ನಾನು, ಕಾಲೇಜು ದಿನಗಳಲ್ಲಿ ಅಪ್ ಅಂಡ್ ಡೌನ್ ಮಾಡುತ್ತಿದ್ದ ವಿದ್ಯಾರ್ಥಿ.. ಕಾಲೇಜು ಬಿಟ್ಟರೆ ಸಾಕು ಮನೆಗೆ ಓಡುವ ತವಕ ಎಂದಿನತ್ತಿತ್ತು.
ಅಂದು ಮನೆಯಿಂದ ಕಾಲೇಜಿಗೆ ಹೊರಡುವ ಮಾರ್ಗದಲ್ಲಿ ಬದಲಾವಣೆ ಇದ್ದ ಕಾರಣ, ಬೇರೆ ರಸ್ತೆಯಿಂದ ಮೈಸೂರಿಗೆ ಹೋಗಬೇಕಿತ್ತು. ಹಳ್ಳಿ ರಸ್ತೆಯ ಮೂಲಕ ಸಾಗಬೇಕಿದ್ದ ಮಾರ್ಗದಲ್ಲಿ ವಾಹನದ ದಟ್ಟಣೆ ಹೆಚ್ಚಾಗಿದ್ದರಿಂದ ನಮ್ಮ ಬಸ್ಸು ಸ್ವಲ್ಪ ಹೊತ್ತಿನ ಕಾಲ ಒಂದು ಹಳ್ಳಿಯ ಪಕ್ಕ ನಿಲ್ಲಿಸಿದರು.
ನಮ್ಮ ಬಸ್ಸಿನಲ್ಲಿ ಇದ್ದ ಕೆಲ ಪ್ರಯಾಣಿಕರಿಗೆ ಆ ಊರಿಗೆ ನಂಟಿತ್ತು. ಬಸ್ಸು ನಿಂತಿದ್ದ ಕಾರಣ ಅಲ್ಲಿನ ಹಳ್ಳಿಯ ಜನರು ಬಂದು ಬಂದು ನೋಡುತ್ತಿದ್ದರು. ಆ ಊರಿನವರಿಗೂ ಮೈಸೂರಿನ ಬಸ್ಸು ಈ ದಾರಿಯಲ್ಲಿ ಹೋಗುತ್ತಿರುವುದು ಅಚ್ಚರಿ ಎನಿಸಿ ಬಸ್ಸಿನ ಸಮೀಪ ಬಂದರು.
ಬಸ್ ಒಳಗಿದ್ದ ಪ್ರಯಾಣಿಕರು ಹೊರಗೆ ನಿಂತಿದ್ದ ಹಳ್ಳಿಯ ಜನರಿಗೂ ಪರಿಚಯವಿದ್ದ ಕಾರಣ ಅವರೊಟ್ಟಿಗೆ ಮಾತನಾಡುತ್ತಿದ್ದರು.ಆಗಲೇ ನನಗೆ ಕಾಣಿಸಿದ್ದು ಆ “ಅಪ್ರತಿಮ ಸುಂದರಿ”. ಹೌದು ಆಕೆ ತುಂಬಾ ಸುಂದರಿ.. ಆಕೆ ಒಂದು ಮಗುವಿನ ತಾಯಿ.. ತಾಯಿಯ ಮುಖ ಯಾವುದೋ ಬೆಂಕಿಯ ಕೆನ್ನಾಲಿಗೆ ಸಿಕ್ಕಿ, ಮುಖ ಸುಟ್ಟ ಗಾಯಗಳಿಂದ ಕೂಡಿತ್ತು, ಎಲ್ಲರೂ ಆಕೆಯ ಮುುಖದ ಮೇಲೆ ಆದ ಗಾಯಾಗಳ ಬಗ್ಗೆ ಮಾತನಾಡುತ್ತಿದ್ದರೆ.. ಆಕೆ ಎತ್ತಿಕೊಂಡು ನಿಂತಿದ್ದ ಮಗುವಿಗೆ ಆಕೆಯೇ.. ಭುವನ ಸುಂದರಿ.. ಆಕೆಯ ಮುಖವನ್ನು ಮುದ್ದಾಡಿ ಮುತ್ತು ಕೊಡುತ್ತಿದ್ದ ದೃಶ್ಯ ನನಗೆ ಎದುರಾಗಿತ್ತು.
ಇನ್ನೊಬ್ಬರ ಕಣ್ಣಿನಲ್ಲಿ ಆಕೆ ಮುಖ ಬೇರೆ ರೀತಿ ಕಂಡರೆ, ಮಗುವಿಗೆ ತನ್ನ ಅಮ್ಮನ ವಿಶ್ವ ಸುಂದರಿ, ಆಕೆಯನ್ನ ಬಿಟ್ಟು ಬೇರೆ ಯಾವುದೂ ಪ್ರಪಂಚವಿಲ್ಲ ಎನ್ನುವ ರೀತಿಯಲ್ಲಿ ಭಾಸವಾಗಿತ್ತು.
ಆಕೆಯ ಮುಖ ಹೇಗೆ ಇರಲಿ, ನನ್ನಮ್ಮ ನನಗೆ ಹೆಚ್ಚು.. ಅವಳಿದ್ದರೆ ಸಾಕು ಬೇರೇನು ಬೇಕಿಲ್ಲ ಎಂದು ಆ ಕಂದಮ್ಮನ ಪ್ರೀತಿ ಎದ್ದು ಕಾಣುತ್ತಿತ್ತು ಆಕೆಗೂ ತನ್ನ ಬಗ್ಗೆ ಯಾರೇನೆ, ಅಂದರೂ ತನ್ನ ಮಗು ನನ್ನೊಟ್ಟಿಗೆ ಪ್ರೀತಿಯಿಂದಿರುವುದು ಸಾಕಿನಿಸಿತ್ತು.. ಆಗಲೇ ನನಗೆ ಅನಿಸಿದ್ದು ಸುಂದರತೆ ಅಥವಾ ಪ್ರೀತಿ ಮುಖದಲಾಗಲಿ ಅಳೆಯಲು ಸಾಧ್ಯವಿಲ್ಲ ಎಂದು.. ಎಲ್ಲಾ ಮಕ್ಕಳಿಗೂ ತಮ್ಮ ಹೆತ್ತ ತಾಯಿಯೇ ಸುಂದರಿ ಎಂದನಿಸಿ ನನ್ನ ಸುಂದರಿಯನ್ನ ನೆನೆದುಕೊಂಡು ಮನದಲ್ಲೇ ಸಂತಸಪಟ್ಟೆ.
ಎಲ್ಲರಿಗೂ ತಾಯಿಯ ಪ್ರೀತಿ ಸಿಗುವುದು ತುಂಬಾ ವಿರಳ.. ಆದರೆ ತಾಯಿಯ ಪ್ರೀತಿಯನ್ನು ಅನುಭವಿಸಿದವರಿಗೆ ಮಾತ್ರ ಇಂತಹ ರೀತಿಯ ಭಾವನೆಗಳು ಬರುತ್ತದೆ ಎನ್ನುವುದಕ್ಕೆ ಈ ಘಟನೆ ನನಗೆ ಸಾಕ್ಷಿಯಾಗಿತ್ತು.. ಆಕೆಯ ಜಾಗದಲ್ಲಿ ನಮ್ಮ ತಾಯಿ ಹಾಗೆಯೇ ಎಂದು ನೋಡಿದರೆ, ಆಕೆ ಎಲ್ಲರಿಗೂ ಸುಂದರವಾಗಿಯೇ ಕಾಣುವುದರಲ್ಲಿ ಎರಡು ಮಾತಿಲ್ಲ.. ನಾವು ನೋಡುವ ದೃಷ್ಟಿಯ ಮೇಲೆ ಅವಲಂಬಿತವಾಗಿರುತ್ತದೆ ಅಲ್ಲವೇ...!
Photographer, Graphic Designer, Content Writer
0 Followers
0 Following