವರೆಗೂ ಯಶಸ್ಸಿನ ಚಿತ್ರಗಳು ಅತ್ಯಲ್ಪ. ಆದರೆ ಇತರೆಲ್ಲ ಸಿನಿಮಾರಂಗಗಳಿಗಿಂತ ಭಿನ್ನವಾಗಿ ಈ ವರ್ಷ ಹೆಚ್ಚು ಯಶಸ್ಸನ್ನು ಕಂಡು ಬಾಕ್ಸ್ ಫೀಸ್ ನಲ್ಲಿ ಮುನ್ನುಗ್ಗುತ್ತಿರುವುದು ಮಾತ್ರ ಮಲಯಾಳಂ ಸಿನಿಮಾ ರಂಗ. 'Manjummel Boys', 'Bramayugam', 'Anweshippin Kandethum', 'Premalu' ಇನ್ನು ಈ ವಾರ ಬಿಡುಗಡೆಯಾಗಿರುವ 'Aadujeevitham (The Goat Life) ವರೆಗೆ ಅನೇಕ ಹಿಟ್, ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಗಳನ್ನು ಮಲಯಾಳಂ ಸಿನಿಮಾ ರಂಗ ಕಂಡಿದೆ. ಮಲಯಾಳಂ ಸಿನಿಮಾ ರಂಗದಲ್ಲಿ ಸಿನಿಮಾ ಹಿಟ್ ಮಾಡಲು ಸ್ಟಾರ್ ಗಳು ಬೇಕಿಲ್ಲ. ಹೆವಿ ಬಜೆಟ್ ಬೇಕಿಲ್ಲ, ಹೊಸಬರಾದರು ಸರಿಯೇ, ಹಳಬರಾದರು ಸರಿಯೇ ಕಥೆ ಮುಖ್ಯ. ಕಥೆ ಮತ್ತು ಕಥಾನಕ ಇಷ್ಟವಾದರೆ; ಹೊಸಬರ ಚಿತ್ರಗಳು ಕೂಡ ದಾಖಲೆಯನ್ನು ನಿರ್ಮಿಸುತ್ತವೆ. ಇದಕ್ಕೊಂದು ತಾಜಾ ಉದಾಹರಣೆ ಇತ್ತೀಚೆಗೆ ಬಿಡುಗಡೆಗೊಂಡಿರುವ 'ಪ್ರೇಮಾಲು' 

ಪ್ರೇಮಾಲು...ಹೂಡಿದ ಬಂಡವಾಳ ಮೂರು ಕೋಟಿ, ಕಲೆಕ್ಷನ್ 130 ಕೋಟಿ

ಗಿರೀಶ್ ಎ.ಡಿ. ನಿರ್ದೇಶನದಲ್ಲಿ ನಸ್ಲೆನ್ ಕೆ ಗಫೂರ್ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರ 'ಪ್ರೇಮಾಲು'.  ಯೂತ್‌ಫುಲ್ ಲವ್ ಎಂಟರ್‌ಟೈನರ್ ಆಗಿ ತಯಾರಾದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.  ಇದರಿಂದಾಗಿ ಈ ಸಿನಿಮಾ ಮಲಯಾಳಂನಲ್ಲಿ 130 ಕೋಟಿ ಕಲೆಕ್ಷನ್ ಮಾಡಿ ಹೊಸ ಇತಿಹಾಸ ಸೃಷ್ಟಿಸಿದೆ. ಈಗಲೂ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಫೆಬ್ರವರಿ 9 ರಂದು ಮಲಯಾಳಂನಲ್ಲಿ ಬಿಡುಗಡೆಯಾದ ಈ ಯೂತ್‌ಫುಲ್ ಎಂಟರ್‌ಟೈನರ್ ಸಿನಿಮಾ  ಅಲ್ಲಿ ಬ್ಲಾಕ್ ಬಸ್ಟರ್ ಆಯಿತು. ಇದನ್ನು ತೆಲುಗಿನಲ್ಲಿ ಎಸ್. ಎಸ್. ರಾಜ ಮೌಳಿಯ ಮಗ ಕಾರ್ತಿಕೇಯ ಡಬ್ ಮಾಡಿ ಬಿಡುಗಡೆ ಮಾಡಿದರು. ಚಿತ್ರದ ತೆಲುಗು ಅವತರಿಣಿಕೆ ಕೂಡ ಮಾರ್ಚ್ 8 ರಂದು ಬಿಡುಗಡೆಯಾಗಿದ್ದು, ತೆಲುಗಿನಲ್ಲಿಯೂ ಸಹ ಬ್ಲಾಕ್ ಬಸ್ಟರ್ ಹಿಟ್ ಆಗಿದೆ.  ಆಶ್ಚರ್ಯವೆಂದರೆ ತೆಲುಗಿನಲ್ಲಿ ಈ ಡಬ್ ಚಿತ್ರ 15 ಕೋಟಿ ಲಾಭ ಕಂಡಿದೆ. ಇನ್ನು ಪ್ರೇಮಲು ಮೂಲ ಮಲಯಾಳಂನಲ್ಲಿ  ಸದ್ಯ ಬಾಕ್ಸ್ ಫೀಸ್ ನಲ್ಲಿ ರೂ. 130 ಕೋಟಿಯ ಗಡಿ ದಾಟಿದೆ.  

ಭಾವನಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ 'ಪ್ರೇಮಾಲು' ಚಿತ್ರವನ್ನು ಫಹಾದ್ ಫಾಜಿಲ್ ,ದಿಲೀಶ್ ಪೋತನ್ ಮತ್ತು ಶ್ಯಾಮ್ ಪುಷ್ಕರನ್ ನಿರ್ಮಿಸಿದ್ದಾರೆ.  ವಿಷ್ಣು ವಿಜಯ್ ಇದಕ್ಕೆ ಸಂಗೀತ ನೀಡಿದ್ದಾರೆ.  ನಸ್ಲೆನ್ ಕೆ ಗಫೂರ್, ಮಮಿತಾ ಬೈಜು, ಅಲ್ತಾಫ್ ಸಲೀಮ್, ಮೀನಾಕ್ಷಿ ರವೀಂದ್ರನ್, ಶ್ಯಾಮ್ ಮೋಹನ್, ಸಂಗೀತ್ ಪ್ರತಾಪ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದ ಬಜೆಟ್ ಬಗ್ಗೆ ಹೇಳುವುದಾದರೆ ಕೇವಲ ಮೂರು ಕೋಟಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಹೊಸ ದಾಖಲೆ ನಿರ್ಮಾಣದ ಕಡೆಗೆ ಚಿತ್ರ ಮುನ್ನಡೆಯುತ್ತಿದೆ. 

ಪ್ರೇಮಾಲು...ನಗೆ ತುಂಬಿದ ಪಯಣ

ಗಿರೀಶ್ ಎ.ಡಿ ನಿರ್ದೇಶನದ, "ಪ್ರೇಮಾಲು" ಮಲಯಾಳಂ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಎರಡುವರೆ ಗಂಟೆಗಳ ತಾಸು ನಿಮ್ಮನ್ನು ನಗೆಗಡಲಲ್ಲಿ ತೇಲಿಸುತ್ತದೆ.ಜೊತೆಗೆ ಹೃದಯಸ್ಪರ್ಶಿಯಾಗಿ,ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳುತ್ತದೆ. ಸರಳ ಕಥಾಹಂದರವನ್ನು ಹೊಂದಿರುವ 'ಪ್ರೇಮಲು' ನೋಡುವಷ್ಟು ಕಾಲ ಸಂತೋಷ, ತಂಗಾಳಿ ಮತ್ತು ಹೃದಯಸ್ಪರ್ಶಿ ಕಂಪನ್ನು ಅನುಭವಕ್ಕೆ ತಂದುಕೊಡುತ್ತದೆ

ಭವಿಷ್ಯದ ಬಗ್ಗೆ ಸ್ಪಷ್ಟವಾದ ಯೋಜನೆ ಇಲ್ಲದೆ ಸಚಿನ್ ಸಂತೋಷ್ (ನಾಸ್ಲೆನ್ ಕೆ. ಗಫೂರ್), ಎಂಜಿನಿಯರಿಂಗ್ ಪದವೀಧರ ಮತ್ತು ಅಂಜುಬುರುಕ ಸ್ವಭಾವದ ಯುವಕ. ಅಂತರ್ಮುಖಿಯಾದ ಅವನು ಅಂಜಲಿ ಎಂಬ ತನ್ನ ಸಹಪಾಠಿಯನ್ನು ಪ್ರೀತಿಸುತ್ತಿರುತ್ತಾನೆ. ಆದರೂ ಅದನ್ನು ಅವಳೆದುರಿಗೆ ನಿವೇದಿಸಲು ಅವನಿಗೆ ಎಲ್ಲಿಲ್ಲದ ಭಯ ಮತ್ತು ಹಿಂಜರಿಕೆ. ಕೊನೆಗೂ ಅದನ್ನು ಅವಳೆದುರು ನಿವೇದಿಸಿಕೊಳ್ಳುತ್ತಾನೆ. ಆದರೆ ಆಕೆ ಅವನ ಪ್ರೀತಿಯನ್ನು ತಿರಸ್ಕರಿಸುತ್ತಾಳೆ.

ಇದರಿಂದ ಮಾನಸಿಕವಾಗಿ ಕುಗ್ಗಿ ಹೋದ ಸಚಿನ್ ಎಲ್ಲವನ್ನು ತೊರೆದು ಉನ್ನತ ವ್ಯಾಸಂಗಕ್ಕಾಗಿ UK ಗೆ ತೆರಳಲು ನಿರ್ಧರಿಸುತ್ತಾನೆ, ಆದರೆ ಅವನ ವೀಸಾ ಅರ್ಜಿಯು ರಿಜೆಕ್ಟ್ ಆಗುತ್ತದೆ, ಆದರೆ  ಆರು ತಿಂಗಳ ನಂತರ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವನಿಗೆ ಮತ್ತೊಂದು ಅವಕಾಶವನ್ನು ನೀಡಲಾಗುತ್ತದೆ. ಇದೇ ಸಮಯದಲ್ಲಿ ಅವನು ತನ್ನ ತಂದೆಯ ಬೇಕರಿಯಿಂದ, ಬೇಕರಿ ಐಟಮ್ಸ್ ಅನ್ನ ಡೆಲಿವರಿ ಮಾಡುತ್ತಾ ತನ್ನ ತಂದೆಯ ವ್ಯಾಪಾರದಲ್ಲಿ ಕೈಜೋಡಿಸುತ್ತಾನೆ. 

ಹೀಗೆ ಒಂದು ದಿನ ಅವನು ಡೆಲಿವರಿ ಮಾಡಲು ಹೋದಾಗ ತನ್ನ ಹಳೆಯ ಸ್ನೇಹಿತ ಅಮಲ್ ಡೇವಿಸ್ ಅನ್ನು ಭೇಟಿಯಾಗುತ್ತಾನೆ. ಆ ನಂತರ ಸಚಿನ್ ತನ್ನ ಭವಿಷ್ಯದ ಕನಸುಗಳ ಬಗ್ಗೆ ಅಮಲ್ ಎದುರು ತೆರೆದಿಡುತ್ತಾನೆ. ಆಗ ಅಮಲ್ ಮೀಸಾಗೇ ಅರ್ಜಿ ಮತ್ತೊಮ್ಮೆ ಸಲ್ಲಿಸುವವರೆಗೂ ಅಥವಾ ಅದು ಮತ್ತೊಮ್ಮೆ ತಿರಸ್ಕೃತವಾದರೆ, ಬ್ಯಾಕಪ್ ಆಗಿ  'ಗೇಟ್' (GATE) ಕ್ಲಿಯರ್ ಮಾಡಿಕೊಳ್ಳುವಂತೆ ಸೂಚಿಸುತ್ತಾನೆ. ಮತ್ತು ಅಲ್ಲದೆ ತಾನು ಹೈದರಾಬಾದ್ ನಲ್ಲಿ 'ಗೇಟ್ ಎಕ್ಸಾಮ್ ಗಾಗಿ ಕೋಚಿಂಗ್ ತೆಗೆದುಕೊಳ್ಳಲು ಹೊರಟಿರುವುದಾಗಿಯೂ ಹೇಳುತ್ತಾನೆ. ತನ್ನ ಜೊತೆ ಬರುವಂತೆ ಅವನಿಗೂ ಸೂಚಿಸುತ್ತಾನೆ. ಇದಕ್ಕೆ ಒಪ್ಪಿದ ಸಚಿನ್, ಅಮಲ್ ಜೊತೆ ಹೈದರಾಬಾದ್ ಗೆ ಹೊರಡುತ್ತಾನೆ.

ಮದುವೆಯೊಂದರಲ್ಲಿ  ಸುಂದರ ಮತ್ತು ಆತ್ಮವಿಶ್ವಾಸದ ರೀನು (ಮಮಿತಾ ಬೈಜು)ಳನ್ನು ನೋಡುತ್ತಾನೆ, ಅವಳ ಪ್ರೀತಿಯಲ್ಲಿ ಬೀಳುತ್ತಾನೆ. ಇಲ್ಲಿಂದ, ಸಚಿನ್ ಜೀವನವು ಹೊಸ ದಿಕ್ಕನ್ನು ತೆಗೆದುಕೊಳ್ಳುತ್ತದೆ.  ರೀನು ತನ್ನ ಜೀವನ ಸಂಗಾತಿಯಲ್ಲಿ ನೋಡಲು ಬಯಸುವಂತಹ ಅಪೇಕ್ಷಿತ  ಗುಣಗಳಿಗೆ ವಿರುದ್ಧವಾಗಿ ಸಚಿನ್ ಸ್ವಭಾವವಿರುತ್ತದೆ.

ರೀನುವಿನಲ್ಲಿರುವ ಆತ್ಮವಿಶ್ವಾಸ ಮತ್ತು ಇವನ ಹಿಂಜರಿಕೆ ಸ್ವಭಾವದ ನಡುವೆ ನುಸುಳಿಕೊಂಡು ಹೋಗುವ ಕಥೆ, ಸಂಬಂಧದ ಕ್ರಿಯಾತ್ಮಕ ಬದಲಾವಣೆಗೆ ಕಾರಣವಾಗುತ್ತದೆ. ಪ್ರೀತಿ,ಪ್ರೇಮ, ಹಾಸ್ಯ, ಭಾವನಾತ್ಮಕ ಹೃದಯ ಸ್ಪರ್ಶಿಯಾಗಿ ಕಥೆ ಸುಖಾಂತ್ಯ ಕಾಣುತ್ತದೆ. 

ನಸ್ಲೆನ್ ಗಫೂರ್ ಮತ್ತು ಮಮಿತಾ ಬೈಜು ಜೋಡಿ ತುಂಬಾ ಮುದ್ದಾಗಿ ಕಾಣುತ್ತಾರೆ ಜೊತೆಗೆ ಅವರು ತಮ್ಮ ಪಾತ್ರಗಳ ಮೂಲಕ ನೋಡುಗರ ಗಮನ ಸೆಳೆಯುತ್ತಾರೆ. ಸಚಿನ್ ಪಾತ್ರದಲ್ಲಿ  ಮುಗ್ಧತೆ, ಬುದ್ಧಿವಂತಿಕೆ ಮತ್ತು ಮೋಡಿ ಇದೆ.  ರೀನು (ಮಮಿತಾ ಬೈಜು) ತನ್ನ ಆಟಿಟ್ಯೂಡ್ ಇಂದ ಮನಸೆಳೆಯುತ್ತಾಳೆ ಮತ್ತು ಮಮಿತಾಳ ಉತ್ಸಾಹಭರಿತ ಅಭಿನಯವು ರೀನು ಪಾತ್ರವನ್ನು ಪ್ರೀತಿಸುವಂತೆ ಮಾಡುತ್ತದೆ.ಈ ನಟರ ಹೊರತಾಗಿ, ಹೈದರಾಬಾದ್ ನಗರವು ಈ ರೋಮ್-ಕಾಮ್‌ನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇನ್ನು ಈ ಚಿತ್ರಕ್ಕೆ  ವಿಷ್ಣು ವಿಜಯ್ ಸಂಗೀತ ಸಂಯೋಜನೆ ಮಾಡಿದ್ದಾರೆ. 'ತೆಲಂಗಾಣ ಬೊಮ್ಮಲು' ಕೇಳುವುದಕ್ಕಷ್ಟೇ ಅಲ್ಲ ನೋಡಿದಷ್ಟು ಅದು ಮನತಣಿಸುತ್ತದೆ. (ಅಜ್ಮಲ್ ಸಾಬು ಛಾಯಾಗ್ರಹಣ)

ಹೈದರಾಬಾದಿನಲ್ಲಿ ಮಲಯಾಳಿ ತರುಣ- ತರುಣಿಯರ ಒಂದು ಸುಂದರ ಜೀವನವನ್ನು ಕಟ್ಟಿಕೊಡುವ 'ಪ್ರೇಮಾಲು' ತುಂಬಾ ಕಾಡುವ ಚಿತ್ರವಾಗಿ ಅಂತಲ್ಲದೆ ಹೋದರು ಒಂದು ಹೃದಯಸ್ಪರ್ಶಿ ಚಿತ್ರವಾಗಿ ನೋಡಲು, ಆನಂದಿಸಲು ಅಡ್ಡಿ ಇಲ್ಲ.

ಮೊದಲ ದಿನದ ಕಲೆಕ್ಷನ್ 10 ಲಕ್ಷ

ಚಿತ್ರ ಮೊದಲ ದಿನ ಅಂತಹ ದೊಡ್ಡ ಮಟ್ಟದ ಕಲೆಕ್ಷನೇನು ಕಂಡಿರಲಿಲ್ಲ. ಮೊದಲ ದಿನದ ಗಳಿಕೆ ಕೇವಲ 10 ಲಕ್ಷ ರೂಪಾಯಿ. ಆದರೆ ನಂತರ ದಿನದಿಂದ ದಿನಕ್ಕೆ ಚಿತ್ರದ ಗಳಿಕೆ ದೊಡ್ಡದಾಗುತ್ತಾ ಹೋಯಿತು. ಚಿತ್ರಕ್ಕೆ ದಕ್ಕಿದ ವ್ಯಾಪಕವಾದ ಪ್ರಶಂಸೆ, ಚಿತ್ರದ ಬಗ್ಗೆ ಪಾಸಿಟಿವ್ ರಿವೀವ್ಸ್, ಟೀನೇಜ್ ಗಳು ಥಿಯೇಟರ್ಗಳಿಗೆ ನುಗ್ಗಿದ ಪರಿ, ಚಿತ್ರ ನೋಡ ನೋಡುತ್ತಿದ್ದಂತೆ ನೂರು ಕೋಟಿಯ ಕ್ಲಬ್ ಸೇರಿತು. 130 ಕೋಟಿ ಜಾಗತಿಕವಾಗಿ ಕಲೆಕ್ಷನ್ ಕಂಡಿರುವ ಚಿತ್ರ ಈಗಲೂ ಕೂಡ ಬಾಕ್ಸ್ ಫೀಸ್ ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ

Category : Movies and TV Shows


ProfileImg

Written by Ravindra Kotaki

Verified

ಲೇಖಕ/ಅಂಕಣಕಾರ