ಸ್ನೇಹಿತರೆ ನಮಸ್ತೇ..
ಜೀವನವೇ ಆಗೆ ಅಲ್ವಾ ಕಲಿತಷ್ಟು ನಿಲ್ಲದ, ಬತ್ತದ ಅರಿವು, ಅರಿವು ಹೆಚ್ಚಿದಂತೆ ಕಲಿತದ್ದನ್ನು ಕೈ ಬಿಡು ಎಂದು ಹೇಳುವ ಮನಸ್ಸು, ನಿನ್ನ ಗುರು ಹೊರಗೆಲ್ಲೋ ಇಲ್ಲ ನಿನ್ನೊಳಗೆ ಒಕ್ಕುನೋಡು ಕಾಣದೆ ಇದ್ದರೆ, ಪಾಠ ಕಲಿಸಿ ತನ್ನ ಸುಳಿವು ಕೊಡುವ ಮಾರ್ಗದರ್ಶಿ, ಕೇಳು ನಿನ್ನ ಮನಸಿನ ಮಾತು , ಅವನಿಗಿಂತ ಅರಿತವನು ಇನ್ನೊಬ್ಬನಿಲ್ಲ, ಅವನ ಅರಿವಿನ ಮೂಲ ನಿನ್ನ ಚಿಂತನೆ . ನೀ ಅವನ ಗುರು ಅವ ನಿನ್ನ ಅರಿವು.
Listen to your heart because the voice of the heart is coming from the soul of the universe.
ಸ್ನೇಹಿತರೆ ಜೀವನದ ತುಂಬಾ ಬರಿ ಕಲಿಯುವುದೇ, ಕೇವಲ ಕಹಿ ಘಟನೆ ಕಷ್ಟ ಎನ್ನುವುದು ಅನುಭವಸ್ತರ ಮಾತು, ನಮ್ಮ ಬಾಲ್ಯದಿಂದಲೂ ಕೇಳುತ್ತಾ ಬಂದದ್ದಾಗಿದೆ ಆದರೆ ಎಷ್ಟೋ ಸನ್ನಿವೇಶಗಳು ಎಷ್ಟೋ ದೃಷ್ಟಾಂತಗಳು ಇವನಿಗೆ ಹೇಳಿದ್ದು, ನೀ ಕಲಿತದ್ದು ಬಿಡು, ಮರೆತದ್ದು ನೆನೆ, ನೋಡಲಾಗದನ್ನ ಕೇಳಿ ತಿಳಿ ಎಂದು,
ಕಲಿಯುವುದು ಎಷ್ಟು ಮುಖ್ಯವೋ ಅಷ್ಟೇ ಪ್ರಮುಖವಾಗಿ ಕಲಿತದ್ದನ್ನು ಕೈ ಬಿಡುವುದು. ನೆನಪು ಎಷ್ಟು ಮುಖ್ಯವೋ ಅಷ್ಟೇ ಪ್ರಮುಖವಾಗಿ ಮರೆವು, ಎಲ್ಲ ನನ್ನ ಅನುಭವದಿಂದಲೇ ಪಡೆಯುವುದಕ್ಕೆ ಇದು ಸೀಮಿತ ಜೀವನ, ಹಾಗಾಗಿ ಸೋತವನ ಕಥೆ ಕೇಳು ಎಂಬುದು, ಇಷ್ಟೆಲ್ಲಾ ವಿಷಯದ ಅರಿವು ಮೂಡಿಸುವ ಮಾರ್ಗದರ್ಶಿಯೇ ನಮ್ಮ ಮನ.
೧೮/ಫೆ/೨೦೦೨ ಅವನು ಇನ್ನು ಚಿಕ್ಕ ಮಗು ಅಂದು ಮನೆತುಂಬಾ ಹಬ್ಬದ ವಾತಾವರಣ, ಸುತ್ತಲೂ ಅಥಿತಿಗಳು, ಸ್ನೇಹಿತರು, ಅವನ ತಂದೆ ಉಪನ್ಯಾಸಕರಾಗಿದ್ದರಿಂದ ಅವರ ವಿದ್ಯಾರ್ಥಿಗಳು, ಅವರಲ್ಲೇ ಒಬ್ಬ ಫೋಟೋಗ್ರಾಫರ್ ಕೂಡ ಇದ್ದರು, ಕ್ಯಾಮೆರಾ ಮತ್ತು ನೆರೆದವರೆಲ್ಲ ಕಣ್ಣು ನೆಟ್ಟದ್ದು ಕೇವಲ ಆ ಮಗುವಿನ ಮೇಲೆ ಏಕೆಂದರೆ ಅದು ಅವನ 5 ನೇ ಹುಟ್ಟುಹಬ್ಬ.
ಈ ಬಾಲಕನ ಕಣ್ಣು, ಮನದ ತುಂಬೆಲ್ಲ ಹರ್ಷ, ಎಲ್ಲರು ನನ್ನೇ ಮುದ್ಧಿಸುತ್ತಿದ್ದಾರೆ, ಪ್ರೀತಿಯಿಂದ ಕಾಣುತ್ತಿದ್ದಾರೆ, ನಾನು ತುಂಬಾ ಗ್ರೀಟ್ ಇರಬೇಕು ಎಂಬ ಭಾವ ಆ ಮಗುವಿನ ಮನದಲ್ಲಿತ್ತು.
ಅದೇ ಸಮಯಕ್ಕೆ 4ಜನ ದೊಡ್ಡ ಕೇಕ್ ಜೊತೆ ಬಂದರು, ಕೈ ತುಂಬಾ ಹಣ್ಣು ಹಂಪಲು, ಹೂವುಗಳು ತುಂಬಿದ್ದವು. ಮನೆ ತುಂಬ ಜನ ಎಲ್ಲರ ಕೈಯಲ್ಲಿ ಒಂದೊಂದು ಗಿಫ್ಟ್ ಪ್ಯಾಕ್, ಇವನ ಹರ್ಷ ಹೇಳತೀರದು, ಹೇಳಿ ಕೇಳಿ ಪ್ರತಿಷ್ಟಿತ ಮನೆತನ, ತಂದೆಯ ವರ್ಚಸ್ಸು ಈ ಎಲ್ಲ ಅಂಶಗಳನ್ನು ಆಕರ್ಷಿಸಿತ್ತು. ಹೀಗಿರುವಾಗ ಎಲ್ಲ ಸಂಭ್ರಮದ ನಡುವೆ ತಂದೆ ತಾಯಿ ಇಬ್ಬರ ನಡುವೆ ಇವನ ಹುಟ್ಟು ಹಬ್ಬದ ಕೇಕ್ ಕತ್ತರಿಸುವ ಸಮಯ ಬಂತು.
ಹೇಳಿ ಕೇಳಿ ಇವನು ಮೊದಲೇ ತುಂಟ, ಒಂದು ಕಡೆ ನಿಲ್ಲದವನು ತುಂಬಾ ಚೇಷ್ಟೆ ಹುಡುಗ, ಅವನನ್ನು ನೋಡಿಕೊಳ್ಳುವುದೇ ತಂದೆ ತಾಯಿಯ ಒಂದು ಜವಾಬ್ದಾರಿ ಮತ್ತು ಅದೇ ದೊಡ್ಡ ಕೆಲಸವಾಗಿತ್ತು.
ಕೇಕ್ ಕಟ್ ಮಾಡುವಾಗಲೂ ಅವನ ತಾಯಿ ಬಾಲಕನ ಒಂದು ಕೈ ಹಿಡಿದು ಅವನನ್ನು ನಿಯಂತ್ರಿಸಿದರು, ಇಲ್ಲವಾದರೆ ಆ ಒಂದು ಕೈ ಮತ್ತೇನು ಮಾಡುತ್ತದೆಯೋ ಇನ್ನೇನು ಅವಾಂತರ ಮಾಡುವನು ಎಂಬುದು ಅವರಿಗೆ ತಿಳಿದಿದ್ದ ಸತ್ಯ.
ಈ ಎಲ್ಲ ಶುಭ ಸಂದರ್ಭದ ನಂತರ ಸ್ನೇಹಿತರು ಬಂದ ಅತಿಥಿಗಳು ಒಬ್ಬೊಬ್ಬರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಮತ್ತೆ ಆ ಮನೆ ಖಾಲಿ ಖಾಲಿ, ಆ ಮನೆಯಲ್ಲಿ ಕೊನೆಯಲ್ಲಿ ಉಳಿದದ್ದು ಮನೆ ಕುಟುಂಬಸ್ಥರು ಮಾತ್ರ.
ಅಂದು ಆ ಮಗು ಕಂಡ ಸನ್ನಿವೇಶಗಳು ಅವನ ಮನಸ್ಸಿನಲ್ಲಿ ಒಂದು ದೊಡ್ಡ ಬದಲಾವಣೆಯ ಅಲೆಯನ್ನು ಮೂಡಿಸಿತು, ಅಂದು ಆ ಮಗು ಯೋಚಿಸಿದ ರೀತಿ ಮತ್ತು ಆ ದಿನ ನಡೆದ ಸಂಗತಿಗಳು ಅವನ ಮೇಲೆ ಒಂದು ದೊಡ್ಡ ಪರಿಣಾಮ ಬೀರಿತ್ತು.
ಅವುಗಳಲ್ಲಿ ಕೆಲವು ಸಮಾರಂಭವೆಲ್ಲ ನಡೆದ ನಂತರ ಹೊಸ ಬಟ್ಟೆ ಹೋಗಿ ಹಳೆ ಬಟ್ಟೆ ಬಂದದ್ದು, ನಾಲ್ಕು ಜನ ತಂದಿದ್ದ ಕೇಕ್ ಮತ್ತು ಇನ್ನಿತರ ವಸ್ತುಗಳು ಖಾಲಿಯಾಗಿ ಕೇಕ್ ನ ತಳಬದಿಯಲ್ಲಿದ್ದ ಪೇಪರ್ ನ ರಟ್ಟು ರೋಡಿನಲ್ಲಿ ಬಿದ್ದದ್ದು, ಅದನ್ನು ಬೀದಿಯಲ್ಲಿರುವ ಮಕ್ಕಳು ಎಸೆದು ಆಟವಾಡುತ್ತಿದ್ದದ್ದು,
ಅಯ್ಯೋ ಇಷ್ಟೆಲ್ಲ ಸುಖ ಸಂಭ್ರಮ ಸಂತೋಷ ನನ್ನ ಮೇಲೆ ಕೊಟ್ಟ ಗಮನ ಅವಧಾನ ಕೇವಲ ಅಲ್ಪಸಮಯದ್ದು, ಕೇವಲ ಕ್ಷಣಿಕ ಎಂದು ಅವನ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯುರಿತ್ತು.
ಕೇವಲ ಐದು ವರ್ಷ ವಯಸ್ಸಿನ ಮಗುವಿನ ಮನಸ್ಸಿನಲ್ಲಿ ಇಂಥದೊಂದು ಅದವಾದ ಯೋಚನೆ ಮೂಡಿಸಿದ ಆ ಗುರುವಿನ ಕಾರುಣ್ಯಕ್ಕೆ ನನ್ನ ನಮನಗಳು ಆ ಮಗುವಿನ ಹೆಸರು ಮಂಜುನಾಥ್ ಕೆ ಆರ್.
ದಿನಾಂಕ 18 ಫೆಬ್ರವರಿ 2008 ಮಂಜು ಆಗ 6ನೇ ತರಗತಿ, ಹಿಂದಿನ ದಿನ ಅಂದರೆ 17 ಫೆಬ್ರವರಿ 2008 ಶಾಲೆಯಲ್ಲಿ ಸ್ನೇಹಿತರಲ್ಲ ಒಳಗೊಂಡು ಎಲ್ಲರ ಮಾತು ಕೇವಲ ಹುಟ್ಟು ಹಬ್ಬದ ಬಗ್ಗೆ ಶಿಕ್ಷಕರು ಇದಕ್ಕೆ ಹೊರತಾಗಿಲ್ಲ.
ಅಂದು ಶಾಲೆ ಒಂದು ಗಂಟೆ ತಡವಾಗಿ ಬಿಡುವುದಾಗಿ ಹೇಳಿದರು, ಕಾರಣ ಅಂದು ಶಾಲೆಯ ಒಂದು ಸಣ್ಣ ಕಾರ್ಯಕ್ರಮ ಇತ್ತು, ಆ ಕಡೆಯ ಅವಧಿಯ ಶಿಕ್ಷಕಿ ಕೂಡ ಮಂಜು ಇಷ್ಟೊತ್ತಿಗೆ ನೀನು ಮತ್ತು ನಿನ್ನ ಪೋಷಕರು ಹೊಸ ಬಟ್ಟೆ, ಸಿಹಿ ತಿನಿಸುಗಳನ್ನು ಖರೀದಿಸಲು ಹೋಗುತ್ತಿದ್ದರೇನೋ? ಕಾರ್ಯಕ್ರಮ ಇರುವುದರಿಂದ ಒಂದು ಗಂಟೆ ತಡವಾಯಿತು ಎಂದು ಹೇಳಿದರು.
4 ಗಂಟೆಗೆ ಬಿಡಬೇಕಿದ್ದ ಶಾಲೆ ಅಂದು 5.15ಕ್ಕೆ ಬಿಟ್ಟಿತ್ತು ಎಂದಿನಂತೆ ಮಂಜು ಮತ್ತು ಅವರ ಅಣ್ಣ ಸೈಕಲ್ಲಿನಲ್ಲಿ ಮನೆ ತಲುಪಿದರು, ಶಾಲೆಯಲ್ಲಿ ನಡೆದ ಆ ಘಟನೆಗಳು ಮಂಜುವಿನ ಮನಸ್ಸಿನಲ್ಲಿ ಅಚ್ಚು ಒತ್ತಿದಂತೆ ಇದ್ದವು, ಅದು ಅವನಲ್ಲಿ ನಾನು ನಾಳೆ ಒಳ್ಳೆಯ ಬಟ್ಟೆ ಹಾಕಿಕೊಂಡು, ಯಾರು ತರದಿರದಂತಹ ಸಿಹಿ ತಿನಿಸು ಚಾಕಲೇಟ್ ಗಳನ್ನು ತರಬೇಕು ಎಂಬ ಬಯಕೆ ಅಥವಾ ಎಕ್ಸ್ಪೆಕ್ಟೇಶನ್ ಅವನ ಮನದಲ್ಲಿ ಕಾಡುತ್ತಿತ್ತು.
ಅಂದು ಮಂಜುವಿನ ತಂದೆ ಕೆಲಸದ ಮೇಲೆ ಬೇರೆ ಊರಿಗೆ ಹೋಗಿದ್ದು ಬರುವುದು ತಡವಾಗಬಹುದು ಅಥವಾ ಮರುದಿನ ಬರುವ ಸಂದೇಶ ತಾಯಿ ತಿಳಿಸಿದರು, ಮನೆಯಲ್ಲಿ ಎಲ್ಲರು ತಂದೆ ಒಬ್ಬರ ದುಡಿಮೆಯ ಮೇಲೆ ಅವಲಂಬಿತರಾಗಿದ್ದರಿಂದ, ಈ ಎಲ್ಲಾ ಆಸೆಗಳಿಗೆ ಅವರ ಅವಶ್ಯಕತೆ ಇದ್ದದ್ದು ಮಂಜುವಿನ ದುಃಖಕ್ಕೆ ಕಾರಣವಾಯಿತು, ಅಳುತ್ತಾ ತಂದೆಗೆ ಕರೆ ಮಾಡಿ ತನ್ನ ಹುಟ್ಟು ಹಬ್ಬ ಮತ್ತು ತನ್ನ ಆಸೆ ಅವರಿಗೆ ತಿಳಿಸಿದ.
ಮಗನ ಮಾತು ಕೇಳಿ ತಂದೆ ತನ್ನೆಲ್ಲ ಕೆಲಸಗಳನ್ನು ಅಂದೆ ಮುಗಿಸಿ ಬರುವುದಾಗಿ ತಿಳಿಸಿದರು ಬಂದ ನಂತರ ಪೇಟೆಗೆ ಹೋಗಿ ಬೇಕಿರುವ ಎಲ್ಲಾ ವಸ್ತುಗಳನ್ನು ತರುವುದಾಗಿ ಹೇಳಿದರು, ಇದೇ ನೆನಪಿನಲ್ಲಿ ಮಂಜು ಕಾದು ಕಾದು ಕೊನೆಗೆ ರಾತ್ರಿ 11:30 ಆಗಿತ್ತು,
ಮನೆಯ ಬಾಗಿಲು ಯಾರೋ ತಟ್ಟಿದರು ತಂದೆಯ ಬರುವಿಕೆಯಲ್ಲಿ ಮಲಗಿದ್ದ ಮಂಜು ತಕ್ಷಣ ಎದ್ದು ಬಾಗಿಲು ತೆಗೆದ ಮುಂದೆ ನಿಂತಿದ್ದ ತಂದೆಯ ನೋಡಿ ಇಷ್ಟು ತಡವಾಗಿ ಬಂದಿದ್ದಕ್ಕೆ ತನ್ನ ದುಃಖವನ್ನು ತಂದೆಯ ಕೈ ಜೋರಾಗಿ ಹಿಂಡಿ ನೋವುಮಾಡಿ ವ್ಯಕ್ತಪಡಿಸಿದನು, ತಡವಾಗಿ ಬಂದಿದ್ದರಿಂದ ಹಾಗೆ ಎಲ್ಲರೂ ಮಲಗಿದರು,
ಮರುದಿನ ಬೆಳಿಗ್ಗೆ ಹಿಂದಿನ ದಿನದ ಎಲ್ಲಾ ಬಯಕೆಗಳು ಸರಳವಾಗಿದ್ದ ಇವನ ಮನಸ್ಸಿನಲ್ಲಿ ಸನ್ನಿವೇಶಗಳೆಲ್ಲ ತುಂಬಿದ ಆಸೆಗಳ ಹೊತ್ತು ಶಾಲೆಗೆ ಹೋಗಲು ಇವನಿಗೆ ತುಂಬಾ ಕಷ್ಟವಾಗಿತ್ತು, ತಂದೆ ಸಿಹಿತಿನಿಸುಗಳನ್ನು ಚಾಕಲೇಟ್ ಗಳನ್ನು ತಂದುಕೊಟ್ಟರು ಆದರೆ ಹೊಸ ಬಟ್ಟೆ ಇಲ್ಲದೆ ಸಮವಸ್ತ್ರದಲ್ಲಿ ಹೋಗಬೇಕಾಗಿತ್ತು,
ಆ ಶಾಲೆಯಲ್ಲಿ ಪ್ರತಿದಿನ ಅಂದಿನ ಹುಟ್ಟು ಹಬ್ಬದ ವಿದ್ಯಾರ್ಥಿಗಳನ್ನು ವೇದಿಕೆ ಮೇಲೆ ಕರೆದು ಶುಭ ಹಾರೈಸಿ ಒಂದೊಂದು ಪೆನ್ ಕೊಡುವುದು ಪದ್ಧತಿಯಲ್ಲಿತ್ತು, ಅಂದು ಇವ ಸಮವಸ್ತ್ರದಲ್ಲಿ ವೇದಿಕೆಯ ಮೇಲೆ ಹೋಗಿ ಪೆನ್ ಪಡೆದು ಬಂದ, ಆದರೆ ಅವ ಸಮವಸ್ತ್ರದಲ್ಲಿ ಇದ್ದ ಕಾರಣ ಕೀಳಿರಿಮೆ ಮೂಡುವಂತೆ ಎಲ್ಲರೂ ನೋಡಿದ್ದು ಅವ ಗಮನಿಸಿದ್ದ.
ಇದನ್ನೆಲ್ಲಾ ಗಮನಿಸಿ ಇಂದಿನ ದಿನ ನನ್ನ ತಂದೆಗೆ ಕರೆ ಮಾಡಿ ಬೇಗ ಬರುವಂತೆ ಹೇಳಿ ಮಾಡಿದ್ದು, ಎಲ್ಲಾ ಕೆಲಸಗಳನ್ನು ಆತುರದಲ್ಲಿ ಮಾಡಿಕೊಂಡು ತಡವಾಗಿ ಬಂದ ತಂದೆಗೆ ಏಕೆ ತಡವಾಗಿ ಬಂದೆ ಎಂದು ಗಟ್ಟಿದ್ವನಿಯಲ್ಲಿ ಕೇಳಿ ಮನ ನೋಯಿಸಿದ್ದು, ಇವನ ಅರಿವಿಗೆ ಬಂತು ಇಂತಹ ಸಂದರ್ಭದಲ್ಲಿ ತಂದೆ ಮಾಡಿದ ಕೆಲಸ ಮತ್ತು ಸಿಹಿ ಕೊಡಿಸಿ ಕಳಿಸಿದ್ದರು ಶಾಲಾ ಮಕ್ಕಳು ಸಹ ವಿದ್ಯಾರ್ಥಿಗಳು ಮಾಡಿದ್ದು ಇವನಲ್ಲಿ ಹುಟ್ಟು ಹಬ್ಬದ ಆಚರಣೆಯೇ ಒಂದು ಮಿತ್ಯ ಎಂದೆನಿಸಿತು.
ಈ ಘಟನೆಗಳು ಇವನಲ್ಲಿ ಒಂದು ಗಟ್ಟಿ ಮನೋಭಾವನೆಯನ್ನು ತುಂಬಿದವು ಅಂದಿನಿಂದ ಇಲ್ಲಿಯವರೆಗೂ ಎಂದು ವೈಯಕ್ತಿಕವಾಗಿ ಹುಟ್ಟು ಹಬ್ಬದ ಆಚರಣೆಗೆ ಮುಂದಾಗಿಲ್ಲ, ನಾನು ನನ್ನ ಪೋಷಕರಲ್ಲಿ ಹೊಸ ಬಟ್ಟೆ ಅಥವಾ ಯಾವುದೇ ವಸ್ತುಗಳನ್ನು ಕೊಡಿಸಿ ಎಂದು ಕೇಳಿಲ್ಲ, ಯಾರ ಬಳಿ ಏನೇ ಇದ್ದರೂ ಜೊತೆಯಲ್ಲಿ ಹಾಡುತ್ತಿದ್ದವರು ಏನೇ ತಂದಿದ್ದರು ಆ ವಸ್ತುವಿನ ಬಯಕೆ ನನ್ನಲ್ಲಿ ಮೂಡಲು ನನ್ನ ಮನಸ್ಸು ಬಿಡಲೇ ಇಲ್ಲ, ನನ್ನ ವಯಕ್ತಿಕ ಬೇಡಿಕೆ ತೀರ ಕಡಿಮೆ..!
ಇದೇ ಇವನಲ್ಲಿ ಈ ಪ್ರಾಪಂಚಿಕ ವಿಷಯದ ಬಗ್ಗೆ ಆಸಕ್ತಿ ಕಡಿಮೆ ಮಾಡಿತು ಎನ್ನುವುದಕ್ಕಿಂತ ಪ್ರಾಪಂಚಿಕ ವಿಷಯಗಳ ಅರಿವು ಮೂಡಿತು, ಅವಶ್ಯಕತೆಗೂ ಅಥವಾ ತೋರಿಕೆಗಳಿಗೆ ವಸ್ತುಗಳನ್ನು ಖರೀದಿಸುವ ಗೋಜಿಗೆ ನನ್ನನ್ನು ನಾನು ಎಂದು ನೂಕಲಿಲ್ಲ.
ನಾನು 5 ವರ್ಷದವನಾಗಿದ್ದಾಗ ಆದ ಆ ಘಟನೆ ವ್ಯಕ್ತಿಗೆ ಕೇವಲ ಅಧಿಕಾರ ಅಥವಾ ವರ್ಚಸ್ಸು ಇದ್ದರೆ ಮಾತ್ರ ಜನ ಸುತ್ತಲೂ ಇರುವರು ಎಂಬ ಅರಿವು ಮೂಡಿತು, ಹೇಗೆ ಬೆಲ್ಲದ ಸಿಹಿಗೆ ನೊಣ ಕೂರುವುದು, ಅಂದರೆ ಎಲ್ಲರು ಇರುವರು ಆದರೆ ಯಾವಾಗಲೂ ಅಲ್ಲ ಎನ್ನುವುದು.
ಈ ಘಟನೆ ಮುಂದೆ ನನ್ನ ನೆನಪಿಗೆ ಬಂದು ನಾವು ಹಣದ ಹಿಂದೆ ಹೋಗದೆ ನನ್ನ ವರ್ಚಸ್ಸು, ನನ್ನ ಆಸ್ಮಿತೆಯನ್ನು ನನ್ನತನವನ್ನು ಉಳಿಸಿಕೊಂಡು ಅದಕ್ಕೆ ಜನ ನನ್ನ ಗೈರಿನಲ್ಲೂ ಬೆಲೆ ಕೊಡುವರು ಎಂಬುದನ್ನು ಅರಿತೆ.
ಆರನೇ ತರಗತಿಯಲ್ಲಿ ಇದ್ದಾಗ ಆದ ಆ ಘಟನೆ ಪ್ರಪಂಚಕವಾಗಿ ಮೂಡುವ ಸ್ನೇಹಿತರ ನಡುವೆ ಇದ್ದಾಗ ಆಗುವ ಮಾತುಗಳಿಂದ ಅಥವಾ ಬಾಹ್ಯ ಪ್ರೇರಣೆಯಿಂದ ನಮ್ಮ ಮನಸ್ಸು ವಿಚಲಿತರಾಗದೆ ನಾವು ನಮ್ಮತನವನ್ನು ಅಂದರೆ ನಮ್ಮ ವ್ಯಕ್ತಿತ್ವವನ್ನು ಎಲ್ಲಾ ಸಮಯದಲ್ಲೂ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿಕೊಳ್ಳಬೇಕು. ಎಂಬುದು ಅಂದು ನನಗೆ ನಮ್ಮ ಗುರುಗಳು ಕಲಿಸಿದ ಪಾಠ.
ಶೀರ್ಷಿಕೆಯಲ್ಲಿ ಇರುವಂತೆ ಕಳಕಳಿಯಿಂದ ಕಲಿಸಿದ್ದು ಆ ನನ್ನ ಹಬ್ಬ ಎಂಬುದು ಹುಟ್ಟು ಹಬ್ಬದ ಆಚರಣೆ ಆಡಂಬರವಲ್ಲ ನಾವು ನಮ್ಮ ಹುಟ್ಟು ಹಬ್ಬದ ಆಚರಣೆ ಹೇಗಿರಬೇಕೆಂಬುದು ಈ ಎಲ್ಲ ಪಾಠಗಳು ಚಿಕ್ಕ ವಯಸ್ಸಿನಲ್ಲಿ ಆದ ಈ ಘಟನೆಗಳು ಕೆಲವು ಕಾರಣಗಳೆನ್ನುವುದನ್ನು ತೆಗೆದುಹಾಕುವಂತಿಲ್ಲ.
ಕಳೆದ ವರ್ಷ ಬರೆದ ಇಳಯೊಡನೆ ಲೇಖನದಲ್ಲಿ ನಮ್ಮ ಹುಟ್ಟು ಹಬ್ಬದ ಆಚರಣೆಗಳ ಬಗ್ಗೆ ಬರೆದಿದ್ದೇವೆ ಇದು ಈ ಲೇಖನ ಅದರ ಮುಂದುವರೆದದ್ದಾಗಿ ಮತ್ತು ಆ ರೀತಿಯ ಆಚರಣೆಗಳು ಕೇವಲ ಆಡಂಬರವೆಂದು, ನಮ್ಮ ಮನಸ್ಸಿನಲ್ಲಿ ಮೂಡಲು ಕಾರಣವಾದ ಘಟನೆಗಳು ಲೇಖನ ರೂಪದಲ್ಲಿ ದಾಖಲಿಸುವ ಹಂಬಲದಿಂದ ಈ ಅಂಕಣವನ್ನು ಬರೆದಿದ್ದೇನೆ.
ಮೂಕನನ್ನು ಮುಕುಂದನಂತೆ ಹಾಡಿಸುತಿರುವ ನನ್ನ ಗುರುರಾಯರನ್ನು ನೆನೆಯುತ್ತಾ ಲೇಖನಕ್ಕೆ ವಿರಾಮ ತೆಗೆದುಕೊಳ್ಳುತ್ತೇನೆ.
ಎಲ್ಲವು ಎಲ್ಲರ ವೈಯಕ್ತಿಕ ಆಚರಣೆಯ ವಿರುದ್ಧ ನಾವಿಲ್ಲ ಇದು ಕೇವಲ ನಮ್ಮ ಮನದ ಆಶಯ…
ಧನ್ಯವಾದಗಳೊಂದಿಗೆ
-ಮಂಜುನಾಥ ಕಬ್ಬೂರು

0 Followers
0 Following