ಈ ಭೂಮಿಗೆ ಜೀವವು ಇರುವುದರಿಂದಲೇ ,,,
ಭೂಮಿಯು ಸೂರ್ಯನ ಸುತ್ತಲು ಸುತ್ತುವುದು
ವಾರ್ಷಿಕ ದೈನಿಕ ಚಲನೆಗಳ ತಾ ಪಡೆಯುವುದು
ಈ ಭೂಮಿಗೆ ಜೀವವು ಇರುವುದರಿಂದಲೇ ,,,
ಭೂಮಿಯು ಗುರುತ್ವಾಕರ್ಷಣ ಶಕ್ತಿಯನು ಪಡೆದು
ತನ್ನ ಅಸ್ತಿತ್ವವನು ಉಳಿಸಿಕೊಂಡಿರುವುದು
ಈ ಭೂಮಿಗೆ ಜೀವವು ಇರುವುದರಿಂದಲೇ ,,
ಭುವಿಯ ಗರ್ಭದಲಿ ಏನೆಲ್ಲಾ ಕ್ರಿಯೆಗಳು ಜರುಗಿ
ಬಗೆ ಬಗೆಯ ಖನಿಜಗಳ ಸೃಷ್ಟಿಗೆ ಕಾರಣವಾಗಿಹುದು
ಈ ಭೂಮಿಗೆ ಜೀವವು ಇರುವುದರಿಂದಲೇ ,,,
ಗಿಡ ಮರ ಬಳ್ಳಿ ಧರೆಯೊಳೆಲ್ಲೆಡೆ ಬೆಳೆದು
ಹೂ ಹೀಚು ಕಾಯಿ ಹಣ್ಣುಗಳಾಗಿ ಉದುರುತ್ತಿರುವುದು
ಈ ಭೂಮಿಗೆ ಜೀವವು ಇರುವುದರಿಂದಲೇ ,,,
ಹುಣ್ಣಿಮೆ ಅಮಾವಾಸ್ಯೆ ಭೂಕಂಪ ಜ್ವಾಲಾಮುಖಿ
ಮುಂತಾದ ವಿಸ್ಮಯಗಳು ಈ ಧರೆಯಲ್ಲಿ ಜರುಗುತ್ತಿರುವುದು
ಈ ಭೂಮಿಗೆ ಜೀವವು ಇರುವುದರಿಂದಲೇ ,,,
ಈ ಧರೆಯ ತುಂಬೆಲ್ಲ ವಿವಿಧ ಜೀವರಾಶಿಯು
ಹುಟ್ಟಿ ತಾ ಬದುಕಿ ಬಾಳುತ್ತಿರುವುದು
ಈ ಭೂಮಿಗೆ ಜೀವವು ಇರುವುದರಿಂದಲೇ ,,,
ಈ ಭುವಿಯೊಳು ಏನೆಲ್ಲಾ ಕ್ರಿಯೆಗಳು ಜರುಗುತ್ತಿರುವುದು
ಈ ಭುವಿಗೆ ಜೀವವೆ ಇಲ್ಲವಾಗಿದಿದ್ದರೆ ,
ಈ ಭುವಿಯೊಳು ಯಾವ ಕ್ರಿಯೆಯು ಜರುಗುತ್ತಿರಲಿಲ್ಲ
ಅಷ್ಟೇ ಏಕೆ ಯಾವ ಜೀವರಾಶಿಯ ಕುರುಹು ಇರುತಿರಲಿಲ್ಲ
"ಈ ಭೂಮಿಗೆ ಜೀವವು ಇರುವುದರಿಂದಲೇ – ಬಿತ್ತಿದ್ದ ಬೀಜವು ಮೊಳಕೆಯೊಡೆದು ಚಿಗುರಿ ಗಿಡವಾಗಿ ಮರವಾಗಿ ಬೆಳೆದು ಹೂ ಹೀಚು ಕಾಯಿ ಹಣ್ಣುಗಳಾಗಲು ಸಾದ್ಯ ."
ಜಗದೀಶ್ ಚಂದ್ರ ಬೋಸ್
( ಖ್ಯಾತ ಸಸ್ಯ ವಿಜ್ಞಾನಿ )
Writer
0 Followers
0 Following