ಮಧ್ಯಮ ವರ್ಗಕ್ಕೆ ಸ್ವಂತ ಮನೆ ಕಟ್ಟಿಕೊಂಡರೆ ಅದೇ ಬದುಕಿನ ದೊಡ್ಡ ಸಾಧನೆ

ಆತ್ಮ ಕಥೆಯ ಬಿಡಿ ಭಾಗಗಳು -9

ProfileImg
17 May '24
2 min read


image

ಮಧ್ಯಮ ವರ್ಗಕ್ಕೆ ಸ್ವಂತ ಮನೆ ಕಟ್ಟಿಕೊಂಡರೆ ಅದೇ ಬದುಕಿನ ದೊಡ್ಡ ಸಾಧನೆ

ಇಂದಿಗೆ ಸರಿಯಾಗಿ ಆರು ವರ್ಷಗಳ ಮೊದಲು 17 ಮೇ 2018 ರಂದು ನಮ್ಮ ಮೊದಲಿದ್ದ ಚಿಕ್ಕ ಮನೆಯ ಹೊರಭಾಗದಲ್ಲಿ ನಿಂತು ಸುಮ್ಮನೇ ಆ ಕಡೆ ಈ ಕಡೆ ನೋಡುತ್ತಾ ಇದ್ದೆ.
ರಸ್ತೆಯಲ್ಲಿ ಹೋಗುತ್ತಿದ್ದ ಸ್ನೇಹಿತೆ ಚಂದ್ರಿಕಾ ನೋಡಿ ಮನೆಯೊಳಗೆ ಬಂದರು.
ಕಾಫಿ ಕುಡಿಯುತ್ತಾ ಮೇನ್ ರೋಡಿನಲ್ಲಿ ಇಷ್ಡೊಳ್ಳೆ ಜಾಗ ಇಟ್ಕೊಂಡು ಈ ಸಣ್ಣ ಮನೆಯಲ್ಲಿ ಕೂತಿದ್ದೀಯಲ್ಲ..ಇಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಿಸಿ ಬಾಡಿಗೆ ಕೊಡಬಾರದಾ ?ಎಂದರು.
ಏ  ನನ್ನತ್ರ ಅಷ್ಡೆಲ್ಲ ದುಡ್ಡಿಲ್ವೇ ಎಂದು ರಾಗ ತೆಗೆದೆ.

 

ಅದಕ್ಕೆ ಒಂದೆರಡು ವರ್ಷ ಮೊದಲು ಕೆಲವು ಇಂಜಿಯರ್ಸ್ ಹತ್ತಿರ ಅಂದಾಜು ಖರ್ಚು ವೆಚ್ಚದ ಬಗ್ಗೆ ಕೇಳಿದ್ದೆ..ಎಲ್ಲ ಎಪ್ಪತ್ತು ಎಂಬತ್ತು ಲಕ್ಷ ಹೇಳುದು ಕೇಳಿ ಇದಾಗುವದ್ದಲ್ಲ ಎಂದು ಸುಮ್ಮನಾಗಿದ್ದೆ.

ಅದನ್ನೇ ಅವರಿಗೆ ಹೇಳಿದೆ..
ನೀನ್ಯಾವ ಕಾಲದಲ್ಲಿ ಇದ್ದಿಯೇ..ಈಗ ಕಟ್ಟಡ ನಿರ್ಮಾಣದ ಚಾರ್ಜ್ ತುಂಬಾ ಕಡಿಮೆ ಆಗಿದೆ..ಸರಿಯಾದ ಕೆಲಸ ಆದಾಯ ಇಲ್ಲದ ನಾನೇ ಮನೆ ಕಟ್ಸಿದ್ದೇನೆ..ಇಬ್ಬರು ದುಡಿತೀರಿ..ದುಡ್ಡಿಲ್ಲ ಅಂದರೆ ಏನೇ..ನೀನು ಶುರು ಮಾಡು ಆಗುತ್ತೆ ಎಂದಳು..


ನನಗೂ ಒಳಗಿನಿಂದ ಒಂದು ಚಂದದ ಮನೆ ಬೇಕು ಎಂದಿತ್ತು ‌ಹಾಗಾಗಿ ಪರಿಚಯದ ನಮ್ಮ ಊರಿನ ಕೆಲವು ಇಂಜಿನಿಯರ್ ಗಳ ಸಲಹೆ ಕೇಳಿದೆ.
ಹಾಗೆಯೇ ಬೆಂಗಳೂರಿನ ಕೆಲವು ಇಂಜಿನಿಯರ್ ಗಳನ್ನು ಕೇಳಿದೆ..ಯಾಕೋ ಸರಿ ಹೋಗಲಿಲ್ಲ.


ಅಷ್ಟರಲ್ಲಿ ನಾಲ್ಕು ವರ್ಷಗಳ ಮೊದಲು ಚಿಕ್ಕಪ್ಪನ ಮಗ ಮನೆ ಕಟ್ಟಿಸಿದ್ದು ನೆನಪಾಯಿತು.
ಅವರಿಗೆ ಪೋನ್ ಮಾಡಿದೆ ಅಲ್ಲಿ ಮನೆ ಕಟ್ಟಿದ ಮೇಸ್ತಿ ವೇಣುಗೋಪಾಲರನ್ನು  ತಮ್ಮ ನಮ್ಮ ಮನೆಗೆ ಕಳುಹಿಸಿಕೊಟ್ಡರು.


ಮಾನಿಟೈಸ್ ಆಗಿ ಯಾರಲ್ಲೂ ದುಡ್ಡಿಲ್ಲದ ಕಾಲ ಹಾಗಾಗಿ ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ಹೊಡೆತ ಬಿದ್ದಿತ್ತು‌‌.ಹಾಗಾಗಿ ಇಂಜನಿಯರ್ ಗಳು ಮೇಸ್ತ್ರಿ ಗಳು ತಮ್ಮ ಲಾಭಾಂಶ ದಲ್ಲಿ ( ಸಾಮಾನ್ಯವಾಗಿ 40% ಲಾಭ ಇಟ್ಟು ಕೊಳ್ಳುತ್ತಾರೆ)ಕಡಿಮೆ ಮಾಡಕೊಂಡು ಕಟ್ಟಡ ನಿರ್ಮಿಸಿ ಕೊಡಲು ಸಿದ್ದರಾಗುತ್ತಿದ್ದ ಕಾಲ ಅದು.ಹಾಗಾಗಿ ನಮಗೆ ಮೊದಲು ಇಂಜನಿಯರ್ಗಳು ಹೇಳಿದ್ದಕ್ಕಿಂತ ಮೂವತ್ತು ಪರ್ಸೆಂಟ್ ಕಡಿಮೆಗೆ ಮಾಡಿಕೊಡಲು ಒಪ್ಪಿದರು.
ಜೊತೆಗೆ ಖರ್ಚು ‌ಕಡಿಮೆ ಮಾಡಲು ಕೆಲವು ಉಪಾಯಗಳನ್ನು ಮಾಡಿದೆ ,ಕೆಳಗೆ ಇದ್ದ ಮನೆಯನ್ನು ಹಾಗೆಯೇ ಉಳಿಸಿಕೊಂಡು ಸುತ್ತ ಪಿಲ್ಲರ್ ಹಾಕಿ ಕಟ್ಟಿದೆವು .ಹಾಗಾಗಿ ಅಲ್ಲೊಂದು ಅರೇಳು ಲಕ್ಷ ಉಳಿತಾಯ ಆಯ್ತು.


ಇಷ್ಟೆಲ್ಲಾ ಆಗುವಾಗ ಮನೆ ಮುಖ್ಯ ರಸ್ತೆ ಬದಿಯಲ್ಲಿ ಇರುವ ಕಾರಣ ದೂಳು ಶಬ್ದ ಏನು ಮಾಡುದು ಎಂಬ ಚಿಂತೆ ಕಾಡಿತು..

ಆಗ ಹೊಳೆದ ಉಪಾಯ ಮನೆಯ ಮುಖವನ್ನು ಹಿಂಭಾಗಕ್ಕೆ ತಿರುಗಿಸುವ ಎಂದು‌
ಹಾಗೆಯೇ ಗ್ರೌಂಡ್ ಫ್ಲೋರ್ ‌ಮತ್ತು ಫಸ್ಟ್ ಪ್ಲೋರ್ ರಸ್ತೆಗೆ ಮುಖ ಮಾಡಿ ಕಮರ್ಷಿಯಲ್ ಮಾಡಿ ಸೆಕೆಂಡ್ ಫ್ಲೋರಿನಲ್ಲಿ ನಮಗಾಗಿ 3BHK ಮನೆ ಕಟ್ಟಿಕೊಂಡು ಎದುರುಗಡೆ ಹೂವಿನ ಸಸಿ ಬೆಳೆಸಲು  ಸಣ್ಣಕೆ ವಾಕಿಂಗ್ ಮಾಡಲಯ ಸಂಜೆ ಹೊತ್ತು ತಣ್ಣಗೆ ಕೂರಲು ಐದುನೂರು ಆರುನೂರು ಚದರ ಅಡಿ ಜಾಗ ಬಿಟ್ಟೆವು..
ಮನೆಯ ಪ್ಲಾನ್ ಪೂರ್ತಿ ಯಾಗಿ ನನ್ನದು.ಫೈನಾನ್ಸ್ ಜವಾಬ್ದಾರಿ ಪೂರ್ತಿಯಾಗಿ ಪ್ರಸಾದರದು.ನೋಡಿಕೊಳ್ಳುವ ಜವಾಬ್ದಾರಿ ಮಗನದು  ಮಧ್ಯಮ ವರ್ಗದ ಕನಸು ಬಹಳ ಸಣ್ಣದು ಅದು  ಒಂದು ಮನೆ ಬೇಕು ಎಂಬುದು..
ಒಂದೊಮ್ಮೆ ಸ್ನೇಹಿತೆ ಹೇಳಿದಾಗ ಎಚ್ಚತ್ತು ಕೊಂಡು  ಮನೆ ಕಟ್ಟದೇ ಇರ್ತಿದ್ದರೆ ಈಗ ನಮಗೆ  ಈ ಕೊರಾನಾ ಕಾಲದಲ್ಲಿ ಪಶ್ಚತ್ತಾಪ ಆಗ್ತಿತ್ತೋ ಏನೋ 
ಇಷ್ಟೆಲ್ಲಾ ದುಡಿದು ಒಂದು ಮನೆ ಕೂಡ ಕಟ್ಟದೆ ಸಾಯುವ ಕಾಲ ಬಂತಲ್ಲಾ ಎಂದು‌..😀
ಅದೃಷ್ಟವಶಾತ್ ಮೂವತ್ತು ವರ್ಷಗಳ ಮೊದಲೇ ಪ್ರಸಾದ್ ತೆಗೆದು ಇಟ್ಟ ಸೈಟ್ ಇತ್ತು‌.2003 ರಲ್ಲಿ ಜಾಗ ಮನೆ ಕಟ್ಟದೆ ಇದ್ದರೆ ಜಾಗ  ಹೋಗುತ್ತದೆ ಎಂದು ಸುದ್ದಿ ಹರಡಿದಾಗ ಮಂಗಳೂರಿನಿಂದ ಬಂದು ಇಲ್ಲಿ ಮಾತಾಡಿ ಆಗ ಬೆಂಗಳೂರಿನಲ್ಲಿ ಇದ್ದ ನನ್ನ ತಮ್ಮ ಈಶ್ವರ ಬಟ್ ಗೆ ಜವಾಬ್ದಾರಿ ಕೊಟ್ಟು ಹಿಂದೆ ಹೋಗಿದ್ದೆವು.ಹಾಗಾಗಿ ಎರಡು ಬೆಡ್ ರೂಮಿನ ಚಿಕ್ಕದೊಂದು ಮನೆ ಇತ್ತು‌,ಈ ಇಲ್ಲಿ ಸೈಟಿನ ಬೆಲೆ  ನಾಲ್ಕು ಕೋಟಿ ಕೋಟಿ ದಾಟಿದೆ..ಸೈಟ್ ಇಲ್ಲದೇ ಇದ್ದರೆ ನಮಗೆಂದೂ ಮನೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲವೇನೋ..ಗೊತ್ತಿಲ್ಲ..

ಡಾ.ಲಕ್ಷ್ಮೀ ಜಿ ಪ್ರಸಾದ 

(ಕೊರೋನ ಆತಂಕದ ಸಮಯದಲ್ಲಿ ಬರೆದ ಬರಹವಿದು)

Category:Personal Experience



ProfileImg

Written by Dr Lakshmi G Prasad

Verified