So called Social media(ಬೆರಳ ತುದಿಯ ಮಾಯಾ ದುನಿಯಾ)

ಪ್ರಸ್ತುತದ ಪರಿಣಾಮ ವಾಸ್ತವದ ಅರಿವು ಓದಿ ನೋಡಿ...

ProfileImg
27 Feb '24
5 min read


image

* ಮೋಯೆ ಮೋಯೇ *  *ಓ ನಲ್ಲ ನೀನಲ್ಲ* ಸೋಶಿಯಲ್ ಮೀಡಿಯಾ ಗೆ ಫಿಧಾ ಆದೋರು ಯಾರಿಲ್ಲ ಯಾರ್ ಯಾರೂ ಇಲ್ಲಾ, ಪಟಾ ಪಟ್ ಬೆಳ್ಳುಳ್ಳಿ ಕಬಾಬ್ ಒನ್ ಮೊರ್ ಒನ್ ಮೊರ್ ಅನ್ನೇಕು, ದೇವ್ರು ಒಳ್ಳೆದು ಮಾಡಿದ್ರೆ ಅಷ್ಟೇ ಸಾಕು ಗಿಡ ಮರ ಯಾಕೆ ತಾಯಿಗೆ ಕೈ ಮುಗಿರಿ ಅಷ್ಟೇ ಏನ್ ಅಂತಿರಾ...etc ಉದಾತ್ತ ಉದಾಹರಣೆಗಳು ಇದ್ರಲ್ಲಿ ವೈರಲ್ ದಯೆಯಿಂದ ಒಬ್ಬ ಸೂಪರ್ ನು ಆಗ್ಬೋದು ಇನ್ನೊಬ್ಬ ಪಾಪರ್ ನು ಆಗ್ಬೋದು  ಪ್ರಸ್ತುತ ಸ್ಮಾರ್ಟ್ ಫೋನ್ ಉಸ್ ಮಾಡದೆ ಇರೋರು ಯಾರಿಲ್ಲ ಹೇಳಿ  ( ವಯಸ್ಸಾಗಿ ಉಳಿದ ವೈರಾಗ್ಯ, ಗೊತ್ತಿಲ್ಲದೆ ಉಳಿದ ಮಹಾನುಭಾವ, ಆಗ ತಾನೆ ಹುಟ್ಟಿದ ಮುಗ್ಧ ಮಗು,ಎಲ್ಲದರ ತ್ಯಾಗ ಮಾಡಿದ ಮಹನೀಯ, ಇದೆಲ್ಲಾ ಹೊರತಾಗಿ ಈಗಿನ ಕಾಲದಲ್ಲೂ ಕೀಪ್ಯಾಡ್ ಹೊಂದಿರುವ ಅಳಿದು ಉಳಿದವರು.. etc ಇವರನ್ನು ಹೊರತುಪಡಿಸಿ)  ದಿನ ಬೆಳಿಗ್ಗೆ ಆದರೆ ಕಣ್ಣು ತೆರೆಯೊ ಮುಂಚೆ ಕೈ ಉಜ್ಜಿ ಮುಕ್ಕೋಟಿ ದೇವರನ್ನು ನೆನೆಸಿ ಕಣ್ಣಿಗೆ ಒತ್ತಿಕೊಂಡು ದೇವ್ರೆ ಈವತ್ತಿನ ದಿನ ಚೆನ್ನಾಗಿರಲಿ ಆಶೀರ್ವಾದ್ ಮಾಡಪ್ಪ ಅಂತ ಬೇಡಿಕೊಂಡು ಅಂದಿನ ದಿನದ ದಿನಚರಿಯನ್ನು ಶುರು ಮಾಡೋ ಅಭ್ಯಾಸ ಪೂರ್ವಜರಿಂದ ನಾವು ಬಳುವಳಿ ಆಗಿ ಪಡೆದದ್ದು ನಿಜ ಬೇಕೋ ಬೇಡವೋ ಅನಿವಾರ್ಯತೆಯೂ ಉತ್ಪ್ರೇಕ್ಷೆಯೋ.. ಮಾಡುತ್ತಿದ್ದೆವು ಮಾಡಿದ್ದೇವೆ ಕೂಡ...ಆದರೆ ಈಗ ಬದಲಾಗಿ ಪಕ್ಕದಲ್ಲೇ ಜೋಪಾನವಾಗಿ ಬೆಡ್ ಶೀಟ್ ಮೇಲೆ ಮಲ್ಕೊಂಡಿರುವ ಸ್ಮಾರ್ಟ್ ಫೋನ್ ಅನ್ನು ಅಷ್ಟೇ ಪ್ರೀತಿ ಇಂದ ಎತ್ಕೊಂಡು ಸ್ಟೇಟಸ್, ರೀಲ್ಸ್, ಪೋಸ್ಟ್ , ಲೈಕ್, ಟ್ಯಾಗ್ ಯಾರೂ ಯಾರ್ಗೆ ಟಾಂಗ್ ಕೊಟ್ರು, ಬೇಕಾಬಿಟ್ಟಿ ಕಾಮೆಡಿ ಶೋ, ಅವಾಸ್ತವ ದ ರೀಲಿಯಾಟಿ ಶೋ ಕ್ಲಿಫ್ ಗಳು, ಶಾರ್ಟ್ಸ್ ಸ್ಟೋರೀಸ್, ಉಡಾಫೆ ಟ್ರೊಲ್ ಗಳು, ನಮ್ಮ ದಿನ ಹೇಗಾದ್ರೂ ಹಾಳಾಗಲಿ ನೋಡುವ ಇನ್ನೊಬ್ರ ದಿನಚರಿ ಬ್ಲಾಗ್ ಗಳು ಹೀಗೆ ಹಲವು ಪೂರ್ತಿ,ಅರ್ದ ಮರ್ದ ಬೆಂದ ಎಲ್ಲ ಸಂಗತಿಗಳ ನೋಡುತ್ತಾ ಅಂತ ಕುತ್ಕೊಂಡ್ರೆ ರಾತ್ರಿ ಆಗಿ, ಬೆಳಿಗ್ಗೆ ಆಯ್ತಾ ಅನ್ನೊ ಲೆವೆಲ್ ಗೆ ಮಗ್ನರಾಗಿ ಇರ್ತಿವಿ ಅಷ್ಟೊಂದು ಹಿಡಿದು ಇಟ್ಕೊಂಡು ಕೆಲ್ಸ ಮಾಡ್ತಾರೆ ಅದ್ರಲ್ಲಿರೋ ಮನಸನ್ನು ಕದಿಯೋ ಕಳ್ಳರು ಗೊತ್ತಿರಲಿ ಸೋಶಿಯಲ್ ಮೀಡಿಯಾ ದಲ್ಲಿ ಆ ಕಂಪನಿ ಎಂ ಡಿ ಗಿಂತಾನೂ ಅದ್ರಲ್ಲಿರೋ *observe manager* ಗೆ ಸಂಬಳ ಜಾಸ್ತಿ ಇರುತ್ತೆ ನಮ್ಮ ಅಭಿರುಚಿ ಗೆ ತಕ್ಕಂತೆ ನಮ್ಮನು ಹಿಡಿದಿಟ್ಟು ಕೊಳ್ಳಲಿಕ್ಕೆ ನಮಗೆ ಬೇಕಾದ ವಿಡಿಯೋ ನ ಅವ್ರು ಪ್ರೋಸೆಸ್ ಮಾಡ್ತಾನೆ ಇರ್ತಾರೆ ಅದಕ್ಕೆ ಒಂದಾದ ಮೇಲೊಂದು ಹಾಗೆ ಬರ್ತಾನೆ ಇರ್ತವೆ ನಮ್ಮ ಬ್ರೈನ್ ನಲ್ಲಿರೋ ಡೋಪಮೈನ್ ನ ರಿಲೀಸ್ ಮಾಡ್ತಾನೆ ಇರ್ತವೆ, ನಮಗೂ ಈಗಿನ ಸೋ ಕಾಲ್ಡ್ ಫಾಸ್ಟ್ ದುನಿಯಾ ಫಾಸ್ಟ್ ಫುಡ್ ತಿಂದು ಬಾಯಿ ಚಪ್ಪರಿಸಿ ಕ್ಷಣ ಕ್ಷಣವನ್ನು ಮನಸಾರೆ ಮನಸನ್ನು ಮತ್ತೆ ಕನಸನ್ನೂ ಮತ್ತೆ ಆರೋಗ್ಯ ವನ್ನು ಸವಿದು ಸವೆಸಿ ಬೇಗನೆ ಅನುಭವಿಸಿ ಅಷ್ಟೆ ಬೇಗ ಹಾಳು ಮಾಡಿಕೊಂಡು ಬದುಕುವ ಸ್ಥಿತಿ, ಗತಿ, ಪರಿಸ್ಥಿತಿ ಕಾರಣ ಏನೆ ಇದ್ದರೂ ಪರಿಣಾಮದ ಮೇಲೆ ಫಲಿತಾಂಶ ಅಲ್ಲವೆ...!!!? 

 ನಾನು ಹೊರಟಿರುವುದು ಎಲ್ಲಿಗೆ , ಯಾವ ದಾರಿ ಯಾವ ಪರಿ, ಅರಿವಿದೆಯಾ...?. ನೂಕು ನುಗ್ಗಲು ತಿರುವು ಮುರುವು ಟ್ರಾಫಿಕ್ ಜಾಮ್ ಕೂಡ ಇದೆ, ಮಾತನಾಡುವ ನಾಲಿಗೆ ಎಚ್ಚರಿಕೆ, ನಾಚಿಕೆ, ನಯ, ವಿನಯ, ನಾಜೂಕು, ಸಂಸ್ಕಾರ ಇವೆಲ್ಲ ಪ್ರಸ್ತುತ ಮಾನವ ನ ಸಾಮಾಜಿಕ ಮಾರುಕಟ್ಟೆಯಲ್ಲಿ ಬೆಲೆ ಇದ್ದರೂ ಬೇಡಿಕೆ ಇಲ್ಲದ ಬಿಕರಿಯಾಗದೆ ಉಳಿದಿರುವ ಅಗ್ಗದ ವಸ್ತುಗಳು ಅರ್ಥವಾದರು ತಲೆಕೆಡಿಸಿಕೊಳ್ಳದೆ ಮುನ್ನುಗ್ಗುವ ಎಲ್ಲ ಹಿಂದೆ ಹಾಕುವ ಭಂಡ ಧೈರ್ಯ, ಸ್ಪರ್ಧೆ   ಇದೆಲ್ಲಾ ಮೇಲಿಂದ ಕೆಳಿನವರೆಗೂ ಹಾಸಿ ಹೋದರು...ಬೆರಳ ತುದಿಯ ದುನಿಯಾ ಲೈಕ್ ಡಿಸ್ ಲೈಕ್, ವೈರಲ್, ಏಮೋಶನಲ್, ಆಟಿಟುಡ್, ಪ್ರೋಫೆ ಶನಲ್ ಹಾಳು ಮೂಳು etc...ಆದರೆ ಮನಸ್ಸು ಮಾತ್ರ ಹಾಯಾಗಿ ತೆಲಾಡ್ತಿದ್ರೆ ಸಾಕು ಕಳ್ಳತನ  ಮಾಡಿ ಸಿಕ್ಕರೂ ಗೊತ್ತಾಗದೆ ಮರ್ಯಾದೆ ಇಂದ ಕಿತ್ತು ತಿನ್ನುವ ಜನರು ಇದ್ದಾರೆ ನಮ್ಮ ಸಮಯವೇ ಅವರಿಗೆ ಬಂಡವಾಳ ದುಡಿಮೆ ನಮಗೆ ದುಂದು ಅಲ್ಲ ಹುಚ್ಚು ವೆಚ್ಚ ನಮಗೆ ಎಷ್ಟು ಹುಚ್ಚೆಬ್ಬಿಸುವರೋ ಅಷ್ಟು ಆದಾಯ ಅವರಿಗೆ ಯಾವದೂ ಲೆಕ್ಕವೇ ಇಲ್ಲ ...ನೋಡು ನೋಡುತ್ತಾ ಸೆರೆಯಾಳು ಬಂಧಿ  ಮೂಗಿನ ತುದಿಗೆ ತುಪ್ಪ ಚಪ್ಪರಿಸುತ್ತಿದಂತೆ ಸಿತ ಎಲ್ಲಾ ಅಚಾನಕ್ ಆಕಸ್ಮಿಕ.. ಒಂಥರ ಕೋವಿಡ್ ಅಂದುಕೊಳ್ಳಿ ಯಾವ್ದು ಹೇಗೆ ಯಾವ ರೀತಿ ಬಂದು ಒಕ್ಕರಿಸುತ್ತೆ ಗೊತ್ತಾಗಲ್ಲ ..

ಇನ್ನೊಂದು ಮುಖ (ವಾಡ) ದ ಪರಿಚಯ 

ಫೇಸ್ಬುಕ್, ವಾಟ್ಸಪ್, ಟ್ವಿಟರ್, ಟಿಕ್ ಟಾಕ್, ಇನ್ಸ್ಟಾಗ್ರಾಮ etc... ಇವನೆಲ್ಲ ಬಳಸಿ ನಾವೇನು ತುಂಬಾ ಬುದ್ದಿವಂತರು ಆಗುತ್ತಿಲ್ಲ...ಕ್ಷಣ ಕ್ಷಣಕ್ಕೂ ನಿಮ್ಮ ನಮ್ಮ ಸಮಯವನ್ನು ತಿಂದು ಅವರು ಉದ್ಧಾರ ಆಗುತ್ತಿದ್ದಾರೆ....ಬಾಲ್ಯದ ದಿನದಲ್ಲಿ ಗೆಳೆಯರ ಭೇಟಿಗೆ ಮನೆ ಹತ್ತಿರ ಹೋಗುತ್ತಿದ್ದ ನಾವು ಈಗ ಹೈ  ಹಲೋ ಸ್ಟೇಟಸ್ ಹಾಕ್ತೀವಿ, ಲವರ್ ನ ಮೀಟ್ ಆಗೋಕೆ ರಸ್ತೆಲೋ, ಪಾರ್ಕ್ನಲ್ಲಿ ಗಂಟೆಗಟ್ಟಲೆ ಕಾಯೋ ನಾವು ವಿಡಿಯೋ ಕಾಲ್ ನಲ್ಲೆ ಎಲ್ಲ ಮುಗ್ಸ್ತಿವಿ, ಬೇಸರ ಆದ್ರೆ ಸ್ಟೇಟಸ್, ಬ್ರೇಕ್ ಉಪ್ ಆದ್ರೆ ಸಾಯೋ ರೀತಿ ಸ್ಟೇಟಸ್,  ಅನ್ನೋ ಹಾಗೆ ಸಿಕ್ಕಾಪಟ್ಟೆ ಲವ್  ಫೇಲ್ಯೂರ್ 30 ಸೆಕೆಂಡ್ ಸ್ಟೇಟಸ್ ಹಾಕಿ ಲವರ್ಗೆ ಅರ್ಥ ಮಾಡ್ಸೋ ಕಯಾಲಿ ಅರ್ಥ ಆಗುತ್ತೋ ಬಿಡುತ್ತೋ.. ಸ್ಟೇಟಸ್ ಅಂತೂ 24 ಗಂಟೆ ಇರುತ್ತೆ...ಅದ್ನ ಯಾರ ಯಾರ್ ನೋಡಿದರೆ ಅನ್ನೋ ಮಹಾನ್ ಮನೋಭಾವ ಪದೆ ಪದೆ  ಹಾಕಿರೋ ಸ್ಟೇಟಸ್ ನಾ ತೆಗ್ದು ನೋಡೋ ಹಾಗೆ ಮಾಡುತ್ತೆ ,ಕ್ರಿಕೆಟ್ ಮ್ಯಾಚ್ ನೋಡೋಕೆ ನಮ್ಮ ಮನೇಲಿ ಟಿವಿ ಇಲ್ಲ ಅಂದ್ರು ಅವ್ರ ಇವ್ರ ಮನೆಗೆ ಹೋಗಿ ಬೈಸ್ಕೊಂಡ್ರು ಪರವಾಗಿಲ್ಲ ಅಂತ ಕಿಟಕಿ ಅಲ್ಲಿ ನೋಡಿ ಬರ್ತಾ ಇದ್ವಿ. ಆದರೆ.ಈಗ... ಸಬ್ ಸ್ಕ್ರೈ ಬ್ ಮಾಡು ನೋಡು, ನೋಡೋಕ್ ಸಮಯ ಇಲ್ವ ಹೈಲೈಟ್ಸ್ ನೋಡು ಎಲ್ಲವು ನಿಮ್ಮ ಕಣ್ಣೆದುರಿಗೆ ತರುವ ಇಂಟರ್ನೆಟ್ ಸಿಸ್ಟಮ್ ಎಲ್ಲ ವಿದ್ಯೆಯನ್ನು ಕಲಿಸುವ ಗುರು ಇದ್ದಂಗೆ ..ಜಿಯೋ ಅಂತೂ ಫ್ರೀ, ನೆಟ್ ಇಲ್ವಾ ಹಾಟ್ಸ್ಪಾಟ್, ವೈಫೈ, ಬಾಡಿ ಒಳಗೆ ಫೈಬರ್ ಇಲ್ಲದಿದ್ದರು ನಡೆಯುತ್ತದೆ ಆದರೆ ಮನೆಯಲ್ಲಿ ಫೈಬರ್ ವ್ಯವಸ್ಥೆ ಬೇಕು   etc.ವಿಧಿ ನೋಡಿ ಸಮಯ ನಾ ಹಾಳು ಮಾಡಿಕೊಳ್ಳೋಕೆ ಎಲ್ಲ ದಾರಿಯನ್ನು ಸುಗಮವಾಗಿ ಹುಡುಕಿ ಕೊಡುತ್ತೆ ಅದೇ ಉದ್ಧಾರ ಆಗೋಕೆ ತುಂಬಾ ದುರ್ಗಮ ದಾರಿ ತಂದು ಒಡ್ಡುತ್ತದೆ.  ಫೇಸ್ಬುಕ್ ನಲ್ಲಿ ಅಷ್ಟೊಂದು ಜನ ಗೆಳೆಯರು ಎಲ್ಲ ನೀವು ಮಾಡಿರುವ ಸಾಧನೆಯನ್ನು ನೋಡೋರು ಅಷ್ಟೇ, ಅಕ್ಕ ಪಕ್ಕ ಇರೋರ ಜೊತೆ ಮಾತಾಡೋದು ಬಿಟ್ಟು ಗೊತ್ತಿಲ್ದೆ ಇರೊರ ಜೊತೆ ಇಡಿ ರಾತ್ರಿ ಚಿಟ್ ಚಾಟ್. ಮನೇಲಿ ಅಮ್ಮ ತರಕಾರಿ ತಗೊಂಡ ಬಾ ಅಂತ ಹೇಳಿದ್ರೆ ನಮಗೆ ಯಲ್ಲ ಸಿಲಬಸ್ ಕಣ್ಮುಂದೆ ಬರುತ್ತೆ ಟೈಮ್ ಇರಲ್ಲ ಆದರೆ ಕೈಯೊಳಗೆ ಸ್ಮಾರ್ಟ್ ಫೋನ್ ಹಿಡ್ಕೊಂಡ್ ಕುತ್ರೆ ಟೈಮ್ ಸಾಲಲ್ಲ, ಕಣ್ಮುಂದೆ ಯಾವ್ದು ಕಾಣ್ಸಲ್ಲ...ಅಪ್ಪ ಅಮ್ಮ ಹುಟ್ಟಿದಬ್ಬ ಆನ್ಲೈನ್ ನಲ್ಲಿ ಜೋರು ತಾಯಿ ಬಗ್ಗೆ ಎಮೋಶನ್, ಫೀಲಿಂಗ್ಸ್  ಆದ್ರೆ ಅವರ್ಗೆ ವಯಸ್ಸಾದ ಮೇಲೆ ಅವರು  ದುಬಾರಿ ಚಾಕರಿ ಮಾಡೋಕ ಆಗ್ದೆ ಓಲ್ಡ್ ಏಜ್ ಹೋಂ  ನಿಮಗೆ ಕಷ್ಟ ಅಂತ ಬಂದಾಗ  ಸಾವ್ರ,ಲಕ್ಷ,ಕೋಟಿ  ಫ್ರೆಂಡ್ಸ್ ಇದ್ರು,ಅದ್ರಲ್ಲಿ ಯಾರೂ ಬರಲ್ಲ ಒಂದ್ ರೂ ಪಾಯಿ ನು ಗಿಟ್ಟಲ್ಲ...ಸ್ವಾಮಿ ಅದೇ ನೈಜತೆ.... ಸುಲಭವಾಗಿ ಸಿಕ್ಕಿದ್ದು ಸುಲಭವಾದ ಮನರಂಜನೆ, ನಾಲ್ಕು ಗೋಡೆಗಳ ಮದ್ಯೆ ಸಿಗುವ ವಿಸ್ತಾರವಾದ ಮನ ತಣಿಸಿ ಹಳ್ಳಕೆ ದೂಡುವ ದುನಿಯಾ...ಅಸಲಿ ಆಸೆ, ಕನಸುಗಳು, ಬಂದು ಭಾಂದವ್ಯಗಳು, ಸಿಹಿ ಕಹಿ ಹಂಚಿಕೊಳ್ಳುವ ಸ್ನೇಹಿತರು, ಮನಸಾರೆ ಮುದ್ದಿಸಿ ಅಪ್ಪಿ ತಬ್ಬಿಕೊಳ್ಳುವ ತಂದೆ ತಾಯರೊಂದಿಗೆ ಕಳೆಯುವ ಸಮಯವನ್ನು ತಮ್ಮ ಬಳಕೆಗಾಗಿ ತಮ್ಮ ಜೀವನೋಪಾಯಕ್ಕಾಗಿ ಕದಿಯುಯು ತ್ತಿರುವ ಈ ಸೋ called social media ಬಗ್ಗೆ ಸಲ್ಪ ಜಾಗೃತೆ ಇರಲಿ.... ವಿಶೇಷ ಸೂಚನೆ ಇರೋದೆಲ್ಲ ಅದರ ಸ್ಥಾನದಲ್ಲಿ ಸರಿಯಾಗೇ ಇದೆ  ಅಭಿರುಚಿಯ ಚಿತ್ರಣ ಸುಂದರವಾಗಿದೆ, ಬೆಳೆಯಲು ಒಳ್ಳೆಯ ವೇದಿಕೆಯೂ ಇದೆ..ಅಷ್ಟೇ ಅಸಹ್ಯ, ಅಸಭ್ಯ ಹುಟ್ಟಿಸುವ ಸಂಗತಿಯು ಇದೆ, ಮನೋರಂಜನೆ ಅಂತು ಭರಪುರ, ತಿನ್ನೋಕೆ ಸಿಗದೆ ಹೋದರು ಕಣ್ತುಂಬ ನೋಡಿ ಬಾಯ್ತುಂಬಾ ನೀರು ತರಿಸಿಕೊಂಡು ನೋಡುವ ಅಡುಗೆಗಳು, ಟ್ರೋಲಿಗರು ಅಂತು ಮಹನೀಯರು ದಿನನಿತ್ಯ ಜೀವ ತೆಯ್ದು ನಗಿಸುತ್ತಾರೆ ತಿನ್ನದೆ ಇರುವವರಿಗೂ ನಾನ್ ವೆಜ್ ತಿನ್ಸುತ್ತಾರೆ ಅವ್ರ ಅಡ್ಡದಲ್ಲಿ ಒಬ್ಬ ಹೀರೋ ನು ಸೃಷ್ಟಿ ಆಗ್ತಾನೆ ಒಬ್ಬ ವಿಲನ್ ನು ಆಗ್ತಾನೆ ಅದು ಅವ್ರ ದಯೆ ಹೀಗೆ ಹತ್ತು ಹಲವು ಸಂಗತಿ ಗಳನ್ನು ಸುತ್ತಿ ಬಳಸಿ ಹೇಳಿದರು ಕತ್ತಲಾಗಿ 

ಬೆಳಕಾಗುವುದು ಆದರೆ ಮುಗಿಯದ ಕಥೆ.. ಸಾರಾಂಶ ಇಷ್ಟೇ. ಸೋಶಿಯಲ್ ಆಗಿ ಇರೋಕೆ ಬಯಸೋ ನಾವು ಪ್ರಜ್ಞಾ ಪೂರ್ವಕರಾಗಿ, ವಿವೇಚನೆ ಇಂದ... ಸಿಕ್ಕಾಪಟ್ಟೆ ಹಾಳು ಮುಳು ತಿಂದು ಹೊಟ್ಟೆ ಕೆಡ್ಸಿಕೊಳ್ಳುವದಕ್ಕಿಂತ ರುಚಿಗೆ ತಕ್ಕಷ್ಟು ಒಳ್ಳೇದನ್ನು ತಿಂದು... ಗಾಂಧೀಜಿ ಯ ಮೂರು ಮಂಗಗಳ ತರಹ ಉಪಾಸನೆ ಮಾಡಿ ಅಪವಾದಕ್ಕೆ ಹೊರತಾಗಿ ಪ್ರಭುದ್ದರಾಗಬೇಕು...ಯಾಕೆ ಅಂದ್ರೆ .. ಪ್ರಜಾಪ್ರಭುತ್ವ ಹೊಂದಿರುವ ನಮ್ಮ ದೇಶದಲ್ಲಿ ನಾವೇ ಎಲ್ಲಾದಕ್ಕು ಪ್ರಭುಗಳು.…

ಸಾಮಾಜಿಕ ಜೀವನ, ವೈಯಕ್ತಿಕ ಜೀವನಕ್ಕಿಂತಲೂ ಭಿನ್ನ ಈ ಸಾಮಾಜಿಕ ಜಾಲತಾಣ ಅರಿವಿರಲಿ ಎಚ್ಚರವಿರಲಿ  

(ಸಮಯ ಕೊಟ್ಟು ಓದಿದ ಪ್ರಭುಗಳಿಗೆ ಧನ್ಯವಾದಗಳು..ತಪ್ಪಿದ್ದಲ್ಲಿ ಕ್ಷಮೆಯಿರಲಿ)

Category:World



ProfileImg

Written by mallappa salaki

0 Followers

0 Following