ಸೂರ್ಯೋದಯ -ಶುಭೋದಯ..



image

ಪ್ರಕೃತಿಯ ರಮಣೀಯ ಸೌಂದರ್ಯ..

ಸೂರ್ಯೋದಯ -ಶುಭೋದಯ,

ದಿನದ ಆರಂಭಕೆ ರವಿಯ ರಶ್ಮಿಯು ತುಂಬುವುದು ಹೊಸ ಚೈತನ್ಯ..

ರಂಗೇರಿದೆ ಪೂರ್ವ,

ಶುಕ-ಪಿಕಗಳ ಚಿಲಿಪಿಲಿ ಕಲರವ,

ಮಂಜಿನ ಹನಿಗಳಿಗೆ ಸೂರ್ಯ ರಶ್ಮಿಯು ಮುತ್ತಿಕ್ಕಲು ಸ್ಪರ್ಶಿಸುವ ಸಮಯ-ಆನಂದಮಯ,

ಕಾತರತೆಯಿಂದ ದಿನದ ಆರಂಭಕೆ ಕಾರ್ಯನಿರತರಾಗುವ ಜನತೆಯಲ್ಲಿನ ಉತ್ಸಾಹಭರಿತ ದೃಶ್ಯವ ವರ್ಣಿಸುವ ಕವಿಯ ಕಾವ್ಯ..

ಸೂರ್ಯದೇವನ ನಮಸ್ಕರಿಸುತ ಶುಭ ಕಾರ್ಯಾಗಳ ಆರಂಭ,

ಸಕಲರಿಗೂ  ಬಯಸುವೆನು ಶುಭ…

ಶಾಂತಾರಾಮ ಹೊಸ್ಕೆರೆ,  ಶಿರಸಿ..

ಉತ್ತರ ಕನ್ನಡ,7676106237

 

Category:Poem



ProfileImg

Written by ಶಾಂತಾರಾಮ ಹೊಸ್ಕೆರೆ,ಶಿರಸಿ

ಬರಹಗಾರ...