ತನನಂ ಎಂದು ತನತನಿಸುತಿದೆ
ಎನ್ನಯ ಹೃದಯರಾಗಾಲಾಪ..
ಬೆಳ್ಳಿಯ ಚೌಕಟ್ಟಿನಲ್ಲಿ ಮಿಂಚುವ
ಬೆಳ್ಳಿಯ ಚುಕ್ಕಿಯ ಪ್ರಕಾಶವು ನೀ
ಹಿತವಾದ ಇಂಪಿನ ಧ್ವನಿಯಿಂದ
ಎದೆಯ ಏರಿಳಿತಕೆ ಕಾರಣ ನೀ
ಯಾರಿಗಾಗಿ ?ಯಾತಕ್ಕಾಗಿ?
ಉತ್ತರವಿಲ್ಲದ ಪ್ರಶ್ನೆ
ಸಮಂಜಸದ ಮೌಲ್ಯಮಾಪನ
ಸಮನ್ವಯತೆಗೆ ಸರಿದಾರಿ
ಮಿಂದೆದ್ದರೂ ಸೈ, ಧಗೆಯಲ್ಲಿದ್ದರೂ ಸೈ
ಹಟವೆಂಬುದು ಹುಟ್ಟುಗುಣ ಜೊತೆಯಲ್ಲಿ ವ್ಯವಧಾನವರಿಯದವ ತುಸು ಕಲಿತೆ
ನಿನ್ನಿಂದ ಸುಖವರಿತ ಕಾಯುವಲ್ಲಿ
-ಹನುಮಂತ.ಮ.ದೇಶಕುಲಕರ್ಣಿ.
0 Followers
0 Following