ಸಿಂಧನೂರು ನಗರದ ಬ್ರಾಹ್ಮಣರ ಓಣಿಯಲ್ಲಿನ ಗುರುಕುಲ ಸ್ಟಡಿ ಸೆಂಟರ್ ನಲ್ಲಿ 2023-24ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಂಧನೂರಿನ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಗೋವಿಂದರಾವ್ ಕುಲಕರ್ಣಿ, ಗುರುಕುಲ ಸ್ಟಡಿ ಸೆಂಟರ್ ನಲ್ಲಿ ಎಲ್ಲಾ ಶಿಕ್ಷಕರು ಸ್ನೇಹ ಭಾವದಿಂದ ಪಾಠ ಮಾಡುತ್ತಾ ವಿದ್ಯಾರ್ಥಿಗಳ ಯಶಸ್ವಿಗೆ ದಾರಿದೀಪವಾಗಿದ್ದಾರೆ ಎಂದರು.
ನಂತರ ಮುಖ್ಯ ಅತಿಥಿಗಳಾಗಿ ಮಾತನಾಡಿದ ವಸಿಷ್ಠ ಧಾಮದ ಸಂಚಾಲಕ ನವಲಿ ಭೀಮಸೇನ ಆಚಾರ್ಯರು ದಾನಗಳಲ್ಲಿ ಶ್ರೇಷ್ಠವಾದ ದಾನ ವಿದ್ಯಾದಾನ, ಅಚ್ಚುಕಟ್ಟಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ ಶೈಕ್ಷಣಿಕ ಸೇವೆಯಲ್ಲಿರುವ ಗುರುಕುಲ ಸ್ಟಡಿ ಸೆಂಟರ್ ಸಂಚಾಲಕ ವಿಠಲ್ ಕಲ್ಲೂರ ನಮ್ಮ ಬ್ರಾಹ್ಮಣ ಸಮಾಜದ ಹೆಮ್ಮೆಯ ಯುವಕ ಎಂದರು.
ಅತಿಥಿಗಳಾಗಿ ಆಗಮಿಸಿದ ಪ್ರಭಾಕರ ಕುಲಕರ್ಣಿ ಸಿಂಧನೂರಿನ ವಿಪ್ರ ನೌಕರರ ಸಂಘದ ಅಧ್ಯಕ್ಷರು ಮಾತನಾಡಿ,ಕಲಿಕೆಯ ಜೊತೆ ಕ್ರೀಡಾ ಹವ್ಯಾಸಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತಿರುವ ಗುರುಕುಲ ಸ್ಟಡಿ ಸೆಂಟರ್ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದರು.
ಗುರುಕುಲ ಸ್ಟಡಿ ಸೆಂಟರ್ ಸಂಚಾಲಕ ವಿಠಲ್ ಕಲ್ಲೂರ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಹಲವು ಬಡ ಹಿಂದುಳಿದ ವಿದ್ಯಾರ್ಥಿಗಳಿಗೆ ದಾರೀದೀಪವಾಗಿರುವ ನಮ್ಮ ಸ್ಟಡಿ ಸೆಂಟರ್ ಶೈಕ್ಷಣಿಕವಾಗಿ ನಿರಂತರ ಸೇವೆಯಲ್ಲಿದೆ, ನಮ್ಮ ಗುರುಕುಲ ಸ್ಟಡಿ ಸೆಂಟರ್ ನಲ್ಲಿ ಅಭ್ಯಾಸ ಮಾಡಿದ ಹೆಮ್ಮೆಯ ವಿದ್ಯಾರ್ಥಿಗಳಾದ ಉಮಾದೇವಿ ಸರ್ವೋದಯ ವಿದ್ಯಾವರ್ಧಕ ಅನುದಾನಿತ ಪ್ರೌಢ ಶಾಲೆಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ, ವಿರೇಶ ತಂದೆ ಮುದುಕಪ್ಪ ವೆಂಕಟೇಶ್ವರ ಅನುದಾನಿತ ಪ್ರೌಢ ಶಾಲೆ ಮೂರನೇ ರ್ಯಾಂಕ್ , ಆರ್ ಎಂ ಎಸ್ ಎ ಶಾಲೆಯ ವಿದ್ಯಾರ್ಥಿಗಳಾದ ಪೂರ್ವಿ ತಂದೆ ಮಲ್ಲಿಕಾರ್ಜುನ,ವೈಷ್ಣವಿ ತಂದೆ ಗುರುರಾಜ ಕುಲಕರ್ಣಿ, ನೇಹಾ ತಂದೆ ಜಲಾಲ ಪಾಷ,ನಿಹಾರಿಕ ತಂದೆ ರಮೇಶ್, ವರ್ಷಿಣಿ ತಂದೆ ವೆಂಕಟೇಶ್ ಈ ಎಲ್ಲಾ ವಿದ್ಯಾರ್ಥಿಗಳು ಶೇ.85%ಕ್ಕಿಂತ ಹೆಚ್ಚಿನ ಅಂಕಗಳ ಪಡೆದಿದ್ದು ದ್ವಿತೀಯ ಪಿಯುಸಿಯಲ್ಲಿ ಶೇ.94% ಪಡೆದ ರೇಣುಕಾ ತಂದೆ ಗೋವಿಂದರಾಜು ಇವರು ನಮ್ಮ ಗುರುಕುಲ ಸ್ಟಡಿ ಸೆಂಟರ್ ಗೆ ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿ ಎಂದು ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿಯರಾರ ಸಿಂಧು , ಸಹನಾ, ಸ್ವಾಗತವನ್ನು ಮಹಾಲಕ್ಷ್ಮಿ, ವಂದನಾರ್ಪಣೆಯನ್ನು ವಿದ್ಯಾರ್ಥಿ ಕುಮಾರ್ ಪ್ರಭುರಾಜ್ ನಡೆಸಿದರು. ಈ ಸಮಯದಲ್ಲಿ ಗುರುಕುಲ ಸ್ಟಡಿ ಸೆಂಟರ್ ಶಿಕ್ಷಕರು, ವಿದ್ಯಾರ್ಥಿ ಬಳಗ, ಬ್ರಾಹ್ಮಣ ಸಮಾಜದ ಹಿರಿಯರು, ವಿದ್ಯಾರ್ಥಿಗಳ ಪಾಲಕರು, ಇತರರಿದ್ದರು.
Article Writer, Self Employee
0 Followers
0 Following