ಸಿಂಧನೂರು ತಾಲೂಕಿನ ಜವಳಗೇರಾ ಸಂಸ್ಥಾನದ ಪುರೋಹಿತರು, ವಸಿಷ್ಠಧಾಮ ಸಂಚಾಲಕರಾದ ಭೀಮಸೇನಾಚಾರ್ಯರು ವಿಶಿಷ್ಠ ವ್ಯಕ್ತಿತ್ವವುಳ್ಳ ಸಮಾಜಸೇವಕರು ಎಂದರೆ ತಪ್ಪಾಗಲಾರದು.
ಧಾರ್ಮಿಕ ಸೇವೆ:
ಸಿಂಧನೂರು ನಗರದ ಉಪ್ಪಾರವಾಡಿಯ ಶ್ರೀಲಕ್ಷ್ಮಿ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಸನಾತನ ಧರ್ಮಜಾಗೃತಿ ಮತ್ತು ಬಡಕುಟುಂಬವೊಂದರ ವಿವಾಹ ಕಾರ್ಯವನ್ನು ಉಚಿತವಾಗಿ ದಾನಿಗಳ ನೆರವಿನಿಂದ ವಸಿಷ್ಠಧಾಮದಿಂದ ಮಾಡಲಾಗಿದೆ.
ಅದೇ ರೀತಿ ವಿವಿಧೆಡೆ ಹಲವು ದೇವಾಲಯಗಳ ಮೂರ್ತಿ ಪ್ರತಿಷ್ಠಾಪನೆ ಮತ್ತು ಹೋಮ ಹವನ ಇತ್ಯಾದಿಗಳ ಮಾಡುವ ಜೊತೆ ಭಕ್ತರ ಕಷ್ಟಕ್ಕೆ ವೈಜ್ಞಾನಿಕವಾಗಿ ಜ್ಯೋತಿಷ್ಯದ ಮೂಲಕ ಸುಲಭ ಪರಿಹಾರ ಮತ್ತು ಆಶೀರ್ವಚನ ನೀಡುತ್ತಿದ್ದಾರೆ.
ಶೈಕ್ಷಣಿಕ ಸೇವೆ:
ಇತ್ತೀಚೆಗೆ ವಸಿಷ್ಠ ಧಾಮ ಗುರುಕುಲ ಆರಂಭಿಸಿ, ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಸಂಸ್ಕಾರ,ದಾಸರ ಪದಗಳು, ಚಿತ್ರಕಲೆ, ನೃತ್ಯ ಕಲಿಸುವ ಕಾರ್ಯವನ್ನು ಉಚಿತವಾಗಿ ಮಾಡುತ್ತಾ ದೇಶಭಕ್ತರ ಗಣ್ಯರ ಜಯಂತಿಯಂದು ಮಕ್ಕಳಿಗೆ ಅವರ ವಿಷಯದ ಬಗ್ಗೆ ಅರಿವು ಮೂಡಿಸುವಲ್ಲಿ ನಿರತರಾಗಿದ್ದಾರೆ.
ಅದೇ ರೀತಿ ತಾವು ವಿದ್ಯಾಭ್ಯಾಸ ಮಾಡಿದ ಸರಕಾರಿ ಉಪ್ಪಾರವಾಡಿ ಪ್ರಾಥಮಿಕ ಶಾಲೆಯಲ್ಲಿ ಹಾಗೂ ನಗರದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಕನಕದಾಸ ಜಯಂತಿ ಹಾಗೂ ವಿವೇಕಾನಂದರ ಜಯಂತಿ ಅಂಗವಾಗಿ ಸ್ಪರ್ಧೆಗಳನ್ನು ಆಯೋಜಿಸಿ, ಬಹುಮಾನಗಳನ್ನು ವಿತರಿಸುವ ಕಾರ್ಯವನ್ನು ವಸಿಷ್ಠ ಧಾಮದ ಮೂಲಕ ಮಾಡುತ್ತಿದ್ದಾರೆ.
ಬಡ ಪ್ರತಿಭಾವಂತ ವಿದ್ಯಾರ್ಥಿನಿಗೆ ಈ ಹಿಂದೆ ಕಾಲೇಜು ಶುಲ್ಕ ಭರಿಸಲು ಗುಪ್ತದಾನಿಯೊಬ್ಬರ ಮೂಲಕ ನೆರವು ನೀಡಿದ ಇವರು ಮುಂದಿನ ದಿನಗಳಲ್ಲಿ ವಸಿಷ್ಠಧಾಮದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದಂತಹ ಕಾರ್ಯ ಮಾಡಲು ಉತ್ಸುಕರಾಗಿದ್ದೇವೆ ಎನ್ನುತ್ತಿದ್ದಾರೆ.
ಸಾಂಸ್ಕೃತಿಕ ಮತ್ತು ದಾಸಸಾಹಿತ್ಯ ಸೇವೆ:
ಕಳೆದ 20ವರ್ಷಗಳಿಂದ ದಾಸಸಾಹಿತ್ಯದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಹಿಳೆಯರಿಗೆ ಮಕ್ಕಳಿಗೆ ರಸಪ್ರಶ್ನೆ, ಸಂಗೀತ, ಭಾಷಣ, ಪ್ರಬಂಧ, ಕೋಲಾಟದಂತಹ ವಿವಿಧ ಸ್ಪರ್ಧೆಗಳನ್ನು ಆಯೋಜಿಸುತ್ತಾ ಉತ್ತಮ ಸಂಘಟಕರಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೆರುಗು ತರುವಂತೆ ಸೇವೆ ಸಲ್ಲಿಸಿದ್ದಾರೆ.
ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ಹಲವರಿಗೆ ಸ್ಪೂರ್ತಿಯಾಗುವಂತೆ ನಿರಂತರವಾಗಿ ಸೇವೆಯಲ್ಲಿರುವ ಇವರನ್ನು ಗುರುತಿಸಿದ ಸಂಗೀತ ಭಾರತಿ ಸಂಸ್ಥೆ ಹೊಸಪೇಟೆಯ (ಈಗಿನ ವಿಜಯನಗರ ಜಿಲ್ಲೆ)ಯಲ್ಲಿ ರಾಜ್ಯಮಟ್ಟದ ಸಮಾಜಸೇವಾ ಭಾರ್ಗವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿರುವುದು ಅಭಿನಂದನೀಯ.
Article Writer, Self Employee
0 Followers
0 Following