ಚಿಗುರು…



image

 

ಹಳೆ ಬೇರು ಹೊಸ ಚಿಗುರು,

ಕೂಡಿರಲು ಮರ ಸೊಬಗು,

ಸುತ್ತೆಲ್ಲ ಸೊಬಗಿನಿಂದ  ಕಂಗೊಳಿಸುತಿರುವ ಪ್ರಕೃತಿಯು ಅಚ್ಚ ಹಸಿರು,

ನೋಡುತಿರೆ ಈ ಮನಕೆ ಬೆರಗು-ಹೊಸ ಚೈತನ್ಯದ ಮೆರಗು…

ಹೊಸ ಚಿಗುರ ನೋಡುತಿರೆ ಮುತ್ತಿಕ್ಕಿ-ಮುದ್ದಾಡುವ ಆಸೆ,

ಚಿಗುರು ಹಿರಿದಾಗಿ ಬೆಳೆದು ಹಸಿರಾಗುವ ತುಂಬು ಭರವಸೆ,

ಆಸೆ ಕನಸುಗಳ ಹೊತ್ತ ಮನಸೇ,

ಚಿಗುರೆಲೆಯ ಹಾಗೆ ಸಂಭ್ರಮಿಸೆ,

ನೋವ ಮರೆತು ಮಂದಹಾಸ ಹೊರಚಿಮ್ಮಿಸೇ…

ಚಿಂತೆಯ ಮಾಡದಿರು ಚಿಗುರೆಲೆಯ ಹಾಗೆ ಚಿಗುರುತಿರು,

ಎಲ್ಲರು ಇಷ್ಟಪಡುವಂತೆ ಸದಾ ಹಸಿರಾಗಿರು-ಸಮೃದ್ಧಿಯಾಗಿರು…

 

ಶಾಂತಾರಾಮ ಹೊಸ್ಕೆರೆ, ಶಿರಸಿ

ಉತ್ತರ ಕನ್ನಡ…7676106237

 

 

Category:Poem



ProfileImg

Written by ಶಾಂತಾರಾಮ ಹೊಸ್ಕೆರೆ,ಶಿರಸಿ

ಬರಹಗಾರ...