ಗಗನ ಕುಸುಮ
ರಾತ್ರಿ ಎರಡು ಗಂಟೆಯ ಹುಣ್ಣಿಮೆಯ ರಾತ್ರಿ ಕಪ್ಪು ಮೋಡಗಳು ಆಗಸದ ತುಂಬಾ ಸುತ್ತುವರೆದ್ದಿದವು . ಗಗನ್ ಮತ್ತು ಕುಸುಮ ಊರನ್ನು ಬಿಟ್ಟು ಹತ್ತು ಕಿ ಲೋ ಮೀಟರ್ ದೂರದ ದಾರಿಯಲ್ಲಿ ಯಾವುದಾದರು ವಾಹನದ ಸಹಾಯಕ್ಕೆ ನಿಂತಿದ್ದರು . ಇವರದು ಹನ್ನೆರಡು ವರ್ಷದಿಂದ ಪ್ರಾರಂಭವಾದ ಪ್ರೀತಿಗೂ ಹನ್ನೆರಡು ವರ್ಷವಾಗಿತ್ತು ಪ್ರೀತಿ ಆದರೂ ಒಂದು ಮಾತನ್ನು ಆಡಿರಲಿಲ್ಲ , ಇವರಿಬ್ಬರ ಪ್ರೀತಿ ಗಟ್ಟಿಮಾಡಿದ್ದ ಊರಿನ ಬೀದಿ ನಲ್ಲಿ, ಜಗ್ಗಪನ ಅಂಗಡಿ , ಆಂಜನೇಯಸ್ವಾಮಿ ದೇವಸ್ಥಾನ ದಿನಕ್ಕೆ ಮೂರು ಬಾರಿಯಾದರು ಇವರಿಬ್ಬರ ಬೇಟಿ ಆಗುತ್ತಿತ್ತು ಆದರೆ ಅಲ್ಲಿ ಮೌನದ ಪಿಸುಮಾತು ಅಷ್ಟೇ ಹೀಗೆ ಹನ್ನೆರಡು ವರ್ಷ ಕಳೆದಿದ್ದದ್ವು ಹೇಗಾದರೂ ಮಾಡಿ ಜೀವನ ಪೂರ್ತಿ ಜೊತೆಯಾಗಿ ಬಾಳಬೇಕು ಎಂದು ನಿರ್ಧರಿಸಿದ್ದರು ಆದರೆ ಅದಕ್ಕೆ ಮನೆಯವರ ಸಮ್ಮಿತಿ ಇಲ್ಲದ್ದೆ ಬೇರೆಯವರ ಜೊತೆಯಲ್ಲಿ ಮದುವೆ ನಿಗದಿಯಾಗಿತ್ತು ಅದು ಮರುದಿನವೇ ಮಾಡುವೆ ಇದ್ದ ಕಾರಣ ಇಬ್ಬರು ಹೇಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಯಾರಿಗೂ ಸಿಗದ ದಾರಿಯಲ್ಲಿ ನಿಂತಿದ್ದರು ಎದುರುಗಡೆ ಭೃಹತ್ ಅರಳಿಮರ ಇವರಿಬ್ಬರ ಪ್ರೀತಿಗೆ ನಾನಿದ್ದೇನೆ ಎಂದು ಹೇಳುವಂತಿತ್ತು . ಗಾಳಿ ಹೆಚ್ಚಾದ ಕಾರಣ
ಇಬ್ಬರು ಅರಳಿಮರದ ಕೆಳಗಡೆ ಹೋದರು . ಏನು ಮಾಡದೇ ಹಾಗೆ ಕುಳಿತಿದ್ದ ಒಬ್ಬರ ಸ್ಪರ್ಶ ಒಬ್ಬರಿಗೆ ತಾಗಿ ಆ ಕೊರೆವ ಚಳಿಯಲ್ಲಿ ಮೈ ಬಿಸಿಯಾಗಿತ್ತು ಒಬ್ಬರ ಮುಖ ಒಬ್ಬರು ನೋಡುತ್ತಾ ನಿನಗೆ ನಾನು ನನಗೆ ನೀನು ಎಂಬ ಮಾತು ಹೃದಯದ ಕಣ ಕಣದಲ್ಲೂ ಹಚ್ಚೆ ಹಾಕಿತ್ತು . ಕುಸುಮ ಕಣ್ಣಲ್ಲಿ ಗಗನ್ ಹುಣ್ಣಿಮೆಯ ಚಂದಿರನ ಹಾಗೆ ಕಾಣಿಸುತ್ತಿದ್ದ ಗಗನ್ ಮಂದಹಾಸದಲ್ಲಿ ಕುಸುಮ ಬೆಳದಿಂಗಳ ಬಾಲೆಯಾಗಿ ಕಾಣಿಸುತ್ತಿದಳು ಮೊಗದಲ್ಲೇ ಇಬ್ಬರ ಪ್ರೀತಿ ಭಾವನೆ ಆಕಾಶದತುಂಬೆಲ ಹಬ್ಬಿತು ಬೇಗ ಒಂದಾಗಬೇಕು ಎಂದು ಬಯಸಿದ್ದರು. ಬೆಳಕಲ್ಲಿ ಕಪ್ಪು ಮೋಡದ ಆರ್ಭಟ ನಿದಾನಕ್ಕೆ ಪ್ರಾರಂಭವಾಗಿತ್ತು ಇಬ್ಬರು ಅತ್ತಿರ ಇದ್ದರು ತಬ್ಬಿಕೊಳ್ಳಲ್ಲು ಹಿಂಜೆರೆಯುತ್ತಿದ್ದರು ಭಾವನೆ ಪ್ರೀತಿಯನ್ನು ವ್ಯಕ್ತಪಡಿಸಲು ಹಾತೊರೆಯುತ್ತಿದ್ದರು . ಮೋಡಗಳ ರಭಸಕ್ಕೆ ಗುಡುಗು ಸಿಡಿಲು ಬಡಿಯಿತು ಆ ಶಬ್ದಕ್ಕೆ ಕುಸುಮ ಗಗನ್ ನನ್ನ ಬಿಗಿಯಾಗಿ ತಬ್ಬಿದಳು ಗಗನ್ ಭಯದ ಚಳಿಯನ್ನು ಬಿಟ್ಟು ತಬ್ಬಿಕೊಂಡನು ಆ ಭಾವನೆಯ ಭಾವದ ಹೂವು ಅರಳಿತ್ತು . ಗುಡುಗು ಸಿಡಿಲಿನ ಮಳೆಯ ಗಾಳಿಯ ರಭಸ ಮರದ ಎಳೆಗಳ ಸದ್ದು ಎಲ್ಲ ಶಬ್ದವು ಒಗ್ಗೂಡಿಸಿದರೆ ಮಂಗಳ ವಾದ್ಯಗಳ ದ್ವನಿಯಾಗಿ ಕೇಳಿಸುತಿತ್ತು ಯಾವುದಾದರು ಸಮಯ ಸಿಕ್ಕಿ ತಾಳಿ ಕಟ್ಟಿಬಿಡಲೆಂದು ಗಗನ್ ಮದುವೆ ಮನೆಯಿಂದಲೇ ತಾಳಿಯನ್ನು ಜೇಬಿನಲ್ಲಿ ಇರಿಸಿದ್ದ ಇದೆ ಒಳ್ಳೆ ಸಮಯ ಎಂದು ಅರಿತ ಕುಸುಮ ಗೆ ತಬ್ಬಿದ ಹಾಗೆ ನೇ ತಾಳಿಯನ್ನು ಕಟ್ಟಿಬಿಟ್ಟ ತಕ್ಷಣ ತಲೆ ಎತ್ತಿ ಗಗನ್ ನ ನೋಡಿ ಕೆನ್ನೆಗೆ ಮೃದುವಾಗಿ ಹೊಡೆದು ಮತ್ತೆ ತಬ್ಬಿಕೊಂಡು ಹೃದಯ ತುಂಬಿ ಅಳಲು ಪ್ರಾರಂಭಿಸಿದಳು ಎಷ್ಟೋ ವರ್ಷದ ಪ್ರೀತಿಗೆ ತಿಲಕವಿತ್ತಂತೆ ಭಾಸವಾಗಿತ್ತು ಗಗನ್ ಕುಸುಮಳ ಹಣೆಗೆ ಮುತ್ತಿಟ್ಟ ತಕ್ಷಣ ನಾಚಿ ಅರಳೀಮರದಿಂದ ಆಚೆ ಹೋಗಿ ನಿಂತಳು ಜೋರು ಮಳೆ ಗುಡುಗಿನಿಂದ ಬಾನೆಲ್ಲ ಸ್ವರ್ಗದಂತೆ ಭಾಸವಾಗಿತ್ತು . ಗಗನ್ ಅವಳ ಹಿಂದೆಯೇ ಹೋಗಿ ತಬ್ಬಿ ಮದುವೆಯ ನಂತರ ಅರುಂಧತಿ ನಕ್ಷತ್ರ ನ ತೋರಿಸಿದ ಹಾಗೆ ಹುಣ್ಣಿಮೆಯ ಚಂದಿರನನ್ನ ಕೈ ಹಿಡಿದು ತೋರಿಸುತ್ತಾನೆ ಆ ಕ್ಷಣದ ಆ ಭಾವನೆ ಮುಗಿಲೆತ್ತರಕ್ಕೆ ನಿಲ್ಲಿಸಿತ್ತು ಮತ್ತೊಮ್ಮೆ ನಾಚಿ ಕುಸುಮ ಮುಂದೆ ಓಡಿ ನಿಲ್ಲುತ್ತಾಳೆ ಆಗ ಪ್ರಕೃತಿಗೆ ಏನ್ ಅನಿಸಿತ್ತೋ ಏನೋ ದಡಾರ್ ಎಂದು ಸಿಡಿಲು ಕುಸುಮನ ತಾಕಿತ್ತು ಓಡಿ ಬಂದು ನೆಲಕ್ಕೆ ಬಿದ್ದ ಕುಸುಮನ ಎತ್ತಿ ನೋಡಿದರೆ ಉಸಿರು ನಿಂತು ಹೋಗಿತ್ತು ಗಗನ್ ಅವಳನ್ನ ತೊಡೆಯ ಮೇಲೆ ಕೂರಿಸಿ ಎದ್ದೇಳು ಚಿನ್ನ ಚಿನ್ನ ಎದ್ದೇಳು ಪ್ರತಿ ಬರಿ ಮನಸ್ಸಲ್ಲೇ ಕರೆಯುತ್ತಿದವ ಮೊದಲ ಬಾರಿ ತನ್ನ ಹುಡುಗಿಯನ್ನ ಪ್ರೀತಿಯ ಮಾತಿಂದ ದುಃಖದಲ್ಲಿ ಕರೆಯುತ್ತ ನೋಡು ನಾನು ನಿನ್ನ ಮಾತಾಡಿಸ್ತಿದಿನಿ ಒಂದು ಸರಿ ಮಾತಾಡು ಚಿನ್ನ ಎದ್ದೇಳು ಎದ್ದೇಳೂ ಎದೆಯನ್ನು ಸಿಡಿಲನ್ನು ಮೀರಿದ ಶಬ್ದಕ್ಕೂ ಮಿಗಿಲಾಗಿ ಹೊಡೆಕೊಂಡು ಕಿರುಚಿ ಕಿರುಚಿ ನೋವನ್ನು ಸಹಿಸಲಾರದೆ ಗಗನ್ ಉಸಿರು ನಿಂತು ಹೋಗಿತ್ತು ಪ್ರಕ್ಷಿಗಳ ಹಾಗೆ ಅಂಬರದಲ್ಲಿ ಸಂತೋಷವಾಗಿ ಹಾರಡಬೇಕಿದ್ದವರು ಅಂಬರದ ಸಿಡಿಲಿಗೆ ಬಲಿಯಾಗಿದ್ದರು. ಸೋತ ಪ್ರೀತಿ ಕಂಡ ಮೋಡ ಮತ್ತೆ ಇನ್ನು ಮಳೆಯನ್ನೂ ಬೋರ್ಗರೆಸಿ ನೀರಿನ ಹೊಳೆಯನ್ನು ಹರಿಸಿ ಅರಳಿಮರದ ಪಕ್ಕದಲ್ಲಿದ್ದ ಗುಂಡಿಗೆ ಇಬ್ಬರನ್ನು ತಂದು ಮಣ್ಣನು ಸುರಿದು ಸಮಾಧಿಯಾಗಿದ್ದರು ಪ್ರೀತಿಯಿಂದ ಬಾಳಬೇಕಿದ್ದ ಜೀವಗಳು ಮಳೆಯಲ್ಲಿ ಮಿಂದು ಜಿನುಗಿ ಝರಿಯಾಗಿ ಹರಿದು ಮಣ್ಣಲ್ಲಿ ಮಣ್ಣಾಗಿದರು ಪ್ರಕೃತಿ ಸ್ತಬ್ಧವಾಗಿತ್ತು ಮುಂದುವರೆಯಬೇಕಿದ್ದ ಇಬ್ಬರ ಪ್ರೀತಿ ಭಾವನೆ ಮೌನ ಮಾತು ಅಂಬರವ ಸೇರಿ ಭುವಿಯಲ್ಲಿ ಗಗನ ಕುಸುಮವಾಗೇ ಉಳಿಯಿತು.
✍️ಕಿಶೋರ್ ಪಿ ಬಿ
Writer
0 Followers
0 Following