ಗಡಿಬಿಡಿ ಹಾಗು ಗಾಬರಿಯಿಂದಲೆ ಮನೆಯಿಂದ ಹೊರಟ ನೀತು ಯಾರಾದರೂ ತನ್ನನ್ನು ನೋಡುತ್ತಿರಬಹುದೇ ಎಂಬ ಆತಂಕದಿಂದಲೇ ಪ್ರತೀ ಅರ್ಧ ನಿಮಿಷಕ್ಕೊಂದುಸಲ ತನ್ನ ಕೈಲಿದ್ದ ಮೊಬೈಲನ್ನು ನೋಡುತ್ತಾ ರಸ್ತೆಯಲ್ಲಿ ಹೊರಟಳು. ಮೊಬೈಲ್ ನಲ್ಲಿ ಯಾವುದೇ ಸಂದೇಶವಾಗಲಿ, ನೋಟಿಫಿಕೇಶನ್ ಆಗಲಿ ಅಥವಾ ಯಾರದ್ದೇ ಫೋನ್ ಕಾಲ್ ಆಗಲಿ ಇಲ್ಲ, ಆದರೂ ಏನಾದರೂ ಬಂದಿರಬಹುದೇ ಎಂಬ ಕುತೂಹಲಕ್ಕಿಂತ ಬರಕೇಕಿತ್ತು ಎನ್ನುವ ಹಂಬಲ ಅವಳಿಗೇ ಗೊತ್ತಿಲ್ಲದೇ ಅವಳಲ್ಲಿತ್ತು.
ನಿಮಿಷಗಳು ಯುಗಗಳಂತೆ ಭಾಸವಾದಕಾರಣ ಇನ್ನೂ ತನ್ನಿಂದ ಕಾಯಲಾಗದು ಎನ್ನುವ ಸತ್ಯವನರಿತ ನೀತೂ ತಾನೇ ಫೋನ್ ಮಾಡಬೇಕೆಂದುಕೊಂಡು, ಅವಳ ಮೊಬೈಲ್ನಲ್ಲಿ ತಾನು ಫೋನ್ ಮಾಡಬೇಕೆಂದುಕೊಂಡ ನಂಬರ್ ಸೇವ್ ಇದ್ದರೂ ಸಹ, ತಲೆಯಲ್ಲಿದ್ದ ಹತ್ತು ಅಂಕೆಗಳ ಪ್ರತಿಯನ್ನು ಡಯಲ್ ಪ್ಯಾಡ್ ನ ಮೇಲಿರಿಸಿ ಕರೆ ಮಾಡಿದಳು. ಮೂರು ರಿಂಗಾದರೂ ಆ ಕಡೆಯಿಂದ ಉತ್ತರವಿಲ್ಲ ಎಂದುಕೊಳ್ಳುವಷ್ಟರಲ್ಲಿಯೇ ಕರೆಯಲ್ಲಿರುವ ವ್ಯಕ್ತಿಯ ಕಡೆಯಿಂದ 'hello' ಎಂದ ಪ್ರತಿಧ್ವನಿ ಕೇಳಿಸಿತು.
' ಚೇತೂ ಎಲ್ಲಿದೀಯ ? ಎಂದು ಕೇಳಿದಳು ನೀತೂ.
ಫೋನ್ನಲ್ಲಿದ್ದ ಆ ವ್ಯಕ್ತಿ ' ಹಾ ನೀತೂ ಮನೇಲಿದೀನಿ, ನೀನೆಲ್ಲಿದೀಯ' ? ಎಂದು ಪ್ರಶ್ನಿಸಿದನು.
'ನಾನ್ ಇಲ್ಲೇ ನಿಮ್ ಮನೆಯಿಂದ 3rd cross ಕಣೋ' ಎಂದಳು.
'ಲೇ.... ಮೆಂಟ್ಲೂ ನಮ್ಮನೆಗ್ ಬರ್ತಿದೀಯ ? ' ಎಂದು ಪ್ರಶ್ನಿಸಿದನು ಚೇತನ್.
' ಮತ್ತೆ ನೀನೇ ಅಲ್ವಾ ಇವತ್ ಆಚೆ ಹೋಗೋಣ ಅಂತ ಹೇಳಿದ್ದು, ಅದ್ಕೆ ನಿಮ್ ಮನೆ ಹತ್ರ ಇರೋ ಟೆಂಪಲಲ್ಲಿ ಇರ್ತೀನಿ ಬಂದು ಪಿಕ್ಮಾಡು'.
' ಹೇ ಬ್ಯಾಡ್ಲೆ ಯಮ್ಮ, ಅಣ್ಣ ಈಗಷ್ಟೇ ತಿಂಡಿ ತಿಂದ, ಇನ್ನೇನ್ ಆಫೀಸ್ಗೆ ಹೋಗೋ ಟೈಮ್ ಅದೇ ಟೆಂಪಲ್ ಮುಂದೆಯಿಂದನೆ ಹೋಗ್ತಾನೆ'. ಮತ್ತೆ ನಿನ್ನನ್ ನೋಡಿದ್ರೆ ಮನೆಗ್ ಕರಿತಾನೆ. ನೀನ್ ನಮ್ ಮನೆಗ್ ಬಂದ್ರೆ ಗೊತ್ತಲ ನಮ್ ಅಮ್ಮ ನಿನ್ನನ್ನ ಬಿಡೋದೇ ಇಲ್ಲ ಆಮೇಲ್ ನಮ್ ಪ್ಲಾನ್ ಎಲ್ಲಾ ತಲೆಕೆಳಗ್ ಆಗತ್ತೆ ನೋಡು'.ನೀ
ನೀತೂ: ಅಂದ್ರೆ? ನಾನ್ ನಿಮ್ ಮನೆಗ್ ಬರೋದ್ ನಿಂಗ್ ಇಷ್ಟ ಇಲ್ವಾ ಚೇತು?
ಚೇತನ್: ನಾನೆಲ್ ಹಾಗೆಳ್ದೆ ನೀತು ?, ಚೇತೂ-ನೀತೂ ಅಂದ್ರೆ ಜಸ್ಟ್ ಫ್ರೆಂಡ್ಸ್ ಅಂತ ಎಲ್ರೂ ಅಂಕೊಂಡಿದರೆ ಸದ್ಯಕ್ಕೆ ಆ ಟೈಟ್ಲು ಹಾಗೆ ಇರ್ಲಿ.
ನೀತೂ: ಅಂದ್ರೆ ?
ಚೇತೂ: ನೀತೂ w/o ಚೇತು ಆಗೋದಕ್ಕೆ ಇನ್ನು ಟೈಂ ಬೇಕು ಅಂದೆ.
ನೀತೂ: ಸರಿ ಬಿಡು ಇವಾಗ ನಾವ್ ಎಲ್ಲಿಗ್ ಹೋಗೋಣ? ನಾನೆಲ್ಲಿ ವೇಟ್ ಮಾಡ್ಲಿ ಹೇಳು ಫಸ್ಟು.
ಚೇತೂ: ಒಂದ್ ಕೆಲ್ಸ ಮಾಡು ಇವತ್ ಹೇಗೂ ಸಾಟರ್ಡೆ ಅಲ್ವಾ? ಆಂಜನೇಯ ಸ್ವಾಮಿ ಟೆಂಪಲ್ ಗೆ ಹೋಗಿರು ನಾನ್ ಅಲ್ಲೇ ಬರ್ತೀನಿ ಓಕೇ ನಾ?.
ನೀತೂ: ಹಾ ಸರಿ, ಬಟ್ ಪ್ಲೀಸ್ ಬೇಗ ಬಾ ಯಾರಾದ್ರೂ ನೋಡಿದ್ರೆ ಕಷ್ಟ.
ಚೇತೂ: ಹಾ ಓಕೆ ಓಕೆ ಟೇಕೇರ್.
ಎಂದು ಹೇಳಿ ಅಲ್ಲಿಗೆ ಫೋನ್ ಕಟ್ ಮಾಡುತ್ತಾನೆ.
ಇತ್ತ ನೀತೂ ತನ್ನಿಯನ ಮಾತಿನಂತೆ ಅವನು ಹೇಳಿದ ದೇವಸ್ಥಾನಕ್ಕೆ ಬಂದು ಮೊದಲಿಗೆ ದೇವರ ದರ್ಶನ ಮಾಡಿ ನಂತರ ಅಲ್ಲಿಯೇ ಜಗುಲಿಯ ಮೇಲೆ ಚೇತನ್ಗಾಗಿ ಕಾಯುತ್ತಾ ಕುಳಿತಿರುತ್ತಾಳೆ. ಅವಳನ್ನು ಕಾಯಿಸಲೂ ಇಷ್ಟವಿರದ ಅವಳ ಹುಡುಗ ಆ ಕೂಡಲೇ ಅಲ್ಲಿಗೆ ಹಾಜರಾಗುತ್ತಾನೆ. ಒಬ್ಬರನ್ನೊಬ್ಬರು ಕಂಡು ಇಬ್ಬರು ಮುಗುಳ್ನಗುತ್ತಾರೆ. ದೇವಸ್ಥಾನದ ಒಳಗಡೆ ಹೋಗಿ ಬರುತ್ತೇನೆ ಎಂಬಂತೆ ಚೇತನ್ ಸನ್ನೆಯ ಮೂಲಕ ಹೇಳುತ್ತಾನೆ ಇವಳೂ ಸಹ ಸರಿ ಎಂಬಂತೆ ತಲೆಯಾಡಿಸುತ್ತಾಳೆ.
ಯಾರಾದರೂ ತನಗೆ ಗೊತ್ತಿರುವವರು ತನ್ನನ್ನು ನೋಡುತ್ತಿರಬಹುದು ಅಥವಾ ನೋಡಿದರೆ ಹೇಗೆ ಎನ್ನುವ ಭಯದಲ್ಲಿಯೇ ನೀತೂ ಪದೇ ಪದೇ ಆಕಡೆ ಈಕಡೆ ತಿರುಗಿತಿರುಗಿ ನೋಡುತ್ತಲೇ ಇರುತ್ತಾಳೆ. ಅಷ್ಟರಲ್ಲಿ, ಶ್ರೀರಾಮ ಭಂಟನ ದರುಶನ ಪಡೆದ ನೀತುವಿನ ಪ್ರಿಯಕರ ಬಂದು:
ಯಾಕ್ ಇಷ್ಟ್ ಟೆನ್ಶನ್ ನೀತೂ ಕೂಲ್ ಆಗಿರು ಎಂದು ಹೇಳುತ್ತಾನೆ.
ನೀತೂ: ನಾವಿಬ್ರೂ ಇವತ್ ಆಚೆ ಹೋಗ್ತೀರೋ ವಿಷ್ಯ ಯಾರಿಗಾದ್ರೂ ಗೊತ್ತಾದ್ರೆ ಹೇಗೆ ಅಂತ ಟೆನ್ಶನ್ ಆಗ್ತಿದೆ.
ಚೇತೂ: ನಿನ್ ಈ ತರ ಆಡ್ತಿದ್ರೆ ಪಕ್ಕಾ ಡೌಟ್ ಬರತ್ತೆ ಮತ್ತೆ, ಬಾ ಹೋಗೋಣ, ಸ್ಕಾರ್ಫ್ ಕಟ್ಕೋ.
ಎಂದು ಹೇಳಿ ಅಲ್ಲಿಂದ ಬಂದು ತನ್ನ ಬೈಕ್ ಅನ್ನು ಸ್ಟಾರ್ಟ್ ಮಾಡುತ್ತಾನೆ ಅಷ್ಟರಲ್ಲಿ ಮುಖವೇ ಕಾಣದ ರೀತಿಯಲ್ಲಿ ಮುಸುಕು ಕಟ್ಟಿಕೊಂಡ ನೀತೂ ಅಲ್ಲಿಗೆ ಬಂದು ಬೈಕ್ ಹತ್ತುತ್ತಾಳೆ ಇಬ್ಬರೂ ಅಲ್ಲಿಂದ ಹೊರಡುತ್ತಾರೆ.
ಪ್ರೀಿಯ ಓದುಗರೇ, ನನ್ನ ಈ ಲೇಖನದ ಮುಂದುವರೆಿದ ಕಥೆಯನ್ನು ಮುಂದಿನ ಭಾಗದಲ್ಲಿ ಬರೆಯುತ್ತೇನೆ . ಈ ಮೊದಲನೇ ಭಾಗವನ್ನ ಓದಿದ ತಾವು ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಲ್ಲಿ, ನಾನು ಇನ್ನಷ್ಟು ಬರೆಯಲು ಪ್ರೇರೇಪಿಸಿದಂತಾಗುವುದು.
ಧನ್ಯವಾದಗಳೊಂದಿಗೆ,
✍️Shreematha.G
(King's Queen)
King's Queen
0 Followers
0 Following