ಕಾರ್ಗಿಲ್ ಯುದ್ಧದ ಗೆಲುವಿಗೆ ರಜತ ಸಂಭ್ರಮ

'ಆಪರೇಷನ್ ವಿಜಯ್'

ProfileImg
26 Jul '24
4 min read


image

 

  ಅದು.. ಜುಲೈ 26 ಎಲ್ಲಾ ಭಾರತೀಯರಾದ ನಾವು ಈ ದಿನವನ್ನು ಸ್ಮರಿಸಲೇಬೇಕು. ಶತ್ರುರಾಷ್ಟ್ರದ ದಾಳಿಯಿಂದ ಸಂಕಷ್ಟದಲ್ಲಿದ್ದ ಭಾರತವನ್ನು ರಕ್ಷಿಸಿ ಹುತ್ಮಾತ್ಮರಾದ ಯೋಧರನ್ನು ನಾವು ನೆನಪಿಸಲೇ ಬೇಕು ಮತ್ತು ಅವರನ್ನು ಸ್ಮರಣೆ ಮಾಡುಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ,  ಭಾರತ ಕೆಚ್ಚೆದೆಯ ವೀರರ ತ್ಯಾಗ, ಬಲಿದಾನದ ಫಲವಾಗಿ ಇಂದು ಸುರಕ್ಷಿತವಾಗಿದೆ ಎಂಬುವುದಕ್ಕೆ ನಮ್ಮ ಯೋಧರೇ ಕಾರಣ. ಈ ಮಹತ್ವದ ದಿನಕ್ಕೆ ಈ ಸಲ 25ನೇ ವರ್ಷ ತುಂಬುತ್ತದೆ...!

 ಯಾವ ಭಾರತೀಯರೂ ಕಾರ್ಗಿಲ್ ಯುದ್ಧವನ್ನು ಮರೆಯಲು ಸಾಧ್ಯವೇ ಇಲ್ಲ. ಈ ಯುದ್ಧದಲ್ಲಿ ಭಾರತೀಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ತನ್ನ ದೇಶದ ಘನತೆ, ಸಾಹಸವನ್ನು ಎತ್ತಿ ಹಿಡಿದಿದ್ದರು. ಇವರ ತ್ಯಾಗ, ಬಲಿದಾನ, ದೇಶಪ್ರೇಮ ಖಂಡಿತಾ ಎಲ್ಲಾ ಭಾರತೀಯರಿಗೂ ಸ್ಫೂರ್ತಿ, ದಾರಿದೀಪ.

 ಅಂದು 1999 ರ ಮೇ ನಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ಉಗ್ರಗಾಮಿಗಳು ಕಾಶ್ಮೀರದ ಕಾರ್ಗಿಲ್ ಜಿಲ್ಲೆಗೆ ನುಸುಳಿದರು. ಪರಿಣಾಮ ಗಡಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಸೈನ್ಯದ ನಡುವೆ ಸಶಸ್ತ್ರ ಸಂಘರ್ಷ ಆರಂಭಗೊಂಡಿತ್ತು. ಭಾರತೀಯ ಭೂಪ್ರದೇಶದಿಂದ ಒಳನುಗ್ಗುವವರನ್ನು ಓಡಿಸಲು ಭಾರತೀಯ ಸೇನೆ ’ಆಪರೇಷನ್ ವಿಜಯ್’ ಎಂಬ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಸುಮಾರು ಎರಡು ತಿಂಗಳಿಗೂ ಅಧಿಕ ಕಾಲ ಈ ಯುದ್ಧ ಮುಂದುವರಿದಿತ್ತು. ಈ ಯುದ್ಧದಲ್ಲಿ ಶೌರ್ಯದಿಂದ ಹೋರಾಡಿದ್ದ ಭಾರತೀಯ ಯೋಧರು ಪಾಕಿಸ್ತಾದ ಸೈನ್ಯ ಹಾಗೂ ಉಗ್ರಗಾಮಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದರು. ಇದರ ಫಲವಾಗಿ ತನ್ನ ಭೂಪ್ರದೇಶದಲ್ಲಿ ಭಾರತ ಹಿಡಿತ ಸಾಧಿಸಿಕೊಂಡಿತ್ತು. ಕೊನೆಗೆ 1999ರ ಜುಲೈ 26ರಂದು ’ಟೈಗರ್ ಹಿಲ್’ ಅನ್ನು ವಶಪಡಿಸಿಕೊಳ್ಳುವುದರೊಂದಿಗೆ ಯುದ್ಧ ಕೊನೆಗೊಂಡಿತು.    

 ಈ ಯುದ್ಧದಲ್ಲಿ ಭಾರತ ವಿಜಯ ಗಳಿಸಿತು. ಅಂದು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಅದೆಷ್ಟೋ ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲಿ ಹೋರಾಡಿ ದೇಶದ ರಕ್ಷಣೆ ಮಾಡಿದ್ದರು. ಭಾರತ ಸೈನ್ಯ ಅಂದು ಸುಮಾರು 490ರಷ್ಟು ಸಾಹಸಿಗಳನ್ನು ಕಳೆದುಕೊಂಡಿತ್ತು.

  ಕಾರ್ಗಿಲ್ ಯುದ್ಧ ಭಾರತ ಹಾಗೂ ನಮ್ಮ ಸೈನ್ಯದ ಪಾಲಿಗೂ ಮಹತ್ವದಾಗಿದೆ. ಭಾರತವು ತನ್ನ ಪ್ರಾದೇಶಿಕ ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಬಲಿಷ್ಠವಾಗಿದೆ ಎಂಬುದನ್ನೂ ಈ ಯುದ್ಧ ಜಗತ್ತಿಗೆ ತೋರಿಸಿತ್ತು. ಹೀಗಾಗಿ ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಗುತ್ತದೆ.

  ಕಾರ್ಗಿಲ್ ಯುದ್ಧ ನಡೆದ ವರ್ಷದಲ್ಲಿ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರವು ಅಧಿಕಾರದಲ್ಲಿತ್ತು. ಈ ಯುದ್ಧ ನಡೆಯುವುದಕ್ಕೂ ಮುನ್ನ ಎರಡೂ ದೇಶಗಳ ಗಡಿಯಲ್ಲಿ ಯಾವುದೇ ಶಸ್ತಾಸ್ತ್ರ ಯುದ್ಧ ನಡೆಯದಂತೆ ಶಿಮ್ಲಾ ಒಪ್ಪಂದಕ್ಕೆ ಭಾರತ ಹಾಗೂ ಪಾಕ್ ಸಹಿ ಹಾಕಿತ್ತು. ಆದರೆ ಪಾಕ್ ತನ್ನ ನರಿ ಬುದ್ದಿಯನ್ನು ತೋರಿಸಿಯೇ ಬಿಟ್ಟಿತು. ಭಾರತದ ವಿರುದ್ಧ ಒಳಸಂಚು ರೂಪಿಸಿದ ಪಾಕಿಸ್ತಾನ ತನ್ನ ಸೈನ್ಯವನ್ನು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಕಾರ್ಗಿಲ್ ಪ್ರದೇಶಕ್ಕೆ ಬಂದಿತ್ತು. ಈ ಬಗ್ಗೆ ಸ್ಥಳೀಯರು ಭಾರತದ ಸೈನಕ್ಕೆ ಮಾಹಿತಿ ನೀಡುತ್ತಿದ್ದಂತೆ, ಇತ್ತ ಪಾಕ್ ಸೈನ್ಯವು ಯುದ್ಧಕ್ಕೆ ಸಿದ್ಧವಾಗಿತ್ತು.

 ಯುದ್ಧದ ಪರಿಸ್ಥಿತಿಯು ಬಂದೋದಾಗಿದಾಗ ವಾಜಪೇಯಿ ನೇತೃತ್ವದ ಸರ್ಕಾರವು ಪಾಕ್ ಗೆ ಯುದ್ಧದಿಂದ ಹಿಂದೆ ಸರಿಯುವಂತೆ ಎಚ್ಚರಿಕೆಯನ್ನು ನೀಡಿತು. ಆ ಸಂದರ್ಭದಲ್ಲಿ ಪ್ರಧಾನಿ ವಾಜಪೇಯಿಯವರೇ “ನಾವು ಅವರನ್ನು ಒಂದು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ ಹೊರಹಾಕುತ್ತೇವೆ” ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದ್ದರು. ಕೊನೆಗೆ ಈ ಯುದ್ಧಕ್ಕೆ ಸಿದ್ದರೆನ್ನುವಂತೆಯೇ ಇದ್ದ ಪಾಕ್ ಗೆ ಬುದ್ದಿ ಕಲಿಸಲು ಭಾರತೀಯ ಸೈನ್ಯವನ್ನು ಕಳಿಸಲಾಯಿತು. 1999ರಲ್ಲಿ ಅನೀರಿಕ್ಷಿತ ಕಾರ್ಗಿಲ್ ಯುದ್ಧ ಘೋಷಣೆಯಾದಾಗ “ಅಪರೇಶನ್ ವಿಜಯ್” ಮೂಲಕ ಶತ್ರು ಪಡೆಗಳನ್ನು ಹಿಮ್ಮೆಟಿಸಿ, ಆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡಿತು.

 ಸೈನವನ್ನು ಕಳುಹಿಸಿದ ಭಾರತ ಹಾಗೂ ಪಾಕಿಸ್ತಾನದ ನಡುವೆ ಭೀಕರ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಷ್, ಅಮೆರಿಕಾದ ಆಗಿನ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಅವರನ್ನು ಸಂಪರ್ಕಿಸಿದ್ದರು. ಭಾರತ ಹಾಗೂ ಪಾಕ್ ನಡುವೆ ನಡೆಯುತ್ತಿರುವ ಈ ಯುದ್ಧವನ್ನು ಕೊನೆಗೊಳಿಸಲು ಮತ್ತು ಕಾಶ್ಮೀರ ವಿವಾದವನ್ನು ಬಗೆಹರಿಸಲು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದರು. ಈ ಮನವಿಗೆ ಒಪ್ಪಿದ ಬಿಲ್ ಕ್ಲಿಂಟನ್, ವಾಜಪೇಯಿಯವರು ದೂರವಾಣಿಯ ಮೂಲಕ ಮಾತುಕತೆ ನಡೆಸಿದರು. ಈ ವೇಳೆಯಲ್ಲಿ ‘ಯಾವುದೇ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ವಾಜಪೇಯಿ ಖಡಕ್ ಆಗಿಯೇ ಉತ್ತರ ನೀಡಿದ್ದರು.

 ಅಂದಿನ ಪ್ರಧಾನಿ ವಾಜಪೇಯಿಯವರು ಯುದ್ಧ ಕೊನೆಗೊಳ್ಳುವ ಮುನ್ನವೇ ಭಾರತದ ಯಶಸ್ಸನ್ನು ಘೋಷಿಸಿಯೇ ಬಿಟ್ಟಿದ್ದರು. ಅಂದು ಜುಲೈ 14 ಹರಿಯಾಣದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅಟಲ್ ಬಿಹಾರಿ ವಾಜಪೇಯಿ, ಪಾಕಿಸ್ತಾನದ ಮೇಲಿನ ಭಾರತದ ಯಶಸ್ಸನ್ನು ಯುದ್ಧ ಕೊನೆಗೊಳ್ಳುವ ಮೊದಲೇ ಘೋಷಿಸಿಯೇ ಬಿಟ್ಟಿದ್ದರು. ಆದರೆ ಯುದ್ಧವು ಜುಲೈ 26 ರಂದು ಕೊನೆಗೊಂಡಿತು. ಕೊನೆಗೂ ಪಾಕ್ ಗೆ ತಕ್ಕ ಉತ್ತರವನ್ನು ನೀಡುವ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಭಾರತವು ಗೆಲುವನ್ನು ಸಾಧಿಸಿತು. ಆದರೆ ಈ ಯುದ್ಧದ ಸಂದರ್ಭದಲ್ಲಿ ಬಹುಮತವನ್ನು ಕಳೆದುಕೊಂಡು ಹಂಗಾಮಿ ಪ್ರಧಾನಿಯಾಗಿ ಮುಂದುವರೆದಿದ್ದ ವಾಜಪೇಯಿಯವರು ಆ ಸಂದರ್ಭದಲ್ಲಿ ತೆಗೆದುಕೊಂಡಿದ್ದ ನಿರ್ಧಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

 ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರದೇಶವನ್ನು ಆಕ್ರಮಿಸುವ ಭಯೋತ್ಪಾದಕರ ಹಾಗೂ ಪಾಕಿಸ್ತಾನದ ಸೇನೆಯ ಕುತಂತ್ರದ ವಿರುದ್ಧ ಭಾರತೀಯ ಸೇನೆ ಘೋಷಿಸಿದ ’ಆಪರೇಷನ್ ವಿಜಯ್’ ಯಶಸ್ಸು ಸಾಧಿಸಿದ ದಿನವಾದ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ ಎಂದೇ ಆಚರಿಸಿಕೊಂಡು ಬರಲಾಗುತ್ತಿದ್ದು, ಇದಕ್ಕೆ ಈಗ 25ವರ್ಷ. ವೀರ ಯೋಧರ ಬೆನ್ನಿಗೆ ನಿಂತ ಇಡೀ ದೇಶವೇ ಹೆಮ್ಮೆಯಿಂದ ನೆನೆಯುವ ದಿನವಾಗಿ ಪ್ರತಿ ವರ್ಷ ಕಾರ್ಗಿಲ್ ದಿವಸ ಆಚರಣೆಯಾಗುತ್ತಿದೆ.

 ಸಿಯಾಚಿನ್ ನೀರ್ಗಲ್ಲು ಪ್ರದೇಶದ ಮೇಲೆ ತಮ್ಮ ಹಕ್ಕು ಸ್ಥಾಪಿಸಲು ಉಭಯ ರಾಷ್ಟ್ರಗಳ ಸೇನೆಗಳ ನಡುವೆ ಆಗಾಗ ಘರ್ಷಣೆಗಳು ನಡೆಯುತ್ತಲೇ ಇತ್ತು. ಈ ನಡುವೆ ಪರಸ್ಪರ ಶಾಂತಿ ನೆಲೆಸುವಂತೆ ಮಾಡಲು ದ್ವಿಪಕ್ಷೀಯ ಶಾಂತಿ ಮಾತುಕತೆಯು 1999ರಲ್ಲಿ ನಡೆಯಿತು. ಇದನ್ನು ಲಾಹೋರ್ ಘೋಷಣೆ ಎಂದೇ ಕರೆಯಲಾಗುತ್ತದೆ.

1999ರಲ್ಲಿ ಈ ಅವಧಿಯನ್ನೇ ತಂತ್ರವನ್ನಾಗಿಸಿಕೊಂಡ ಪಾಕಿಸ್ತಾನ, ಕಾಶ್ಮೀರದ ಹೋರಾಟಗಾರರ ಹೆಸರಿನಲ್ಲಿ ಪಾಕ್ ಸೈನಿಕರು, ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತು.

 ಪ್ರತಿಕೂಲ ಹವಾಮಾನ ಹಾಗೂ ಕಡಿದಾದ ಬೆಟ್ಟಗಳ ಸಾಲಿನಲ್ಲಿ ಭಾರತೀಯ ಸೇನೆಯ ವೀರ ಯೋಧರು ಸುಮಾರು ಎರಡು ತಿಂಗಳ ಕಾಲ ಹೋರಾಟ ನಡೆಸಿದರು. ಪಾಕಿಸ್ತಾನದ ನುಸುಳುಕೋರರನ್ನು ಸದೆಬಡಿದ ಭಾರತೀಯ ಸೇನೆ, ಅವರನ್ನು ಹಿಮ್ಮೆಟ್ಟುವಂತೆ ಮಾಡುವುದರ ಜತೆಗೆ, ಈ ಪ್ರದೇಶದ ಟೈಗರ್ ಹಿಲ್ ಹಾಗೂ ಇತರ ಪ್ರಮುಖ ಪ್ರದೇಶಗಳನ್ನು ಮರಳಿ ತನ್ನ ವಶಕ್ಕೆ ಪಡೆಯುವ ಮೂಲಕ ಆಪರೇಷನ್ ವಿಜಯ್ ಯಶಸ್ವಿಯಾಗಿ ಅಂತ್ಯಗೊಂಡಿತು.

 ಕಾರ್ಗಿಲ್ ಯುದ್ಧ 1999ರ ಮೇ ನಲ್ಲಿ ಆರಂಭವಾಗಿ ಎರಡು ತಿಂಗಳ ಕಾಲ ನಡೆಯಿತು. ಅದೇ ವರ್ಷ ಜುಲೈ 26ರವರೆಗೂ ನಡೆದ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ 527ಮಂದಿ ಭಾರತೀಯ ಯೋಧರು ಹುತಾತ್ಮರಾದರು.

 ಯುದ್ಧದಲ್ಲಿ ಮಡಿದ ವೀರ ಯೋಧರನ್ನು ನೆನೆಯುವ ಸಲುವಾಗಿ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ ಎಂಬ ಹೆಸರಿನಡಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗಾಗಿ ಕರ್ನಾಟಕದ ಧಾರವಾಡದಲ್ಲಿ ಕಾರ್ಗಿಲ್ ಸ್ತೂಪವನ್ನೇ ನಿರ್ಮಿಸಲಾಗರಾಧಾಕೃಷ್ಣ ದ 25 ವರ್ಷಗಳಿಂದ ಕರ್ಗಿಲ್ ವಿಜಯ ದಿವಸ್ ಎಂಬ ಕಾರ್ಯಕ್ರಮವು ದೇಶಭಕ್ತಿ ಹಾಗೂ ಭಾವೈಕ್ಯತೆಯ ಸಾಕ್ಷಿ ಎಂಬಂತೆ ಆಚರಿಸಲಾಗುತ್ತಿದೆ. ಕಾರ್ಗಿಲ್ ಯುದ್ಧವು ದೇಶದ ಪ್ರತಿಯೊಬ್ಬರನ್ನೂ ಒಗ್ಗೂಡಿಸಿದೆ. ಸೇನೆ ಕುರಿತು ದೇಶದ ಜನ ಹೆಮ್ಮೆ ಹಾಗೂ ಗೌರವ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಗಿಲ್ ವಿಜಯ ದಿವಸ ಆಚರಣೆಯಲ್ಲಿ ಸ್ಥಿತಿಸ್ಥಾಪಕತ್ವ ಹಾಗೂ ಒಗ್ಗಟ್ಟಿನ ಪ್ರದರ್ಶನದ ಮೂಲಕ ಇಡೀ ದೇಶವೇ ಹಮ್ಮೆಯ ಭಾವವನ್ನು ವ್ಯಕ್ತಪಡಿಸುತ್ತಿದೆ.

 ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ವೀರ ಯೋಧರ ಸಾಹಸಗಾತೆಗಳು ಯುವಸಮುದಾಯಕ್ಕೆ ಪ್ರೇರಣೆಯಾಗಿವೆ. ಆ ಮೂಲಕ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದವರನ್ನು ಸದಾ ನೆನಪಿನಲ್ಲಿಡುವಂತೆ ಮಾಡಿದೆ. ಧೈರ್ಯ, ಏಕತೆ ಹಾಗೂ ದೇಶಭಕ್ತಿಯನ್ನು ಮತ್ತೊಮ್ಮೆ ಜಾಗೃತಗೊಳಿಸಿದ ವಿಜಯ ದಿವಸ್‌ನ ಬೆಳ್ಳಿ ಹಬ್ಬ ದೇಶದಾದ್ಯಂತ ಶುಕ್ರವಾರ (ಜುಲೈ 26) ಆಚರಿಸಲಾಗುತ್ತಿದೆ.

ಕಾವ್ಯ ರಾಧಾಕೃಷ್ಣ ಕೆದ್ಕಾರ್...

Category:Personal Development



ProfileImg

Written by kavya KK