ಕವನವೊಂದಿದೆ..ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಪೋಪುದೆ ಜೀವನ....ನಿಜ..ನಮಗೆ ಸುಂದರವಾಗಿರುವ ವಸ್ತುಗಳೆಲ್ಲ ಬೇಕೆನಿಸುತ್ತದೆ..ಅದರ ಪರಿಣಾಮದ ಬಗ್ಗೆಯಾಗಲೀ ,ಅದರ ದುರುಪಯೋಗದ ಬಗ್ಗೆಯಾಗಲಿ ನಾವುಗಳು ತಲೆಕೆಡೆಸಿಕೊಳ್ಳುವುದಿಲ್ಲ..ಯಾವುದೇ ವಸ್ತುವಾಗಾಲೀ ಒಟ್ಟಿನಲ್ಲಿ ಕಣ್ಣು ಕೋರೈಸುವಂತಿರಬೇಕು..ಬಣ್ಣ ಬಣ್ಣವಾಗಿರಬೇಕು..ನಾಲ್ಕು ಜನ ಎಲ್ಲಿಂದ ತಂದೆ ಎಂದು ಕೇಳಬೇಕು..ಮೇಲಿಂದ ಮೇಲೆ ಹೊಗಳಬೇಕು.ಆಗ ಅದರ ಮೇಲಿನ ವ್ಯಾಮೋಹ ಇನ್ನು ಅಧಿಕ...ಅದರಲ್ಲೂ ಕಡಿಮೆ ಬೆಲೆಗೆ ಸಿಕ್ಕಿದರಂತೂ ಅಂಗಡಿಯಲ್ಲಿ ಇದ್ದಷ್ಟೂ ದೋಚಿಬಿಡುತ್ತೇವೆ. ಬಣ್ಣಕ್ಕೆ ಮರುಳಾಗಿ ಪ್ಲಾಸ್ಟಿಕ್ ಎಂಬ ರಕ್ತ ಬೀಜಾಸುರನನ್ನು ಮನೆಗೆ ಸೇರಿಸಿಕೊಂಡಿದ್ದೇವೆ..ಎಷ್ಟೋ ವರ್ಷಗಳಿಂದ ಮನೆಯಲ್ಲಿ ಬಳಸುತ್ತಿದ್ದ ಸಿಲಾವರ,ಸ್ಟೀಲ್ ಡಬ್ಬಗಳನ್ನು ಬಿಸಾಕಿದ್ದೇವೆ.. ಆ ವಸ್ತುಗಳೊಂದಿಗೆ ಬೆರೆತಿದ್ದ ಭಾವನೆಗಳನ್ನು ಮರೆತಿದ್ದೇವೆ...ಬಾಂಧವ್ಯವನ್ನು ಕಡಿದುಕೊಂಡಿದ್ದೇವೆ...ಆದರೆ ಅದು ಅನುಭವಕ್ಕೆ ಬರುವುದು ಹೊಸದರ ನಿಜ ಬಣ್ಣ ಬಯಲಾದಾಗ..ಆದರೆ ಸಮಯ ಬೇರೇನೋ ಹೇಳಹೊರಟಿರುತ್ತದೆ...ವಸ್ತು ಕಳೆದುಹೋಗಿರುತ್ತದೆ.
ಈಗ ಹೇಳಹೊರಟಿರುವುದು ಒಂದು ಮಡಕೆಯ ಕಥೆಯನ್ನು.
ಹೌದು...ನಾನೊಂದು ಮಣ್ಣಿನ ಮಡಕೆ...ಕಡಿಮೆ ಬೆಲೆಯಳ್ಳವಳು. ಇಷ್ಟು ದಿನ ನನ್ನನ್ನು ಜನರು ಇಷ್ಟ ಪಟ್ಟು ಬಳಸುತ್ತಿದ್ದರು..ಮನೆಗೆ ತೆಗೆದುಕೊಂಡು ಹೋಗಿ ಜಾಗ್ರತೆಯಿಂದ ತೊಳೆದು ನಿಧಾನವಾಗಿ ಎತ್ತಿಡುತ್ತಿದ್ದರು. ಪ್ಲಾಸ್ಟಿಕ್ ಬಂದ ಮೇಲೆ ಹಿಂದೆ ಮುಂದೆ ನೋಡದೆ ನನ್ನನ್ನು ಮೂಲೆಗೆ ಬಿಸಾಕಿದರು...ಮೈ ತುಂಬಾ ಧೂಳು..ಜೇಡರಬಲೆ..ಕತ್ತಲೆಯ ಕೋಣೆಯೊಳಗೆ ದಿನ ಕಳೆಯಬೇಕಾಯಿತು...ಆದರೂ ಮನದಲ್ಲಿ ನನಗೊಂದು ದಿನ ಬಂದೇ ಬರುವುದೆಂಬ ನಿರೀಕ್ಷೆಯಿತ್ತು.ಕಾಯುತ್ತಲೇ ಇದ್ದೆ.ಬರವಸೆಯ ಬದುಕಿಗೆ ತಾಳ್ಮೆ ಬೇಕು .ಆದಿನ ಈಗ ಮತ್ತೆ ಬರುವುದರಲ್ಲಿದೆ. ಸ್ವಾಗತಿಸಬೇಕೆಂದಿದ್ದೇನೆ.
ಪ್ಲಾಸ್ಟಿಕ್ ರಾಕ್ಷಸ ಜನರನ್ನು ಮಾತ್ರವಲ್ಲ..ಜಾನುವಾರುಗಳನ್ನು,ಜಲಚರಗಳ ಜೀವನವನ್ನು ಹಾಳುಮಾಡಿದ್ದಾನೆ..ಸುಟ್ಟರೂ ಸಾಯುವುದಿಲ್ಲ ಈ ರಾಕ್ಷಸ..ರಸ್ತೆ ಬದಿ..ನೀರಿನ ತೊಟ್ಟಿ ಮನೆಯ ಹಿತ್ತಲು ಹೀಗೆ ಎಲ್ಲೆಂದರಲ್ಲಿ ಬಿದ್ದು ಕಸದ ತೊಟ್ಟಿಯನ್ನೇ ನಿರ‍್ಮಾಣಮಾಡಿಬಿಟ್ಟಿದ್ದಾನೆ...ಇವನ ಕೈಗೆ ಸಿಕ್ಕಿದವರೆಲ್ಲರೂ ಹೊರಬರಲಾಗದೆ ಚಡಪಡಿಸುತ್ತಿದ್ದಾರೆ... ಯಾವುದೇ ಪಿಡುಗಿಗೆ ಅಂಟಿಕೊಳ್ಳುವುದು ದೊಡ್ಡದೇನಲ್ಲ..ಅದರಿಂದ ಬಿಡುಗಡೆ ಬಯಸುವುದು ದೊಡ್ಡ ಮಾತು. ನಾನಿರುವ ಮನೆಯ ಯಜಮಾನ ಇತ್ತೀಚಿಗೆ ಮಡಕೆಯ ಮಹತ್ವ ಅರಿತುಕೊಂಡಿದ್ದಾನೆ...ಪ್ಲಾಸ್ಟಿಕ್ ಡಬ್ಬಗಳನ್ನು ಬಿಸಾಕಲೂ ಆಗದೆ ..ಇಟ್ಟುಕೊಳ್ಳಲೂ ಆಗದೇ ಚಡಪಡಿಸುತ್ತಿದ್ದಾನೆ..ಮೊನ್ನೆ ನನ್ನನೊಮ್ಮೆ ಕೈಯ್ಯಲ್ಲಿ ಹಿಡಿದು ನೋಡುತ್ತಿದ್ದ...ನಾನು ಹೊಟ್ಟೆಬಿರಿಯೆ ನಕ್ಕೆ...ಏನೋ ಕೆಲಸ ನೆನಪಾಗಿ ಅಲ್ಲೇ ಪಕ್ಕದಲ್ಲಿದ್ದ ಮರದ ಕೆಳಗೆ ಇಟ್ಟುಹೋದ...ಅದು ಏಪ್ರಿಲ್ ಕೊನೆಯ ದಿನ ...ಕಪ್ಪು ಮೋಡಗಳು ದಟ್ಟವಾಗಿ ರಕ್ಕಸ ಗಾತ್ರ ತಳೆದಿದ್ದವು..ಅಂದು ರಾತ್ರಿ ಜೋರಾದ ಗುಡುಗು -..ಮರದ ಕಾಯೊಂದು ನನ್ನ ಮೇಲೆ ಬಿದ್ದು ಚೂರು ಚೂರಾಗಿದ್ದೆ...ನಿರಂತರ ಸುರಿದ ಮಳೆಯಿಂದಾಗಿ ಮತ್ತೆ ಮಣ್ಣಾಗಿದ್ದೆ....ಮತ್ತೆ ಮಡಿಕೆಯಾಗುವ ಹೊಸ ಕನಸಿನೊಂದಿಗೆ...!!
ಯಜಮಾನ ಮಾರನೆ ದಿನ ಬಂದು ನೋಡಿದ...ಪರಿಸ್ಥಿತಿ ಅರಿವಾಗಿತ್ತು..ಕಾಲ ಮೀರಿತ್ತು...ನಾನು ಮೂಲರೂಪಕ್ಕೆ ಮರಳಿದ್ದೆ. ಮನಸ್ಸೆಂದರೆ ಹಾಗೆಯೇ ಅಲ್ಲವೇ? ಇದ್ದುದರ ಬಗ್ಗೆ ಅಸಡ್ಡೆ. ನಿತ್ಯ ಹೊಸದರ ನಿರೀಕ್ಷೆ..ಬೇಡವಾಗಿದ್ದು ಬೇಕೆನಿಸುವ ಹೊತ್ತಿಗೆ ಕಾಲ ಮೀರಿರುತ್ತದೆ...ವಸ್ತು ಕಳೆದುಹೋಗಿರುತ್ತದೆ...ಇದಲ್ಲವೇ ಜೀವನಾ..
ಭಾರತ ಸಂಪ್ರದಾಯದ ದೇಶ.ಯಾವುದೇ ಆಚಾರ-ವಿಚಾರಗಳಿದ್ದರೂ ಅದಕ್ಕೆ ವೈಜ್ನಾನಿಕ ತಳಹದಿ ಇದೆ.ನಾವು ನಮ್ಮದನ್ನು ಬಿಟ್ಟು ವಿದೇಶಿ ಸಂಸ್ಕ್‌ರುತಿಗೆ ಮಾರುಹೋಗುತ್ತಿದ್ದೇವೆ.ನಮ್ಮತನವನ್ನು ಕಳೆದುಕೊಳ್ಳುತ್ತಾ ಇದ್ದೇವೆ.ನಾಳೆಯ ಬಗೆಗಿನ ಚಿಂತೆಯಿಲ್ಲ.ಇವತ್ತಿನದಷ್ಟೆ .ಮುಂದಿನ ಪೀಳಿಗೆಯ ಬಗ್ಗೆ ಅನುಕಂಪವಿಲ್ಲ..ಎಲ್ಲಾ ಋತುಗಳಲ್ಲೂ ಗುಣಮಟ್ಟವಿಲ್ಲದ ಎಲ್ಲಾ ತರಕಾರಿ ಬೆಳೆಯುತ್ತಿದ್ದೇವೆ..ಪ್ರಕ್ರುತಿಯನ್ನು ಹಾಳುಮಾಡುತ್ತಿದ್ದೇವೆ..ಗಿಡ-ಮರಗಳ ಸರ್ವನಾಶ.ವನ್ಯಜೀವಿಗಳ ಅವನತಿ.ರಾಸಯನಿಕ ವಸ್ತುಗಳ ಮಿತಿಮೀರಿದ ಬಳಕೆ. ಪರಿಣಾಮ ಅತಿವಷ್ಠಿ,ಅನಾವ್ರಷ್ಟಿ..ನಾನಾ ಬಗೆಯ ರೋಗ-ರುಜಿನ ಗಳು.ಒಟ್ಟಿನಲ್ಲಿ ಭರವಸೆಯಿಲ್ಲದ ಬದುಕು..ಪ್ರಕ್ರುತಿ ಸಮತೋಲನದಲ್ಲಿದ್ದರೆ ಮಾತ್ರ ನಾವೂ ಸಂತುಷ್ಟರಾಗಿರುತ್ತೇವೆ..ಇಲ್ಲದಿದ್ದರೆ ಬದುಕು ಭಾರವಾಗದೇ ಇರದು..
- ಸೌಮ್ಯ ಜಂಬೆ.
ಮೈಸೂರು
0 Followers
0 Following