ತಬಲವೆಂದರೆ ನಮ್ಮ ಉಸ್ತಾದರುˌ

ಸಂಗೀತದ ಆರಾಧಕ

ProfileImg
14 May '24
1 min read


image

ಉಸ್ತಾದ್ ಜಾಕೀರ್ ಹುಸೇನ್ ಹೆಸರು ಕೇಳದವರು ಯಾರುˌತನ್ನ ಜೀವನವನ್ನೆ ತಬಲ ವಾದನಕ್ಕಾಗೀˌಸಮರ್ಪಿಸಿದವರುˌಇಲ್ಲಿಯವರೆಗೆ ತಬಲದಲ್ಲಿ ಯಾರು ಮಾಡದ ಸಾಧನೆಯನ್ನ ಮಾಡಿದವರುˌಅದು ಎಲ್ಲ ಪ್ರಕಾರದ ಕಾರ್ಯಕ್ರಮಗಳಲ್ಲಿ ತನ್ನ ಪ್ರತಿಭೆಯನ್ನ ತೋರಿಸಿದವರುˌಅದು ಶಾಸ್ತ್ರಿಯವಿರಬಹುದುˌವೆಸ್ಟರ್ನ್ˌಜುಗಲ್ ಬಂದಿˌಸಿನಿಮಾˌಹೀಗೆ ಪ್ರತಿಯೊಂದರಲ್ಲಿಯೂ ಸೈ ಎನಿಸಿಕೊಂಡವರು.ಉಸ್ತಾದರು.ಲತಾ ಮಂಗೇಷ್ಕರ್ ಹೇಳಿದ್ರು ತಬಲದಲ್ಲಿ ಇವರಂತೆˌನಾದವನ್ನ ಕ್ರಿಯೆಟ್ ಮಾಡುವ ವ್ಯಕ್ತಿ ಜಗತ್ತಿನಲ್ಲಿಯೆ ಇಲ್ಲವೆಂದು.ಇವತ್ತಿನ ತನಕ ಅಹಂಕಾರದ ಲವಲೇಶವೂ ಅವರಲ್ಲಿ ಹುಟ್ಟಿಕೊಂಡಿಲ್ಲˌಅವರಿಗಿಂತ ಚಿಕ್ಕ ಕಲಾವಿದರನ್ನ ತುಂಬಾ ಪ್ರೋತ್ಸಾಹ ಮಾಡ್ತರೆˌವಿದೇಶದ ಅನೇಕ ಆಲ್ಬಂಗಳಿಗೆ ಅವರು ರಾಗ ಸಂಯೋಜನೇ ಮಾಡಿದಾರೆˌಪದ್ಮಶ್ರಿˌಪದ್ಮಭೂಷಣˌಪದ್ಮವಿಭೂಷಣˌಹೀಗೆ ನೂರಾರು ಪ್ರಶಸ್ತಿಗಳು ಉಸ್ತಾದರಿಗೆ ಲಭಿಸಿವೆˌಇದರ ಜೊತೆಗೆ  ಅವರು ಹತ್ತಾರು ಸಿನೀಮಾಗಳಿಗೆ   ಸಂಗೀತ ನಿರ್ದೇಶನ ಮಾಡಿದ್ದಾರೆ  ಕಲಾವಿದನಾಗಿ ನಟನೆಮಾಡಿದ್ದಾರೆˌಅವರನ್ನ ಅಮೇರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಮಾ ತನ್ನ   ಅಧಿಕೃತ ನಿವಾಸ ವೈಟ್ ಹೌಸ್  ಕರೆಸಿ  ಅವರ ವೆಸ್ಟರ್ನ್ ಫ್ಯೂಷನ್ ಕಾರ್ಯಕ್ರಮ ನಡೆಸಿ ಸನ್ಮಾನ ಮಾಡಿ ಕಳುಹಿಸಿದ್ದರು.ಗ್ರಾಮೀ ಮೊದಲಾದ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅವರಿಗೆ ನೂರಾರು ದೊರೆತಿವೆˌಅಷ್ಟುಮಾತ್ರವಲ್ಲˌಅಮೆರಿಕ ಸರ್ಕಾರ ಕೊಡುವ ನ್ಯಾಷನಲ್ ಹೆರಿಟೇಜ್ ಸ್ಕಾಲರ್ ಶಿಪ್ ಕೂಡ ಬಂದಿದೆˌಕೇಂದ್ರ ಸರ್ಕಾರದ ಸಂಗೀತ ಮತ್ತು ನಾಟ್ಯ ಅಕಾಡೆಮಿಯ ಪ್ರಶಸ್ತಿˌಯಾವುದು ಬಂದಿಲ್ಲ ಉಸ್ತಾದರಿಗೆˌ ಇದೆಲ್ಲದಕ್ಕೂ ಅವರು ಅರ್ಹರಾಗಿದಾರೆˌನಮ್ಮಂಥ ಅಭಿಮಾನಿಗಳಿಗೆ ಅವರಿಗಿನ್ನು ಭಾರತರತ್ನ ಬರಲಿಲ್ಲವಲ್ಲವೆಂಬ ಎಂಬ ಬೇಸರ ಖಂಡಿತವಾಗಿಯು ಇದೆˌ ಯಾವತ್ತು ಭಾರತೀಯತೆಯನ್ನ ಬಿಟ್ಟುಕೊಟ್ಟವರಲ್ಲ.ಅವರೆ ಹೇಳುತ್ತಾರೆ ನಾನು ಭಾರತೀಯ ಸಂಗೀತದ ಆರಾಧಕˌನಾನು ಸಾಧಿಸಬೇಕಾದ್ದು ತುಂಬಾ ಇದೆˌನಾನು ಮದುವೆ ಪಾರ್ಟಿಗಳಲ್ಲಿˌಗುಂಡು ಪಾರ್ಟಿಗಳಲ್ಲಿ ತಬಲಾ ನುಡಿಸುವುದಿಲ್ಲ!ಎಷ್ಟೆ ಕೋಟಿ ಕೊಟ್ಟರು ನಾನು ಆಕಡೆ ತಲೆ ಹಾಕುವುದಿಲ್ಲˌಭಾರತೀಯ ಸಂಗೀತವೆಂದರೆ ಅದೊಂದು ಆರಾಧನೆˌನಾನು ಸಂಗೀತ ಕಛೇರಿಯನ್ನ ಆರಂಭಿಸುವ ಮೊದಲುˌನನ್ನೊಳಗಿರುವ ಎಲ್ಲಾ  ಅಹಂಕಾರವನ್ನ ನನ್ನ ಪ್ರೇಕ್ಷಕರˌಕಾಲ ಬುಡದಲ್ಲಿ ಇಟ್ಟು.ನಂತರ ತಬಲ ನುಡಿಸಲು ಆರಂಭ ಮಾಡುತ್ತೇನೆ! ಪ್ರತಿದಿನ ಏನಾದರು ಹೊಸದನ್ನು ಕಲಿಯುವುದಕ್ಕೆ ಪ್ರಯತ್ನಿಸುವೇˌನಮ್ಮಲ್ಲಿ ತುಂಬಿದ ಕೊಡ ತುಳುಕುವುದಿಲ್ಲವೆಂಬ ಎಂಬ ಗಾದೆ ಸುಮ್ಮನೆ ಹುಟ್ಟಿಕೊಂಡಿಲ್ಲ.

Category:Music



ProfileImg

Written by Muruli Aldur